Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಳಗಾವಿ : ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಶಾಸಕ ಅಶೋಕ ಪಟ್ಟಣ ಅವರ ಬೆಂಬಲದೊಂದಿಗೆ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಅವರು ಗೆಲುವು ಸಾಧಿಸಿದ್ದಾರೆ. ಆದರೆ, ಈ ಗೆಲುವಿನ ಸಂಭ್ರಮಾಚರಣೆ ಬಳಿಕ ಪಿಕೆಪಿಎಸ್ ಮಾಜಿ ಅಧ್ಯಕ್ಷರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಾಸಕ ಅಶೋಕ್ ಪಟ್ಟಣ ಆಪ್ತ ಗಿರಿಯಪ್ಪ ಗಂಟೋಟಿ(40) ಹೃದಯಾಘಾತದಿಂದ ಮೃತಪಟ್ಟವರು. ನಿನ್ನೆ ನಡೆದ ಚುನಾವಣೆಯಲ್ಲಿ ಮಲ್ಲಣ್ಣ ಯಾದವಾಡ ಗೆಲುವು ಸಾಧಿಸಿದ್ದರು. ಈ ವೇಳೆ ವಿಜಯೋತ್ಸವದಲ್ಲಿ ಗಿರಿಯಪ್ಪ ಗಂಟೋಟಿ ಪಾಲ್ಗೊಂಡಿದ್ದರು. ಆದರೆ, ರಾತ್ರಿ ಹೃದಯಾಘಾತದಿಂದ ಗಿರಿಯಪ್ಪ ಮೃತಪಟ್ಟಿದ್ದಾರೆ‌‌. ಈ ಘಟನೆಯು ರಾಮದುರ್ಗ ತಾಲೂಕಿನಾದ್ಯಂತ ಶೋಕದ ವಾತಾವರಣವನ್ನು ಸೃಷ್ಟಿಸಿದೆ. ರಾಮದುರ್ಗ ತಾಲೂಕಿನ ಕಮಕೇರಿ ನಿವಾಸಿಯಾಗಿದ್ದ ಗಿರಿಯಪ್ಪ, ರಾಮದುರ್ಗ ತಾಲೂಕಿನಿಂದ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದ ಮಲ್ಲಣ್ಣ ಯಾದವಾಡ ಪರವಾಗಿ ಶಾಸಕ ಅಶೋಕ ಪಟ್ಟಣ ಜೊತೆಗೂಡಿ ಪ್ರಚಾರ ಮಾಡಿದ್ದರು. ಆದರೆ, ಗೆಲುವಿನ ಸಂಭ್ರಮದಲ್ಲೇ ಮೃತಪಟ್ಟಿರುವುದು ದುರಂತ.

Read More

ದಕ್ಷಿಣಕನ್ನಡ : ರಾಜ್ಯದಲ್ಲಿ RSS ಚಟುವಟಿಕೆ ನಿಷೇಧ ಕುರಿತಂತೆ, ನಮ್ಮ ಸರ್ಕಾರ ಆರ್‌ಎಸ್‌ಎಸ್‌ ನಿಷೇಧ ಮಾಡಿಲ್ಲ. ಯಾವುದೇ ಸಂಘ, ಸಂಸ್ಥೆಗಳು ಶಾಲಾ, ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ಜಗದೀಶ್‌ ಶೆಟ್ಟರ್‌ ನೇತೃತ್ವದ ಹಿಂದಿನ ಸರ್ಕಾರದಲ್ಲಿ ನಿಷೇಧಿಸಲಾಗಿತ್ತು. ಬಿಜೆಪಿ ಸರ್ಕಾರದ ಆದೇಶ ಮಾಡಿದ್ದನ್ನೇ ನಾವೂ ಪುನರುಚ್ಚರಿಸಿದ್ದೇವೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಪುತ್ತೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ ಯಾವುದೇ ಸಂಘ, ಸಂಸ್ಥೆಗಳ ಕಾರ್ಯಕ್ರಮ, ಚಟುವಟಿಕೆಗಳಿಗೆ ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಆರ್‌ಎಸ್‌ಎಸ್‌ ಎಂದು ಎಲ್ಲೂ ನಿರ್ದಿಷ್ಟ ಉಲ್ಲೇಖ ಮಾಡಿಲ್ಲ. ಬಿಜೆಪಿಯವರು ಮಾಡಿದ್ದ ಆದೇಶವನ್ನೇ ನಾವೂ ಮಾಡಿದ್ದೇವೆ. ಅವರು ಮಾಡಬಹುದು, ನಾವು ಮಾಡಬಾರದೇ ಎಂದು ಪ್ರಶ್ನಿಸಿದರು.

Read More

ದಕ್ಷಿಣಕನ್ನಡ : ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನೂಕುನುಗ್ಗುಲು ಉಂಟಾಗಿ 11 ಜನರು ಅಸ್ವಸ್ಥಗೊಂಡಿರುವ ಘಟನೆ ವರದಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 11ಕ್ಕೂ ಹೆಚ್ಚು ಜನರು ನೂಕುನಗ್ಗಲು ನಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಸಿಎಂ ಕಾರ್ಯಕ್ರಮದಲ್ಲಿ ನೂಕು ನುಗ್ಗುಲು ಉಂಟಾಗಿದ್ದು 11ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಬಹಳಷ್ಟು ಜನರು ಅಸ್ವಸ್ಥರಾಗಿದ್ದಾರೆ. ಕುಡಿಯಲು ನೀರು ಸಿಗದೆ ಜನರು ಪರದಾಟ ನಡೆಸಿದ್ದಾರೆ.ಸಣ್ಣ ಮಕ್ಕಳನ್ನು ಜನರು ಕರೆದುಕೊಂಡು ಈ ಒಂದು ಕಾರ್ಯಕ್ರಮಕ್ಕೆ ಬಂದಿದ್ದರು. ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಶಾಸಕ ಅಶೋಕ ರೈ ನೇತ್ರತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ನೂಕು ನುಗ್ಗಲು ಉಂಟಾಗಿ ಆಮ್ಲಜನಕದ ಕೊರತೆ ಉಂಟಾಗಿದೆ.ಈ ವೇಳೆ ಸುಮಾರು ಮಹಿಳೆಯರು ಮಕ್ಕಳು ಸೇರಿದಂತೆ 11ಕ್ಕೂ ಹೆಚ್ಚು ಜನರು…

Read More

ಬಾಗಲಕೋಟೆ : ವಾಲ್ಮೀಕಿ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರವಾಗಿ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೇರಡು ದೂರು ದಾಖಲಾಗಿವೆ. ಬಾಗಲಕೋಟೆಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಹಾಗು ಮುಧೋಳ ಟೌನ್ ಪೊಲೀಸ ಠಾಣೆಗೆ ವೀರ ಸಿಂಧೂರ ಲಕ್ಷ್ಮಣ ಯುವ ಸೇನೆಯಿಂದ ದೂರು ಸಲ್ಲಿಸಲಾಗಿದೆ. ಬಾಗಲಕೋಟೆಯಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ. ರಮೇಶ್ ಕತ್ತಿ ವಿರುದ್ಧ ಜಾತಿನಿಂದನೆ ಆರೋಪದಡಿ ದೂರು ಸಲ್ಲಿಕೆ ಮಾಡಿದ್ದಾರೆ. ಹಾಗು ಮುಧೋಳದಲ್ಲಿ ವೀರ ಸಿಂಧೂರ ಲಕ್ಷ್ಮಣ ಯುವ ಸೇನೆಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಬಿಜೆಪಿ ನಾಯಕ ರಮೇಶ್ ಕತ್ತಿ ಬಂಧಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Read More

