Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದ ಚಿನ್ನಯ್ಯನಿಗೆ ಹಣ ನೀಡಿದವರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಚಿನ್ನಯ್ಯನ ಖಾತೆಗೆ ಹಣ ಹಾಕಿದವರಿಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ ಹೌದು ಈ ಒಂದು ಪ್ರಕರಣದ ಪ್ರಮುಖ ಆರೋಪಿಗಳಾದ ಚಿನ್ನಯ್ಯ ಹಾಗೂ ಆತನ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ ಹಲವರಿಗೆ ಎಸ್‌ಐಟಿ ಪೊಲೀಸರು ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.ಆರೋಪಿ ಚಿನ್ನಯ್ಯನ ಬ್ಯಾಂಕ್ ಖಾತೆಗೆ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ₹3 ಲಕ್ಷ ಹಣ ವರ್ಗಾಯಿಸಿದ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಹಣದ ಮೂಲವನ್ನು ಪತ್ತೆಹಚ್ಚಲು ವಿಚಾರಣೆಗೆ ಕರೆಯಲಾಗಿದೆ. ಚಿನ್ನಯ್ಯನ ಬ್ಯಾಂಕ್ ಖಾತೆಯ ವಿವರಗಳನ್ನು ಈಗಾಗಲೇ ಪಡೆದಿರುವ ಎಸ್ಐಟಿ, ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಹಣ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಜಮೆಯಾಗಿರುವುದನ್ನು ಪತ್ತೆ ಹಚ್ಚಿದೆ. ಈ…

Read More

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಗಂಭೀರ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಇದೀಗ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ ಡಿಜಿಟಲ್‌ ಅರೆಸ್ಟ್‌ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಆದರೆ ಗೋಲ್ಡನ್ ಅವರ್ನಲ್ಲಿ ಡಾ. ಪ್ರಿಯಾ ಅವರು ಸೈಬರ್ ಠಾಣೆಗೆ ದೂರು ನೀಡಿದ್ದರಿಂದ ತಾವು ಕಳೆದುಕೊಂಡಿದ್ದ ಎಲ್ಲಾ 14 ಲಕ್ಷ ರೂಪಾಯಿಗಳನ್ನು ಮರಳಿ ಪಡೆದುಕೊಂಡಿದ್ದಾರೆ. ಪತ್ನಿ ಡಾ. ಪ್ರೀತಿ ಸುಧಾಕರ್ ಗೆ ಸೈಬರ್ ವಂಚನೆ ಮಾಡಿ 14 ಲಕ್ಷ ರೂಪಾಯಿ ಎಗರಿಸಿದ್ದಾರೆ. ಆಗಸ್ಟ್ 26ರಂದು ಡಾ. ಪ್ರೀತಿ ಸುಧಾಕರ್ ಬೆಳಿಗ್ಗೆ 9:30ಕ್ಕೆ ಕರೆ ಬಂದಿತ್ತು. ನಾವು ಮುಂಬೈ ಸೈಬರ್ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡಿದ್ದಾನೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ ಎಂದು ವಂಚಕ ಹೇಳಿದ್ದಾನೆ. ವಿದೇಶಕ್ಕೆ ಕಾನೂನುಬಾಹಿರವಾಗಿ ಚಟುವಟಿಕೆ ನಡೆಸಲು ಆತ ಜನರನ್ನು ಕಳುಹಿಸಿದ್ದಾನೆ. ಸದ್ಯಕ್ಕೆ ಸದ್ಬತ್ ಖಾನ್‌ರನ್ನು ಅರೆಸ್ಟ್ ಮಾಡಲಾಗಿದ್ದು,…

