Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು: ರಾಜ್ಯದಲ್ಲಿ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ತೆರಿಗೆ ಕಡಿತದ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ಇಂಧನ ದರ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ತೆರಿಗೆಯನ್ನು ಕಡಿತಗೊಳಿಸಿ ಜನರಿಗೆ ನಿರಾಳತೆ ನೀಡುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಕೇಂದ್ರ ಸರ್ಕಾರದವರು ಬೆಲೆಯನ್ನು ಏರಿಸುತ್ತಾ ಹೋಗುವುದು, ನಾವು ಇಲ್ಲಿ ಕಡಿಮೆ ಮಾಡುತ್ತಾ ಕೂರಬೇಕಾ?” ಎಂದು ಮರುಪ್ರಶ್ನಿಸಿದ ಅವರು, ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿದ್ದ ಇಂಧನ ದರಗಳನ್ನು ನೆನಪಿಸಿದರು.…
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಗಲ್ ಪ್ರೇಮಿಯಿಂದ ತಾಯಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಹಾಡ ಹಗಲೇ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆ ಬಳಿ ಈ ಒಂದು ಘಟನೆ ನಡೆದಿದೆ. ತಾಯಿ ಲಕ್ಷ್ಮೀ, ಮಗಳು ಕೃಪಾ ಮೇಲೆ ಕುಮಾರ ಎಂಬ ಪಾಗಲ್ ಪ್ರೇಮಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಶಂಕರಪುರ nivasi ಪಾಗಲ್ ಪ್ರೇಮಿ ಕುಮಾರ್ ಎಂಬುವವನಿಂದ ಕೃತ್ಯ ನಡೆದಿದೆ. ಪಾಗಲ್ ಪ್ರೇಮಿಯ ಹುಚ್ಚಾಟದಿಂದ ತಾಯಿ, ಮಗಳಿಗೆ ಗಂಭೀರ ಗಾಯವಾಗಿದ್ದು, ದಾಳಿ ಬಳಿಕ ಚಿಕ್ಕಮಗಳೂರು ನಗರ ಠಾಣೆಗೆ ಆರೋಪಿ ಕುಮಾರ್ ಶರಣಾಗಿದ್ದಾನೆ. ಮದುವೆ ಮಾಡಿಕೊಡುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದ ಕಿರಾತಕ ಒನ್ ಸೈಡ್ ಲವ್ ಹಿನ್ನೆಲೆ ಮದುವೆಗೆ ಯುವತಿ ಒಪ್ಪಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಕುಮಾರ್ ಸ್ಕೂಟಿಯಲ್ಲಿ ತೆರಳುತ್ತಿದ್ದ ತಾಯಿ ಮಗಳ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಖಾಸಗಿ ಕಂಪೌಂಡ್ ಒಳಗೆ ಓದಿದ್ರು ಸಹ ಬಿಡದೆ ಹಲ್ಲೆ ಮಾಡಿದ್ದಾನೆ.
