Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು ಶೆಡ್ ನಲ್ಲಿ ಇದ್ದಂತಹ 6 ಹಸುಗಳು ಸಜೀವವಾಗಿ ದಹನಗೊಂಡಿರುವ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯ ಶಾಂಪುರ ರಸ್ತೆಯಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ನಲ್ಲಿದ್ದ 20 ಜಾನುವಾರುಗಳ ಪೈಕಿ 6 ಹಸುಗಳು ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿವೆ. ಬೆಂಗಳೂರಿನ ಡಿಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿರೋ ಹಸುಗಳ ಶೆಡ್ನಲ್ಲಿ ಭಾರೀ ದುರಂತ ಸಂಭವಿಸಿದೆ. ಫ್ಲೈವುಡ್ ಅಂಗಡಿಗೆ ಹೊತ್ತಿಕೊಂಡಿದ್ದ ಬೆಂಕಿಯ ತೀವ್ರತೆ ಹೆಚ್ಚಾಗಿ ಹಸುಗಳ ಶೆಡ್ಗೂ ವ್ಯಾಪಿಸಿದೆ. ಈ ಶೆಡ್ನಲ್ಲಿ ಒಟ್ಟು 20 ಹಸುಗಳಿದ್ದವು ಎನ್ನಲಾಗ್ತಿದೆ. ಇದರಲ್ಲಿ 6 ಹಸುಗಳು ಸಾವನ್ನಪ್ಪಿದ್ದು, 3 ಹಸುಗಳು ಸುಟ್ಟ ಗಾಯಗಳಿಂದ ನರಳುತ್ತಿವೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ದಾವಿಸಿದ್ದು, 14 ಹಸುಗಳನ್ನ ರಕ್ಷಣೆ ಮಾಡಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದ ನಾಲ್ಕು ಅಗ್ನಿ ಶಾಮಕ ವಾಹಗಳು ಬೆಂಕಿ ನಂದಿಸುವ ಕಾರ್ಯ ನಡೆಸಿ ಯಶಸ್ವಿಯಾಗಿದೆ. ಇದೇ ವೇಳೆ ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ…
ನವದೆಹಲಿ : ನಿನ್ನೆ ಒಂದು ವಿಡಿಯೋ ಕೂಡ ವೈರಲಾಗಿದ್ದು ಮೋಜ್ತಬಾ ಖಮನೈ ಅವರು ತಮ್ಮ ಮಿಲಿಟರಿ ರೂಂ ಗೆ ಎಂಟ್ರಿ ಕೊಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ತಮ್ಮ ಸೈನಿಕರಿಗೆ ನಿರ್ದೇಶನ ಹಾಗೂ ಸೂಚನೆ ಕೊಡುವಂತಹ ವಿಡಿಯೋ ವೈರಲ್ ಆಗಿತ್ತು. ಆದರೆ ಇರಾನ್ AI ವಿಡಿಯೋ ಜನರೇಟ್ ಮಾಡಿ ನಮ್ಮ ನಾಯಕ ಬದುಕಿದ್ದಾನೆ ನಮ್ಮ ಸೇನೆಗೆ ಮಾರ್ಗದರ್ಶನ ನಿರ್ದೇಶನ ಇನ್ನು ಸಿಗತಿದೆ ಎನ್ನುವ ವಿಡಿಯೋ ಹರಿಬಿಡುವ ಮೂಲಕ ಅಮೆರಿಕ ಮತ್ತು ಶತ್ರು ರಾಷ್ಟ್ರಗಳಿಗೆ ಸಂದೇಶ ಕೊಡುವಂತಹ ಪ್ರಯತ್ನ ಮಾಡಿದೆ ಎಂದು ತಿಳಿದು ಬಂದಿದೆ. ಹೌದು ಇದೊಂದು ಎ.ಐ ಜನರೇಟ್ ವಿಡಿಯೋ ಎಂದು ಇದೀಗ ತಿಳಿದು ಬಂದಿದೆ. ಫೆಬ್ರವರಿ 28ರಂದು ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆದ ದಾಳಿಯ ಸಂದರ್ಭದಲ್ಲಿ ಆಯದುಲ್ಲ ಖಮನೈ ಹತ್ಯೆಯಗಿರುತ್ತೆ. ಅದೇ ಸಂದರ್ಭದಲ್ಲಿ ಮನೆಯಲ್ಲಿದ್ದಂತಹ ಮೋಜ್ತಬಾ ಖಮನೈ ಅವರಿಗೂ ದಾಳಿಯಿಂದ ಗಾಯಗಳಾಗಿದ್ದು ಅವರ ಕುಟುಂಬಸ್ಥರು ಈ ಒಂದು ದಾಳಿಯಲ್ಲಿ ಸತ್ತಿರುತ್ತಾರೆ. ಆದರೆ ಮೋಜ್ತಬಾ ಖಮನೈ ಅವರ ಆರೋಗ್ಯ ಹೇಗಿದೆ ಅವರ…
