Author: kannadanewsnow05

ಬೆಳಗಾವಿ : ಕಳೆದ ಮೇ 1 ರಂದು ಅಥಣಿ ತಾಲೂಕಿನ ಹೊರವಲಯದಲ್ಲಿ ಚರಂಡಿಯಲ್ಲಿ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಖಾಲಿ ನಿವೇಶನದಲ್ಲಿ ದೊರೆತ ಬಾಲಕನ ಶವಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕಳ್ಳತನಕ್ಕೆ ಬಂದಿದ್ದಾನೆ ಎಂದು ಕಿರಾತಕರು ಬಾಲಕನನ್ನು ಕೊಂದು ಹಾಕಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಹೊರವಲಯದಲ್ಲಿ ಬಾಲಕನ ಶವ ಸಿಕ್ಕಿತ್ತು. ಮೇ 1ರಂದು ಕೊಳೆತ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪಾಪಿಗಳು ಆಸಿಡ್ ಬಳಕೆ ಮಾಡಿದ್ದಾರೆ. ಅನಾಥ ಶವ ಎಂದು ಪೊಲೀಸರೇ ಬಾಲಕನ ಶವ ಸಂಸ್ಕಾರ ನೆರವೇರಿಸಿದ್ದಾರೆ. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಬಾಲಕನ ಗುರುತು ಪತ್ತೆಯಾಗಿದೆ. ವಿಕಾಸ್ ಶಿವದಾಸ್ ಕೊಷ್ಠಿ (16) ಕೊಲೆಯಾದ ಬಾಲಕ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ್ ಎಂದು ತಿಳಿದುಬಂದಿದೆ. ಕಾಳೆ ಫರ್ನಿಚರ್ಸ್ ನಲ್ಲಿ ಕಳ್ಳತನ ಮಾಡಲು ಬಂದಿದ್ದಾನೆ ಎಂದು ರಾತ್ರಿ ಶೆಡ್ ನಲ್ಲಿ ಕಟ್ಟಿಹಾಕಿ…

Read More

ತುಮಕೂರು : ಮೇ 10 ರಂದು ತುಮಕೂರು ಜಿಲ್ಲೆಯ ಹೆಬ್ಬುರಿನ ತಿಮ್ಮಸಂದ್ರ ಗ್ರಾಮದಲ್ಲಿ ಕರೆಂಟ್ ಶಾಕ್‌ನಿಂದ ಫ್ಯಾಕ್ಟರಿಯಲ್ಲಿ ಮೃತಪಟ್ಟಿದ್ದಾರೆಂದು ಬಿಂಬಿಸಲಾಗಿತ್ತು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸ್ ತನಿಖೆ ವೇಳೆ ಇದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಎಂಬುದು ಗೊತ್ತಾಗಿದೆ. ಸದ್ಯ ಸಿಸಿಟಿವಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ, ಮಗನಿಂದಲೇ ಹತ್ಯೆ ನಡೆದಿರುವುದು ತಿಳಿದುಬಂದಿದೆ. ಆದರೆ ಮಗ ತಂದೆಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯ ವೇಳೆ ತಿಳಿದು ಬಂದಿದೆ.ಐಸ್ ಕ್ರಿಮ್ ಮಾಲೀಕ ನಾಗೇಶ್ (58) ಮೃತ ದುರ್ದೈವಿ.ಫ್ಯಾಕ್ಟರಿಯಲ್ಲಿ ಇಟ್ಟಿದ್ದ ಹಣವನ್ನು ನಾಗೇಶ್ ಅವರ ಪುತ್ರ ಸೂರ್ಯ ತೆಗೆದುಕೊಳ್ಳುತ್ತಿದ್ದ. ತಂದೆಗೆ ಕಾಣದಂತೆ ಪದೇ ಪದೇ ಹಣ ತೆಗೆದುಕೊಳ್ಳುತ್ತಿದ್ದ. ಇದು ನಾಗೇಶ್‌ಗೆ ಗೊತ್ತಾದ ಬಳಿಕ ಮಗನ ಜೊತೆ ಜಗಳವಾಯಿತು.ಇನ್ನೊಂದೆಡೆ ಸೂರ್ಯನ ತಂಗಿಯನ್ನ ಲವ್ ಸಂಜಯ್ ಎಂಬಾತ ಪ್ರೀತಿ ಮಾಡುತ್ತಿದ್ದ. ಸಂಜಯ್ ಲವ್‌ಗೆ ಸೂರ್ಯನೇ ಸಪೋರ್ಟ್ ಮಾಡಿದ್ದ. ಈ ವಿಚಾರಕ್ಕೂ ನಾಗೇಶ್ ವಿರೋಧ ವ್ಯಕ್ತಪಡಿಸಿದ್ದರು. ಸಂಜಯ್ ಮನೆಗೆ…