Read More

ಮೈಸೂರು : ಸಂವಿಧಾನದಲ್ಲಿ ಎಲ್ಲರೂ ಮನುಷ್ಯರಾಗಿ ಬಾಳಿ ಸಮ ಸಮಾಜವನ್ನು ಕಟ್ಟಿ ಎಲ್ಲರೂ ಭಾತೃತ್ವದಿಂದ ಬಾಳುವ ಭಾವನೆ ಬೆಳೆಸಿಕೊಳ್ಳಿ ಎಂದು ಸಂದೇಶ ಸಾರುತ್ತದೆ. ಹಾಗಾಗಿ ಇದನ್ನು ನಾಡಹಬ್ಬ ಜನರ ಹಬ್ಬ ಎಂದು ಕರೆಯಲಾಗುತ್ತದೆ. ಇದು ಒಂದು ಧರ್ಮದ ಹಬ್ಬ, ಒಂದು ಜಾತಿಯ ಹಬ್ಬ ಅಲ್ಲ. ಎಲ್ಲ ಧರ್ಮದ ಎಲ್ಲಾ ಜಾತಿಗಳ ಹಬ್ಬ. ಹಾಗಾಗಿ ಇದನ್ನು ವಿಶ್ವವಿಖ್ಯಾತ ದಸರಾ ಅಂತ ಕರೆಯಲಾಗುತ್ತದೆ ಎಂದರು. ಬಡವರಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕು ಜಾತಿ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರಿಗೆ ದೌರ್ಜನ್ಯ ಅಸಮಾನತೆ ಮುಂದುವರೆಯುತ್ತದೆ. ಅಸಮಾನತೆ,ದೌರ್ಜನ್ಯ ಹೋಗಬೇಕಾದರೆ ಎಲ್ಲರೂ ಮುಖ್ಯವಾಹಿನಿಗೆ ಬರಬೇಕಾದರೆ, ಸಮಾನತೆ ಬಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗುತ್ತದೆ ಇಲ್ಲವಾದರೆ ಸಾಧ್ಯ ಆಗಲ್ಲ. ಇದನ್ನೇ ಬುದ್ಧ ಬಸವಣ್ಣ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಹೇಳಿದ್ದು. ಕುವೆಂಪು ಅವರು ಹೇಳುತ್ತಾರೆ ಎಲ್ಲಾ ದೇವಸ್ಥಾನಗಳನ್ನ ಚರ್ಚ್ ಗಳನ್ನ ಮಸೀದಿಗಳನ್ನು ಬಿಟ್ಟು ಬರ್ರಿ ಮನುಷ್ಯರಾಗಿ ಅಂತ ಹೇಳಿದರು. ಸರ್ವಜನಾಂಗದ ಶಾಂತಿಯ ತೋಟ…

Read More

ಮೈಸೂರು : ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ಯಾಕೆ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಅಂದರೆ, ಸ್ವತಂತ್ರ ಬಂದು 78 ವರ್ಷಗಳಾದರೂ ಕೂಡ ಅಸಮಾನತೆ ಇದೆ ತಾರತಮ್ಯ ಇದೆ ಇದೆಲ್ಲವನ್ನು ಹೋಗಲಾಡಿಸಲು ನಾವು ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಮುಂದುವರೆಸಲಿಕ್ಕೆ ಆಗಲ್ಲ ಅಂತ ಹೇಳಿದರು. ಇಲ್ಲಿವರೆಗೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ರಾಜ್ಯ ಏನಾದರೂ ದಿವಾಳಿ ಆಗಿದೆಯಾ ? ಪ್ರತಿವರ್ಷ 52 ರಿಂದ 56,000 ಕೋಟಿ ರೂಪಾಯಿ ಇದಕ್ಕೆ ಖರ್ಚು ಮಾಡುತ್ತಿದ್ದೇವೆ. ಪ್ರತಿಯೊಂದು ಬಡವರ ಮನೆಗೆ ದೀನ ದಲಿತರ ಮನೆಗೆ ಬಡವರ ಮನೆಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಇವತ್ತು ಕೊಂಡುಕೊಳ್ಳುವಂಥ ಶಕ್ತಿ ಜಾಸ್ತಿಯಾಗಿದೆ. ಶಕ್ತಿ ಯೋಜನೆಯ ಮೂಲಕ ಯಾವ ಹೆಣ್ಣು ಮಕ್ಕಳು ಕೂಡ ಬಸ್ ಚಾರ್ಜ್ ಕೊಡುವ ಹಾಗಿಲ್ಲ ಸುಮಾರು 500 ಕೋಟಿಗೂ…