BREAKING : ಶೃಂಗೇರಿ ಅಂಚೆ ಮರುಮತೆ ಎಣಿಕೆ ಕೇಸ್ : ಜು. 23ರ ವರೆಗೆ ಮಧ್ಯಂತರ ಆದೇಶ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂಚೆ ಮತಗಳ (ಪೋಸ್ಟಲ್ ಬ್ಯಾಲೆಟ್) ಎಣಿಕೆಗೆ ಸಂಬಂಧಿಸಿದ ವಿವಾದಾತ್ಮಕ ಪ್ರಕರಣದ ವಿಚಾರಣೆಯನ್ನು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಇಂದು ನಡೆಸಿತು. ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಸುದೀರ್ಘ ಆಲಿಕೆ ನಡೆಸಿದ ನ್ಯಾಯಾಲಯವು, ಮುಂದಿನ ಮಹತ್ವದ ಆದೇಶವನ್ನು ಜುಲೈ ತಿಂಗಳಿಗೆ ಕಾಯ್ದಿರಿಸಿದೆ. ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಚುನಾವಣಾ ಆಯೋಗದ ಪರ ವಕೀಲರು ಪ್ರಕರಣಕ್ಕೆ ಹಾಗೂ ಮತ ಎಣಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆದರೆ, ಈ ಪ್ರಕರಣದಲ್ಲಿ ಶಾಮೀಲಾಗಿರುವ ಕೆಲವು ಪ್ರತಿವಾದಿಗಳಿಗೆ ಇನ್ನು ಕೂಡ ಅಧಿಕೃತವಾಗಿ ನೋಟಿಸ್ ಜಾರಿಯಾಗದೇ ಇರುವುದು ನ್ಯಾಯಪೀಠದ ಗಮನಕ್ಕೆ ಬಂದಿತು. ಎಲ್ಲಾ ತರಹದ ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ವಿಚಾರಣೆಯನ್ನು ತಕ್ಷಣವೇ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮುಂದೂಡಲ್ಪಟ್ಟ ವಿಚಾರಣೆ: ಪ್ರತಿವಾದಿಗಳಿಗೆ ನೋಟಿಸ್ ತಲುಪದ ತಾಂತ್ರಿಕ ಕಾರಣವನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಪ್ರಕರಣದ ಮುಂದಿನ ಅಂತಿಮ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿ ಆದೇಶ…
ಶಿವಮೊಗ್ಗ: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ಸರಣಿ ದುರಂತಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಪ್ರಮುಖ ಆನೆ ಬಿಡಾರಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತಿದ್ದು, ಇದೀಗ ಪ್ರಸಿದ್ಧ ಶಿವಮೊಗ್ಗದ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರಕ್ಕೂ ಬೀಗ ಬೀಳುವ ಸರದಿ ಬಂದಿದೆ. ನಾಳೆಯಿಂದಲೇ (ಮೇ 22) ಅನ್ವಯವಾಗುವಂತೆ ಸಕ್ರೆಬೈಲು ಆನೆ ಬಿಡಾರವನ್ನು ಬಂದ್ ಮಾಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಸೂಕ್ತ ಪ್ರಮಾಣಿತ ಕಾರ್ಯವಿಧಾನ (SOP) ಇಲ್ಲದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಹೊಸ ಗೈಡ್‌ಲೈನ್ಸ್ ಸಿದ್ಧವಾಗುವವರೆಗೂ ಅಂದರೆ ಅನಿರ್ದಿಷ್ಟ ಅವಧಿಯವರೆಗೆ ಸಕ್ರೆಬೈಲು ಆನೆ ಬಿಡಾರ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಆನೆಗಳ ವರ್ತನೆ ಹಾಗೂ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿಗಳು ಜಾರಿಗೆ ಬರುವವರೆಗೂ ಈ ನಿರ್ಬಂಧ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ದುಬಾರೆ ದುರಂತವೇ ಕಾರಣ! ಇತ್ತೀಚೆಗೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ‘ಕಂಜನ್’ ಹಾಗೂ ‘ಮಾರ್ತಾಂಡ’…
