Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು: ಆನ್‌ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಬಂಧಿಸಿರುವ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್.ಡಿ.ಚೈತ್ರಾ ಸಲ್ಲಿಸಿರುವ ಅರ್ಜಿ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ವೀರೇಂದ್ರ ಅವರ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಿ, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ಚೈತ್ರಾ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಸೆ.8ಕ್ಕೆ ಮುಂದೂಡಿತು. ಪ್ರಕರಣ ಏನು? ಆಗಸ್ಟ್ 22ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ಪಪ್ಪಿ ನಿವಾಸ ಮೇಲೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಮಧ್ಯರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಅಂದು ಪಪ್ಪಿ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆ ಚಿನ್ನಾಭರಣ ವಿದೇಶಿ ಕರೆನ್ಸಿಯನ್ನ ಇಡಿ ವಶಕ್ಕೆ ಪಡೆದಿತ್ತು. ಸತತ 18…
ಬೆಂಗಳೂರು : ರಾಜ್ಯ ಸರ್ಕಾರ ಇದೀಗ ಮತ್ತೊಂದು ಪೇಚಿಗೆ ಸಿಲುಕಿದ್ದು, ಕೇವಲ ಸರ್ಕಾರಿ ಕಾಮಗಾರಿ ನಡೆಸಿ ಗುತ್ತಿಗೆದಾರರ ಬಾಕಿ ಹಣ ಮಾತ್ರ ಉಳಿಸಿಕೊಂಡಿತ್ತು. ಆದರೆ ಇದೀಗ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆದುಕೊಳ್ಳಲು ಹೋರಾಡಿ ಜೈಲು ಶಿಕ್ಷೆ ಅನುಭವಿಸಿದ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಗೌರವಧನವನ್ನು ಹಲವು ತಿಂಗಳಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರ ಮೊತ್ತವೇ 4.85 ಕೋಟಿ ರೂಪಾಯಿ ದಾಟಿದೆ. ರಾಜ್ಯದಲ್ಲಿ 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಮಾಸಿಕ 10 ಸಾವಿರ ರೂಪಾಯಿ ಗೌರವಧನ ಪಡೆಯುತ್ತಿದ್ದಾರೆ. ಮೃತಪಟ್ಟ ಸ್ವಾತಂತ್ರ್ಯ ಯೋಧರ ಶವ ಸಂಸ್ಕಾರಕ್ಕೆ ಸರ್ಕಾರ 4 ಸಾವಿರ ರೂಪಾಯಿ ನೀಡುತ್ತದೆ. ಧಾರವಾಡದಲ್ಲಿ 34, ಬೆಳಗಾವಿಯಲ್ಲಿ 30, ತುಮಕೂರು 15, ಕಲಬುರಗಿಯಲ್ಲಿ 10 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಗೌರವಧನ ಪಡೆಯುತ್ತಿದ್ದಾರೆ. ಕೆಲ ತಿಂಗಳಿಂದ ಸರ್ಕಾರವು ಮಾಸಾಶನ ನೀಡಿಲ್ಲ. ಇದರಿಂದ 4.85 ಕೋಟಿ ರೂಪಾಯಿ ಗೌರವಧನ ಬಾಕಿ ಉಳಿಸಿಕೊಂಡಿದೆ.
