Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ನಿನ್ನೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ವಾಗಿ ಬದಲಾವಣೆ ಆಗಿದೆ. ಇದೆ ವಿಚಾರವಾಗಿ ಗ್ರೇಟರ್ ಬೆಂಗಳೂರಿಗೆ ಶೀಘ್ರದಲ್ಲೇ ಮೀಸಲಾತಿ ಪ್ರಕಟಿಸಿ, ವಿಭಾಗಗಳನ್ನು ವಿಂಗಡಿಸಿ ಆದಷ್ಟು ಬೇಗ ಚುನಾವಣೆ ನಡೆಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ 4 ತಿಂಗಳಲ್ಲಿ ತಡಮಾಡದೇ, ಬೇಗ ಚುನಾವಣೆ ಮಾಡಲಾಗುವುದು. ಇದರ ಸಂಬಂಧ ಎಲ್ಲಾ ಪಕ್ಷಗಳ ಮುಖಂಡರ ಸಭೆ ಕರೆಯಲಾಗುವುದು. ಗ್ರೇಟರ್ ಬೆಂಗಳೂರು ರಚನೆಗೆ ಎಲ್ಲಾ ಪಕ್ಷದವರು ಸಲಹೆ, ಸೂಚನೆ ನೀಡಿದ್ದಾರೆ. ಎಲ್ಲರ ಸಲಹೆಗಳನ್ನು ಪಡೆದು ಗ್ರೇಟರ್ ಬೆಂಗಳೂರು ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಯಾದಗಿರಿ : ಯಾದಗಿರಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಯುವತಿಯರು ಸಾವನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಮೋಟ್ನಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ವೈಶಾಲಿ (17) ಮತ್ತು ನವೀತ (16) ಮೃತ ಯುವತಿಯರು ಎಂದು ತಿಳಿದುಬಂದಿದೆ. ಬಟ್ಟೆ ತೊಳೆಯುವಾಗ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಯುವತಿಯರು ಸಾವನಪ್ಪಿದ್ದಾರೆ. ಯುವತಿಯರ ಮೃತದೇಹಗಳನ್ನು ಸ್ಥಳೀಯರು ಬಾವಿಯಿಂದ ಹೊರಗಡೆ ತೆಗೆದಿದ್ದಾರೆ. ಘಟನೆ ಕುರಿತಂತೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಮಂಗಳೂರಿನಿಂದ ಲಕ್ಷ ದೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಡೆಯಾಗಿದ್ದು, ಸರಕು ತುಂಬಿದ್ದ ಮಂಗಳೂರಿನ ಹಡಗು ಇದೀಗ ಮುಳುಗಡೆಯಾಗಿದೆ. MSV ಸಲಾಮತ್ ಎಂಬ ಹೆಸರಿನ ಹಡಗು, ಮಂಗಳೂರಿನಿಂದ ಲಕ್ಷ ದೀಪಕ್ಕೆ ತೆರಳುವಾಗ ಸಮುದ್ರದಲ್ಲಿ ಮುಳುಗಡೆಯಾಗಿದೆ. ಸುಮಾರು 60 ನಾಟಿಕಲ್ ಮೈಲು ದೂರದಲ್ಲಿದ್ದಾಗ ಹಡಗು ಮುಳುಗಿದೆ. ಮೇ 12 ರಂದು ಮಂಗಳೂರು ಬಂದರಿನಿಂದ ಈ ಒಂದು ಹಡಗು ಲಕ್ಷದ್ವೀಪದ ಕಡೆಗೆ ಹೊರಟಿತ್ತು. ತಾಂತ್ರಿಕ ಸಮಸ್ಯೆಯಿಂದ ನೀರು ನುಗ್ಗಿ ಹಡಗು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ವೇಳೆ ಹಡಗಿನಿಂದ ಹಾರಿ 6 ಸಿಬ್ಬಂದಿಗಳು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಡಿಂಗಿ ಬೋಟ್ ಮೂಲಕ ಸಿಬ್ಬಂದಿಗಳು ಪ್ರಾಣ ಉಳಿಸಿಕೊಂಡಿದ್ದಾರೆ. ಕರಾವಳಿ ರಕ್ಷಣಾಪಡಿಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ. ಪೋಸ್ಟ್ ಕಾರ್ಡ್ ವಿಕ್ರಂ ಚಿಕ್ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಇಸ್ಮಾಯಿಲ್ ಶರೀಫ್ ಅಲೆಮನ್, ಅಹಮದ್ ಭಾಯ್, ಸುಲೇಮಾನ್ ಇಸ್ಮಾಯಿಲ್, ಕಸಮ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ ಮತ್ತು ಅಜ್ಮಲ್ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ.