Read More

ವಿಜಯಪುರ : ಮಹಾತ್ಮ ಗಾಂಧೀಜಿಯ ವಿರುದ್ಧ ವಿಜಯಪುರ ನಗರ ಉಚ್ಛಾಟಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಇದೀಗ, ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣೆಗೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೂರು ನೀಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗಾಂಧೀಜಿಯನ್ನು ಪಾಕಿಸ್ತಾನದ ಪಿತಾಮಹ ಎಂದಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೀಗ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಳೆದ ಮೇ 11ರಂದು ಮಹಾತ್ಮ ಗಾಂಧೀಜಿ ಕುರಿತಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಒಂದು ಹೇಳಿಕೆ ನೀಡಿದ್ದರು. ಭಾರತ ಇಬ್ಬಾಗ ಮಾಡಿದ್ದರ ಬಗ್ಗೆ ಯತ್ನಾಳ್ ಮಾತನಾಡುವ ವೇಳೆ ಮಹಾತ್ಮಾ ಗಾಂಧೀಜಿ ಪಾಕಿಸ್ತಾನದ ಪಿತಾಮಹ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಇದೀಗ ವಿಜಯಪುರದ ಆದರ್ಶ ನಗರ ಪೊಲೀಸ್…

Read More

ಮೈಸೂರು : ಒಂದೆಡೆ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆ ಇದರ ಮಧ್ಯ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ರಾಜ್ಯ ಸಚಿವ ಸಂಪುಟ ಪುನಃ ರಚನೆ ಕುರಿತಂತೆ ಸುಳಿವು ನೀಡಿದ್ದಾರೆ. ಕಾಂಗ್ರೆಸ್ನ ಹಿರಿಯ ಶಾಸಕರಿಗೆ ಸಚಿವ ಸ್ಥಾನದ ವಿಚಾರವಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮಾತನಾಡಿ, ಶಾಸಕರಿಗೆ ಸಚಿವರಾಗುವ ಆಸೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಾರ್ಯಕರ್ತರಿಗಂತು ಆ ಆಸೆ ಇದೆ. ನಮ್ಮ ನಾಯಕರು ಮಂತ್ರಿ ಆಗಬೇಕು ಎಂಬ ಆಸೆ ಇದೆ. ಶೀಘ್ರದಲ್ಲೇ ಪಕ್ಷದ ಕಾರ್ಯಕರ್ತರ ಆಸೆ ನೆರವೇರಲಿದೆ ಎಂದು ಸಂಪುಟ ಪುನಾರಚನೆಯ ಕುರಿತು ಶಾಸಕ ತನ್ವೀರ್ ಸೇಠ್ ಸುಳಿವು ನೀಡಿದ್ದಾರೆ.

Read More

ಬೆಂಗಳೂರು : ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗೆ ಕಮಿಟಿ ರಚನೆ ಮಾಡಲಾಗಿದೆ. ಪ್ರಗತಿ ಪರಿಶೀಲನೆಗೆ ರಚಿಸಿರುವ ಕಮಿಟಿ ಅಧ್ಯಕ್ಷ ನಾನು ಆಗಿರುತ್ತೇನೆ ಎಂದು ವಿಧಾನಸೌಧದಲ್ಲಿ ದಿಶಾ ಸಮಿತಿ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನಲ್ಲಿ ದಿಶಾ ಸಮಿತಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಪುರಸ್ಕೃತ 67 ಯೋಜನೆಗಳಿವೆ. ಎಲ್ಲವನ್ನು ಪರಿಶೀಲಿಸಿದ್ದೇವೆ. ಈ ಕಾರ್ಯಕ್ರಮಗಳಿಗೆ ಕೇಂದ್ರ ಹಾಗೂ ರಾಜ್ಯದಿಂದ ಹಣ ಖರ್ಚಾಗುತ್ತದೆ. ಇದಕ್ಕಾಗಿ ಎರಡು ಸರ್ಕಾರಗಳು ಹಣ ಮೀಸಲಿಟ್ಟಿರುತ್ತವೆ. ಆಯಾ ಯೋಜನೆಗಳ ಮೇಲೆ ಹಣ ಡಿಸೈಡ್ ಆಗುತ್ತದೆ. ಕೆಲವೊಂದು ಯೋಜನೆಗೆ ಕೇಂದ್ರ 50 % ರಾಜ್ಯ 50% ಹಣ ಕೊಟ್ಟರೆ, ಕೆಲವೊಂದು ಯೋಜನೆಗಳಲ್ಲಿ 30 ಮತ್ತು 70 ಪರ್ಸೆಂಟ್ ಶೇರಿಂಗ್ ಇರುತ್ತದೆ. ಕೇಂದ್ರ ಸರ್ಕಾರ ಪ್ರಾಯೋಗಿಕ ಯೋಜನೆಗಳಿಗೆ. ರಾಜ್ಯ ಸರ್ಕಾರ ಒಟ್ಟು 46,856 ಕೋಟಿ ಹಣ ಖರ್ಚು ಮಾಡುತ್ತಿದೆ. ಕೇಂದ್ರ ಸರ್ಕಾರ ಖರ್ಚು ಮಾಡುತ್ತಿರುವುದು 22,785 ಕೋಟಿ ರೂಪಾಯಿ ಹಣ ಎಂದು ವಿಧಾನಸೌಧದಲ್ಲಿ ದಿಶಾ ಸಭೆಯ…

Read More

ದಕ್ಷಿಣಕನ್ನಡ : ವಿಧವೆ ಬಳಿ 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಖಜಾನೆಯ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಖಜಾನೆ ಮುಖ್ಯ ಲೆಕ್ಕಿಗ ಹಾಗು FDA ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಧವೆಯಿಂದ 5000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರ ಮಹಿಳೆಯ ಪತಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಗಿದ್ದರು. ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿದ್ದರು. 2023 ಅಕ್ಟೋಬರ್ ತಿಂಗಳಿನಲ್ಲಿ ವಯೋನಿವೃತ್ತಿ ಹೊಂದಿದ್ದು, ಮಹಿಳೆಯ ಪತಿ 2024 ಜೂನ್ ತಿಂಗಳಲ್ಲಿ ಮೃತಪಟ್ಟಿದ್ದಾರೆ. ಮುಖ್ಯ ಲೆಕ್ಕಿಗರ ಬಳಿ ಮರಣ ಉಪದಾನ ನೀಡುವಂತೆ ಕೇಳಿದ್ದಾರೆ. ಗಂಡನ ಮರಣ ಉಪದಾನ ನೀಡುವಂತೆ ವಿಧವೆ ಮಹಿಳೆ ಕೇಳಿದ್ದಾರೆ. ಎರಡು ಬಾರಿ ಖಜಾನೆಗೆ ಹೋಗಿ ವಿಚಾರಿಸಿದರೂ ಕೂಡ ಕೆಲಸ ಮಾಡಿಕೊಟ್ಟಿಲ್ಲ. ಹಣ ಜಮೆ ಮಾಡಲು ಖಜಾನೆಯ ಮುಖ್ಯ ಲೇಕ್ಕಿಗ ಭಾಸ್ಕರ್, ಹಾಗೂ ಎಫ್ಡಿಎ ಬಸವೇಗೌಡ 5000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ವಿಧವೆ ಮಹಿಳೆ ಮಂಗಳೂರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದಾರೆ.…

Read More

ಇಸ್ಲಾಮಾಬಾದ್ : ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ, 26 ಅಮಾಯಕ ರನ್ನು ಬಲಿಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದರು. ಇದೀಗ ಧ್ವಂಸವಾಗಿರೋ ಉಗ್ರರ ಅಡಗುತಾಣಗಳನ್ನು ಮತ್ತೆ ಕಟ್ಟಲು ಪಾಕಿಸ್ತಾನ್ ಹೆಚ್ಚಿಸುತ್ತಿದೆ ಎಂದು ತಿಳಿದು ಬಂದಿದೆ. ಭಯೋತ್ಪಾದಾಕರ ಬೆಂಬಲಕ್ಕೆ ಪಾಕಿಸ್ತಾನ ಸರಕಾರ ಇದೀಗ ನಿಂತಿದೆ. ಉಗ್ರರ ನೆಲೆಗಳು ಮತ್ತು ಉಗ್ರರ ಸಂಬಂಧಿಕರ ಮನೆಗಳನ್ನು ಪುನಃ ಕಟ್ಟಲು ಪಾಕಿಸ್ತಾನ ಯತ್ನಿಸುತ್ತಿದ್ದೆ. ಈಗಾಗಲೇ ಭಾರತ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ 11 ವಾಯು ನೆಲೆಗಳು ಸೇರಿದಂತೆ ಒಟ್ಟು ನೂರಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿದೆ.

