Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಕೆಆರ್ಎಸ್ ಹಿನ್ನೀರಿನ ಬಳಿ ಇರುವ ಎಡಹಳ್ಳಿಯಲ್ಲಿ ಇಂದು ಅನುಮತಿ ಪಡೆಯದೆ ರೇವ್ ಪಾರ್ಟಿ ಆಯೋಜನೆ ವಿಚಾರವಾಗಿ ಬಂಧಿತ 64 ಜನರ ಪೈಕಿ 8 ಯುವತಿಯರಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ 64 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು ಇಂದು ಕೆಆರ್ಎಸ್ ಹಿನ್ನೀರಿನ ಬಳಿ ಇರುವ ಎಡಹಳ್ಳಿಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಎಂಬಾತನಿಂದ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಪಾರ್ಟಿ ಆಯೋಜಿಸಿದ್ದರು. ಇನ್ನು ಪಾರ್ಟಿಗೆ ಅಧಿಕೃತವಾಗಿ ಅನುಮತಿ ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ಅಪ್ಲೋಡ್ ಮಾಡಿದ್ದರು. ಇದನ್ನು ನಂಬಿ 50ಕ್ಕೂ ಹೆಚ್ಚು ಜೋಡಿ ಪಾರ್ಟಿಗೆ ನೋಂದಾಯಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ತಲಾ 2 ಸಾವಿರ ವಸೂಲಿ ಮಾಡಿ, ಇಸ್ರೇಲ್ನಿಂದ ರ‍್ಯಾಪರ್ ಗ್ರೇನ್ ರಿಪ್ಪರ್ ಕರೆಸಿದ್ದರು. ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಎಸ್ಪಿಗೆ ಮಾಹಿತಿ ನೀಡಲಾಗಿದೆ. ಮೈಸೂರು ಎಸ್ಪಿ ಆದೇಶದಂತೆ…
ಬೆಂಗಳೂರು : ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಇಂದು ಭಾರಿ ಅನಾಹುತ ಒಂದು ತಪ್ಪಿದೆ, ನಿಂತಿದ್ದ ಲಾರಿ ಒಂದು ಏಕಾಏಕಿ ಚಲಿಸಿದ್ದು ಎದುರುಗಡೆ ಮಾರಾಟಕ್ಕೆ ಎಂದು ಇಟ್ಟಿದ್ದ ಗಣಪತಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಎದುರುಗಡೆ ಯಾವುದೇ ವಾಹನಗಳು ಇಲ್ಲದಿರುವುದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹೌದು ನಿಂತಿದ್ದ ಟಿಪ್ಪರ್ ಲಾರಿ ಚಲಿಸಿ ಒಂದು ಲೈಟ್ ಕಂಬ ಹಾಗೂ ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದಿದೆ.ರಾತ್ರಿ 1.30 ಸುಮಾರಿಗೆ ಟಿಪ್ಪರ್ ಲಾರಿ ಚಾಲಕ, ಜಲ್ಲಿ ಕಲ್ಲು ಅನ್ ಲೋಡ್ ಮಾಡಲು ಟಿಪ್ಪರ್ ನಿಲ್ಲಿಸಿ ಜಲ್ಲಿ ಕಲ್ಲಿನ ಫೋಟೋ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಬ್ರೇಕ್ ಫೇಲ್ ಆಗಿ ಟಿಪ್ಪರ್ ಏಕಾಏಕಿ ಚಲಿಸಿದ್ದು, ರಸ್ತೆ ದಾಟಿ ಎದುರುಗಡೆಗೆ ಹೋಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ವಾಹನ ಓಡಾಟ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ.ಇದೀಗ ಲೈಟ್ ಕಂಬವನ್ನು ಬೆಸ್ಕಾಂ ಸಿಬ್ಬಂದಿ ತೆರವು ಗೊಳಿಸಿದ್ದು, ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ…
ಮೈಸೂರು : ಮಹಿಷ ದಸರಾ ಕಾರ್ಯಕ್ರಮದಲ್ಲಿ ಪ್ರೊಫೆಸರ್ ನಂಜರಾಜ ಅರಸ್ ಅವರು ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ್ದು, ಚಾಮುಂಡಿ ಕೇವಲ ಕಾಲ್ಪನಿಕ ವ್ಯಕ್ತಿ. ಆದರೆ ಮಹಿಶಾಸುರ ಜೀವಂತ ವ್ಯಕ್ತಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಮೈಸೂರಿನ ಮಹಿಷ ದಸರಾದಲ್ಲಿ ಪ್ರೊಫೆಸರ್ ನಂಜರಾಜ್ ಅರಸ್ ಮಾತನಾಡಿ, ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ. ಕೇವಲ ಕಾಲ್ಪನಿಕ. ಮಹಿಷಾಸುರ ಜೀವಂತ ವ್ಯಕ್ತಿ. ಚಾಮುಂಡಿ ಕೇವಲ ಕಾಲ್ಪನಿಕ ಅಸುರ ಮತ್ತು ರಾಕ್ಷಸ ಅನ್ನೋದು ಸಮುದಾಯಗಳ ಹೆಸರು. ದೇವರ ಪುರಾಣ ಓದಿದರೆ ಸೂಸೈಡ್ ಮಾಡ್ಕೋಬೇಕು. ಇಷ್ಟು ಕೀಳಾದವರು ಎನಿಸುತ್ತದೆ. ಚಾಮುಂಡಿ ಮಹಿಷಾಸುರನನ್ನು ಕೊಂದಿಲ್ಲ. ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ ಕೇವಲ ಕಾಲ್ಪನಿಕ ಎಂದು ಪ್ರೊಫೆಸರ್ ನಂಜರಾಜೇ ಇದೆ ವೇಳೆ ವಿವಾದಾತ್ಮಕ ಮಾತು ಹೇಳಿದ್ದಾರೆ.