Read More

ಮೈಸೂರು : ಬಾನು ಮುಷ್ತಾಕ್ ಅವರು ಹುಟ್ಟಿನಿಂದ ಮುಸ್ಲಿಂ ಮಹಿಳೆ ಆಗಿರಬಹುದು ಆದರೆ ಅವರು ಕೂಡ ಮನುಷ್ಯರೇ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆ ಹೊರತು, ಧರ್ಮದ ಆಧಾರದ ಮೇಲೆ ಜಾತಿಯ ಆಧಾರದ ಮೇಲೆ ದ್ವೇಷಿಸಬಾರದು ನಾವೆಲ್ಲರೂ ಮನುಷರು ನಾವೆಲ್ಲ ಪರಸ್ಪರ ಪ್ರೀತಿಯಿಂದ ಇರಬೇಕೆ ಹೊರತು ದ್ವೇಷದಿಂದ ಇರಬಾರದು ಅದು ಮನುಷ್ಯತ್ವದ ಲಕ್ಷಣ ಅಲ್ಲ. ಲ್ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇಂದು ಮೈಸೂರಿನಲ್ಲಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನಾವು ಮನುಷ್ಯತ್ವ ಒಪ್ಪಿಕೊಳ್ಳುವುದಾದರೆ ಈ ನಾಡಿನ ಯಾವುದೇ ಧರ್ಮ ಯಾವುದೇ ಜಾತಿ ಯಾವುದೇ ವರ್ಗಕ್ಕೆ ಸೇರಿರತಕ್ಕಂತಹವರು ಕೂಡ ಇಂತಹ ಪ್ರಮುಖವಾದಂತಹ ನಾಡ ಹಬ್ಬಗಳ ಉದ್ಘಾಟನೆಯನ್ನು ಮಾಡುವುದನ್ನು ಸ್ವಾಗತ ಮಾಡಬೇಕು ಈ ನಾಡಿನ ಬಹುಸಂಖ್ಯಾತ ಜನರು ಭಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳುತ್ತಿದ್ದರು ಯಾರಿಗೆ ಇತಿಹಾಸ ಗೊತ್ತಿರಲ್ಲ, ಅವರ್ಯಾರು ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ ಅಂತ ಹೇಳುತ್ತಿದ್ದರು ಹಾಗಾಗಿ ಪ್ರತಿಯೊಬ್ಬರೂ ಇತಿಹಾಸವನ್ನು…

Read More

ಬೆಂಗಳೂರು : ಮನೆ ಕೆಲಸಗಳಿಗೆ ಸೇರುವ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಸಂಘಟನೆ ಖಾತರಿಪಡಿಸುವ ನಿಟ್ಟಿನಲ್ಲಿ ಉದ್ಯೋಗದಾತರಿಗೆ ಶೇ 5ರ ಕಲ್ಯಾಣ ಶುಲ್ಕ ವಿಧಿಸುವ ಗೃಹ ಕಾರ್ಮಿಕರ ಮಸೂದೆ ರೂಪಿಸಲು ಕರ್ನಾಟಕ ಸರ್ಕಾರ ಮುಂದಾಗಿರುವ ಬಗ್ಗೆ ವರದಿಯಾಗಿದೆ. ಹೌದು ಇನ್ಮುಂದೆ ಗೃಹ ಕೆಲಸಗಳ ಕಾರ್ಮಿಕರ ಸಂಘಟನೆ ಮತ್ತು ಅವರ ಸಾಮಾಜಿಕ ಭದ್ರತೆ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಹತ್ವದ ಮಸೂದೆ ರೂಪಿಸುವ ಸುಳಿವು ನೀಡಿದೆ. ಮನೆ ಕೆಲಸದವರ ನೇಮಕ ಮಾಡಿದರೆ ಶೇ 5ರ ಕಲ್ಯಾಣ ಶುಲ್ಕ ವಿಧಿಸುವ ಬಗ್ಗೆ ಮಸೂದೆ ರೂಪಿಸಲು ಮುಂದಾಗಿದೆ. ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯಂತಹ ಪ್ರಮುಖ ಭದ್ರತೆಗಳನ್ನು ಒದಗಿಸುವುದೇ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆಯ ಪ್ರಮುಖ ಉದ್ದೇಶ. ಮಸೂದೆ ಜಾರಿಗೆ ಬಂದರೆ, ಮನೆಗಳಲ್ಲಿ ಕೆಲಸ ಮಾಡುವವರು, ಸೇವಕಿಯರು, ಅಡುಗೆಯವರು, ಚಾಲಕರು, ದಾದಿಯರು ಮತ್ತು ಇತರರು ಸರ್ಕಾರಕ್ಕೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಮನೆಕೆಲಸಗಾರರನ್ನು ನೇಮಿಸಿಕೊಳ್ಳುವವರು, ಮಸೂದೆಯ ಅಧೀನದಲ್ಲಿ ಸ್ಥಾಪಿಸಲಾಗುವ ಕಲ್ಯಾಣ ನಿಧಿಗೆ…

Read More

ಬೆಂಗಳೂರು : ಇನ್ನೇನು ಇಂದಿನಿಂದ ದಸರಾ ಹಬ್ಬ ಆರಂಭವಾಗಿದ್ದು, ಇನ್ಮುಂದೆ ಸಾಲು ಸಾಲು ಹಬ್ಬಗಳು ಆರಂಭವಾಗಲಿವೆ. ಹಬ್ಬಗಳ ಸಂದರ್ಭದಲ್ಲಿ ಜನರು ಹೊಸ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿ ಮಾಡುತ್ತಾರೆ ಆದರೆ ಇದೇ ಸಂದರ್ಭದಲ್ಲಿ ಕೆಲವು ಸೈಬರ್ ವಂಚಕರು ಬ್ಯಾಂಕ್ ಗ್ರಾಹಕರಿಗೆ ನಕಲಿ ಆಫರ್ ಗಳನ್ನು ನೀಡಿ ವಂಚನೆ ಎಸಗುವ ಸಾಧ್ಯತೆಗಳು ಹೆಚ್ಚಿವೆ. ಹೌದು ಸಾಲು ಸಾಲು ಹಬ್ಬಗಳು ಶುರುವಾಗುತ್ತಿರುವ ಸಂದರ್ಭದಲ್ಲಿ ಸೈಬರ್​ ವಂಚಕರು ಕೂಡ ಆ್ಯಕ್ಟೀವ್​ ಆಗಿದ್ದಾರೆ. ಬ್ಯಾಂಕ್ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ವಂಚನೆಗೆ ಇಳಿದಿದ್ದಾರೆ. ವಂಚಕರು ನಕಲಿ ವೆಬ್‌ಸೈಟ್‌ಗಳು ಮತ್ತು ಎಸ್‌ಎಂಎಸ್ ಮೂಲಕ ಆಕರ್ಷಕ ಆಫರ್‌ಗಳನ್ನು ನೀಡಿ ವಂಚಿಸುತ್ತಿದ್ದಾರೆ. ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿಕೊಂಡಿರುವ ಸೈಬರ್ ವಂಚಕರು, ಪ್ರತಿಷ್ಠಿತ ಬ್ಯಾಂಕ್​​ಗಳಂತೆ ವೆಬ್‌ಸೈಟ್​ಗಳನ್ನು ಮಾಡಿಕೊಂಡು ಗ್ರಾಹಕರಿಗೆ ನಕಲಿ ರಿವಾರ್ಡ್​ಗಳು ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳ ಲಿಂಕ್​ಗಳನ್ನು ಕಳುಹಿಸುವ ಮೂಲಕ ವಂಚಿಸುತ್ತಿದ್ದಾರೆ. ಈ ಕುರಿತಾಗಿ ಓರ್ವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ ಸೈಬರ್​ ವಂಚಕರು ಫೋನ್ ಕರೆಗಳ ಮೂಲಕ, ಅಧಿಕೃತ…