ದಕ್ಷಿಣಕನ್ನಡ : ಕೋಮು ಸೌಹಾರ್ದತೆ ಇದ್ದರೆ ರಾಜ್ಯ ಮತ್ತು ಜಿಲ್ಲೆಗಳು ಅಭಿವೃದ್ಧಿಯಾಗುತ್ತವೆ ಕೋಮು ಸೌಹಾರ್ದತೆ ಹಾಳು ಮಾಡಿದ್ದು ಯಾರು ಅಂತ ಅರ್ಥ ಮಾಡಿಕೊಳ್ಳಿ ಎಂದು ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಜಿಲ್ಲೆಯಲ್ಲಿ ಕೋಮ ಸೌಹಾರ್ದತೆಗೆ ವಿಶೇಷ ಗಮನ ಕೊಡಿ. ಸುಳ್ಳು ಹೇಳುವವರ ವಿರುದ್ಧ ಕಾನೂನು ತಂದು ಕೇಸ್ ದಾಖಲಿಸುತ್ತೇವೆ. ಸಚಿವ ಪ್ರಿಯಾಂಕ್ ಖರ್ಗೆ HK ಪಾಟೀಲ್ ಸದ್ಯ ಆ ಕೆಲಸದಲ್ಲಿ ಇದ್ದಾರೆ. ಈ ಜಿಲ್ಲೆಯ 8 ಕ್ಷೇತ್ರಗಳಲ್ಲೂ ನೀವು ಆಶೀರ್ವಾದ ಮಾಡಬೇಕು, ಎಷ್ಟೇ ಖರ್ಚಾದರೂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಾಡುತ್ತೇವೆ. ನುಡಿದಂತೆ ನಡೆದಿದ್ದೇವೆ. ಕೇಳುವ ಹಕ್ಕು ನಮಗಿದೆ. ನಾನು ಸಿಎಂ ಆಗಿರುವವರೆಗೂ ಬಡವರ ಯಾವುದೇ ಯೋಜನೆಯನ್ನು ನಿಲ್ಲಿಸಲ್ಲ. ಜಿಎಸ್‌ಟಿ ಜಾರಿ ಮಾಡಿದ್ದೆ ಮೋದಿ ಸರ್ಕಾರ ಈಗ ದೀಪಾವಳಿ ಗಿಫ್ಟ್ ಅಂತ ಹೇಳುತ್ತಾರೆ. ನರೇಂದ್ರ ಮೋದಿ ಸರ್ಕಾರ 8 ವರ್ಷ ಟ್ಯಾಕ್ಸ್ ಸಂಗ್ರಹ ಮಾಡಿದೆ.…

Read More

ಬೀದರ್ : ಸಾಮಾನ್ಯವಾಗಿ ಬಸ್ ನಲ್ಲಿ ಪ್ರಯಾಣಿಸುವಾಗ ಮರೆತು ಅದೆಷ್ಟೋ ಜನ ಹಣ ಒಡವೆ ಕಳೆದುಕೊಂಡಿರುತ್ತಾರೆ. ಬಹುತೇಕ ಪ್ರಯಾಣಿಕರಿಗೆ ತಾವು ಕಳೆದುಕೊಂಡ ಹಣ, ಒಡವೆ ಮರಳಿ ಸಿಕ್ಕಿರುತ್ತದೆ. ಸಿಬ್ಬಂದಿಗಳು ವಸ್ತುಗಳನ್ನು ಮರಳಿಸಿರುತ್ತಾರೆ. ಇದೀಗ ಬೀದರ್ ನಲ್ಲಿ ಕೂಡ ಹಣ ಬಿಟ್ಟು ಹೋಗಿದ್ದ ಪ್ರಯಾಣಿಕನಿಗೆ ಸಾರಿಗೆ ಸಿಬ್ಬಂದಿ ಹಣ ಮರಳಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರಯಾಣ ಮಾಡುವಾಗ ಬಸ್‌ನಲ್ಲೇ ಬಿಟ್ಟು ಹೋಗಿದ್ದ 1.60ಲಕ್ಷ ಹಣವನ್ನು ಪ್ರಯಾಣಿಕನಿಗೆ ಮರಳಿ ನೀಡಿ ಕಂಡಕ್ಟರ್ ಮತ್ತು ಚಾಲಕ ಮಾನವೀಯತೆ ಮೆರೆದ ಘಟನೆ ಬೀದರ್‌ನಲ್ಲಿ ನಡೆದಿದೆ.ಗ್ರಾಮಕ್ಕೆ ತೆರಳಿ ವಯೋವೃದ್ಧನಿಗೆ ಹಣ ವಾಪಸ್ ನೀಡಿದ ನಿರ್ವಾಹಕ ಮತ್ತು ಚಾಲಕನ ಪ್ರಾಮಾಣಿಕತೆಗೆ ಜಿಲ್ಲೆಯ ಜನರು ಶ್ಲಾಘಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಟಸಾಂಗ್ವಿ ಗ್ರಾಮದ ಬಳಿ ಈ ಘಟನೆ ನಡೆದಿದೆ. 1.60 ಲಕ್ಷ ರೂ. ಬಸ್‌ನಲ್ಲೇ ಬಿಟ್ಟು ಹೋದ ವಿಷಯ ತಿಳಿದು ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕರಾದ ಸಿದ್ರಾಮ್ ಮತ್ತು ಚಾಲಕರಾದ ಹನೀಪ್ ಗ್ರಾಮಕ್ಕೆ ಹೋಗಿ ಹಣದ ಚೀಲ ಮರಳಿಸಿ ಮಾನವೀಯತೆ…

