ಮಂಡ್ಯ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮದ್ದೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮದ್ದೂರು ನಗರದ ಸಂಘದ ಕಛೇರಿಯಲ್ಲಿ 2024-2029 ನೇ ಸಾಲಿನ ಉಳಿದ ಅವಧಿಗೆ ಭಾನುವಾರ ಮೂರು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಪ್ರಕ್ರಿಯೆ ವೇಳೆಗೆ ಅಧ್ಯಕ್ಷ ಸ್ಥಾನಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬ್ಯಾಡರಹಳ್ಳಿ ಅಂಕೇಗೌಡ, ರಾಜ್ಯ ಪರಿಷತ್ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ಕೆ.ಮಂಜು ಹಾಗೂ ಖಜಾಂಚಿ ಸ್ಥಾನಕ್ಕೆ ಆರೋಗ್ಯ ಇಲಾಖೆಯ ಹೆಚ್.ಎಮ್.ಮಣಿ ಅವರುಗಳು ಮಾತ್ರ ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಈ ವೇಳೆ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಶಂಭುಗೌಡ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಬ್ಯಾಡರಹಳ್ಳಿ ಅಂಕೇಗೌಡ ಮಾತನಾಡಿ, ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರ ಭವನವನ್ನು ವಿಸ್ತರಣೆ ( ಮೇಲ್ದರ್ಜೆಗೆ )ನಿರ್ಮಾಣ ಮಾಡಬೇಕೆಂಬ ಕನಸಿದ್ದು, ಶಾಸಕರು ಹಾಗೂ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಿ ಮೊದಲ ಆದ್ಯತೆ ನೀಡುತ್ತೇನೆ. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಪಡಿಸಿ ಹಳೇ ಪಿಂಚಣಿ ಮರು ಜಾರಿಗಾಗಿ ಹೋರಾಟದ ಜೊತೆಗೆ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಎಲ್ಲಾ ಪದಾಧಿಕಾರಿಗಳು ನಿರ್ದೇಶಕರ ಸಹಕಾರ ಮಾರ್ಗದರ್ಶನದೊಂದಿಗೆ ಮದ್ದೂರು ತಾಲೂಕು ಸಂಘವನ್ನು ರಾಜ್ಯದಲ್ಲಿಯೇ ಮಾದರಿ ಸಂಘವನ್ನಾಗಿಸಲು ಶ್ರಮಿಸುತ್ತೇನೆ ಎಂದರು.
ಚುನಾವಣಾಧಿಕಾರಿಯಾಗಿ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎಸ್.ಶಂಭುಗೌಡ ಚುನಾವಣಾ ಪ್ರಕ್ರಿಯೆ ನಡೆಸಿದರು.
ಇದೇ ವೇಳೆ ನೂತನ ಅಧ್ಯಕ್ಷ ಬ್ಯಾಡರಹಳ್ಳಿ ಅಂಕೇಗೌಡ ಅವರನ್ನು ಪದಾಧಿಕಾರಿಗಳು ಮತ್ತು ಸಹೋದ್ಯೋಗಿ ಮಿತ್ರರು ಅಭಿನಂದಿಸಿದರು.
ಬಳಿಕ ಸಂಘದ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಶಾಸಕ ಕೆ.ಎಂ.ಉದಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಿವನಂಜೇಗೌಡ, ಕಾರ್ಯದರ್ಶಿ ಟಿ.ಬಿ.ಸತೀಶ್ ಕುಮಾರ್ ನಿರ್ದೇಶಕರಾದ ಮರೀಗೌಡ, ಯೋಗಾನಂದ, ನಾಗೇಂದ್ರ ಕುಮಾರ್, ಶ್ರೀನಿವಾಸ್, ಸಂತೋಷ್, ಕೆ.ಟಿ.ಮಂಜುನಾಥ್, ಎಸ್.ವಿ.ರಾಮಲಿಂಗಯ್ಯ, ಮೋಹನ್, ಶರತ್, ಸಂದೀಪ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ
ಹೃದಯಾಘಾತದ ಮೊದಲ ಲಕ್ಷಣಗಳನ್ನು ಗುರುತಿಸುವುದು ಹೇಗೆ? ಕಾರ್ಡಿಯಾಲಜಿಸ್ಟ್‌ಗಳ ಮಾಹಿತಿ ಇಲ್ಲಿದೆ