ಉತ್ತರಕನ್ನಡ :ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾದಾಟ ಮತ್ತು ಸಾವು-ನೋವಿನ ದುರ್ಘಟನೆಯ ಬೆನ್ನಲ್ಲೇ, ಅರಣ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರಕ್ಕೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ಆನೆಗಳ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ‘ಕಂಜನ್’ ಮತ್ತು ‘ಮಾರ್ತಾಂಡ’ ಎಂಬ ಆನೆಗಳ ನಡುವೆ ಭೀಕರ ಕಾದಾಟ ನಡೆದಿತ್ತು. ಈ ವೇಳೆ ದುರದೃಷ್ಟವಶಾತ್ ಓರ್ವ ಮಹಿಳೆ ಜೀವ ಕಳೆದುಕೊಂಡಿದ್ದರು. ಅಲ್ಲದೆ, ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆಯೂ ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು. ಈ ಘಟನೆಯ ತೀವ್ರತೆಯನ್ನು ಪರಿಗಣಿಸಿ ಮೊದಲು ದುಬಾರೆ ಶಿಬಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು. ದುಬಾರೆಯಲ್ಲಿ ನಡೆದ ಅನಿರೀಕ್ಷಿತ ದುರಂತದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ರಾಜ್ಯದ ಇತರ ಆನೆ ಬಿಡಾರಗಳಲ್ಲೂ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿದೆ. ಜೋಯಿಡಾ ತಾಲೂಕಿನ ಪನ್ಸೋಲಿ…
ಬೆಂಗಳೂರು : ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ವಿಚಾರವಾಗಿ ಜೆಡಿಎಸ್ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ. ರಾಷ್ಟ್ರೀಯ ಪಕ್ಷ @INCIndia ಪ್ರಸ್ತುತ ಪರಿಸ್ಥಿತಿ ದೇಶದಲ್ಲಿ ಏನಾಗಿದೆ? ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ @DKShivakumar ಅವರೇ ಬೇರೆ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುವ ಮುನ್ನ, ದೇಶಾದ್ಯಂತ ಹರಿದು ಹಂಚಿಹೋಗುತ್ತಿರುವ ನಿಮ್ಮದೇ ಪಕ್ಷದ ದಯನೀಯ ಸ್ಥಿತಿಯ ಬಗ್ಗೆ ಒಮ್ಮೆ ಚಿಂತಿಸುವುದು ಒಳ್ಳೆಯದು. ಅಧಿಕಾರದ ಸೊಕ್ಕು ಮತ್ತು ದುರಹಂಕಾರದ ಮಾತುಗಳು ನಿಮ್ಮ ಸ್ಥಾನಕ್ಕೆ ಕಿಂಚಿತ್ತು ಗೌರವ ತರುವುದಿಲ್ಲ. ನಾಡಿನ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಕಾಲವೇ ನಿಮಗೆ ತಕ್ಕ ಪಾಠ ಕಲಿಸಲಿದೆ. ಸೊನ್ನೆಯೂ ಕೀಳಲ್ಲ, ನೆನಪಿರಲಿ. ಸೊನ್ನೆಯಿಂದಲೇ ಸರ್ವವೂ ಆರಂಭ ಎನ್ನುವುದನ್ನು ಮರೆಯಬೇಡಿ. ಆದರೆ, ಈ ಸೊನ್ನೆ ನಿಮ್ಮ ಕಣ್ತೆರೆಸಲಿ ಎಂಬುದಷ್ಟೇ ನಮ್ಮ ಕಳಕಳಿ. https://twitter.com/JanataDal_S/status/2057332244210143595?t=aG7y7w_mcSl1lE3bYgmQWQ&s=19
ಬೆಳಗಾವಿ : ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ – ಗೋಟುರ ರಸ್ತೆಯಲ್ಲಿ ನಡೆದಿದೆ. ಮೂಲತಃ ಮಹಾರಾಷ್ಟ್ರದ ಪೂನಾ ಮೂಲದ ನಿವಾಸಿ ಹಣಮಂತ ಪಾಯಾಳ (55) ಮೃತ ದುರ್ದೈವಿ. ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ: ಹೊಸ ಮೊಬೈಲ್ ಕೊಡಿಸುವಂತೆ ಪಟ್ಟು ಹಿಡಿದ ಕಾರ್ಮಿಕನಿಗೆ, ಹಳೆ ಸಾಲದ ನೆನಪು ಮಾಡಿ ಕೆಲಸಕ್ಕೆ ಸರಿಯಾಗಿ ಬರುವಂತೆ ಬುದ್ಧಿವಾದ ಹೇಳಿದ ಕಟ್ಟಡ ನಿರ್ಮಾಣ ಮೇಸ್ತ್ರಿಯೊಬ್ಬರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ಬಳಿ ನಡೆದಿದೆ. ಮೃತರ ಗುರುತು: ಕೊಲೆಯಾದ ದುರ್ದೈವಿ ವ್ಯಕ್ತಿಯನ್ನು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ನಿವಾಸಿ, ಕಟ್ಟಡ ನಿರ್ಮಾಣ ಮೇಸ್ತ್ರಿ ದಾದಾಪೀರ್ ಕೊಲ್ಕರ್ (38) ಎಂದು ಗುರುತಿಸಲಾಗಿದೆ. ಮೇಸ್ತ್ರಿ ದಾದಾಪೀರ್ ಅವರ ಬಳಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕ ಅಜೀಂ ಜಮಖಾನೆ ಎಂಬಾತನೇ ಈ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿ ಅಜೀಂ ಜಮಖಾನೆ ಇತ್ತೀಚೆಗೆ ತನಗೆ ಹೊಸ ಮೊಬೈಲ್ ಒಂದನ್ನು ಕೊಡಿಸುವಂತೆ ತನ್ನ ಮೇಸ್ತ್ರಿ ದಾದಾಪೀರ್ ಬಳಿ ಹಠ ಹಿಡಿದಿದ್ದ ಎನ್ನಲಾಗಿದೆ. ಆದರೆ, ಈ ಹಿಂದೆ ನೀಡಿದ್ದ 25 ಸಾವಿರ ರೂಪಾಯಿ ಹಣವನ್ನು ನೀನು ಇನ್ನೂ ವಾಪಸ್ ಕೊಟ್ಟಿಲ್ಲ, ಜೊತೆಗೆ ಇತ್ತೀಚೆಗೆ ಕೆಲಸಕ್ಕೂ ಸರಿಯಾಗಿ ಬರುತ್ತಿಲ್ಲ ಎಂದು ದಾದಾಪೀರ್ ಆತನಿಗೆ…
ಚೆನ್ನೈ: ತಮಿಳುನಾಡಿನ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ನಟ, ರಾಜಕಾರಣಿ ವಿಜಯ್ ನೇತೃತ್ವದ ನೂತನ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ನೂತನ ಸಚಿವರಾಗಿ ಆಯ್ಕೆಯಾಗಿರುವ ಒಟ್ಟು 23 ಮಂದಿ ಶಾಸಕರು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನೂತನ ಸಂಪುಟ ಸೇರ್ಪಡೆಯು ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡಿದೆ. ರಾಜಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಒಟ್ಟು 23 ಸಚಿವರು ಗೋಪ್ಯತೆಯ ಪ್ರಮಾಣವಚನ ಬೋಧಿಸಿಕೊಂಡರು. ಇವರಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ 21 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರೆ, ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನ ಇಬ್ಬರು ಶಾಸಕರು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಟಿವಿಕೆ ಮತ್ತು ಕಾಂಗ್ರೆಸ್ ಜಂಟಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಂತಾಗಿದೆ. ಆದಾಗ್ಯೂ, ವಿಜಯ್ ನೇತೃತ್ವದ ಈ ನೂತನ ಸಚಿವ ಸಂಪುಟದಲ್ಲಿ ಟಿವಿಕೆಯ ಪ್ರಮುಖ ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ವಿಡುದಲೈ ಚಿರುತ್ತೈಗಳ್ ಕಚ್ಚಿ (ವಿಸಿಕೆ) ಪಕ್ಷಗಳಿಗೆ ಸದ್ಯಕ್ಕೆ…
ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಎಬೊಲಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಹಾಗೂ ರಾಜ್ಯದಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಕುರಿತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, “ಎಬೊಲಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಸಂಪೂರ್ಣ ಅಲರ್ಟ್ ಆಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ” ಎಂದು ಭರವಸೆ ನೀಡಿದ್ದಾರೆ. ಪ್ರಸ್ತುತ ಎಬೊಲಾ ವೈರಸ್ ಆಫ್ರಿಕಾ ಖಂಡದ ಕಾಂಗೋ ಮತ್ತು ಉಗಾಂಡ ದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದು, ಅಲ್ಲಿನ ಜನರಲ್ಲಿ ಭೀತಿ ಸೃಷ್ಟಿಸಿದೆ. ಆದರೆ, ಸಮಾಧಾನಕರ ಸಂಗತಿಯೆಂದರೆ ನಮ್ಮ ದೇಶದಲ್ಲಿ ಇದುವರೆಗೆ ಎಲ್ಲೂ ಸಹ ಈ ಮಾರಕ ವೈರಸ್‌ನ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ. ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ ದೇಶದ ಪ್ರಮುಖ ನಗರಗಳು ಹಾಗೂ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ ಎಂದು ಸಚಿವರು…