Read More

ಬೆಂಗಳೂರು : ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ಆರೋಪ ಹಿನ್ನೆಲೆಯಲ್ಲಿ, ಇದರಿಂದ ಬೇಸತ್ತು ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಉಪನ್ಯಾಸಕಿ ಪುಷ್ಪಾವತಿ (30) ದೊಡ್ಡಬಳ್ಳಾಪುರದ ವಿಶ್ವೇಶ್ವರಯ್ಯ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರದ ಘಾಟಿಯ ವಿಶ್ವೇಶ್ವರಯ್ಯ ಡ್ಯಾಮ್ ನಲ್ಲಿ ಬಿದ್ದು ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತೆ ಮಾವ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ವಿಡಿಯೋ ಮಾಡಿ ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮನೆಯವರು ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದರು. ನನಗೆ ತುಂಬಾ ಹಿಂಸೆ ಕೊಟ್ಟಿದ್ದಾರೆ. ಊಟಕ್ಕೆ ವಿಷ ಹಾಕಿ ನನ್ನನ್ನು ಸಾಯಿಸೋಕೆ ಪ್ಲಾನ್ ಮಾಡಿದ್ದರು. ಹಾಗಾಗಿ ಊಟ ಸಹ ಮಾಡುತ್ತಿರಲಿಲ್ಲ. ನಾನು ಅಡಿಗೆ ಮಾಡಿದರೆ ಮಾತ್ರ ಊಟ ಮಾಡುತ್ತಿದ್ದೆ. ಇಷ್ಟೆಲ್ಲ ಆದ್ಮೇಲೆ ಸಮಾಜದಲ್ಲಿ ಸಂಬಂಧಿಕರೆಲ್ಲರೂ ನಗೋ ತರ ಆಗೋಯ್ತು. ನನ್ನ ಜೀವನ…

Read More

ದೊಡ್ಡಬಳ್ಳಾಪುರ : ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ಆರೋಪ ಹಿನ್ನೆಲೆಯಲ್ಲಿ, ಇದರಿಂದ ಬೇಸತ್ತು ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಉಪನ್ಯಾಸಕಿ ಪುಷ್ಪಾವತಿ (30) ದೊಡ್ಡಬಳ್ಳಾಪುರದ ವಿಶ್ವೇಶ್ವರಯ್ಯ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರದ ಘಾಟಿಯ ವಿಶ್ವೇಶ್ವರಯ್ಯ ಡ್ಯಾಮ್ ನಲ್ಲಿ ಬಿದ್ದು ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತೆ ಮಾವ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ವಿಡಿಯೋ ಮಾಡಿ ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮನೆಯವರು ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದರು. ನನಗೆ ತುಂಬಾ ಹಿಂಸೆ ಕೊಟ್ಟಿದ್ದಾರೆ. ಊಟಕ್ಕೆ ವಿಷ ಹಾಕಿ ನನ್ನನ್ನು ಸಾಯಿಸೋಕೆ ಪ್ಲಾನ್ ಮಾಡಿದ್ದರು. ಹಾಗಾಗಿ ಊಟ ಸಹ ಮಾಡುತ್ತಿರಲಿಲ್ಲ. ನಾನು ಅಡಿಗೆ ಮಾಡಿದರೆ ಮಾತ್ರ ಊಟ ಮಾಡುತ್ತಿದ್ದೆ. ಇಷ್ಟೆಲ್ಲ ಆದ್ಮೇಲೆ ಸಮಾಜದಲ್ಲಿ ಸಂಬಂಧಿಕರೆಲ್ಲರೂ ನಗೋ ತರ ಆಗೋಯ್ತು. ನನ್ನ ಜೀವನ ನಾನು ಮಾಡಿರುವ ತಪ್ಪಾದರೂ ಏನು? ವರದಕ್ಷಿಣೆಗಾಗಿ ಮೋಸ ಮಾಡಿ ಬ್ಲಾಕ್ ಮಾಡಿ ಮದುವೆ…

