Author: kannadanewsnow05

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಆರೋಪಿಗಳಾದ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ಧನರಾಜ್‌, ನಂದೀಶ್‌ ಮತ್ತು ವಿ.ವಿನಯ್‌ ಅವರಿಗೆ ಜಾಮೀನು ಮಂಜೂರು ಮಾಡಿ ನಗರದ 56ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು 2024ರ ಡಿ.23ರಂದು ಆದೇಶ ಹೊರಡಿಸಿದೆ. ಈ ಆದೇಶ ಪ್ರಶ್ನಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು (ರಾಜ್ಯ ಸರ್ಕಾರ) ನಾಲ್ವರು ಆರೋಪಿಗಳಿಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ಸರ್ಕಾರಿ ವಕೀಲರು, ಪ್ರಕರಣವು ಅತ್ಯಂತ ಹೀನವಾಗಿದೆ. ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಪ್ರಕರಣದ 7 ಆರೋಪಿಗಳಿಗೆ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಇದರಿಂದ ಆ ಏಳು ಮಂದಿ ಆರೋಪಿಗಳು ಮರಳಿ ಜೈಲು ಸೇರಿದ್ದಾರೆ. ಸುಪ್ರೀಂಕೋರ್ಟ್‌…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದರು. ಇದರ ಪೆನ್ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ಒಂದು ದೆಹಲಿ ಪ್ರಯಾಣ ಕುತೂಹಲ ಕೆರಳಿಸಿದೆ. ಹೌದು ನಾಳೆ ಡಿಕೆ ಶಿವಕುಮಾರ್‌ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಕಲಬುರಗಿಯ ಚಿತ್ತಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನೆಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಕಲಬುರಗಿಯಿಂದ ದೆಹಲಿಗೆ ಜೊತೆಯಾಗಿ ಪ್ರಯಾಣಿಸಲಿದ್ದಾರೆ. ನೀರಾವರಿ ಇಲಾಖೆ ಕೆಲವು ಕೆಲಸದ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೂ ಬಜೆಟ್ ಮಂಡನೆ ಬೆನ್ನಲ್ಲೇ, ಹಾಗೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಇರುವಾಗಲೇ, ಎಐಸಿಸಿ‌ ಅಧ್ಯಕ್ಷರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Read More

ಬೆಂಗಳೂರು : ಕಾಮಗಾರಿ ಒಂದಕ್ಕೆ ಗುತ್ತಿಗೆದಾರನ ಬಳಿ 5ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಇಂದು ಬಿಜೆಪಿ ಶಾಸಕ ಚಂದ್ರು ಲಮಾಣಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಗೆ ಚಂದ್ರು ಲಮಾಣಿ ರಾಜಕೀಯ ವಕೀಲರಿಂದ ಲಿಖಿತ ವಾದಾಂಶ ಸಲ್ಲಿಕೆ ಆಯಿತು. ಬಳಿಕ ಮಾರ್ಚ್ 11ಕ್ಕೆ ಜಾಮೀನು ಅರ್ಜಿ ಸಂಬಂಧ ಕೋರ್ಟ್ ಇದೆ ವೇಳೆ ಆದೇಶ ಕಾಯ್ದಿರಿಸಿತು.

Read More

ಮೈಸೂರು : ಒಂದು ಕಡೆ ದಾಖಲೆಯ 17ನೇ ಬಾರಿ ಬಜೆಟನ್ನು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ. ಇನ್ನೊಂದು ಕಡೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.ಇದರ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಒಂದು ವೇಳೆ ಸಿಎಂ ಸ್ಥಾನ ಬಿಡು ಎಂದರೆ ತಕ್ಷಣವೇ ಬಿಡುತ್ತೇನೆ. ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ನೀಡಿದರು. ಮೈಸೂರಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಈಗ 17ನೇ ಬಜೆಟ್​ ಮಂಡಿಸಿದ್ದೇನೆ. ಕರ್ನಾಟಕದಲ್ಲಿ ಹೆಚ್ಚು ಬಜೆಟ್​ ಮಂಡಿಸಿರುವುದು ನಾನೇ. ಹೈಕಮಾಂಡ್​ ಅವಕಾಶ ಕೊಟ್ಟರೆ ಇನ್ನು ಮುಂದೆಯೂ ಬಜೆಟ್​ ಮಂಡಿಸುತ್ತೇನೆ. ಅವರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೈಕಮಾಂಡ್​ ಮೇಲೆ ವಿಶ್ವಾಸ ಇದೆ. ಅವರ ಮೇಲೆ ವಿಶ್ವಾಸ ಇರಲೇಬೇಕು. ಅದನ್ನು ಬಿಟ್ಟು ನಿಮ್ಮ ಮೇಲೆ ವಿಶ್ವಾಸ ಇಡುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲದೇ, ಬಜೆಟ್​ ಮಂಡನೆ ಮೂಲಕ ರೆಕಾರ್ಡ್​ ಮುರಿಯುವುದು ಮುಖ್ಯವಲ್ಲ. ಜನರು ಅವಕಾಶ ಕೊಟ್ಟರೆ ಮುಂದೆಯೂ ಬಜೆಟ್​ ಮಂಡಿಸುತ್ತೇನೆ. ನೀವು ಏನೇ ಪ್ರಶ್ನೆ…