Read More

ಮೈಸೂರು : ಮೈಸೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, KSRTC ಬಸ್ ಒಂದು ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಮಂಚನಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಮೃತ ಕಾರು ಚಾಲಕನನ್ನು ಮೈಸೂರಿನ ಕನಕದಾಸ ನಗರದ ಸುನಿಲ್ (34) ಎಂದು ತಿಳಿದುಬಂದಿದೆ. ಸುನಿಲ್ ಮೂಲತಃ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಎಂದು ತಿಳಿದು ಬಂದಿದೆ ಇನ್ನು ಕಾರಿನಲ್ಲಿ ಇದ್ದ ಮತ್ತೊರ್ವ ರಮೇಶ್ ಎನ್ನುವವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರುನಿಂದ ಕಾರು ಹಾಸನದ ಕಡೆಗೆ ತೆರಳುತ್ತಿತ್ತು. ಹಾಗೆಯೇ ಚಿಕ್ಕಮಗಳೂರಿನಿಂದ ಮೈಸೂರು ಕಡೆಗೆ ಕೆಎಸ್ಆರ್ಟಿಸಿ ಬಸ್ ಚಲಿಸುತ್ತಿತ್ತು.ಈ ವೇಳೆ ಈ ಒಂದು ಅಪಘಾತ ಸಂಭವಿಸಿದೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತು ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಿಶಾ ಸಮಿತಿಯ ಸಭೆ ನಡೆಯಿತು. ಈ ಒಂದು ಪ್ರಮುಖ ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಬರುವ ಪಿಂಚಣಿ, 15ನೇ ಹಣಕಾಸಿನ ಆಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಸಿಎಂ ಸಿದ್ದರಾಮಯ್ಯ ಚರ್ಚಿಸಿದರು. ರಾಜ್ಯಮಟ್ಟದ ದಿಶಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಮಾತುಗಳು ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈವರೆಗೆ ಕೇಂದ್ರದಿಂದ ಹಣ ಬರಲಿಲ್ಲ. ರಾಜ್ಯ ಸರ್ಕಾರವೇ ಬಹುತೇಕ ಹಣ ಕೊಡುವ ಯೋಜನೆಗಳಿಗೆ ಪ್ರಧಾನಿ ಮತ್ತು ಕೇಂದ್ರದ ಹೆಸರಿದೆ. ಆದರೂ ಚೂರು, ಪಾರು ಕೇಂದ್ರದ ಹಣವೂ ಬರುತ್ತಿಲ್ಲ. ಈ ನಿರಂತರ ಅನ್ಯಾಯ ಪ್ರಶ್ನಿಸಬೇಕಲ್ಲವಾ? 15 ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಬೇಕು, ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣ ಸೇರಿ ಒಟ್ಟು 11,495 ಕೋಟಿ ರೂಪಾಯಿ ಕೇಂದ್ರದಿಂದ ಬರಬೇಕಿತ್ತು. ಏನನ್ನೂ ಕೊಡುತ್ತಿಲ್ಲ. ನಾವು ರಾಜ್ಯದಿಂದ 4.5…

Read More

ನವದೆಹಲಿ : ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹಾಗೂ ಸಿಬಿಐ ಸುಪ್ರೀಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈಗೆ ಮುಂದೂಡಿ ಆದೇಶಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಪರವಾಗಿ ಎ ಎಸ್ ಜಿ ಎಸ್. ವಿ ರಾಜು ಅವರು ವಾದ ಮಂಡಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟದ ಭಾಗವಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣ ಹೊರ ಬಿದ್ದಿದೆ. ಅಧಿಕಾರದ ದುರುಪಯೋಗ ಇಲ್ಲಿ ಒಂದು ಸಮಸ್ಯೆಯಾಗಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಪರವಾಗಿ ಎಎಸ್ಜಿ ಎಸ್ ವಿ ರಾಜು ಅವರು ವಾದ ಮಂಡಿಸಿದರು. ಬಳಿಕ ಡಿಕೆ ಶಿವಕುಮಾರ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘವಿ ಅವರು ವಾದ ಮಂಡಿಸಿ ವಿಷಯ ನ್ಯಾಯ ವ್ಯಾಪ್ತಿಗೆ ಒಳಪಟ್ಟಿದೆ. ರಿಟ್ ಅರ್ಜಿ ಉಳಿಸಿಕೊಳ್ಳಲಾಗುವುದಿಲ್ಲ ಎಂದು…

Read More