Read More

ಹಾವೇರಿ : ದೀಪಾವಳಿ ಹಬ್ಬದಂದೆ ಘೋರವಾದ ದುರಂತ ಒಂದು ನಡೆದಿದ್ದು, ಕೌಟುಂಬಿಕ ಕಲಹ ಹಾಗೂ ವರದಕ್ಷಣೆ ಕಿರುಕುಳ ಹಿನ್ನೆಲೆ ಮಗಳ ಜೊತೆಗೆ ವರದಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ವರದಹಳ್ಳಿ ಸಮೀಪ ಒಂದು ಘಟನೆ ನಡೆದಿದೆ. ಹಾವೇರಿ ತಾಲೂಕಿನ ವರದಹಳ್ಳಿಯಲ್ಲಿ ಕಾವ್ಯ (12) ಮತ್ತು ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಕಾವ್ಯ ಮೃತ ದೇಹವನ್ನು ಪತ್ತೆ ಮಾಡಿದ್ದು, ಸವಿತಾ ಮೃತ ದೇಹಕ್ಕಾಗಿ ಶೋಧ ಮುಂದುವರಿಸಿದ್ದಾರೆ. ವರದ ನದಿ ದಡದಲ್ಲಿ ಸವಿತಾ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ : ಕಳೆದ ಅಕ್ಟೋಬರ್ 13 ರಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕರು ಸಚಿವರಿಗೆ ಡಿನ್ನರ್ ಪಾರ್ಟಿ ಕರೆದಿದ್ದರು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗಿಗೆ ಕರೆದು ಯಾಕೆ ಗೊತ್ತಾ? ಪ್ರತಿ ಸೇವೆಗೆ ರೇಟ್ ಫಿಕ್ಸ್ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು. ಒಬ್ಬೊಬ್ಬ ಸಚಿವರನ್ನು ಪ್ರತ್ಯೇಕವಾಗಿ ಕರೆದು ರೇಟ್ ಫಿಕ್ಸ್ ಮಾಡಿದ್ದಾರೆ. ಯಾರು ಎಷ್ಟು ಕೊಡಬೇಕು ಅಂತ ಸಿಎಂ ಸಿದ್ದರಾಮಯ್ಯ ರೇಟ್ ಫಿಕ್ಸ್ ಮಾಡಿದ್ದಾರೆ. ಹೈಕಮಾಂಡ್ ಪಾಲಿಗೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆಗಿದೆ. ಬಿಡಿಎ, ಜಿಬಿಎ ವ್ಯಾಪ್ತಿಯ ಸೇವೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಪ್ರತಿ ಇಲಾಖೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ತನಿಖೆ ನಡೆಸಿದರೆ ಯಾರ ಪಾಲು ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು. ಆರ್ ಎಸ್ ಎಸ್ ಚಟುವಟಿಕೆಯಲ್ಲಿ ಸರ್ಕಾರಿ ನೌಕರರಿಗೆ ಭಾಗಿಯಾಗಲು ಕಡಿವಾಣ ಹಾಕಿದ ವಿಚಾರವಾಗಿ, ಮುಖ್ಯಮಂತ್ರಿ…

Read More