Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

BIG NEWS: ರಾಜ್ಯದಲ್ಲಿ ‘ಕೆರೆಗೆ ವೈದ್ಯಕೀಯ ತ್ಯಾಜ್ಯ’ ಸುರಿಯುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಈಶ್ವರ ಖಂಡ್ರೆ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜುಲೈ 3ಕ್ಕೆ ‘ಲವ್ ಸೀಸನ್ಸ್’ ರಿಲೀಸ್: ಬಿಡುಗಡೆಗೂ ಮುನ್ನವೇ ಹಾಡುಗಳು ಪುಲ್ ವೈರಲ್!
FILM

ಜುಲೈ 3ಕ್ಕೆ ‘ಲವ್ ಸೀಸನ್ಸ್’ ರಿಲೀಸ್: ಬಿಡುಗಡೆಗೂ ಮುನ್ನವೇ ಹಾಡುಗಳು ಪುಲ್ ವೈರಲ್!

By ವಸಂತ ಬಿ ಈಶ್ವರಗೆರೆ

ಚಂದನವನದಲ್ಲಿ ಸದ್ದಿಲ್ಲದೆ ಸಿನಿರಸರ ಗಮನ ಸೆಳೆಯುತ್ತಿರುವ “ಲವ್ ಸೀಸನ್ಸ್” ಚಲನಚಿತ್ರ ಇದೇ ಬರುವ ಜುಲೈ 3ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಮೂರು ಹಾಡುಗಳಿಗೆ ಕೇಳುಗರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಸದ್ಯ ಸಕ್ಸಸ್ ಮೂಡ್‌ನಲ್ಲಿದೆ. ಈ ಹಾಡುಗಳ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದನ್ನು ಹಮ್ಮಿಕೊಂಡಿತ್ತು.

ವಿಶೇಷವೆಂದರೆ, ತಂತ್ರಜ್ಞರು ಹಾಗೂ ಗಾಯಕರ ಸಮ್ಮುಖದಲ್ಲೇ ಈ ಗೆಲುವಿನ ಸಿಹಿಯನ್ನು ಹಂಚಿಕೊಳ್ಳುವ ಮೂಲಕ ಚಿತ್ರತಂಡ ವಿಭಿನ್ನವಾಗಿ ಸಂಭ್ರಮಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ತಾರಾಗಣದ ದಂಡು

ಈ ಯಶಸ್ವಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ಎನ್.ಆರ್ ಮಂಜುನಾಥ್ (ನೀಲೇರಿ), ಯುವ ನಿರ್ದೇಶಕ ಕೃತ್ವಿಕ್, ಹಿರಿಯ ಗೀತಸಾಹಿತಿ ಕೆ.ಕಲ್ಯಾಣ್, ಸಂಗೀತ ಮಾಂತ್ರಿಕ ವೀರ್ ಸಮರ್ಥ್, ಪ್ರಸಿದ್ಧ ಗೀತ ರಚನೆಕಾರರಾದ ಪ್ರಮೋದ್ ಮರವಂತೆ, ಸಾಯಿ ಸರ್ವೇಶ್ ಉಪಸ್ಥಿತರಿದ್ದರು. ಇವರೊಂದಿಗೆ ಚಿತ್ರದ ನಾಯಕ ಮುಕುಂದ ರಾಮಸ್ವಾಮಿ, ನಾಯಕಿಯರಾದ ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ ಹಾಗೂ ಗಾಯಕಿ ಪ್ರಜ್ಞಾ ಮರಾಠೆ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹಾಡುಗಳೇ ಚಿತ್ರದ ಆಮಂತ್ರಣ ಪತ್ರಿಕೆ: ಕೆ. ಕಲ್ಯಾಣ್ ಭಾವನಾತ್ಮಕ ಮಾತು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಗೀತಸಾಹಿತಿ ಕೆ. ಕಲ್ಯಾಣ್,

“ಯಾವುದೇ ಒಂದು ಸಿನಿಮಾಗೆ ಹಾಡುಗಳು ಆಮಂತ್ರಣ ಪತ್ರಿಕೆಯಂತೆ ಕೆಲಸ ಮಾಡುತ್ತವೆ. ಹಿಂದೆಲ್ಲಾ ಆಡಿಯೋ ಕ್ಯಾಸೆಟ್, ಸಿಡಿಗಳ ಮೂಲಕವೇ ಸಿನಿಮಾವನ್ನು ಜನರಿಗೆ ತಲುಪಿಸಲಾಗುತ್ತಿತ್ತು. ಇಂದಿನ ಡಿಜಿಟಲ್ ಯುಗದಲ್ಲಿ ಟ್ರೆಂಡ್ ಬದಲಾಗಿದ್ದರೂ, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಸದಾ ನೆನಪಿನಲ್ಲಿ ಉಳಿಯುವಂತಹ ಅದ್ಭುತ ರಾಗಗಳನ್ನು ಸಂಯೋಜಿಸಿದ್ದಾರೆ. ಆರಂಭದಲ್ಲಿ ನನಗೆ ವೀರ್ ಸಮರ್ಥ್ ಬಿಟ್ಟರೆ ಮತ್ಯಾರ ಮುಖ ಪರಿಚಯವೂ ಇರಲಿಲ್ಲ. ಆದರೆ, ನಾವೆಲ್ಲರೂ ಒಟ್ಟಾಗಿ ಸೇರಿ ಈ ಸುಂದರ ಹಾಡುಗಳನ್ನು ಸೃಷ್ಟಿಸಿದ ತುಂಬು ಖುಷಿ ನನಗಿದೆ” ಎನ್ನುತ್ತಾ ಇಡೀ ತಂಡಕ್ಕೆ ಶುಭ ಹಾರೈಸಿದರು.