ಚಿತ್ರದುರ್ಗ : ಅಕ್ರಮ ಬೆಟ್ಟಿಂಗ್, ಆನ್ ಲೈನ್ ಗೇಮಿಂಗ್ ದಂಧೆ ಆರೋಪ ಮೇಲೆ ಇಡಿ ಅಧಿಕಾರಿಗಳು ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದು, ಸದ್ಯ ವಿರೇಂದ್ರ ಪಪ್ಪಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ವಿರೇಂದ್ರ ಕೊಟ್ಟ ಮಾಹಿತಿ ಆಧರಿಸಿ ಇಡಿ ಅಧಿಕಾರಿಗಳು ಮನೆ, ಬ್ಯಾಂಕ್ ಅಕೌಂಟ್ ಗಳ ಶೋಧ ನಡೆಸಿದ್ದಾರೆ. ಇದೀಗ ಇಡಿ ಅಧಿಕಾರಿಗಳು ನಿನ್ನೆ ಮತ್ತೆ ದಾಳಿ ನಡೆಸಿ ಆರು ಐಷಾರಾಮಿ ಕಾರುಗಳು ಹಾಗೂ ಅಕೌಂಟಿನಲ್ಲಿದ್ದ 55 ಕೋಟಿ ರೂಪಾಯಿ ಜಪ್ತಿ ಮಾಡಿಕೊಂಡಿದ್ದಾರೆ. ಹೌದು ಶಾಸಕ ವಿರೇಂದ್ರಗೆ ಸಂಬಂಧಿಸಿದಂತೆ ಆಸ್ತಿಯನ್ನು ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಸದ್ಯ ವೀರೇಂದ್ರಗೆ ಸೇರಿದ ಬ್ಯಾಂಕ್ ಅಕೌಂಟ್‌ಗಳಲ್ಲಿದ್ದ 55 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದೆ. ಒಟ್ಟು 9 ಬ್ಯಾಂಕ್ ಖಾತೆಗಳು, ಒಂದು ಡಿಮ್ಯಾಟ್ ಅಕೌಂಟ್ ಹಾಗೂ 262 ಮ್ಯೂಲ್ ಖಾತೆಗಳಲ್ಲಿದ್ದ ಅಂದಾಜು 55 ಕೋಟಿ ರೂ. ಜಪ್ತಿ ಮಾಡಿದೆ. ಅಲ್ಲದೇ 5 ದುಬಾರಿ ವಾಹನಗಳನ್ನು ವಶಕ್ಕೆ…
ಬೆಂಗಳೂರು : ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ಐದು ಲಕ್ಷ ರು. ನೀಡುವುದಾಗಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಡೆಗೆ ಹೈಕೋರ್ಟ್ ಆಕ್ಷೇಪಿಸಿದೆ.ಯತ್ನಾಳ್ ಅವರ ಮಾತಿಗೆ ಛೀಮಾರಿ ಹಾಕಿದೆ. ರಾಜಕಾರಣಿಗಳು ವಿವಿಧ ಧರ್ಮೀಯರ ಮಧ್ಯೆ ಸಹ ಬಾಳ್ವೆ ಮೂಡಿಸುವಂಥ ಕ್ರಾಂತಿಕಾರಕ ಕೆಲಸ ಮಾಡ ಬೇಕೇ ಹೊರತು ದ್ವೇಷ ಭಾವನೆ ಮೂಡಿಸುವ ಕೆಲಸವ ನ್ನಲ್ಲ ಎಂದಿದೆ. ಕೊಪ್ಪಳ ಟೌನ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ಐ. ಅರುಣ್ ಅವರ ಪೀಠ ಹೀಗೆ ನುಡಿಯಿತು. ಇದೇ ವೇಳೆ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು. ತನಿಖೆಗೆ ಯತ್ನಾಳ್ ಸಹಕರಿಸಬೇಕು ಎಂದು ಮಧ್ಯಂತರ ಆದೇಶ ನೀಡಿತು. ಪ್ರಕರಣ ಹಿನ್ನೆಲೆ? ಕೊಪ್ಪಳದಲ್ಲಿ ಹಿಂದೂ ಯುವಕನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಪ್ಪಳ ನಗರಕ್ಕೆ ಭೇಟಿ ನೀಡಿದಾಗ ಹಿಂದೂ ಯುವಕರು ಮುಸ್ಲಿಂ…
ಬೆಂಗಳೂರು : ರಾಜ್ಯದ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ಪ್ರವರ್ಗ ಎ,ಬಿ ಮತ್ತು ಸಿ ಎಂದು ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ ಜಾರಿಗೊಳಿಸಿರುವ ಒಳ ಮೀಸಲಾತಿಗೆ ಅನುಗುಣವಾಗಿ ರಾಜ್ಯ ಸಿವಿಲ್ ಸೇವೆಗಳ ಹುದ್ದೆ ಗಳ ನೇರ ನೇಮಕಾತಿಯಲ್ಲಿ ಪ್ರವರ್ಗವಾರು ಹುದ್ದೆಗಳ ಹಂಚಿಕೆಗೆ ಸಂಬಂಧಿಸಿ ರೋಸ್ಟರ್ ಬಿಂದು ಪರಿಷ್ಕರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಬುಧವಾರ ಸರ್ಕಾರ ಆದೇಶಿಸಿದೆ. ಹಾಗಾಗಿ ಆ ಪ್ರಕಾರ, ಎಸ್ಸಿ ಸಮುದಾಯಕ್ಕೆ ರಾಜ್ಯದಲ್ಲಿ ಒಟ್ಟಾರೆ ಒಟ್ಟಾರೆ ಇರು ಇರುವ ಶೇ.17 ಮೀಸಲಾತಿಯಲ್ಲಿ ಇನ್ನು ಮುಂದೆ ಪ್ರವರ್ಗ ಎ ಅಡಿ ಬರುವ ಉಪಜಾತಿಗಳಿಗೆ ಶೇ.6, ಪ್ರವರ್ಗ ಬಿ ಅಡಿ ಬರುವ ಉಪಜಾತಿಗಳಿಗೆ ಶೇ.6 ಮತ್ತು ಪ್ರವರ್ಗ ಸಿ ಅಡಿ ಬರುವ ಉಪಜಾತಿಗಳಿಗೆ ಶೇ.5 ಹುದ್ದೆಗಳು ಲಭ್ಯವಾಗಲಿವೆ. ಅಂದರೆ ನೂರು ಹುದ್ದೆಯಲ್ಲಿ ಪ್ರಸ್ತುತ ಪರಿಶಿಷ್ಟ ಜಾತಿಯವರಿಗೆ ಮೀಸಲಿರುವ 17 ಹುದ್ದೆಗಳಲ್ಲಿ ಒಳಮೀಸಲಾತಿಯಡಿ ಪ್ರವರ್ಗ ಎ ಅಡಿ ಬರುವ ಎಸ್ಸಿ ಉಪ ಜಾತಿಗಳಿಗೆ 6 ಹುದ್ದೆ, ಪ್ರವರ್ಗ ಬಿ ಅಡಿ ಬರುವ ಉಪ ಜಾತಿಗಳಿಗೆ 6…
ನವದೆಹಲಿ : ಸೆಪ್ಟೆಂಬರ್ 22ರಿಂದ ನೂತನ ಜಿಎಸ್‌ಟಿ ದರ ಜಾರಿಗೆ ಬರಲಿದೆ. 4ರ ಬದಲು ಶೇ. 5 ಮತ್ತು ಶೇ. 18ರ ಎರಡು ತೆರಿಗೆ ಸ್ಲ್ಯಾಬ್ ದರಗಳಿಗೆ GST ಮಂಡಳಿ ಅನುಮೋದನೆ ನೀಡಿದೆ. ಇಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ 5% ಮತ್ತು 18%ರ ತೆರಿಗೆ ಸ್ಲ್ಯಾಬ್‌ಗಳನ್ನು ಎರಡಕ್ಕೆ ಕಡಿತಗೊಳಿಸುವುದಾಗಿ ಘೋಷಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಜಿಎಸ್‌ಟಿ (GST) ದರಗಳಿಗೆ ಇಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ GST ಮಂಡಳಿಯ 56ನೇ ಸಭೆಯು ಈ ನಿರ್ಧಾರ ತೆಗೆದುಕೊಂಡಿದೆ. ಅಸ್ತಿತ್ವದಲ್ಲಿರುವ ಶೇ. 12 ಮತ್ತು ಶೇ. 28ರ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಇನ್ಮುಂದೆ ಶೇ. 5 ಮತ್ತು ಶೇ. 18ರ ಸ್ಲ್ಯಾಬ್ ದರಗಳು ಮಾತ್ರ ಜಾರಿಯಲ್ಲಿರಲಿವೆ. ನನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಜಿಎಸ್‌ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ನಮ್ಮ ಬಯಕೆಯ ಬಗ್ಗೆ ನಾನು ಮಾತನಾಡಿದ್ದೆ.…
ನವದೆಹಲಿ : ನಿನ್ನೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ 4 ಜಿಎಸ್‌ಟಿ ಸ್ಲ್ಯಾಬ್ಗಳಲ್ಲಿ ಎರಡನ್ನು ರದ್ದು ಮಾಡಿ ಎರಡೇ ಸ್ಲ್ಯಾಬ್ ಜಾರಿಗೆ ತರಲು ಜಿಎಸ್‌ಟಿ ಮಂಡಳಿ ಅನುಮೋದನೆ ನೀಡಿದೆ. ಹೀಗಾಗಿ, ದಸರಾ ಹಬ್ಬಕ್ಕೂ ಮುನ್ನ ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ. ಇದು ಸಾಮಾನ್ಯ ಜನರು, ರೈತರು, ಎಂಎಸ್‌ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿದ್ದು, ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಸಂಪೂರ್ಣವಾಗಿ ಕಡಿಮೆ ಮಾಡಲಾಗಿದೆ. * ಕೇಶ ತೈಲ (ಹೇರ್ ಆಯಿಲ್) * ಟಾಯ್ಲೆಟ್ ಸೋಪ್, ಸೋಪ್ ಬಾರ್‌ಗಳು *…
