ಮಂಡ್ಯ : ಜಿಲ್ಲೆಯಲ್ಲಿನ ಪುಸ್ತಕದ ಮನೆಯೊಂದು ಜಿಲ್ಲೆ ಮತ್ತು ರಾಜ್ಯವನ್ನು ದಾಟಿ ರಾಷ್ಟ್ರದ ರಾಜಧಾನಿ ದೆಹಲಿವರೆವಿಗೂ ತಲುಪಿರುವುದು ಶ್ಲಾಘನೀಯ ಕಾರ್ಯವೆಂದು ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರವೆಂದು ವಿಶ್ರಾಂತ ಐಎಎಸ್ ಅಧಿಕಾರಿ ಹಾಗೂ ರಾಯಚೂರು ಸಂಸದ ಜಿ.ಕುಮಾರನಾಯಕ್ ಅಭಿಪ್ರಾಯ ಪಟ್ಟರು.
ಮದ್ದೂರು ನಗರದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ವತಿಯಿಂದ ಎಚ್.ಕೆ.ವೀರಣ್ಣಗೌಡರ 128ನೇ ಜಯಂತಿ ಹಾಗೂ ಮಾಹಿತಿ ತಂತ್ರಜ್ಞಾನದ ಹರಿಹಾರ ಡಾ| ಎಸ್.ಎಂ.ಕೃಷ್ಣರವರ 95ನೇ ಜನ್ಮದಿನದ ಅಂಗವಾಗಿ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಚ್.ಕೆ.ವೀರಣ್ಣಗೌಡ ಅವರ ಜೀವನ ಚರಿತ್ರೆಯೇ ಒಂದು ವಿಶ್ವ ವಿದ್ಯಾಲಯದಂತಿದ್ದು ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಪತ್ರಿಕೆಯನ್ನೇ ಹೊರತಂದ ದುರೀಣರೆಂದು ಬಣ್ಣಿಸಿದರು.
ಸ್ವಾತಂತ್ರ್ಯದ ಕಿಚ್ಚು ಹೆಚ್ಚಲು ಅಂದಿನ ಹೋರಾಟಗಳು ತಾರಕಕ್ಕೇರಲು ಎಚ್.ಕೆ.ವೀರಣ್ಣಗೌಡ ಶ್ರಮ, ಸಂಘಟನೆ ಇಂದಿಗೂ ಅನುಕರಣೀಯ ಕಾರ್ಯವೆಂದು ಬಣ್ಣಿಸಿದರು.
ಹಿರಿಯ ಮುತ್ಸದ್ಧಿ ಸುಸಂಸ್ಕೃತ ರಾಜಕಾರಣಿ ಎಲ್ಲಾ ಸ್ಥರದ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಕಾರ್ಯಸಾಧು ಕೆಲಸಗಳಿಗೆ ಒತ್ತು ನೀಡುತ್ತಿದ್ದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವಧಿಯಲ್ಲಿ ತಾವು ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಸೇವೆಗಳಲ್ಲಿ ಕೈಗೊಂಡ ಪ್ರಗತಿಪರ ಕಾರ್ಯಗಳಿಗೆ ಒತ್ತು ನೀಡಿದ ಕೃಷ್ಣ ಅವರನ್ನು ನೆನೆದರು.
ವಿಧಾನಸಭೆ ಸೇರಿದಂತೆ ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ, ವಿದೇಶಾಂಗ ವ್ಯವಹಾರ ಇನ್ನಿತರೆ ಹುದ್ದೆಗಳನ್ನು ಅನುಭವಿಸಿದ ಕೃಷ್ಣ ರವರ ರಾಜಕೀಯ ಜಾಣ್ಮೆ ಸರ್ವಕಾಲಕ್ಕೂ ಅನುಕರಣೀಯವೆಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ| ಜಯಪ್ರಕಾಶ್‌ಗೌಡ ತಮ್ಮ ನುಡಿನಮನದ ವೇಳೆ ಕರ್ನಾಟಕ ಏಕೀಕರಣ ಪೂರ್ಣಗೊಂಡಿಲ್ಲವೆಂದು ಉತ್ತರ ಮತ್ತು ದಕ್ಷಿಣ ಭಾಗಗಳು ಸಾಂಸ್ಕೃತಿಕ ಮತ್ತು ಇನ್ನಿತರೆ ವಿಚಾರಗಳಲ್ಲಿ ಇಂದಿಗೂ ಏಕೀಕರಣವಾಗಿಲ್ಲವೆಂದು ಪ್ರತ್ಯೇಕತೆಯ ಕೂಗು ಎಲ್ಲೋ ಒಂದು ಕಡೆ ಕೇಳಿಸುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.
ರಾಜ್ಯದ ಉತ್ತರ, ದಕ್ಷಿಣ ಭಾಗದ ಎಲ್ಲಾ ಚಟುವಟಿಕೆಗಳು ಪರಸ್ಪರ ವಿನಿಮಯವಾಗುವ ಜತೆಗೆ ಅಭಿವೃದ್ಧಿ ಸಮಾನತೆಯ ಹಿರಿಯರಾದ ಎಚ್.ಕೆ.ವೀರಣ್ಣಗೌಡ ಎಸ್.ಎಂ.ಕೃಷ್ಣ ಅವರ ಆಡಳಿತ ಅನುಕರಣೀಯವೆಂದು ಬಣ್ಣಿಸಿದರು. ಅಂದಿನ ರೈತ ಚಳುವಳಿಗಳು ಇಂದು ಮತ್ತು ಮುಂದೆಯೂ ಹಸಿರಾಗೇ ಉಳಿಯುವುದಾಗಿ ಇಂದಿನ ಹೋರಾಟಗಳು ಕಳೆದುಕೊಂಡಿರುವ ಕುರಿತು ವಿಷಾಧಿಸಿದರು.
ಪದ್ಮಶ್ರೀ ಪುರಸ್ಕೃತ ಪಾಂಡವಪುರ ಪುಸ್ತಕ ಮನೆಯ ಪದ್ಮಶ್ರೀ ಅಂಕೇಗೌಡ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಅಂಕೇಗೌಡ ರವರಿಗೆ ಗಣ್ಯರು ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ವಿತರಿಸಿ ಅಭಿನಂದಿಸಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಎಸ್.ಸಂತೋಷ್, ಆರ್.ರುಕ್ಮಿಣಿ, ಎಂ.ರಾಜಣ್ಣ, ಜಿ.ಎಸ್.ಕಲಾವತಿ ಅವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.
ಸಂಸ್ಥೆಯ ನಿವೃತ್ತ ನೌಕರರಾದ ವಿಶ್ರಾಂತ ಪ್ರಾಂಶುಪಾಲ ಪ್ರೊ| ಪ್ರಕಾಶ್ ಮತ್ತು ನಗರದ ಸ್ಥಳೀಯ ಜೀವನ ಸಾಧನೆಗಾಗಿ ಬೇಕರಿ ಉದ್ಯಮಿ ಕೈಲಾಶ್, ಜಿ.ಗಣೇಶ್, ಎಂ.ಎನ್.ಅರುಣ, ಅಶೋಕ್, ಕಟ್ಟಡ ಕಾರ್ಮಿಕ ಗುಂಡರವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ| ನಿಶ್ಚಲಾನಂದನಾಥ ಶ್ರೀಗಳು ಕಾರ್ಯಕ್ರಮದ ಔಚಿತ್ಯ ಮತ್ತು ಸಾಧಕರಾದ ಎಚ್.ಕೆ.ವೀರಣ್ಣಗೌಡ, ಡಾ| ಎಸ್.ಎಂ.ಕೃಷ್ಣ ಹಾಗೂ ಪದ್ಮಶ್ರೀ ಪುರಸ್ಕೃತ ಪುಸ್ತಕದ ಮನೆ ಅಂಕೇಗೌಡರ ಪರಿಶ್ರಮ ಸಾಧನೆಯ ಹಾದಿ ಕುರಿತಾಗಿ ಬಣ್ಣಿಸಿದರು.
ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು, ಅಧ್ಯಕ್ಷ ಎಂ.ಸ್ವರೂಪ್‌ಚಂದ್, ಕಾರ್ಯದರ್ಶಿ ಅಪೂರ್ವಚಂದ್ರ, ಜಿ.ಎಸ್.ಶಿವರಾಮು, ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜು ಪದವಿ ಕಾಲೇಜು ಪ್ರಾಂಶುಪಾಲ ಡಾ| ಎಸ್.ಪಿ.ಕಿರಣ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಯು.ಎಸ್.ಶಿವಕುಮಾರ್ ಇತರರಿದ್ದರು.
ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ
ಹೃದಯಾಘಾತದ ಮೊದಲ ಲಕ್ಷಣಗಳನ್ನು ಗುರುತಿಸುವುದು ಹೇಗೆ? ಕಾರ್ಡಿಯಾಲಜಿಸ್ಟ್‌ಗಳ ಮಾಹಿತಿ ಇಲ್ಲಿದೆ








