ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಒಡಿಶಾ ಕರಾವಳಿಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ದೀರ್ಘ ವ್ಯಾಪ್ತಿಯ ಭೂ ದಾಳಿ ಕ್ರೂಸ್ ಕ್ಷಿಪಣಿಯ (Long Range Land Attack Cruise Missile – LRLACM) ಪರೀಕ್ಷಾರ್ಥ ಹಾರಾಟವನ್ನು ಸೋಮವಾರ ಯಶಸ್ವಿಯಾಗಿ ನಡೆಸಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಯೋಜಿಸಿದ್ದ ವಿವಿಧ ಟ್ರ್ಯಾಕಿಂಗ್ ಉಪಕರಣಗಳು ಸಂಗ್ರಹಿಸಿದ ದತ್ತಾಂಶದ ಪ್ರಕಾರ, ಪರೀಕ್ಷೆಯ ಎಲ್ಲಾ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರೈಸಲಾಗಿದೆ.
ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ
ಈ ಎಲ್‌ಆರ್‌ಎಲ್‌ಎಸಿಎಮ್ (LRLACM) ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾದ ಕ್ಷಿಪಣಿಯಾಗಿದ್ದು, ಇದರ ಎಲ್ಲಾ ಉಪ-ವ್ಯವಸ್ಥೆಗಳನ್ನು (Sub-systems) ಡಿಆರ್‌ಡಿಒದ ವಿವಿಧ ಪ್ರಯೋಗಾಲಯಗಳು ಮತ್ತು ಭಾರತೀಯ ಕೈಗಾರಿಕಾ ಪಾಲುದಾರರು ಅಭಿವೃದ್ಧಿಪಡಿಸಿದ್ದಾರೆ. ಬೆಂಗಳೂರಿನಲ್ಲಿರುವ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADE) ಇದರ ಪ್ರಮುಖ (ನೋಡಲ್) ಪ್ರಯೋಗಾಲಯವಾಗಿದೆ.