ಬೆಂಗಳೂರು : ಬೆಂಗಳೂರು ಅರಮನೆ ಮೈದಾನದಲ್ಲಿ ಈದ್ ಉನ್ನಬಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ವಿದೇಶಿ ಧರ್ಮ ಪ್ರಚಾರಕರು ಭಾಗವಹಿಸುವ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ಸಂಘಟಕರಿಗೆ ಪೊಲೀಸ್ ಆಯುಕ್ತರ ಮೂಲಕ ಮಾಹಿತಿ ನೀಡಲಾಗಿದೆ.ವೀಸಾ ನಿಯಮ ಉಲ್ಲಂಘನೆ ಮಾಡಿದಂತೆ ಕ್ರಮಕ್ಕೆ ಸೂಚಿಸಲಾಗಿದೆ. ಈ ವೇಳೆ ವಿದೇಶಿ ಪ್ರಚಾರಕರು ಭಾಷಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ವಿದೇಶಿ ಧರ್ಮ ಗುರುಗಳು ಭಾಗವಹಿಸಲು ಅವಕಾಶ ಇಲ್ಲ. ಅಲ್ಲದೆ ಭಾಷಣವನ್ನು ಮಾಡುವಂತಿಲ್ಲ ನಿಮ್ಮ ಉಲ್ಲಂಘಿಸಬಾರದು ಎಂದು ಈಗಾಗಲೇ ಸಂಘಟಕ ಗರಿಗೆ ಸೂಚಿಸಲಾಗಿದೆ ಇಡೀ ಕಾರ್ಯಕ್ರಮದ ಮೇಲೆ ರಾಜ್ಯ ಸರ್ಕಾರ ನಿಗಾ ಇಡಲಿದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಭಾಗವಹಿಸಲಿದ್ದಾರೆ. ವಿರೋಧ ಪಕ್ಷಗಳಿಗಿಂತ 10 ಪಟ್ಟು ನಮಗೆ ಹೆಚ್ಚು ಜವಾಬ್ದಾರಿ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಧಾರವಾಡ : ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಇದೀಗ ಇಂದು ಧಾರವಾಡ ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಹೌದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೇಹಾ ಕೊಲೆ ಕೆಎಸ್ ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾಗೊಳಿಸಿ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಕೋರಿ ಫಯಾಜ್ ಅರ್ಜಿ ಸಲ್ಲಿಸಿದ್ದ ಈ ಹಿಂದೆ ಹುಬ್ಬಳ್ಳಿಯ 1ನೇ ಹಿರಿಯ ಮತ್ತು ಸತ್ರ ನ್ಯಾಯಾಲಯ ಕೂಡ ಫಯಾಜ್ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಧಾರವಾಡ ಹೈಕೋರ್ಟ್ ಕೂಡ ಇದೀಗ ಫಯಾಜ್ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ.
ರಾಯಚೂರು : ರಾಯಚೂರಿನಲ್ಲಿ ಬಿಹಾರ್ ಮೂಲದ ಶಂಕಿತ ನಕ್ಸಲ್ ಅರೆಸ್ಟ್ ಬಿಹಾರ ಪೊಲೀಸರು ಹಾಗೂ ರಾಯಚೂರು ಗ್ರಾಮೀಣ ಪೊಲೀಸರ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಬಿಹಾರ್ ಮೂಲದ ನಕ್ಸಲ್ ಮನೋಜ್ ಸದಾ ಎನ್ನುವ ನಕ್ಸಲ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಮನೋಜ್ ವಿರುದ್ಧ ಕೊಲೆ ಸುಲಿಗೆ ಜೀವ ಬೆದರಿಕೆ ಆರೋಪ ಕೇಳಿ ಬಂದಿದ್ದು, ರಾಯಚೂರಿನ ಯರಮರಸ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅರೆಸ್ಟ್ ಮಾಡಲಾಗಿದೆ. ಖಾಸಗಿ ರೈಸ್ ಮಿಲ್ ಒಂದರಲ್ಲಿ ಆರೋಪಿ ಮನೋಜ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಅರೆಸ್ಟ್ ಬಳಿಕ ಮನೋಜನನ್ನು ಪೊಲೀಸರು ಕೋರ್ಟ್ ಗೆ ಹಾಗಿರುಪಡಿಸಿ ಬಿಹಾರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.