ಮತ್ತೊಬ್ಬ ಜನಪ್ರಿಯ ಗೀತಸಾಹಿತಿ ಪ್ರಮೋದ್ ಮರವಂತೆ ಸೇರಿದಂತೆ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು “ಲವ್ ಸೀಸನ್ಸ್” ಸಿನಿಮಾದ ಸಂಗೀತ ಯಶಸ್ಸಿನ ಭಾಗವಾಗಿರುವುದಕ್ಕೆ ಹೆಮ್ಮೆಯ ಮಾತುಗಳನ್ನಾಡಿದರು.

ಶ್ರೀಮಂತ ತಾಂತ್ರಿಕ ವರ್ಗ ಹಾಗೂ ಬಲಿಷ್ಠ ತಾರಾಗಣ

‘ಎನ್.ಆರ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಅತ್ಯಂತ ವಿಶ್ವಾಸದಿಂದ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ, ಮಧು ತುಂಬಕೆರೆ ಅವರ ಕತ್ತರಿ ಪ್ರಯೋಗ (ಸಂಕಲನ) ಹಾಗೂ ಭಜರಂಗಿ ಮೋಹನ್ ಅವರ ನೃತ್ಯ ಸಂಯೋಜನೆಯಿದೆ.

ಮುಕುಂದ ರಾಮಸ್ವಾಮಿ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇವರಿಗೆ ಜೋಡಿಯಾಗಿ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ, ಹುಲಿ ಕಾರ್ತಿಕ್ ಹಾಗೂ ಬೇಬಿ ರೀತು ಸಿಂಗ್ ಅವರಂತಹ ಅನುಭವಿ ನಟರ ದಂಡೇ ಇರುವುದರಿಂದ ಸಿನಿಮಾ ಭರಪೂರ ಮನರಂಜನೆ ನೀಡುವ ಭರವಸೆ ಮೂಡಿಸಿದೆ.

ಹಾಡುಗಳ ಮೂಲಕವೇ ಈಗಾಗಲೇ ಸಿನೆಮಾ ಪ್ರೇಕ್ಷಕರ ಮನ ಗೆದ್ದಿರುವ “ಲವ್ ಸೀಸನ್ಸ್” ತಂಡ ಜುಲೈ 3ರಂದು ಬೆಳ್ಳಿಪರದೆಯ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Share. Facebook Twitter LinkedIn WhatsApp Email

Related Posts

Bigg Boss Kannada13: ನೀವು ಕನ್ನಡದ ‘ಬಿಗ್ ಬಾಸ್’ ಮನೆಗೆ ಹೋಗಬೇಕಾ? ತಡ ಮಾಡಬೇಡಿ, ಜೂನ್.21ರೊಳಗೆ ಈ ಕೆಲಸ ಮಾಡಿ!

1 Min Read

ಧರ್ಮಸ್ಥಳ ಬುರುಡೆ ಕೇಸ್: ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ- ನಟ ಪ್ರಕಾಶ್‌ ರಾಜ್‌

2 Mins Read

Actor Doddanna: ಸಾವಿನ ವದಂತಿ: ಕುಟುಂಬ ಸಮೇತ ಆಂಜನೇಯ ದೇವಸ್ಥಾನಕ್ಕೆ ತೆರಳಿ ಸ್ಯಾಂಡಲ್ ವುಡ್ ಹಿರಿಯ ನಟ ದೊಡ್ಡಣ್ಣ ವಿಶೇಷ ಪೂಜೆ!

1 Min Read
Recent News

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

BIG NEWS: ರಾಜ್ಯದಲ್ಲಿ ‘ಕೆರೆಗೆ ವೈದ್ಯಕೀಯ ತ್ಯಾಜ್ಯ’ ಸುರಿಯುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಈಶ್ವರ ಖಂಡ್ರೆ ಆದೇಶ

ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ

State News
KARNATAKA

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮಂಡ್ಯ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆ.ಆರ್. ನಂದಿನಿ ಅವರ ಸರ್ಕಾರಿ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾದ ಘಟನೆ…

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

BIG NEWS: ರಾಜ್ಯದಲ್ಲಿ ‘ಕೆರೆಗೆ ವೈದ್ಯಕೀಯ ತ್ಯಾಜ್ಯ’ ಸುರಿಯುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಈಶ್ವರ ಖಂಡ್ರೆ ಆದೇಶ

ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.