Read More

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025ಕ್ಕೆ ಇಂದು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಿದರು. ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗಿ ಚಾಲನೆ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಿದರು. ಬಳಿಕ ಭಾಷಣದಲ್ಲಿ ಮಾತನಾಡಿದ ಅವರು, ಚಾಮುಂಡಿ ಸನ್ನಿಧಿ ಬಳಿ ಕರೆದೊಯ್ಯುವುದಾಗಿ ನನ್ನ ಸ್ನೇಹಿತೆ ಒಬ್ಬರು ಹೇಳಿದ್ದರು.ಈಗ ಸರ್ಕಾರ ನನ್ನನ್ನು ದಸರಾ ಉದ್ಘಾಟನೆಗೆ ಅಹ್ವಾನಿಸಿದದ ಬಳಿಕ ಬೇಕಾದಷ್ಟು ಏರುಪೇರು ಹಾಗೂ ಸನ್ನಿವೇಶಗಳು ನಡೆದರೂ ಕೂಡ, ತಾಯಿ ಚಾಮುಂಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ನಾನು ಈಗ ತಾನೆ ಹಾಗೆ ಸನ್ನಿಧಿಯಿಂದ ನಿಮ್ಮೆಲ್ಲರಿಗೆ ಬಂದು ನಿಂತಿದ್ದೇನೆ. ದಸರಾ ಅಂದರೆ ಇದು ಕೇವಲ ಹಬ್ಬ ಮಾತ್ರ ಅಲ್ಲ ಇದು ನಾಡಿನ ಒಂದು ನಾಡಿಮಿಡಿತ ಸಂಸ್ಕೃತಿಯ ಉತ್ಸವ ಎಲ್ಲರನ್ನೂ ಒಳಗೊಳ್ಳುವಂತಹ ಗಳಿಗೆ ಸಮನ್ವಯದ ಮೇಳವಾಗಿದೆ. ಹೆಸರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು ಕನ್ನಡ ಭಾಷೆಯ ಹೃದಯದ ಆಳದ ಸ್ಪಂದನದ ವರೆಗೆ…

Read More

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ದಸರಾ ವನ್ನು ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸುವ ಮೂಲಕ ವಿದ್ಯುಕ್ತವಾದ ಚಾಲನೆ ನೀಡಿದರು. ಮೈಸೂರು ದಸರಾ ಉದ್ಘಾಟನೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಈಡುಗಾಯಿ ಒಡೆದರು. ಬಳಿಕ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಸಚಿವ ವೆಂಕಟೇಶ್, ಶಾಸಕ ಜಿಟಿ ದೇವೇಗೌಡ, ಹರೀಶ್ ಗೌಡ ತನ್ವೀರ್ ಸೇಟ್ ಅನಿಲ್ ಚಿಕ್ಕಮಾದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಮೈಸೂರು ಜಿಲ್ಲೆಯ ಪ್ರಮುಖ ನಾಯಕರು ಉಪಸ್ಥಿತರಿದ್ದರು. ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, 1,000 ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ, ವಿಐಪಿ, ಮತ್ತು ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಬೆಟ್ಟದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯದುವೀರ್ ಒಡೆಯರವರ ಖಾಸಗಿ ದರ್ಬಾರ್ ಚಾಮುಂಡಿ ಬೆಟ್ಟದಲ್ಲಿ…

Read More

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ದಸರಾ ವನ್ನು ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ದಸರಾ ಉದ್ಘಾಟಿಸಲಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಈಡುಗಾಯಿ ಒಡೆದರು. ಬಳಿಕ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಾನು ಮುಷ್ತಾಕ್ ಅವರು ಪೂಜೆ ಬಳಿಕ ದೇವಿಯ ಮಂಗಳಾರತಿ ತೆಗೆದುಕೊಂಡರು. ದೇವಿಯ ದರ್ಶನದ ಬಳಿಕ ಭಾವುಕರಾದರು. ಇದೆ ವೇಳೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸೀರೆ ಉಡುಗೊರೆ ನೀಡಲಾಗಿದ್ದು, ದೇವಿಯ ಪಾದದ ಅಡಿ ಇಟ್ಟು ಪೂಜಿಸಿದ್ದ ಸೀರೆಯನ್ನು ಬಾನು ಮುಷ್ತಾಕ್ ಅವರಿಗೆ ಇದೆ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಉಡುಗೊರೆಯಾಗಿ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಸಚಿವ ವೆಂಕಟೇಶ್, ಶಾಸಕ ಜಿಟಿ ದೇವೇಗೌಡ, ಹರೀಶ್ ಗೌಡ ತನ್ವೀರ್ ಸೇಟ್ ಅನಿಲ್ ಚಿಕ್ಕಮಾದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಮೈಸೂರು ಜಿಲ್ಲೆಯ ಪ್ರಮುಖ ನಾಯಕರು…

Read More