ಬೆಂಗಳೂರು : ಮೋದಿ ಸರ್ಕಾರದ ಎಲ್‌ಪಿಜಿ ಮತ್ತು ಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆಯಿಂದಾಗಿ ಕರ್ನಾಟಕದಾದ್ಯಂತ ಜನರ ಜೀವನೋಪಾಯವನ್ನು ನಾಶಪಡಿಸಿದೆ. ಇದು ಕೇವಲ ನೀತಿಯ ವೈಫಲ್ಯವಲ್ಲ. ಬದಲಿಗೆ ಕೇಂದ್ರ ಬಿಜೆಪಿ ಸರ್ಕಾರದ ಉದಾಸೀನತೆ, ಅಹಂಕಾರ ಮತ್ತು ಸಂಪೂರ್ಣ ಆಡಳಿತಾತ್ಮಕ ದುರಂತಕ್ಕೆ ಸಾಕ್ಷಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು ಕರ್ನಾಟಕದ ಬಿಜೆಪಿ/ಜೆಡಿಎಸ್ ಕೇಂದ್ರ ಸಚಿವರು ಅಧಿಕಾರವನ್ನು ಆನಂದದಿಂದ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಈ ಪರಿಸ್ಥಿತಿಗೆ ಅವರು ಉತ್ತರದಾಯಿಯಾಗಿರಬೇಕು ಅಥವಾ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಉಪಚುನಾವಣೆಯಲ್ಲಿ ಬಿಜೆಪಿ ಮತ ಕೇಳುವ ಮುನ್ನ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲಿ: 1. ಕೆಲವೇ ವಾರಗಳಲ್ಲಿ 106% ಬೆಲೆ ಏರಿಕೆಯ ಆಘಾತ! * ಮಾರ್ಚ್ 2026 ರಲ್ಲಿ ಆಟೋ ಗ್ಯಾಸ್/ಎಲ್‌ಪಿಜಿ ಬೆಲೆ ಲೀಟರ್‌ಗೆ ₹58 ರಿಂದ ₹61 ಇತ್ತು. ಇಂದು ಅದು ₹105 ರಿಂದ ₹120…
ಬೆಂಗಳೂರು : ಇತ್ತೀಚಿಗೆ ಅನೈತಿಕ ಸಂಬಂಧದಿಂದ ಕೊಲೆಗಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಇದೀಗ ಬೆಂಗಳೂರಿನಲ್ಲಿ ಇದೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ, ಪ್ರೇಯಸಿಯ ಪತಿಯನ್ನೇ ಪ್ರಿಯಕರ ಒಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಸುನೀಲ್ ನಾಯಕ್ ಕೊಲೆಯಾದ ಪತಿ. ಪ್ರಿಯಕರ ಬಸುದೇವ್ ಮಲ್ಲಿಕ್ ಈ ಕೃತ್ಯ ಎಸಗಿದ್ದಾನೆ. ಆರೋಪಿ ಬಸುದೇವ್ ಮಲ್ಲಿಕ್ ಸುನೀಲ್ ನಾಯಕ್ ಪತ್ನಿಯೊಂದಿಗೆ ಸಲುಗೆ ಹೊಂದಿದ್ದ. ಈ ವಿಚಾರ ತಿಳಿದು ಸುನೀಲ್ ನಾಯಕ್ ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡ ಆರೋಪಿ ಬಸುದೇವ್ ನಾಯಕ್ ಮದ್ಯಪಾನ ಮಾಡುವ ನೆಪದಲ್ಲಿ ಒಟ್ಟಿಗೆ ಸೇರಿದ್ದಾರೆ. ಈ ವೇಳೆ ಕಂಠಪೂರ್ತಿ ಕುಡಿಸಿ ಸುನೀಲ್ ನಾಯಕ್‌ನನ್ನ ಬಸುದೇವ್ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಮೃತದೇಹವನ್ನು ಮೂಟೆಯಲ್ಲಿ ಹಾಕಿ ಬೊಮ್ಮಸಂದ್ರದ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಈ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಬಸುದೇವ್ ಮಲ್ಲಿಕ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಅವರಿಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸಿದೆ. ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾ.12ರಂದು ಹೊರಡಿಸಿದ ಆದೇಶ ರದ್ದು ಕೋರಿ ಸಿಐಡಿ ತನಿಖಾಧಿಕಾರಿಯು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್. ಪುರ ಶಾಸಕ ಬಿ.ಎ.ಬಸವರಾಜ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಪ್ರಕರಣ ಸಂಬಂಧ ಈವರೆಗೂ ತನಿಖೆ ಪೂರ್ಣಗೊಂಡಿಲ್ಲ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಆರೋಪಿಗೆ ಜಾಮೀನು ನೀಡಲಾಗಿದೆ. ಇದರಿಂದಾಗಿ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗದಂತಾಗಿದೆ. ಆದ್ದರಿಂದ ಆರೋಪಿಯ ಜಾಮೀನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಬೆಂಗಳೂರು : ಮೊದಲೇ ರಾಜ್ಯದಲ್ಲಿ ಸಿಲಿಂಡರ್ ಇಲ್ಲದೆ ಗ್ರಾಹಕರು ಹಾಗೂ ಆಟೋ ಚಾಲಕರು ಪರದಾಡುತ್ತಿದ್ದರೆ, ಇತ್ತ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸಿಲಿಂಡರ್ ಅಭಾವದಿಂದ ಸಂಕಷ್ಟ ಎದುರಾಗಿದ್ದು ಇದೀಗ ಕಳ್ಳನೊಬ್ಬ ಹೆಲ್ಮೆಟ್ ಹಾಕಿಕೊಂಡು ಬಂದು ಸಿಲಿಂಡರ್ ಕದ್ದು ಹೋಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಮನೆ ಗೇಟ್ ತೆಗೆದು ಸಿಲಿಂಡರ್ ಕದ್ದು ಬೈಕ್ ನಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾನೆ. ನಿನ್ನೆ ನಸುಕಿನ ಜಾವ ಸುಮಾರು 3 ಗಂಟೆಗೆ ಈ ಒಂದು ಘಟನೆ ನಡೆದಿದೆ. ಬೈಕ್ ನಲ್ಲಿ ಬಂದು ಗೇಟ್ ಓಪನ್ ಮಾಡಿ ಸಿಲಿಂಡರ್ ತೆಗೆದುಕೊಂಡು ಬೈಕ್ ಮೇಲೆ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾನೆ. ಮೊದಲೇ ಈ ಮನೇಲಿ ಸಿಲಿಂಡರ್ ಇದೆ ಎಂದು ಗಮನಿಸಿ ಸ್ಕೆಚ್ ಹಾಕಿದ್ದ ಕಳ್ಳ ನಸುಕಿನ ಜಾವ 3 ಗಂಟೆಗೆ ಬಂದು ಸಿಲಿಂಡರ್ ಕಳ್ಳತನ ಮಾಡಿದ್ದಾನೆ.