ಮೈಸೂರು : ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ನಿಷೇಧವಿದ್ದರೂ ಸಹ ಇದೀಗ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಸಮಿತಿಯ 5 ಸದಸ್ಯರನ್ನು ಪೊಲೀಸರೆ ಕರೆದೋಯ್ದು ಪುಷ್ಪರ್ಚನೆ ಸಲ್ಲಿಸಿರುವ ಘಟನೆ ನಡೆದಿದ್ದು, ಇದೀಗ ಪೊಲೀಸರೆ ಕಾನೂನು ಉಲ್ಲಂಘಿಸಿರುವ ಘಟನೆ ನಡೆದಿದೆ. ಹೌದು ಮಹಿಷ ದಸರಾ ಆಚರಣೆಯ ಸಮಿತಿ ಸದಸ್ಯರನ್ನು ಕರೆದೋಯ್ದ ಪೊಲೀಸರು ಕದ್ದು ಮುಚ್ಚಿ ಕರೆದೋಯ್ದು ಪುಷ್ಪಾರ್ಚನೆ ಮಾಡಿಸಿದ್ದಾರೆ.ಆ ಮೂಲಕ ಪೊಲೀಸರಿಂದಲೇ ಕಾನೂನು ಉಲಂಘನೆ ಆಗಿದೆ. ಚಾಮುಂಡಿ ಬೆಟ್ಟದಲ್ಲಿ ಮಹೇಶಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗಿದೆ. ತಾವೇ ಹಾಕಿದ ನಿಷೇಧಾಜ್ಞೆಗೆ ಪೊಲೀಸರು ಎಳ್ಳು ನೀರು ಬಿಟ್ಟಿದ್ದಾರೆ. ಟೌನ್ ಹಾಲ್ ಹೊರತುಪಡಿಸಿ ಮೈಸೂರಲ್ಲಿ ಮಹಿಷ ಆಚರಣೆಗೆ ನಿಷೇಧಜ್ಞೆ ಹೇರಲಾಗಿತ್ತು. ಪೊಲೀಸ್ ಕಮಿಷನರ್ ನಿಷೇಧಾಜ್ಞೆ ಜಾರಿ ಮಾಡಿದ್ದರು. ಹೀಗಿದ್ದರೂ ಪೊಲೀಸರು ಇವರನ್ನು ಕರೆದುಕೊಂಡು ಹೋಗಿ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಆ ಮೂಲಕ ಪೊಲೀಸರಿಂದಲೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.
ಮೈಸೂರು : ಮನುಸ್ಮೃತಿಯಲ್ಲಿ ಶೂದ್ರರು ಅಂದರೆ ವೇಶ್ಯೆಗೆ ಹುಟ್ಟಿದವನು ಅಂತಿದೆ. ಮನುಸ್ಮೃತಿಯಲ್ಲಿ ಹೇಳಿರುವಂತೆ ನಾವು ಶೂದ್ರರೆಂದು ಒಪ್ಪಿಕೊಳ್ಳಬೇಕಾ? ಎಂದು ಮೈಸೂರಿನ ಮಹಿಷ ದಸರಾದಲ್ಲಿ ಸಾಹಿತಿ ಪ್ರೊಫೆಸರ್ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದರು. ಹಿಂದೂ ಧರ್ಮ ನಮ್ಮದಲ್ಲ ನಮಗೆ ಹಿಂದೂ ಧರ್ಮ ಬೇಕಾಗಿಲ್ಲ. ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದನ್ನು ನಂಬಿ ಎಂದು ಗೌತಮ ಬುದ್ಧ ಹೇಳಲ್ಲ. ನಾನು ಹೇಳಿದ್ದು ಕೇಳದಿದ್ದರೆ ಸ್ವರ್ಗ ಸಿಗಲ್ಲವೆಂದು ಏಸು ಹೇಳುತ್ತಾರೆ. ನನ್ನ ಮಾತು ಕೇಳದಿದ್ದರೆ ಮೋಕ್ಷ ಸಿಗಲ್ಲವೆಂದು ಪ್ರವಾದಿ ಹೇಳುತ್ತಾರೆ. ನಾನು ಹೇಳಿದ್ದರೂ ಕೇಳದಿದ್ದರೆ ನರಕಕ್ಕೆ ಹೋಗುತ್ತೀರೆಂದು ಕೃಷ್ಣ ಹೇಳುತ್ತಾನೆ. ಶೂದ್ರರು ವೇಶ್ಯೆಗೆ ಹುಟ್ಟಿದವರೆಂದು ಹೇಳುವ ಧರ್ಮದಲ್ಲಿ ಇರಬಾರದು. ನಾವು ಬೌದ್ಧ ಧರ್ಮಕ್ಕೆ ಹೋಗಬೇಕು ಎಂದು ಪ್ರೊಫೆಸರ್ ಭಗವಾನ್ ತಿಳಿಸಿದರು. ಶೂದ್ರರು ವೇಶ್ಯೆ ಮಕ್ಕಳೆಂದು ಹೇಳುವ ಧರ್ಮಕ್ಕೆ ಎಕ್ಕಡಲ್ಲಿ ಹೊಡಿಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನೂ ಆಗಿದ್ದಾನೆ, ಅವನು ಹಿಂದೂ. ಯಾರೂ ಹಿಂದೂ ಆಗಬಾರದು. ಜ್ಞಾನದ ಹಸಿವು ಇಲ್ಲದ ಕಾರಣ…
ಜಮ್ಮು ಕಾಶ್ಮೀರ : ಇಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರದ ಭಾಷಣದ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದಿರುವ ಘಟನೆ ನಡೆದಿತ್ತು. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ನನಗೆ 83 ವರ್ಷ, ಮೋದಿಯನ್ನು ಅಧಿಕಾರದಿಂದ ತೆಗೆದು ಹಾಕುವವರೆಗೂ ನಾನು ಬದುಕುತ್ತೇನೆ ಎಂದು ತಿಳಿಸಿದರು. ಜಮ್ಮು ಕಾಶ್ಮೀರದ ಕಥುವಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ನನಗೆ ಈಗ 83 ವರ್ಷ. ನಾನು ಇಷ್ಟು ಬೇಗ ಸಾಯುವುದಿಲ್ಲ ಮೋದಿಯನ್ನು ಅಧಿಕಾರದಿಂದ ತೆಗೆದು ಹಾಕುವವರೆಗೂ ನಾನು ಬದುಕುತ್ತೇನೆ. ಚುನಾವಣಾ ರ‍್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು. ಜಮ್ಮು ಕಾಶ್ಮೀರದ ಕಥುವಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದು ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನವನ್ನು ಮರು ಸ್ಥಾಪಿಸಲು ಹೋರಾಡುತ್ತೇವೆ ಎಂದು ತಿಳಿಸಿದರು. ಭಾಷಣದ ವೇಳೆ ಅಸ್ವಸ್ಥ! ಇಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಈ…
ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ಅವರ ವಾಕ್ಸಮರ ತಾರಕಕ್ಕೆ ಏರಿದ್ದು, ಈ ಒಂದು ವಿಚಾರವಾಗಿ ಹೆಚ್‍ಡಿ ಕುಮಾರಸ್ವಾಮಿ ಕೆಪಿಸಿಸಿ ಕಚೇರಿಯಲ್ಲಿ ಲೆಟರ್ ಲೀಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಒಂದು ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಹತ್ತಿರ ಏನು ದಾಖಲೆ ಇದೆಯೋ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಪತ್ರ ಬರೆದ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಲೆಟರ್ ಲಿಕ್ ಮಾಡಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಇದೀಗ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಅವರು ಏನು ಮಾತನಾಡುತ್ತಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ. ಕೆಪಿಸಿಸಿಗೂ ಎಡಿಜಿಪಿ ಚಂದ್ರಶೇಖರ್ ಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು. ನಾನು ನಿನ್ನೆ ಬೆಂಗಳೂರಿನಲ್ಲಿ ಇರಲಿಲ್ಲ. ನಾನು ಸಾತನೂರು ಹಾಗೂ…
