Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬಾಗಲಕೋಟೆ : ವಾಲ್ಮೀಕಿ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರವಾಗಿ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೇರಡು ದೂರು ದಾಖಲಾಗಿವೆ. ಬಾಗಲಕೋಟೆಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಹಾಗು ಮುಧೋಳ ಟೌನ್ ಪೊಲೀಸ ಠಾಣೆಗೆ ವೀರ ಸಿಂಧೂರ ಲಕ್ಷ್ಮಣ ಯುವ ಸೇನೆಯಿಂದ ದೂರು ಸಲ್ಲಿಸಲಾಗಿದೆ. ಬಾಗಲಕೋಟೆಯಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ. ರಮೇಶ್ ಕತ್ತಿ ವಿರುದ್ಧ ಜಾತಿನಿಂದನೆ ಆರೋಪದಡಿ ದೂರು ಸಲ್ಲಿಕೆ ಮಾಡಿದ್ದಾರೆ. ಹಾಗು ಮುಧೋಳದಲ್ಲಿ ವೀರ ಸಿಂಧೂರ ಲಕ್ಷ್ಮಣ ಯುವ ಸೇನೆಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಬಿಜೆಪಿ ನಾಯಕ ರಮೇಶ್ ಕತ್ತಿ ಬಂಧಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದಕ್ಷಿಣಕನ್ನಡ : ಕೋಮು ಸೌಹಾರ್ದತೆ ಇದ್ದರೆ ರಾಜ್ಯ ಮತ್ತು ಜಿಲ್ಲೆಗಳು ಅಭಿವೃದ್ಧಿಯಾಗುತ್ತವೆ ಕೋಮು ಸೌಹಾರ್ದತೆ ಹಾಳು ಮಾಡಿದ್ದು ಯಾರು ಅಂತ ಅರ್ಥ ಮಾಡಿಕೊಳ್ಳಿ ಎಂದು ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಜಿಲ್ಲೆಯಲ್ಲಿ ಕೋಮ ಸೌಹಾರ್ದತೆಗೆ ವಿಶೇಷ ಗಮನ ಕೊಡಿ. ಸುಳ್ಳು ಹೇಳುವವರ ವಿರುದ್ಧ ಕಾನೂನು ತಂದು ಕೇಸ್ ದಾಖಲಿಸುತ್ತೇವೆ. ಸಚಿವ ಪ್ರಿಯಾಂಕ್ ಖರ್ಗೆ HK ಪಾಟೀಲ್ ಸದ್ಯ ಆ ಕೆಲಸದಲ್ಲಿ ಇದ್ದಾರೆ. ಈ ಜಿಲ್ಲೆಯ 8 ಕ್ಷೇತ್ರಗಳಲ್ಲೂ ನೀವು ಆಶೀರ್ವಾದ ಮಾಡಬೇಕು, ಎಷ್ಟೇ ಖರ್ಚಾದರೂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಾಡುತ್ತೇವೆ. ನುಡಿದಂತೆ ನಡೆದಿದ್ದೇವೆ. ಕೇಳುವ ಹಕ್ಕು ನಮಗಿದೆ. ನಾನು ಸಿಎಂ ಆಗಿರುವವರೆಗೂ ಬಡವರ ಯಾವುದೇ ಯೋಜನೆಯನ್ನು ನಿಲ್ಲಿಸಲ್ಲ. ಜಿಎಸ್‌ಟಿ ಜಾರಿ ಮಾಡಿದ್ದೆ ಮೋದಿ ಸರ್ಕಾರ ಈಗ ದೀಪಾವಳಿ ಗಿಫ್ಟ್ ಅಂತ ಹೇಳುತ್ತಾರೆ. ನರೇಂದ್ರ ಮೋದಿ ಸರ್ಕಾರ 8 ವರ್ಷ ಟ್ಯಾಕ್ಸ್ ಸಂಗ್ರಹ ಮಾಡಿದೆ.…
ಬೀದರ್ : ಸಾಮಾನ್ಯವಾಗಿ ಬಸ್ ನಲ್ಲಿ ಪ್ರಯಾಣಿಸುವಾಗ ಮರೆತು ಅದೆಷ್ಟೋ ಜನ ಹಣ ಒಡವೆ ಕಳೆದುಕೊಂಡಿರುತ್ತಾರೆ. ಬಹುತೇಕ ಪ್ರಯಾಣಿಕರಿಗೆ ತಾವು ಕಳೆದುಕೊಂಡ ಹಣ, ಒಡವೆ ಮರಳಿ ಸಿಕ್ಕಿರುತ್ತದೆ. ಸಿಬ್ಬಂದಿಗಳು ವಸ್ತುಗಳನ್ನು ಮರಳಿಸಿರುತ್ತಾರೆ. ಇದೀಗ ಬೀದರ್ ನಲ್ಲಿ ಕೂಡ ಹಣ ಬಿಟ್ಟು ಹೋಗಿದ್ದ ಪ್ರಯಾಣಿಕನಿಗೆ ಸಾರಿಗೆ ಸಿಬ್ಬಂದಿ ಹಣ ಮರಳಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರಯಾಣ ಮಾಡುವಾಗ ಬಸ್‌ನಲ್ಲೇ ಬಿಟ್ಟು ಹೋಗಿದ್ದ 1.60ಲಕ್ಷ ಹಣವನ್ನು ಪ್ರಯಾಣಿಕನಿಗೆ ಮರಳಿ ನೀಡಿ ಕಂಡಕ್ಟರ್ ಮತ್ತು ಚಾಲಕ ಮಾನವೀಯತೆ ಮೆರೆದ ಘಟನೆ ಬೀದರ್‌ನಲ್ಲಿ ನಡೆದಿದೆ.ಗ್ರಾಮಕ್ಕೆ ತೆರಳಿ ವಯೋವೃದ್ಧನಿಗೆ ಹಣ ವಾಪಸ್ ನೀಡಿದ ನಿರ್ವಾಹಕ ಮತ್ತು ಚಾಲಕನ ಪ್ರಾಮಾಣಿಕತೆಗೆ ಜಿಲ್ಲೆಯ ಜನರು ಶ್ಲಾಘಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಟಸಾಂಗ್ವಿ ಗ್ರಾಮದ ಬಳಿ ಈ ಘಟನೆ ನಡೆದಿದೆ. 1.60 ಲಕ್ಷ ರೂ. ಬಸ್‌ನಲ್ಲೇ ಬಿಟ್ಟು ಹೋದ ವಿಷಯ ತಿಳಿದು ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕರಾದ ಸಿದ್ರಾಮ್ ಮತ್ತು ಚಾಲಕರಾದ ಹನೀಪ್ ಗ್ರಾಮಕ್ಕೆ ಹೋಗಿ ಹಣದ ಚೀಲ ಮರಳಿಸಿ ಮಾನವೀಯತೆ…
ಬೆಂಗಳೂರು : ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ಆರೋಪ ಹಿನ್ನೆಲೆಯಲ್ಲಿ, ಇದರಿಂದ ಬೇಸತ್ತು ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಉಪನ್ಯಾಸಕಿ ಪುಷ್ಪಾವತಿ (30) ದೊಡ್ಡಬಳ್ಳಾಪುರದ ವಿಶ್ವೇಶ್ವರಯ್ಯ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರದ ಘಾಟಿಯ ವಿಶ್ವೇಶ್ವರಯ್ಯ ಡ್ಯಾಮ್ ನಲ್ಲಿ ಬಿದ್ದು ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತೆ ಮಾವ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ವಿಡಿಯೋ ಮಾಡಿ ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮನೆಯವರು ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದರು. ನನಗೆ ತುಂಬಾ ಹಿಂಸೆ ಕೊಟ್ಟಿದ್ದಾರೆ. ಊಟಕ್ಕೆ ವಿಷ ಹಾಕಿ ನನ್ನನ್ನು ಸಾಯಿಸೋಕೆ ಪ್ಲಾನ್ ಮಾಡಿದ್ದರು. ಹಾಗಾಗಿ ಊಟ ಸಹ ಮಾಡುತ್ತಿರಲಿಲ್ಲ. ನಾನು ಅಡಿಗೆ ಮಾಡಿದರೆ ಮಾತ್ರ ಊಟ ಮಾಡುತ್ತಿದ್ದೆ. ಇಷ್ಟೆಲ್ಲ ಆದ್ಮೇಲೆ ಸಮಾಜದಲ್ಲಿ ಸಂಬಂಧಿಕರೆಲ್ಲರೂ ನಗೋ ತರ ಆಗೋಯ್ತು. ನನ್ನ ಜೀವನ…