Read More

ಮೈಸೂರು : ಅಧಿಕಾರ ಬಲಾಢ್ಯರ ಕೈಯಲ್ಲಿ ಇರಬಾರದು, ಎಲ್ಲರನ್ನೂ ಪ್ರೀತಿಸುವವರ ಕೈಯಲ್ಲಿ ಅಧಿಕಾರ ಇರಬೇಕು ಎಂದು ಮೈಸೂರು ತಾಲೂಕಿನ ಪಿಲ್ಲಹಳ್ಳಿಯ ದಂಡಿನ ಮಾರಮ್ಮ ದೇಗುಲದಲ್ಲಿ ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕಷ್ಟಕಾಲ ಬಂದಾಗ ಮಾತ್ರ ದೇವರನ್ನು ಪ್ರಾರ್ಥನೆ ಮಾಡಬೇಡಿ. ಎಲ್ಲಾ ಕಾಲದಲ್ಲೂ ದೇವರನ್ನು ಪ್ರಾರ್ಥಿಸಿ. ದೇವನೊಬ್ಬ ನಾಮ ಹಲವು ಅನ್ನೋದನ್ನು ಎಲ್ಲರೂ ತಿಳಿದುಕೊಳ್ಳಿ. ದೇವರು ಒಬ್ಬರೇ ಅವರು ಎಲ್ಲಾ ಕಡೆ ಇದ್ದಾರೆ ನಮ್ಮಲ್ಲೂ ಇದ್ದಾರೆ. ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಮಾತ್ರ ದೇವರು ಒಲಿಯುತ್ತಾನೆ. ಅಂತಲ್ಲ. ಕೆಟ್ಟದ್ದನ್ನು ಬಯಸಬಾರದು ಕೆಟ್ಟದಾಗಲಿ ಅಂದುಕೊಳ್ಳಬಾರದು ಎಲ್ಲರಿಗೂ ಒಳ್ಳೆಯದಾಗಲಿ ಅಂದಾಗ ಮಾತ್ರ ದೇವರು ಒಲಿಯುತ್ತಾನೆ. ಒಬ್ಬರಿಗೆ ಮಾತ್ರ ಒಳ್ಳೆಯದು ಮಾಡು ಅಂದರೆ ಒಳ್ಳೆಯದಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನನ್ನ ವ್ಯಕ್ತಿತ್ವದಿಂದ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆದೆ. ನೀವು ಆಶೀರ್ವಾದ ಮಾಡಿದ್ದರಿಂದಲೇ ಎಂಟು ಚುನಾವಣೆಯಲ್ಲಿ ಗೆದ್ದಿದ್ದೇನೆ ನೀವು ಗೆಲ್ಲಿಸಿದ್ದರಿಂದಲೇ ನಾನು ಸಿಎಂ ಆಗಲು ಸಾಧ್ಯವಾಯಿತು. ಹೀಗಾಗಿ…