ನವದೆಹಲಿ : ಪಾಕಿಸ್ತಾನದ ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಮೇ 9ರಂದು ನಡೆಸಿದ ದಾಳಿಯಲ್ಲಿ 14 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಘೋಷಿಸಿದೆ. ‘ಆಪರೇಷನ್ ಹೆರೋಫ್’ ಎಂಬ ಕಾರ್ಯಾಚರಣೆಯಡಿ ನಡೆದ ಈ ದಾಳಿಯಲ್ಲಿ ಗುಂಡು ನಿರೋಧಕ ವಾಹನವನ್ನು ರಿಮೋಟ್-ನಿಯಂತ್ರಿತ ಸ್ಫೋಟಕ ಸಾಧನ (ಐಇಡಿ)ದಿಂದ ಧ್ವಂಸಗೊಳಿಸಲಾಗಿದ್ದು, ವಾಹನದಲ್ಲಿದ್ದ ಎಲ್ಲಾ 14 ಸೈನಿಕರು ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಬಲೂಚ್ ಆರ್ಮಿ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಈ ದಾಳಿಯ ಸಂಪೂರ್ಣ ವೀಡಿಯೊವನ್ನು ಬಿಎಲ್‌ಎ ಮೇ 14, 2025ರಂದು ಬಿಡುಗಡೆ ಮಾಡಿದ್ದು, ತಾವೇ ಈ ಕೃತ್ಯವನ್ನು ಎಸಗಿರುವುದಾಗಿ ದೃಢಪಡಿಸಿದೆ.ಈ ದಾಳಿಯು ಬಲೂಚಿಸ್ತಾನದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಅಶಾಂತಿಯನ್ನು ಎತ್ತಿ ತೋರಿಸುತ್ತದೆ. ಬಲೂಚ್ ಬೇರ್ಪಾಟುವಾದಿ ಗುಂಪುಗಳು, ಪಾಕಿಸ್ತಾನ ಸರ್ಕಾರವು ರಾಜಕೀಯವಾಗಿ ಹೊರಗಿಟ್ಟು, ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಮತ್ತು ಪ್ರದೇಶದ ಸಮೃದ್ಧ ಖನಿಜ ಸಂಪತ್ತನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿವೆ. ಈ ಘಟನೆಯು ಭಾರತ-ಪಾಕಿಸ್ತಾನ ಒಡಂಬಡಿಕೆಯ ಸಂದರ್ಭದಲ್ಲಿ ನಡೆದಿದ್ದು, ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ…
ಮೈಸೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಬೆನ್ನಲ್ಲೆ ಇದೀಗ ದೇಶದೇಲ್ಲೆಡೆ ಭದ್ರತೆ ವಿಚಾರವಾಗಿ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮೈಸೂರು ಅರಮನೆಯ ಸುತ್ತಮುತ್ತಲು ಡ್ರೋನ್ ಹಾರಾಟ ನಿಷೇಧಿಸಿ ಅರಮನೆ ಆಡಳಿತ ಮಂಡಳಿ ಈ ಕುರಿತು ಆದೇಶ ಹೊರಡಿಸಿದೆ. ಹೌದು ಭದ್ರತೆಯ ದೃಷ್ಟಿಯಿಂದ ವಿಶ್ವವಿಖ್ಯಾತ ಮೈಸೂರು ಅಂಬಾವಿಲಾಸ ಅರಮನೆ ಸುತ್ತ ಡ್ರೋನ್ ಹಾರಾಟ ನಿಷೇಧಿಸಿ ಅರಮನೆಯ ಆಡಳಿತ ಮಂಡಳಿಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅರಮನೆಯ ನಾಲ್ಕು ಪ್ರಮುಖ ದ್ವಾರದಲ್ಲಿ ಪ್ರಕಟಣೆ ಫಲಕ ಹಾಕಿದ್ದಾರೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಹಾಗೂ ಗಜಪಡೆ ತಾಲೀಮು ವೇಳೆ ಕೆಲವರು ಶೋಕಿಗಾಗಿ ಮನಸ್ಸೋ ಇಚ್ಛೆ ಡ್ರೋನ್ ಹಾರಿಸಿ ಉದ್ದಟತನ ಪ್ರದರ್ಶಿಸಿದ್ದ ಬೆನ್ನಲ್ಲೇ ಅರಮನೆ ಸೇರಿದಂತೆ ಸುತ್ತಲಿನ ಪ್ರದೇಶವನ್ನು ಹಳದಿ (ಯಲ್ಲೋ) ವಲಯ ನಿರ್ಬಂಧಿಸಿತ್ತು. ಇದೀಗ ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿರುವುದರಿಂದ ಇದೀಗ ಡ್ರೋನ್ ಹಾರಾಟದ ಮೇಲೆ ನಿಗಾ ಇಡಲಾಗಿದೆ.
ಬಾಗಲಕೋಟೆ : ಬೃಹತ್ ಬನ್ನಿ ಮರವನ್ನು ಹತ್ತುವ ಮಳಿಯಪ್ಪಜ್ಜ.. ಹ್ಯೂತ್ ಎಂದು ಕೂಗಿದ್ದಾರೆ. ಆಗ ಅಲ್ಲಿ ಸೇರಿದ ಸಾವಿರಾರು ಸಂಖ್ಯೆಯ ಭಕ್ತರು ನಿಶಬ್ದರಾಗಿದ್ದಾರೆ. ಬಳಿಕ ಮುಂಗಾರಿ – ಹಿಂಗಾರಿ ತಕ್ಕಸ್ಟ ಮಸನ ಎಂದು ಹೇಳಿದ್ದಾರೆ. ಅಂದರೆ ಪ್ರಸ್ತುತ ಸಾಲಿನಲ್ಲಿ ಚೆನ್ನಾಗಿ ಮಳೆ ಬೆಳೆ ಇದೆ ಎಂದು ಅಲ್ಲಿನವರು ಅರ್ಥೈಸಿದ್ದಾರೆ. ಈ ಒಂದು ಭವಿಷ್ಯ ಹೇಳುವ ಪದ್ಧತಿ ಬಾಗಲಕೋಟೆ ಜಿಲ್ಲೆಯ ಗುಡೂರು ಗ್ರಾಮದಲ್ಲಿದೆ. ಇಲ್ಲಿನ ಹುಲ್ಲೇಶ್ವರ ದೇವಾಲಯ ಜಾತ್ರಾ ಮಹೋತ್ಸವದ ನಿಮಿತ್ತ ನಡೆಯುವ ಈ ವಿಶೇಷ ಆಚರಣೆ ಗಮನ ಸೆಳೆಯುವಂತಿದೆ.ಆಗಿ ಹುಣ್ಣಿಮೆ ದಿನದಂದು ರಾತ್ರಿ ಸಮಯದಲ್ಲಿ ದೇವಾಲಯದಲ್ಲಿ ಡೊಳ್ಳು ಭಾರಿಸುವ ಮೂಲಕ ಮಳಿಯಪ್ಪ ಅಜ್ಜ ಎಂಬುವ ಪೂಜಾರಿಗೆ ಮೈಯಲ್ಲಿ ದೇವರು ಬರುತ್ತದೆ. ಅವರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಬೃಹತ್ ಬನ್ನಿ ಮರಕ್ಕೆ ಪಲ್ಲಕ್ಕಿ ಮೆರವಣಿಗೆ ಹೋಗುತ್ತಾರೆ. ಮರದ ಪಕ್ಕದಲ್ಲಿಯೇ ಹಿಂದೆ ಲಿಂಗೈಕ್ಯರಾಗಿರುವ ಹಿರಿಯರ ಸಮಾಧಿಗಳು ಇವೆ. ಇಲ್ಲಿ ಪೂಜೆ – ಪುನಸ್ಕಾರ ಸಲ್ಲಿಸಲಾಗುತ್ತದೆ. ನಂತರ ಹಿಂದಿನ ಮಳಿಯಪ್ಪ ಪೂಜಾರಿಗಳ ವಂಶಸ್ಥರ ಸಮಾಧಿಯಿಂದ ಈಗಿನ ಮಳಿಯಪ್ಪ…
ಬೆಂಗಳೂರು : ಇತ್ತೀಚಿಗೆ ವಿಧಾನಸಭೆಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಶಾ ಸಭೆಯ ವಿಚಾರವಾಗಿ ಆರ್ ಅಶೋಕ್ ಮಾತನಾಡಿ, 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರೆವು ಜಾಸ್ತಿ ಆಗಿದೆ. ಏನೇನೋ ಮಾತನಾಡುತ್ತಾರೆ. ಎಸ್‌ಪಿಗೆ ಹೊಡೆಯಲು ಹೋಗುತ್ತಾರೆ. ಮನಮೋಹನ್ ಸಿಂಗ್ ಪುಣ್ಯಾತ್ಮ ಗೊಂಬೆ ತರಹ ಇದ್ದವರು. 