ದೊಡ್ಡಬಳ್ಳಾಪುರ : ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ಆರೋಪ ಹಿನ್ನೆಲೆಯಲ್ಲಿ, ಇದರಿಂದ ಬೇಸತ್ತು ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಉಪನ್ಯಾಸಕಿ ಪುಷ್ಪಾವತಿ (30) ದೊಡ್ಡಬಳ್ಳಾಪುರದ ವಿಶ್ವೇಶ್ವರಯ್ಯ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರದ ಘಾಟಿಯ ವಿಶ್ವೇಶ್ವರಯ್ಯ ಡ್ಯಾಮ್ ನಲ್ಲಿ ಬಿದ್ದು ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತೆ ಮಾವ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ವಿಡಿಯೋ ಮಾಡಿ ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮನೆಯವರು ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದರು. ನನಗೆ ತುಂಬಾ ಹಿಂಸೆ ಕೊಟ್ಟಿದ್ದಾರೆ. ಊಟಕ್ಕೆ ವಿಷ ಹಾಕಿ ನನ್ನನ್ನು ಸಾಯಿಸೋಕೆ ಪ್ಲಾನ್ ಮಾಡಿದ್ದರು. ಹಾಗಾಗಿ ಊಟ ಸಹ ಮಾಡುತ್ತಿರಲಿಲ್ಲ. ನಾನು ಅಡಿಗೆ ಮಾಡಿದರೆ ಮಾತ್ರ ಊಟ ಮಾಡುತ್ತಿದ್ದೆ. ಇಷ್ಟೆಲ್ಲ ಆದ್ಮೇಲೆ ಸಮಾಜದಲ್ಲಿ ಸಂಬಂಧಿಕರೆಲ್ಲರೂ ನಗೋ ತರ ಆಗೋಯ್ತು. ನನ್ನ ಜೀವನ ನಾನು ಮಾಡಿರುವ ತಪ್ಪಾದರೂ ಏನು? ವರದಕ್ಷಿಣೆಗಾಗಿ ಮೋಸ ಮಾಡಿ ಬ್ಲಾಕ್ ಮಾಡಿ ಮದುವೆ…
ಹಾವೇರಿ : ದೀಪಾವಳಿ ಹಬ್ಬದಂದೆ ಘೋರವಾದ ದುರಂತ ಒಂದು ನಡೆದಿದ್ದು, ಕೌಟುಂಬಿಕ ಕಲಹ ಹಾಗೂ ವರದಕ್ಷಣೆ ಕಿರುಕುಳ ಹಿನ್ನೆಲೆ ಮಗಳ ಜೊತೆಗೆ ವರದಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ವರದಹಳ್ಳಿ ಸಮೀಪ ಒಂದು ಘಟನೆ ನಡೆದಿದೆ. ಹಾವೇರಿ ತಾಲೂಕಿನ ವರದಹಳ್ಳಿಯಲ್ಲಿ ಕಾವ್ಯ (12) ಮತ್ತು ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಕಾವ್ಯ ಮೃತ ದೇಹವನ್ನು ಪತ್ತೆ ಮಾಡಿದ್ದು, ಸವಿತಾ ಮೃತ ದೇಹಕ್ಕಾಗಿ ಶೋಧ ಮುಂದುವರಿಸಿದ್ದಾರೆ. ವರದ ನದಿ ದಡದಲ್ಲಿ ಸವಿತಾ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ : ಕಳೆದ ಅಕ್ಟೋಬರ್ 13 ರಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕರು ಸಚಿವರಿಗೆ ಡಿನ್ನರ್ ಪಾರ್ಟಿ ಕರೆದಿದ್ದರು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗಿಗೆ ಕರೆದು ಯಾಕೆ ಗೊತ್ತಾ? ಪ್ರತಿ ಸೇವೆಗೆ ರೇಟ್ ಫಿಕ್ಸ್ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು. ಒಬ್ಬೊಬ್ಬ ಸಚಿವರನ್ನು ಪ್ರತ್ಯೇಕವಾಗಿ ಕರೆದು ರೇಟ್ ಫಿಕ್ಸ್ ಮಾಡಿದ್ದಾರೆ. ಯಾರು ಎಷ್ಟು ಕೊಡಬೇಕು ಅಂತ ಸಿಎಂ ಸಿದ್ದರಾಮಯ್ಯ ರೇಟ್ ಫಿಕ್ಸ್ ಮಾಡಿದ್ದಾರೆ. ಹೈಕಮಾಂಡ್ ಪಾಲಿಗೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆಗಿದೆ. ಬಿಡಿಎ, ಜಿಬಿಎ ವ್ಯಾಪ್ತಿಯ ಸೇವೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಪ್ರತಿ ಇಲಾಖೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ತನಿಖೆ ನಡೆಸಿದರೆ ಯಾರ ಪಾಲು ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು. ಆರ್ ಎಸ್ ಎಸ್ ಚಟುವಟಿಕೆಯಲ್ಲಿ ಸರ್ಕಾರಿ ನೌಕರರಿಗೆ ಭಾಗಿಯಾಗಲು ಕಡಿವಾಣ ಹಾಕಿದ ವಿಚಾರವಾಗಿ, ಮುಖ್ಯಮಂತ್ರಿ…
ಕಲಬುರ್ಗಿ : ರಾಜ್ಯದಲ್ಲಿ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಸರ್ಕಾರಿ ನೌಕರರು ಭಾಗಿಯಾಗಬಾರದು ಎಂದು ಇತ್ತೀಚಿಗೆ ಸಚಿವ ಪ್ರಿಯಾಂಕ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೆ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಕಲ್ಬುರ್ಗಿ ಜಿಲ್ಲೆಯ ಸೇಡಂ ನಲ್ಲಿ ಸರ್ಕಾರಿ ವೈದ್ಯರು ಒಬ್ಬರು ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ. ಹೌದು ಪಿಡಿಒ ಬೆನ್ನಲ್ಲೇ, ಆರ್ ಎಸ್ ಎಸ್ ಪಥ ಸಂಚನದಲ್ಲಿ ಮತ್ತೊರ್ವ ಸರ್ಕಾರಿ ಅಧಿಕಾರಿ ಭಾಗಿಯಾಗಿದ್ದಾರೆ. ಗಣವೇಶ ಧರಿಸಿ ಸರ್ಕಾರಿ ವೈದ್ಯ ಪಥ ಸಂಚಲನ ಮಾಡಿದ್ದಾರೆ. ಸೇಡಂ ತಾಲೂಕಿನ ಆಡಳಿತ ವೈದ್ಯಾಧಿಕಾರಿ ನಾಗರಾಜ್ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಹಲವು ಕಾಂಗ್ರೆಸ್ ಕಾರ್ಯಕರ್ತರು ಸಹ ಭಾಗಿಯಾಗಿದ್ದು ಕಂಡು ಬಂದಿದೆ. ಇತ್ತೀಚಿಗೆ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ದೇವದುರ್ಗದ ವಿಡಿಯೋ ಅಧಿಕಾರಿ ಒಬ್ಬರನ್ನು ಸಸ್ಪೆಂಡ್ ಮಾಡಲಾಯಿತು. ಆದರೆ ಬೆನ್ನಲ್ಲೇ…
ಬೆಂಗಳೂರು : ರಾಜ್ಯದಲ್ಲಿ 26 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಶಿಕ್ಷಕರ ಹುದ್ದೆ ಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 23ರಿಂದ ನವೆಂಬರ್ 9 ರವರೆಗೆ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 7ರಂದು ಟಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು ಶೀಘ್ರದಲ್ಲಿ ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿಗೂ ಆದೇಶ ಹೊರಡಿಸಲಾಗುತ್ತದೆ ಎಂದು ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಅದೇ ರೀತಿ ಕಲ್ಯಾಣ ಕರ್ನಾಟಕದಲ್ಲೂ ನೇಮಕಾತಿ ಆದೇಶ ಹೊರಡಿಸುತ್ತೇವೆ. ರಾಜ್ಯದಲ್ಲಿ 800 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತದೆ ಆರನೇ ತರಗತಿಯಿಂದ ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಕೆಗೂ ಅವಕಾಶ ಕಲ್ಪಿಸಲಾಗಿದ್ದು ಕರ್ನಾಟಕ ಪಬ್ಲಿಕ್ ಶಾಲೆಗೆ 3000 ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ನವೆಂಬರ್ ಎರಡನೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಲಿದ್ದಾರೆ. ಆಧಾರಿತ ಶಿಕ್ಷಣ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈಗ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಸಲಾಗುತ್ತದೆ ಎಂದು ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ…
ಗೋವಾ : ಮಾವೊವಾದಿ ನಕ್ಸಲರ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಈಗ ಕೇವಲ 11% ನಕ್ಸಲಿಸಂ ಪ್ರಭಾವ ಉಳಿದಿದೆ. ಛತ್ತೀಸ್ಗಡದ ಮೂರು ಜಿಲ್ಲೆಗಳಲ್ಲಿ ಮಾತ್ರ ನಕ್ಸಲಿಸಂ ಪ್ರಭಾವ ಇದೆ 100ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲರ ಮುಕ್ತ ಆಗಿವೆ. ನಕ್ಸಲ್ ಪ್ರಭಾವದ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದೇಶದಲ್ಲಿ ಈಗ ನಕ್ಸಲರು ಶರಣಾಗತಿ ಆಗುತ್ತಿದ್ದಾರೆ ಎಂದು ಗೋವಾದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆ ನೀಡಿದರು. ಇಂದು ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಗೋವಾ ಮತ್ತು ಕಾರವಾರ ಕರಾವಳಿಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಐಎನ್‌ಎಸ್ ವಿಕ್ರಾಂತ್ನಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ, ನಾನು ಮಿಲಿಟರಿ ಉಪಕರಣಗಳ ಬಲವನ್ನು ಗಮನಿಸುತ್ತಿದ್ದೆ. ಈ ದೊಡ್ಡ ಹಡಗುಗಳು, ಗಾಳಿಗಿಂತ ವೇಗವಾಗಿ ಚಲಿಸುವ ವಿಮಾನಗಳು, ಈ ಜಲಾಂತರ್ಗಾಮಿ ನೌಕೆಗಳು, ಅವು ತಮ್ಮಲ್ಲಿ ಪ್ರಭಾವಶಾಲಿಯಾಗಿವೆ, ಆದರೆ ಅವುಗಳನ್ನು ನಿಜವಾಗಿಯೂ ಅಸಾಧಾರಣವಾಗಿಸುವುದು ಅವುಗಳನ್ನು ನಿರ್ವಹಿಸುವವರ ಧೈರ್ಯ. ಈ ಹಡಗುಗಳು ಕಬ್ಬಿಣದಿಂದ…