ದಾವಣಗೆರೆ: ರಾಜ್ಯದ ನಿರುದ್ಯೋಗಿ ಯುವಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ಭರವಸೆಯೊಂದನ್ನು ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲೇ ಸುಮಾರು 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಸೋಮವಾರ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ಸಿಎಂ ಈ ಮಹತ್ವದ ಮಾಹಿತಿ ಹಂಚಿಕೊಂಡರು. ಖಾಲಿ ಇರುವ ಹುದ್ದೆಗಳು: ರಾಜ್ಯ ಸರ್ಕಾರದಲ್ಲಿ ಸದ್ಯ ಒಟ್ಟು 2.50 ಲಕ್ಷ ಉದ್ಯೋಗಗಳು ಖಾಲಿ ಇವೆ. ಈ ಪೈಕಿ ಮೊದಲ ಹಂತವಾಗಿ 40 ಸಾವಿರ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. ಹೊಸ ಗುರಿ: ನೀಡಿದ ಭರವಸೆಯಂತೆ ಉಳಿದಿರುವ ಹುದ್ದೆಗಳಲ್ಲಿ 56,432 ಸರ್ಕಾರಿ ಹುದ್ದೆಗಳಿಗೆ ಇದೇ ವರ್ಷ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹಂತ ಹಂತವಾಗಿ ನೇಮಕ: ಎಲ್ಲಾ ಹುದ್ದೆಗಳಿಗೂ ಈ ವರ್ಷ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಆತಂಕ ಬೇಡ: “ಉದ್ಯೋಗಾಕಾಂಕ್ಷಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅರ್ಹ ಅಭ್ಯರ್ಥಿಗಳಿಗೆ…
ಬೆಂಗಳೂರು : ಉದ್ದೇಶ ಪೂರ್ವಕವಾಗಿ ದ್ವಿಚಕ್ರವಾಹನದ ಕಡೆ ಕಾರನ್ನು ತಿರುಗಿಸಿ ಅಪಘಾತವೆಸಗಿದ ಆರೋಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ವಿರುದ್ಧ ಪೊಲೀಸರು ದಾಖಲಿಸಿದ್ದ ಕೊಲೆಯತ್ನ ಪ್ರಕರಣವನ್ನು ರದ್ದಪಡಿಸಲು ನಿರಾಕರಿಸಿದ ಹೈಕೋರ್ಟ್, ರೋಡ್ ರೇಜ್ ಯಾವುದೇ ಕ್ಷಮೆಯಿರುವುದಿಲ್ಲ ಎಂದು ತಿಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಘಟನೆ ನಡೆದ ಸಂದರ್ಭದಲ್ಲಿ ಅವರು ಕಚೇರಿಗೆ ಹೋಗುತ್ತಿದ್ದರು. ಅಪಘಾತ ನಡೆಸಬೇಕು ಎಂಬ ಯಾವುದೇ ಉದ್ದೇಶ ಅವರಿಗಿರಲಿಲ್ಲ. ಆದರೆ, ಎಫ್ಐಆರ್ ನಲ್ಲಿ ತಪ್ಪಾಗಿ ಕೊಲೆ ಯತ್ನ ಆರೋಪ ದಾಖಲಿಸಲಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಅರ್ಜಿದಾರರು ಸಾಫ್ಟ್‌ವೇರ್ ಎಂಜಿನಿಯರ್ ಸಾಫ್ಟ್ ಆಗಿ ಇರಬೇಕಾಗಿತ್ತು. ಅವರಿಗೆ ತಾಳ್ಮೆ ಇರಲಿಲ್ಲ ಎಂದರೆ ಏನೂ ಮಾಡೋಕೆ ಆಗಲ್ಲ. ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ. ಆದರೆ, ನಿಮಗೆ ಅದು ಇರಬೇಕು. ರೋಡ್ ರೇಜ್‌ಗೆ ಕ್ಷಮೆಯೇ ಇಲ್ಲ ಎಂದು ತಿಳಿಸಿತು. ಅಲ್ಲದೆ, ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಅರ್ಜಿದಾರರು ಮತ್ತೊಮ್ಮೆ ಅದನ್ನು ಪ್ರಶ್ನಿಸಿ…
