ಬೆಂಗಳೂರು: ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾದ ವಿದ್ಯುತ್ ವ್ಯತ್ಯಯದ ಕಾರಣ, ದಿನಾಂಕ 04.05.2026 ರಂದು ಬೆಳಿಗ್ಗೆ 7:00 ರಿಂದ 11:00 ಗಂಟೆಯವರೆಗೆ ಪ್ರಯಾಣಿಕರ ಸೇವೆಗೆ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಪರಿಣಾಮವಾಗಿ, ಈ ಅವಧಿಯಲ್ಲಿ ರೈಲುಗಳು ನಿಲ್ದಾಣದಲ್ಲಿ ನಿಲುಗಡೆಯಾಗಲಿಲ್ಲ ಎಂಬುದಾಗಿ ಬಿ ಎಂ ಆರ್ ಸಿ ತಿಳಿಸಿದೆ.
ಈ ನಿಲ್ದಾಣವು ಭೂಗತವಾಗಿರುವುದರಿಂದ ಸಮರ್ಪಕ ಬೆಳಕಿಲ್ಲದೆ ಕಾರ್ಯಾಚರಣೆ ನಡೆಸುವುದು ಸುರಕ್ಷತಾ ದೃಷ್ಟಿಯಿಂದ ಅಪಾಯಕಾರಿಯಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನಾನೂಕೂಲ ಉಂಟುಮಾಡುವ ಸಾಧ್ಯತೆ ಇತ್ತು. ಆದ್ದರಿಂದ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟು ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರ ಕೈಗೊಳ್ಳಲಾಯಿತು.
ಬಿ.ಎಂ.ಆರ್.ಸಿ.ಎಲ್ ನಲ್ಲಿ ತಾಂತ್ರಿಕ ತಂಡಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ ಈ ದೋಷವು ನಿಯಂತ್ರಣ ವಲಯದ (ಕಂಟ್ರೋಲ್ ಸರ್ಕ್ಯೂಟ್) ತೊಂದರೆಯಿಂದ ಉಂಟಾಗಿದ್ದು, ಮುಂದಿನ ವ್ಯತ್ಯಯಗಳು ಅಥವಾ ಉಪಕರಣ ಹಾನಿಯನ್ನು ತಪ್ಪಿಸಲು ಸೂಕ್ತ ಪರಿಶೀಲನೆ ಅಗತ್ಯವಿತ್ತು. ಅಗತ್ಯ ಕ್ರಮಗಳನ್ನು ಅನುಸರಿಸಿದ ನಂತರ ದೋಷವನ್ನು ಯಶಸ್ವಿಯಾಗಿ ಗುರುತಿಸಿ ಸರಿಪಡಿಸಲಾಯಿತು ಮತ್ತು ಸುಮಾರು 11:00 ಗಂಟೆಗೆ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಲಾಯಿತು.
ಬಿ.ಎಂ.ಆರ್.ಸಿ.ಎಲ್ ಈ ವ್ಯತ್ಯಯದ ಬಗ್ಗೆ ಮಾಹಿತಿ ಸಾಮಾಜಿಕ ಮಾಧ್ಯಮಗಳ ಮೂಲಕ, ಮೆಟ್ರೋ ರೈಲಿನಲ್ಲಿ ಹಾಗೂ ನಿಲ್ದಾಣಗಳಲ್ಲಿ ಪ್ರಕಟಣೆ ವ್ಯವಸ್ಥೆಯ ಮೂಲಕ ಪ್ರಯಾಣಿಕರಿಗೆ ಮುಂಚಿತವಾಗಿ ತಿಳಿಸಲಾಗಿದ್ದು, ಅವರು ಅದಕ್ಕೆ ತಕ್ಕಂತೆ ಪ್ರಯಾಣವನ್ನು ಯೋಜಿಸಿಕೊಳ್ಳಲು ನೆರವಾಯಿತು.
ಬಿ.ಎಂ.ಆರ್.ಸಿ.ಎಲ್ ಇದರಿಂದ ಉಂಟಾದ ಅನಾನೂಕೂಲತೆಗೆ ವಿಷಾದ ವ್ಯಕ್ತಪಡಿಸುತ್ತದೆ ಹಾಗೂ ಪ್ರಯಾಣಿಕರ ಸಹಕಾರವನ್ನು ಶ್ಲ್ಯಾಘಿಸಿದೆ.
ಮಲೆನಾಡಿನ ವಿನಾಶಕ್ಕೆ ಬಿಡುವುದಿಲ್ಲ: ಬೇಸೂರು ಅಣು ಸ್ಥಾವರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಿರೋಧ








