Author: kannadanewsnow05

ಉತ್ತರಪ್ರದೇಶ : ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತುರ್ತು ಭೂ ಸ್ಪರ್ಶವಾಗಿದೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ *ಕೇಶವ ಪ್ರಸಾದ್ ಮೌರ್ಯ* ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣದಿಂದ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. ಈ ಕುರಿತ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ: * *ಘಟನೆ ಎಲ್ಲಿ ನಡೆಯಿತು?: ಕೇಶವ ಪ್ರಸಾದ್ ಮೌರ್ಯ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ, ಮಾರ್ಗಮಧ್ಯೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರಿಂದಾಗಿ ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಹತ್ತಿರದ ಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. * *ಸುರಕ್ಷತೆ: ಅದೃಷ್ಟವಶಾತ್, ಈ ಘಟನೆಯಲ್ಲಿ ಉಪಮುಖ್ಯಮಂತ್ರಿಗಳು ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ *ಸುರಕ್ಷಿತವಾಗಿದ್ದಾರೆ*. ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ.

Read More

ಹುಬ್ಬಳ್ಳಿ : ಲಂಚ ಪಡೆಯುವಾಗ ಮಹಿಳಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಧಾರವಾಡ ಪಾಲಿಕೆಯ ಅಧಿಕಾರಿ ಹೀನಾ ಕೌಸರ್ ಅಧಿಕಾರಿಯನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಒಂದರ ಕಚೇರಿ ಅಧಿಕಾರಿಯಾಗಿರುವ ಹಿನಾ ಕೌಸರ್ ಮಾಳಪ್ಪ ತಳವಾರ್ ಎಂಬವರಿಂದ 3500 ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಣದ ಸಮೇತ ಹೀನ ಕೌಸರ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಹೀನ ಮಾಳಪ್ಪ ಎಂಬವರ ಬಳಿ 4500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಈ ವೇಳೆ ಮಾಳಪ್ಪ ಮುಂಗಡವಾಗಿ ರೂ.1000 ನೀಡಿದ. ಇಂದು ಉಳಿದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ 16 ವರ್ಷದ ಮಕ್ಕಳಿಗೆ ಸಾಮಾಜಿಕ ಜಾಲತಾಣದಿಂದ ಬ್ಯಾನ್ ಮಾಡಲಾಗಿದೆ. ಇದೀಗ ಮೊಬೈಲ್ ಅಡಿಕ್ಟ್ ವಿದ್ಯಾರ್ಥಿ ಒಬ್ಬ ಮೊಬೈಲ್ ಇಲ್ಲದೆ ಒದ್ದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮೊಬೈಲ್ ಅಡಿಕ್ಷನ್ ನಿಂದ ವಿದ್ಯಾರ್ಥಿ ಪರದಾಡುತ್ತಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬಿಡದಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ವಿದ್ಯಾರ್ಥಿ ಮೊಬೈಲ್ ಇಲ್ಲದೆ ಯಾವ ರೀತಿ ಪರದಾಡುತ್ತಿದ್ದಾನೆ ಅಂದರೆ ವಿಡಿಯೋ ನೋಡಿ ಜನರು ಶಾಕ್ ಆಗಿದ್ದಾರೆ. ಮೊಬೈಲ್ ನೊಂದಿಗೆ ವಿದ್ಯಾರ್ಥಿ ಜೀವನ ನಡೆಸುತ್ತಿದ್ದ ಆ ರೀತಿ ಮೊಬೈಲ್ ಗೆ ವಿದ್ಯಾರ್ಥಿ ಅಡಿಕ್ಟ್ ಆಗಿದ್ದ ಮೊಬೈಲ್ ಅಡಿಕ್ಷನ್ ಇಂದ ಪೋಷಕರು ಹೇಗೆ ಆತನನು ಹೊರಗೆ ತರುವುದು ಎಂದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

Read More

ಬೆಂಗಳೂರು : ನಿನ್ನೆ ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಿಜೆಟ್ ಮಂಡನೆ ಮಾಡಿದರು. ಬಜೆಟ್ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಲ ಮಾಡದೇ ಯಾವುದೇ ಕುಟುಂಬ, ದೇಶ, ರಾಜ್ಯವಾಗಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಆದರೆ, ವಿತ್ತೀಯ ಶಿಸ್ತು ಮಾನದಂಡದ ಒಳಗಡೆ ಇರಬೇಕು ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಾವು ಸಾಲಗಾರರಾಗಿಲ್ಲ. ಹಣಕಾಸು ಹೊಣೆಗಾರಿಕೆ ಅಧಿನಿಯಮದ ಮಾನದಂಡದ ಒಳಗೆ ಇದ್ದೇವೆ. ಹಣಕಾಸು ಹೊಣೆಗಾರಿಕೆ ಅಧಿನಿಯಮದ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ.3ರ ಒಳಗಡೆ ಇರಬೇಕು. ಒಟ್ಟು ಹೊಣೆಗಾರಿಕೆ ಜಿಡಿಪಿಯ ಶೇ25ರ ಒಳಗಡೆ ಇರಬೇಕು. 2026-27 ಸಾಲಿನಲ್ಲಿ ರಾಜ್ಯದ ಜಿಡಿಪಿ 33.05 ಲಕ್ಷ ಕೋಟಿ ಇರಲಿದೆ. ಅದರಲ್ಲಿ ನಮ್ಮ ಸಾಲ ಒಟ್ಟು 8.24 ಲಕ್ಷ ಕೋಟಿ ಆಗಲಿದೆ. ಇದು ಎಸ್​​ಜಿಡಿಪಿಯ ಶೇ.24.94ರಷ್ಟು ಆಗಲಿದೆ ಎಂದರು. ಅಭಿವೃದ್ಧಿಗೆ ಪೂರಕವಾದ ಮುಂಗಡ ಪತ್ರ ಮಂಡಿಸಿದ್ದೇನೆ. ಈ ಬಾರಿ ಬಜೆಟ್ ಗಾತ್ರ 4.48 ಲಕ್ಷ ಕೋಟಿ ಆಗಿದೆ. ಈ ಬಾರಿ ಸುಮಾರು 38,455 ಕೋಟಿ ರೂ‌.ಗಳಷ್ಟು ಅಂದರೆ…

Read More

ಬೆಂಗಳೂರು : ಪತ್ನಿ ತವರಿಗೆ ಹೋಗುತ್ತಿದ್ದಂತೆ ಪ್ರೇಯಸಿಯೊಂದಿಗೆ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಪತ್ನಿಗೆ ತವರು ಕಳಿಸಿ ಒಂದು ವರ್ಷದಿಂದ ದೇವನಹಳ್ಳಿ ಮನೆಯಲ್ಲಿ ಇದ್ದಾರೆ. ಪತ್ನಿ ವಾಪಸ್ ಬರುತ್ತಿದ್ದಂತೆ ಮನೆಯಿಂದ ತೆರಳುವಂತೆ ತಾಕಿದ್ದು ಮಾಡಿದ್ದಾನೆ. ಆದರೆ ಮನೆಯಿಂದ ತೆರಳದೆ ಮದುವೆಯಾಗುವಂತೆ ಮಹಿಳೆ ನಿರ್ಮಲ ಪಟ್ಟು ಹಿಡಿದಿದ್ದಾಳೆ. ಆಗ ಹಗ್ಗದಿಂದ ಕತ್ತು ಹಿಸುಕಿ ನಿರ್ಮಲಾಳನ್ನು ಕಿಡಿಗೇಡಿ ಮೌನೇಶ್ ಕೊಲೆ ಮಾಡಿದ್ದಾನೆ. ಎರಡು ದಿನ ಬಳಿಕ ಶವವನ್ನು ಚರಂಡಿಗೆ ಎಸೆದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಏರ್ಪೋರ್ಟ್ ಸಿಬ್ಬಂದಿ ಮೌನೇಶ್ ಈ ಒಂದು ಕೃತ್ಯ ಎಸಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಹಂತಕ ಮೌನೇಶ್ ಯಾದಗಿರಿಯಲ್ಲಿ ಇರುವುದು ತಿಳಿದು ಬಂದಿದೆ. ತಕ್ಷಣ ಆತನನ್ನು ಅಲ್ಲಿಯೇ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ನಿವಾಸಿಯಾಗಿರುವ ಮೌನೇಶ್, ಗುಡಿಬಂಡೆ ಮೂಲದ ನಿರ್ಮಲ ಕೊಲೆಯಾಗಿರುವಂತ ಮಹಿಳೆ. ತನ್ನ ಪತಿ ತವರಿಗೆ ಹೋಗಿದ್ದಾಗ ಈತ ನಿರ್ಮಲ ಎನ್ನುವ ಮತ್ತೊಬ್ಬ ಮಹಿಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಯಾವಾಗ…

Read More

ಕಲಬುರ್ಗಿ : ಇರಾನ್ ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಮೇಲು ಬೀರಿದೆ. ಹಾಗಾಗಿ ಭಾರತದಲ್ಲಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು ಇದೀಗ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ವಿಚಾರವಾಗಿ ಕಲ್ಬುರ್ಗಿಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಲಿಂಡರ್ ದರ ಏರಿಕೆ ಬಗ್ಗೆ ಬಿಜೆಪಿಯವರ ಬಳಿ ಕೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ. ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು ವಿಜಯ ರಶ್ಮಿಕ ಭೇಟಿ ಆಗೋಕೆ ಪ್ರಧಾನಿ ಮೋದಿಗೆ ಸಮಯವಿದೆ. ನಾಳೆ ಭಾರತ ನ್ಯೂಜಿಲೆಂಡ್ ಫೈನಲ್ ಪದ್ಯ ವೀಕ್ಷಣೆಗೆ ಕೂಡ ಅವರು ಹೋಗಬಹುದು. ಕೇಂದ್ರ ಸರ್ಕಾರದವರು ವಿದೇಶಾಂಗ ನೀತಿಯನ್ನು ಅಡ್ಡ ಇಟ್ಟಿದ್ದಾರೆ. ದೆಹಲಿಗೆ ಬಂದು ಯುಎಸ್ಎ ವಿದೇಶಾಂಗ ಉಪ ಕಾರ್ಯದರ್ಶಿ ಹೇಳುತ್ತಾರೆ.ಭಾರತವನ್ನು ಚೀನಾದಷ್ಟು ಬೆಳೆಯುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ. ಇದನ್ನು ಕೇಂದ್ರ ಸರ್ಕಾರದ ಒಬ್ಬರಾದರೂ ಮಂತ್ರಿ ವಿರೋಧಿಸಿದರ? ಯಾಕೆ ಭಾರತದ ಸಚಿವರು ವಿರೋಧ ಮಾಡುತ್ತಿಲ್ಲ? ನೇರವಾಗಿ ಮೋದಿ ಹಾಗೂ ಭಾರತದ ಮರ್ಯಾದೆ ಹಾಳಾಗುತ್ತಿದೆ. ಇವಾಗ ಆರ್ ಎಸ್ ಎಸ್ ನವರು ಎಲ್ಲಿದ್ದಾರೆ? ಎಪ್ ಸ್ಟೀನ್ ಫೈಲ್ಸ್…

Read More

ಬೆಂಗಳೂರು : ಡಾಗ್ ಸತೀಶ್ ಗೆ ಬೆದರಿಕೆ ಹಾಕಿ ಅಶ್ಲೀಲವಾಗಿ ನಿಂದಿಸಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ಮತ್ತೊಂದು fir ದಾಖಲಾಗಿದೆ. ಡಾಗ್ ಸತೀಶ್ ದೂರನ್ನು ಆದರಿಸಿ ಪೊಲೀಸರು ಇದೀಗ ರಜೆತ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ರಜತ್ ಹಾಗೂ ಧನರಾಜ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದಕ್ಕೆ ಬೆದರಿಕೆ ಹಾಕಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ.