Read More

ಮೈಸೂರು : ನನ್ನ ವ್ಯಕ್ತಿತ್ವದಿಂದ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆದೆ. ನೀವು ಆಶೀರ್ವಾದ ಮಾಡಿದ್ದರಿಂದಲೇ ಎಂಟು ಚುನಾವಣೆಯಲ್ಲಿ ಗೆದ್ದಿದ್ದೇನೆ ನೀವು ಗೆಲ್ಲಿಸಿದ್ದರಿಂದಲೇ ನಾನು ಸಿಎಂ ಆಗಲು ಸಾಧ್ಯವಾಯಿತು. ಹೀಗಾಗಿ ನಾನು ಮೈಸೂರು ತಾಲೂಕಿನ ಜನರನ್ನು ಮರೆಯುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಯಾವಾಗಲೂ ಇರಲಿ ಎಂದು ಪಿಲ್ಲಹಳ್ಳಿಯ ದಂಡಿನ ಮಾರಮ್ಮ ದೇಗುಲದಲ್ಲಿ ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಚಾಮುಂಡೇಶ್ವರಿ ವರುಣ ಕ್ಷೇತ್ರದ ಜನರಿಗೆ ಕೃತಜ್ಞತೆಯಿಂದ ಇರುವೆ, ವಿಶೇಷವಾಗಿ ಪಿಲ್ಲಹಳ್ಳಿ ಜನ ಯಾವತ್ತೂ ಕೈ ಬಿಟ್ಟಿಲ್ಲ. ದೇವರು ದೇವಸ್ಥಾನದ ಒಳಗೆ ಇರುತ್ತಾನೆ ಅನ್ನೋದು ನಂಬಿಕೆ ಅಷ್ಟೇ. ಪೂಜೆ ಮಾಡುವುದರಿಂದ ಒಳ್ಳೆಯದು ಆಗುತ್ತೆ ಅನ್ನೋ ನಂಬಿಕೆ ಇದೆ. ನಾನು ಅದಕ್ಕೆ ವಿರೋಧವಾಗಿಲ್ಲ. ನಮ್ಮೂರಲ್ಲೂ ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾನು ಚಿಕ್ಕವನಿದ್ದಾಗ ತಂಬಿಟ್ಟು ಆರತಿ ತೆಗೆದುಕೊಂಡು ಹೋಗುತ್ತಿದ್ದೆ. ಆಗ ತಂಬಿಟ್ಟು ಕೊಬ್ಬರಿ ಮಿಠಾಯಿ ತಿನ್ನುವುದೇ ಮಜಾ. ಕಷ್ಟಕಾಲ ಬಂದಾಗ ಮಾತ್ರ ದೇವರನ್ನು ಪ್ರಾರ್ಥನೆ ಮಾಡಬೇಡಿ. ಎಲ್ಲಾ ಕಾಲದಲ್ಲೂ…

Read More

ಬೆಂಗಳೂರು : ನಿನ್ನೆ ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಾರಿ ಬಜೆಟ್ ಮಂಡನೆ ಮಾಡಿದರು.ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ ಮಾಡುತ್ತೇನೆ. ಅವರು ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಎಲ್ಲದೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಲ್ಲಿ ಮಾತನಾಡಿದ ಅವರು, ಯಾರೊ ಏನೋ ಹೇಳುತ್ತಾರೆ ಎಂಬುದು ನನಗೆ ಮುಖ್ಯ ಅಲ್ಲ. ನನಗೆ ಹೈಕಮಾಂಡ್ ತೀರ್ಮಾನವಷ್ಟೇ ಮುಖ್ಯ. ಹೈಕಮಾಂಡ್ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಮೈಸೂರಿನ ಜನ ಮಾತ್ರ ಅಲ್ಲ, ಇಡೀ ನಾಡಿನ ಜನ ನಾನು ಇರಬೇಕೆಂದು ಬಯಸಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಮಾಡುವುದು ಹೈಕಮಾಂಡ್. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಬಜೆಟ್‌ನ ದಾಖಲೆಗಳ ಮೇಲೆ ನಂಬಿಕೆ ಇಲ್ಲ. ಆದರೆ ಇನ್ನರೆಡು ಬಜೆಟ್ ಮಂಡಿಸುವ ಅವಕಾಶ ಸಿಕ್ಕರೆ ಮಂಡಿಸುತ್ತೇನೆ. ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ಈ ವಿಚಾರದಲ್ಲಿ ಏನೇ ಹಿಂದೆ ಮುಂದೆ ಪ್ರಶ್ನೆ ಕೇಳಿದರು ನನ್ನ ಉತ್ತರ ಹೈಕಮಾಂಡ್. ಜನ ಅವಕಾಶ ಕೊಟ್ಟರೆ ಮಂಡಿಸುತ್ತೇನೆ ಎಂದಿದ್ದಾರೆ.