ಬೆಂಗಳೂರು : ಮೈಸೂರಿನಲ್ಲಿ ಬಂಧಿತನಾದ ಹುಸಿ ಬಾಂಬ್ ಬೆದರಿಕೆ ಆರೋಪಿ ಶ್ರೀನಿವಾಸ್ ಲೂಯಿಸ್, ಪಾಕಿಸ್ತಾನದ ಸರ್ಕಾರಿ ಕಚೇರಿ ಮತ್ತು ಕೋರ್ಟ್‌ಗಳಿಗೂ ಬೆದರಿಕೆ ಇಮೇಲ್ ಕಳುಹಿಸಿರುವುದು ದೆಹಲಿ ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿದೆ. ಡಾರ್ಕ್ ವೆಬ್ ಮತ್ತು 50ಕ್ಕೂ ಹೆಚ್ಚು ಇಮೇಲ್ ಐಡಿಗಳನ್ನು ಬಳಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈತ ಆತಂಕ ಸೃಷ್ಟಿಸಿದ್ದ. ಹೌದು ಹುಸಿ ಬಾಂಬ್ ಸಂದೇಶಗಳ ರೂವಾರಿ ಶ್ರೀನಿವಾಸ್ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರ ವಿಚಾರಣೆಯಲ್ಲಿ ಸ್ಪೋಟಕವಾದ ಮಾಹಿತಿ ಬಹಿರಂಗವಾಗಿದೆ ರಾಜ್ಯ, ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈತ ಹೊಸ ಬೆದರಿಕೆ ಸಂದೇಶ ಕಳುಹಿಸಿದ್ದ. ಪಾಕಿಸ್ತಾನದ ಸರಕಾರಿ ಕಚೇರಿಗಳಿಗೂ ಹುಸಿ ಬಾಂಬ್ ಕರೆ ಮಾಡಿದ್ದ. ಸದ್ಯ ಲ್ಯಾಪ್ಟಾಪ್ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದ್ದು, ಸದ್ಯ ಶ್ರೀನಿವಾಸ್ ಲೂಯಿಸ್ ದೆಹಲಿ ಪೊಲೀಸರ ಕಷ್ಟಡಿಯಲ್ಲಿ ಇದ್ದಾನೆ. ದೇಶಾದ್ಯಂತ ಕೋರ್ಟ್, ವಿಧಾನಸಭೆ, ಸರಕಾರಿ ಕಚೇರಿಗಳು ಶಾಲಾ ಕಾಲೇಜುಗಳಿಗೆ ಬಾಂಬ್ ಬೆದರಿಯ ಹಾಕಿದ್ದ ಶ್ರೀನಿವಾಸ ನನ್ನ ಮೈಸೂರಲ್ಲಿ ಅರೆಸ್ಟ್…
ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಮತ್ತು ಸಿಎಸ್‌ಕೆ ಪಂದ್ಯಕ್ಕೂ ಮುನ್ನ ಟಿಕೆಟ್ ಬ್ಲಾಕ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ 7 ಜನರ ವಿರುದ್ಧ ಇದೀಗ ಕೇಸ್ ದಾಖಲಿಸಲಾಗಿದೆ. ಕಬ್ಬನ್ ಪಾರ್ಕ್ ಠಾಣೆ ಪೋಲಿಸರು 7 ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ. ಜಗದೀಶ್, ಸತ್ಯನಾರಾಯಣ, ಹರ್ಷ, ವಿನಯ್, ಶಾಹಿದ್, ಲಿಖಿತ್ ಹಾಗೂ ಪುನೀತ್ ಎಂಬುವರ ವಿರುದ್ಧ ಪೊಲೀಸರು FIR ದಾಖಲು ಮಾಡಿಕೊಂಡಿದ್ದಾರೆ. ಸ್ಟೇಡಿಯಂ ಬಳಿ ಹೆಚ್ಚಿನ ಹಣಕ್ಕೆ ಟಿಕೆಟ್ ಮಾರಾಟ ಮಾಡುತ್ತಿದ್ದರು. ಸಿಸಿಬಿ ಪೊಲೀಸರಿಂದ ಮಾನಿಟರ್ ಮಾಡಲಾಗಿತ್ತು. ಮಾನಿಟರ್ ವೇಳೆ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಗಿಬಿದ್ದಿದ್ದಾರೆ. ಬ್ಲಾಕ್ ನಲ್ಲಿ ಟಿಕೆಟ್ ಮಾರಾಟಕ್ಕೆ ಈ ಒಂದು ಗುಂಪು ಯತ್ನಿಸುತ್ತಿತ್ತು. ಸದ್ಯ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು FIR ದಾಖಲಾಗಿದೆ.