Read More

ದಕ್ಷಿಣಕನ್ನಡ : ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಸಮೀಪದ ನೂಜಿಯಲ್ಲಿ ಶುಕ್ರವಾರ ಸಂಜೆ ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸುಡುಮದ್ದು ತಯಾರಿಕಾ ಘಟಕದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸರ್ಕಾರಿ ಜಮೀನಿನಲ್ಲಿ ಸ್ಥಳೀಯ ನಿವಾಸಿಯಾದ ಆರೋಪಿ ಅಬ್ದುಲ್ ಗಫೂರ್ ಎಂಬಾತ ಅಕ್ರಮವಾಗಿ ಶೆಡ್ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು ತಯಾರಿಸಿ, ಅಕ್ರಮವಾಗಿ ಸಂಗ್ರಹಿಸಿದ್ದ. ಈ ಸುಡುಮದ್ದುಗಳು ಸ್ಪೋಟಗೊಂಡಿದೆ. ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮರಗಳು ಸುಟ್ಟು ಹೋಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿತ ಅಬ್ದುಲ್ ಗಫೂರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಬೆಂಗಳೂರು : ಹೈಕಮಾಂಡ್ ಹೇಳುವವರೆಗೂ ಬಜೆಟ್ ಮಂಡಿಸುತ್ತಾನೆ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ‌ ಮೂಲಕ ಬಜೆಟ್ ಅಧಿವೇಶನದ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ಒಂದು ಹೇಳಿಕೆ ಮತ್ತೆ ಕಿಚ್ಚು ಹೊತ್ತಿಸಿದೆ. ಬಜೆಟ್ ಬಳಿಕ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಆಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಸಿಎಂ ಸಿದದರಾಮಯ್ಯ ಆಪ್ತರು ಐದು ವರ್ಷ ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿ ಇರುತ್ತಾರೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರು ಅಧಿಕಾರ ಹಸ್ತಾಂತರದ ಮಾತನ್ನು ಆಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿರುವ ಮಾತು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಬಜೆಟ್ ನಲ್ಲಿ ಖಾಲಿ ಹುದ್ದೇಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುದೆಂದು ತಿಳಿಸಲಾಗಿದೆ. ಕಾರಣಾಂತರಗಳಿಂದ ವಿಳಂಬಗಳಾಗಿದ್ದು, ಈ ವರ್ಷ 56432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ವಿಳಂಬವಾಗಿದ್ದರ ಕಾರಣ, ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ…

Read More

ಬಳ್ಳಾರಿ : ಹೂವಿನಹಡಗಲಿಯ ಬೀರಬ್ಬಿಯಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಚೀಲದಲ್ಲಿ ಪೀಸ್ ಪೀಸ್ ಆಗಿ ಸಿಕ್ಕ ವ್ಯಕ್ತಿಯ ಮೃತದೇಹದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಈ ಪ್ರಕರಣದಲ್ಲಿ ಆರೋಪಿ ಎಂಬುದು ಗೊತ್ತಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬೀರಬ್ಬಿ ಗ್ರಾಮದ ಬೀರೇಶ (25) ಕೊಲೆಯಾಗಿದ್ದ ಯುವಕ. ಆತನ ತಂದೆ ಲಕ್ಷ್ಮಪ್ಪ (55) ಹತ್ಯೆಗೈದ ಆರೋಪಿಯಾಗಿದ್ದಾನೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಕುಮ್ಮಕ್ಕು ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಆರೋಪಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಸುಮಾರು 15 ದಿನಗಳ ಹಿಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದಿದ್ದ. ಎರಡು ದಿನಗಳ ಹಿಂದೆ ವಾಸನೆ ಬಂದಿದ್ದು, ಸ್ಥಳೀಯರು ನೋಡಿದಾಗ ಬೀರೇಶನ ಶವ ಗುರುತು ಸಿಗದಂತೆ ಕೊಳೆತ ಸ್ಥಿತಿಯಲ್ಲಿ ಮೂಳೆಗಳು ಮಾತ್ರ ಪತ್ತೆಯಾಗಿದ್ದವು. ಪ್ರಕರಣ ಬೆಳಕಿಗೆ ಬಂದು 24 ಗಂಟೆಯಲ್ಲಿ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ತಾನೇ ಕೊಲೆಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ…

Read More