Read More

ಬೆಂಗಳೂರು: ದೇಶಾದ್ಯಂತ ಸುದ್ದಿ ಪ್ರಸಾರ ಮತ್ತು ಲೇಖನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಓದುಗರಿಗೆ ಮತ್ತು ಬರಹಗಾರರಿಗೆ ಹೊಸ ಅವಕಾಶವನ್ನು ನೀಡುತ್ತಿದೆ ಖ್ಯಾತ ಡಿಜಿಟಲ್ ಮಾಧ್ಯಮ ‘ಕನ್ನಡ ನ್ಯೂಸ್ ನೌ’ (Kannada News Now). ನಿಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳು ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸುವ ಮೂಲಕ ನೀವು ಹಣವನ್ನು ಸಂಪಾದಿಸುವ ಹೊಸ ಅವಕಾಶ ನಿಮಗಾಗಿ ಇಲ್ಲಿದೆ. ಇದೀಗ ಕೇವಲ ಸುದ್ದಿಯನ್ನು ಓದುವುದು ಅಷ್ಟೇ ಅಲ್ಲ, ನೀವು ಕೂಡ ಆ ಸುದ್ದಿಯ ಹಿಂದಿನ ಲೇಖಕರಾಗಬಹುದು. ನಿಮ್ಮೂರಿನಲ್ಲಿ ನಡೆಯುವ ಪ್ರಮುಖ ಘಟನೆಗಳು, ವಿಶೇಷ ಲೇಖನಗಳು ಅಥವಾ ಮಾಹಿತಿಗಳನ್ನು ನಮಗೆ ಕಳುಹಿಸುವ ಮೂಲಕ ಹಣ ಗಳಿಸಬಹುದಾಗಿದೆ. ಭಾಗವಹಿಸುವುದು ಹೇಗೆ? ನೀವು ಸುದ್ದಿಯನ್ನು ಬರೆಯುವ ಹಂಬಲ ಹೊಂದಿದ್ದರೆ ಮತ್ತು ಆ ಮೂಲಕ ಸಂಪಾದನೆ ಮಾಡಬೇಕೆಂದು ಬಯಸಿದರೆ, ಈ ಕೂಡಲೇ ನಿಮ್ಮ ಬಗ್ಗೆ ಮಾಹಿತಿಯನ್ನು kannadanewsnow@gmail.com ಗೆ ಮೇಲ್ ಮಾಡಿ. ನಮ್ಮ ತಂಡದ ಮುಖ್ಯಸ್ಥರಾದ ರಂಜಿತ್ ಅವರು ನಿಮ್ಮ ಸಂಪರ್ಕಿಸಲಿದ್ದಾರೆ. ಚಿತ್ರದಲ್ಲಿ ನೀವು ನೋಡಿರುವಂತೆ, ಒಬ್ಬ…

Read More

ಮೈಸೂರು : ಮೈಸೂರು ಜಿಲ್ಲೆ ಟಿ ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರವಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಮೈಸೂರಿನಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು. ರೇಷ್ಮೆ ಕಾರ್ಖಾನೆಯಲ್ಲಿ ನಮ್ಮ ಕ್ಷೇತ್ರದ ಜನರೇ ಕೆಲಸ ಮಾಡುತ್ತಿದ್ದಾರೆ. ನಾವು ಯಾಕೆ ರೇಷ್ಮೆ ಕಾರ್ಖಾನೆ ಮುಚ್ಚುತ್ತೇವೆ. ಸುಮ್ಮನೆ ಕೆಲವರು ಸುಳ್ಳು ಹೇಳಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಂದ ತಾಂತ್ರಿಕ ವರದಿ ಕೇಳಿದ್ದೇವೆ. ಕ್ರೀಡಾಂಗಣದಿಂದ ತೊಂದರೆಯಾದರೆ ಬೇರೆ ಜಾಗ ಹುಡುಕುತ್ತೇವೆ. ನಮಗೆ ಕಾರ್ಖಾನೆಯೂ ಮುಖ್ಯ ಕ್ರೀಡಾಂಗಣವು ಮುಖ್ಯವಾಗಿದೆ. ಕ್ರೀಡಾಂಗಣಕ್ಕಾಗಿ ಕಾರ್ಖಾನೆಯನ್ನು ಎಂದಿಗೂ ಮುಚ್ಚುವುದಿಲ್ಲ ಎಂದು ಮೈಸೂರಿನಲ್ಲ ಯತಿಂದ್ರ ಸಿದ್ಧರಾಮಯ್ಯ ಹೇಳಿಕೆ ನೀಡಿದರು.

Read More

ಮೈಸೂರು : ಬಜೆಟ್ ನಲ್ಲಿ ಸಾಲ ಮಾಡಿದ್ದನ್ನು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದು, ಅಭಿವೃದ್ಧಿಗಾಗಿ ಸಾಲ ಮಾಡಬೇಕಾಗುತ್ತದೆ ಹೀಗಾಗಿ ಸಾಲ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಿನ್ನೆ ಬಜೆಟ್ ನಲ್ಲಿ ಸಾಲ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ರಾಜ್ಯದಲ್ಲಿ ಅಭಿವೃದ್ಧಿಗಾಗಿ ಸಾಲ ಮಾಡಲೇಬೇಕಾಗುತ್ತದೆ. ರಾಜ್ಯದ ಮಿತಿಯ ಒಳಗಡೆ ಸಾಲ ಮಾಡಿದ್ದೇನೆ. ಸಾಲದಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ಅನ್ಯಾಯದಿಂದ ಜನರಿಗೆ ಹೊರೆಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಸಾಲ ಮಾಡಿದ್ದಾರೆ? ಈ ಬಗ್ಗೆ ರಾಜ ಬಿಜೆಪಿ ನಾಯಕರಿಗೆ ಗೊತ್ತಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆಸಿದರು. ನಾನು ಯಾವುದೇ ಒಂದು ವರ್ಗದ ಪರವಾಗಿ ಬಜೆಟ್ ಮಂಡಿಸಿಲ್ಲ. ಇದು ಎಲ್ಲಾ ವರ್ಗದ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Read More