ದಾವಣಗೆರೆ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದು ವಿಪಕ್ಷಗಳು ಅಗ್ರಹಿಸುತ್ತಿವೆ. ಇದರ ಬೆನ್ನಲ್ಲೇ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಹೊಸ ಬಾಂಬ್ ಒಂದನ್ನು ಸಿಡಿಸಿದ್ದು, ಕೆಲವರು ಸಿಎಂ ಸ್ಥಾನಕ್ಕಾಗಿ ಸಾವಿರಾರು ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಇಂದು ದಾವಣಗೆರೆಯಲ್ಲಿ ಮಜಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ.ಇದರಲ್ಲಿ ಕಾಂಗ್ರೆಸ್ನವರೂ ಇದ್ದಾರೆ, ಬೇರೆ ಪಕ್ಷದವರೂ ಇದ್ದಾರೆ. ಸಾವಿರ ಕೋಟಿ ಹಣ ಇಟ್ಟುಕೊಂಡು ಸಿಎಂ ಆಗಲು ಸಿದ್ಧರಿದ್ದಾರೆ ಎಂದು ಸ್ಪೋಟಕ ವಾದಂತಹ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇದೆ. ಪಕ್ಷದ ಗೊಂದಲಗಳ ಬಗ್ಗೆ ಹೈಕಮಾಂಡ್ಗೆ ಮಾಹಿತಿ ರವಾನೆ ಮಾಡಲಾಗಿದೆ. ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚಿಸಿದೆ. ಹೀಗಾಗಿ ನಾವು ಹೆಚ್ಚು ಮಾತಾಡಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾಯಿಸುವ ಅಧಿಕಾರ ನಮಗಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು…
ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ಟೆನ್ಶನ್ ಆಗಿದ್ದಾರೆ ಎಂದು ಹೇಳಲಾಗುತ್ತಿತ್ತು ಆದರೆ ಅವರಿಗೆ ಯಾವುದೇ ಭಯವಿಲ್ಲದೆ, ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಜಾತಿ ಗಣತಿ ವರದಿಯ ಕುರಿತು ಮಾತನಾಡಿದ್ದು, ಜಾತಿಗಣತಿ ವರದಿ ನಮ್ಮ ಪಕ್ಷದ ಅಜೆಂಡವಾಗಿದ್ದು, ಅದನ್ನು ಮುಂದೆ ಜಾರಿ ಮಾಡೇ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಜಾತಿ ಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನು ಸಂಪೂರ್ಣವಾಗಿ ನೋಡಿಲ್ಲ. ಮುಂದೆ ಜಾತಿಗಣತಿ ವರದಿ ಸಂಪುಟದ ಮುಂದೆ ಇಟ್ಟು ಜಾರಿಗೊಳಿಸುತ್ತೇನೆ ಜಾತಿಗಣತಿ ಜಾರಿ ನಮ್ಮ ಪಕ್ಷದ ಅಜೆಂಡವಾಗಿದೆ. ಹಾಗಾಗಿ ಅದನ್ನು ಜಾರಿಗೆ ಮಾಡೇ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ..
ಮೈಸೂರು : ಈ ಬಾರಿ ಮೈಸೂರು ದಸರಾಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಎಲ್ಲಾ ಹಂತದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇದೀಗ ಇಂದು ದಸರಾ ಮಹೋತ್ಸವದ ವೇಳೆ ಭಾಗವಹಿಸುವ ಆನೆಗಳಿಗೆ ಕುಶಾಲು ತೋಪು ಸಿಡಿಸಿ ತಾಲಿಮು ನಡೆಸುವ ವೇಳೆ ಭಾರಿ ಅನಾಹುತ ಒಂದು ನಡೆದಿದೆ. ಹೌದು ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಗೆ ಕುಶಾಲತೋಪು ಸಿಡಿಸಿ ತಾಲಿಮು ಮೂಡಿಸಲಾಗುತ್ತಿತ್ತು. ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಈ ಒಂದು ತಾಲಿಮು ನಡೆಸಲಾಗುತ್ತಿತ್ತು. ಸದ್ದಿಗೆ ಬೆದರಿ ಕಾವಾಡಿಯನ್ನೇ ದಂತದಿಂದ ಹೆಣ್ಣಾಣೆ ಒಂದು ಎತ್ತಿದೆ. ಈ ವೇಳೆ ಹರಸಾಹಸ್ಪಟ್ಟು ಕಾವಾಡಿ ಹೆಣ್ಣಾಣೆಯನ್ನು ನಿಯಂತ್ರಿಸಿದ್ದಾನೆ.ಸ್ವಲ್ಪ ಹೊತ್ತಿನ ನಂತರ ಹೆಣ್ಣಾನೇ ಶಾಂತವಾಗಿದೆ.













