ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಗಲ್ ಪ್ರೇಮಿಯಿಂದ ತಾಯಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಹಾಡ ಹಗಲೇ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆ ಬಳಿ ಈ ಒಂದು ಘಟನೆ ನಡೆದಿದೆ. ತಾಯಿ ಲಕ್ಷ್ಮೀ, ಮಗಳು ಕೃಪಾ ಮೇಲೆ ಕುಮಾರ ಎಂಬ ಪಾಗಲ್ ಪ್ರೇಮಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ.
ಶಂಕರಪುರ nivasi ಪಾಗಲ್ ಪ್ರೇಮಿ ಕುಮಾರ್ ಎಂಬುವವನಿಂದ ಕೃತ್ಯ ನಡೆದಿದೆ. ಪಾಗಲ್ ಪ್ರೇಮಿಯ ಹುಚ್ಚಾಟದಿಂದ ತಾಯಿ, ಮಗಳಿಗೆ ಗಂಭೀರ ಗಾಯವಾಗಿದ್ದು, ದಾಳಿ ಬಳಿಕ ಚಿಕ್ಕಮಗಳೂರು ನಗರ ಠಾಣೆಗೆ ಆರೋಪಿ ಕುಮಾರ್ ಶರಣಾಗಿದ್ದಾನೆ. ಮದುವೆ ಮಾಡಿಕೊಡುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದ ಕಿರಾತಕ ಒನ್ ಸೈಡ್ ಲವ್ ಹಿನ್ನೆಲೆ ಮದುವೆಗೆ ಯುವತಿ ಒಪ್ಪಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಕುಮಾರ್ ಸ್ಕೂಟಿಯಲ್ಲಿ ತೆರಳುತ್ತಿದ್ದ ತಾಯಿ ಮಗಳ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಖಾಸಗಿ ಕಂಪೌಂಡ್ ಒಳಗೆ ಓದಿದ್ರು ಸಹ ಬಿಡದೆ ಹಲ್ಲೆ ಮಾಡಿದ್ದಾನೆ.