10 ವರ್ಷದಲ್ಲಿ ಮನಮೋಹನ್ ಸಿಂಗ್ ಎಷ್ಟು ಹಣ ಕೊಟ್ಟಿದ್ದಾರೆ? ಡಾ. ಮನಮೋಹನ್ ಸಿಂಗ್ ಅವರಿಗಿಂತ ಮೋದಿ 4 ಪಟ್ಟು ಹೆಚ್ಚು ಹಣ ಕೊಟ್ಟಿದ್ದಾರೆ. ರಾಜ್ಯದ ಜನರ ಮೇಲೆ ತೆರಿಗೆ ಹಾಕಿ ಸುಲಿಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಔಟ್ ಗೋಯಿಂಗ್ ಸರ್ಕಾರ. ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಆಡಳಿತಕ್ಕೆ ಬರಲು ಆಗಲ್ಲ. 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರವಾದ ಆರೋಪ ಮಾಡಿದರು. ಡಿಕೆ ಶಿವಕುಮಾರ್…
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ಇತಿಹಾಸ ಸೇರಿದ್ದು ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಧಿಕಾರವಾಗಿ ಬದಲಾಗಿದೆ. ಇಂದಿನಿಂದಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾಗಿದೆ. ಈ ಒಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಇದು ಗ್ರೇಟರ್, ಬೆಂಗಳೂರು ಅಲ್ಲ ಕ್ವಾರ್ಟರ್ ಬೆಂಗಳೂರು ಎಂದು ವಾಗ್ದಾಳಿ ನಡೆಸಿದರು. ಗ್ರೇಟರ್ ಬೆಂಗಳೂರಿಗೆ ವಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದು, ಇದು ಗ್ರೇಟರ್ ಬೆಂಗಳೂರು ಅಲ್ಲ ಕ್ವಾರ್ಟರ್ ಬೆಂಗಳೂರು. ತುಘಲಕ್ ದರ್ಬಾರ್ ಅನ್ನೋದು ಇದನ್ನೇ. ಕೆಂಪೇಗೌಡರು ನಾಲ್ಕು ಗೋಪುರ ಕಟ್ಟಿ ಒಂದು ಬೆಂಗಳೂರು ಮಾಡಿದರು. ಕಾಂಗ್ರೆಸಿಗರು ಬೆಂಗಳೂರಿನ ಒಂದು ಬಾಗಿಲು ಮೂರು ಮಾಡಿದ್ದಾರೆ. ಯಾರದ್ದೋ ಆಸ್ತಿಗೆ ಬೆಲೆ ಬರಬೇಕು ಎಂದು ಮಾಡುವುದಲ್ಲ ಎಂದು ಗ್ರೇಟರ್ ಬೆಂಗಳೂರು ಕುರಿತು ಆರ್ ಅಶೋಕ್ ವಾಗ್ದಾಳಿ ನಡೆಸಿದರು. ಬೆಂಗಳೂರು ಒಡೆದರೆ ಕೆಂಪೇಗೌಡರಿಗೆ ದ್ರೋಹ ಬಗೆದಂತೆ. ಬೆಂಗಳೂರು ಮೂರು ಭಾಗ ಆದರೆ…
ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಅವರ ಸಹೋದರಿ ಎಂದು ಕೋಟ್ಯಾಂತರ ರೂಪಾಯಿ ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಇಡಿ ಸಮನ್ಸ್ ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ವೇಳೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬೇಡಿ ಎಂದು ಹೈಕೋರ್ಟ್ ಆದೇಶ ಹೊರಡಿಸಿತು. ವಿನಯ್ ಕುಲಕರ್ಣಿಗೆ ಇಡಿ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ, ಹೈಕೋರ್ಟ್ ವಿನಯ್ ಕುಲಕರ್ಣಿ ವಿರುದ್ಧ ಯಾವುದೇ ಬಲಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ನೀಡಿದೆ. ಈ ವೇಳೆ ಮಧ್ಯಂತರ ಆದೇಶಕ್ಕೆ ಇಡಿ ಪರ ಕೆಎಸ್‌ಜಿ ಅರವಿಂದ್ ಕಾಮತ್ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ವಾದಕ್ಕೆ ಅವಕಾಶ ನೀಡದೆ ಮಧ್ಯಂತರ ಆದೇಶ ನೀಡಬಾರದು ಎಂದು ಇಡಿ ಸಲ್ಲಿಸಿದ ಲಿಖಿತ ಆಕ್ಷೇಪಣೆ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಆದರೆ ಹೈಕೋರ್ಟ್…
ಬೆಳಗಾವಿ : ಕರ್ನಲ್ ಸೋಫಿಯಾ ಖುರೆಷಿ ಪತಿಯ ಮನೆ ಮೇಲೆ ದಾಳಿ ಆಗಿದೆ ಎಂದು ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ ಆರೋಪಿ ಅನಿಸ್ ವುದ್ದಿನ್ ವಿರುದ್ಧ ಬೆಳಗಾವಿಯ ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಹೌದು ನಿನ್ನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರಲ್ಲಿರುವ ಕರ್ನಲ್ ಸೋಫಿಯಾ ಖುರೆಷಿ ಪತಿಯ ಮನೆಯ ಮೇಲೆ ಆರ್‌ಎಸ್‌ಎಸ್ ಬೆಂಬಲಿತ ಹಿಂದೂ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಅನೀಸ್ ಉದ್ದಿನ್ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ. ಟ್ವಿಟ್ಟರ್ ಖಾತೆಯಲ್ಲಿ ಅನೀಸ್ ಉದ್ದಿನ್ ಸುಳ್ಳು ಸುದ್ದಿಯನ್ನು ಹರಡಿಸಿದ್ದ. ಯಾವುದೋ ಒಂದು ಫೋಟೋ ಬಳಸಿ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದ. ಕೂಡಲೇ ಬೆಳಗಾವಿ ಪೊಲೀಸರು ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ಕೆನಡಾದಲ್ಲಿ ಕುಳಿತು ಅನಿಸ್ ಉದ್ದಿನ್ ಈ ಒಂದು ಪೋಸ್ಟ್ ಮಾಡಿದ್ದ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ ಪಿ ಭೀಮಶಂಕರ್ ಗುಳೇದ್ ಅವರು FIR ದಾಖಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.…














