Subscribe to Updates
Get the latest creative news from FooBar about art, design and business.
Author: kannadanewsnow05
ಕೊಡಗು : ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ ಮುಂದುವರೆದಿದ್ದು, ಕಾಡಾನೆ ದಾಳಿಗೆ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಜಲಜಾಕ್ಷಿ (53) ಇದೀಗ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ಈ ಒಂದು ಕಾಡಾನೆ ದಾಳಿ ಘಟನೆಯ ಸಂಭವಿಸಿದೆ. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಲಜಾಕ್ಷಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಬಾಳೆಗೊಂಡಿ ಹಾಡಿ ನಿವಾಸಿ ನಡೆದುಕೊಂಡು ಹೋಗುವಾಗ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಜಲಜಾಕ್ಷಿ ಸ್ಥಳದಲ್ಲಿ ಸಾಬಣ್ಣ ಬಿದ್ದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ACF ಗೋಪಾಲ್ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಬರ್ಬರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ಅವರನ್ನು ಅಪಹರಿಸಿ ಮಾರುಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು 25 ಲಕ್ಷ ರೂಪಾಯಿ ಸುಪಾರಿ ಪಡೆದು ಗೋಪಾಲ್ ಎನ್ನುವ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ತಮಿಳುನಾಡಿನ ಡಂಕಣಿಕೋಟೆಯಲ್ಲಿ ಗೋಪಾಲ ಶವ ಪತ್ತೆಯಾಗಿದೆ. 25 ಲಕ್ಷ ಸುಪಾರಿ ನೀಡಿದ್ದು ರಿಯಲ್ ಎಸ್ಟೇಟ್ ಏಜೆಂಟ್ ಮೋಹನ್ ಎಂದು ತಿಳಿದುಬಂದಿದೆ. ಏಜೆಂಟ್ ಗೋಪಾಲ್ ಕಿಡ್ನಾಪ್ ಆಗುತ್ತದೆ. ಆನೇಕಲ್ ಬಳಿ ಟಾಟಾ ಏಸ್ ಗೆ ಡಿಕ್ಕಿ ಹೊಡೆದು ಗೋಪಾಲನ್ನು ಕಿಡಿಗೇಡಿಗಳು ಅವರ ಮುಖಕ್ಕೆ ಸ್ಪ್ರೇ ಹಾಕಿ ಅಪಹರಿಸುತ್ತಾರೆ. ಬಳಿಕ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಗೋಪಾಲ್ ನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ನಂತರ ತಮಿಳುನಾಡಿನ ಡೆಂಕಣಕೋಟೆಯಲ್ಲಿ ಶವ ಬಿಸಾಡಿದ್ದಾರೆ. ಈ ಕುರಿತು ಆನೇಕಲ್ ಠಾಣೆಗೆ ಗೋಪಾಲ್ ಪತ್ನಿ ದೂರು ಕೊಟ್ಟಿದ್ದಾರೆ. ಮೋಹನ್ ಬಾಬು, ಹರೀಶ್ ಕಿರಣ್ ವಿರುದ್ಧ ಈ ಒಂದು ಆರೋಪ ಬಂದಿದ್ದು ಇದೀಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. 9 ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ…
ನವದೆಹಲಿ : ಇರಾನ್ ಅಮೇರಿಕಾ ಯುದ್ಧದ ಬಗ್ಗೆ ಜೈ ಶಂಕರ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅರಬ್ ರಾಷ್ಟ್ರಗಳಲ್ಲಿರುವ ಭಾರತೀಯರ ರಕ್ಷಣೆಗೆ ಬದ್ಧರಾಗಿದ್ದು, ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗಿದೆ. ಅರ್ಮೆನಿಯ ಮೂಲಕ ಕೆಲ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ.ಟೆಹ್ರಾನನ ಭಾರತೀಯ ರಾಯಭಾರಿ ಕಚೇರಿ ಸುಸ್ಥಿತಿಯಲ್ಲಿದೆಎಂದು ಪ್ರತಿಕ್ರಿಯೆ ನೀಡಿದರು. ಜೈಶಂಕರ್ ಅವರ ಇಂದಿನ ಹೇಳಿಕೆಯ ಪ್ರಮುಖಾಂಶಗಳು ಇಲ್ಲಿವೆ: 1. ಸರಬರಾಜು ಸರಪಳಿಗೆ ಪೆಟ್ಟು: ಯುದ್ಧದ ಕಾರಣದಿಂದಾಗಿ ಸಮುದ್ರ ಮಾರ್ಗದ ಸಾಗಾಟ ಮತ್ತು ಅಂತರಾಷ್ಟ್ರೀಯ ವ್ಯಾಪಾರಕ್ಕೆ ಭಾರಿ ಅಡೆತಡೆ ಉಂಟಾಗಿದೆ. “ಇದು ಕೇವಲ ಒಂದು ಪ್ರಾದೇಶಿಕ ಬಿಕ್ಕಟ್ಟಲ್ಲ, ಬದಲಿಗೆ ಜಾಗತಿಕ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ವಿಷಯವಾಗಿದೆ. ವಿಶೇಷವಾಗಿ ಇಂಧನ ಮತ್ತು ಆಹಾರ ಪದಾರ್ಥಗಳ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಗಂಭೀರ ಆತಂಕದ ವಿಷಯ” ಎಂದು ಸಚಿವರು ವಿವರಿಸಿದರು. 2. ಭಾರತೀಯರ ಸುರಕ್ಷತೆ ಮತ್ತು ಸ್ಥಳಾಂತರ: ಪಶ್ಚಿಮ ಏಷ್ಯಾದ ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 90 ಲಕ್ಷಕ್ಕೂ ಹೆಚ್ಚು ಭಾರತೀಯರ…
ಮಂಡ್ಯ : ರಾಜ್ಯದಲ್ಲಿ ಇಂದು ಘೋರವಾದ ಘಟನೆಯ ಒಂದು ಸಂಭವಿಸಿದ್ದು, ಎರಡು ವರ್ಷದ ಮಗುವಿನ ಕತ್ತು ಹಿಸುಕಿ ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ , ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಜಯನಗರದ ಮನೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮಗು ಬದುಕುಳಿದಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ವರ್ಷದ ಹಿಂದೆ ದರ್ಶನ್ ಮತ್ತು ದಿವ್ಯಶ್ರೀ ಎಂಬುವವರು ವಿವಾಹವಾಗಿದ್ದರು. ಘಟನೆ ಕುರಿತು ಕೆಆರ್ ಪೇಟೆ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಂಪತಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕೆಆರ್ ಪೇಟೆ ಠಾಣೆ ಪೊಲೀಸ್ ಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳ ಬಗ್ಗೆ ಶೀಘ್ರದಲ್ಲಿ ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರಿಸಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಿಟಿ ಶ್ರೀನಿವಾಸ್ ಕೇಳಿದ ಪ್ರಶ್ನೆಗೆ, ಉತ್ತರಿಸಿದ ಅವರು, ರಾಜ್ಯದಲ್ಲಿ 1,775 ಪ್ರಾಂಶುಪಾಲರ ವೃಂದದ ಹುದ್ದೆಗಳು ಮಂಜೂರಾಗಿದ್ದು 306 ನೇರ ನೇಮಕಾತಿ ಹಾಗೂ 919 ಭರ್ತಿಗೆ ಮೀಸಲಾಗಿರುತ್ತದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್ ನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರಿದರು.
ಬೆಂಗಳೂರು : ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆ ಆರಂಭ ವಿಧಾನಸೌಧದ ಸಮಿತಿ ಕೊಠಡಿ ಸಂಖ್ಯೆ 106 ರಲ್ಲಿ ಈ ಒಂದು ಸಲಹಾ ಸಮಿತಿ ಸಭೆ ಆರಂಭವಾಗಿದೆ. ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬಿ ವೈ ವಿಜಯೇಂದ್ರ ಸಚಿವ ಎಚ್ ಕೆ ಪಾಟೀಲ್ ಅಶೋಕ್ ಪಟ್ಟಣ ಸೇರಿದಂತೆ 16 ಮಂದಿ ಭಾಗಿಯಾಗಿದ್ದಾರೆ. ವಿಧೇಯಕಗಳ ಮಂಡನೆ ವ್ಯಕ್ತಿಯ ಕಲಾಪದ ಮೇಲಿನ ಚರ್ಚೆ ಸೇರಿದಂತೆ ಕಲಾಪ ನಡೆಸುವ ಬಗ್ಗೆ ಸಮಲೋಚನೆ ನಡೆಸುತ್ತಿದ್ದಾರೆ.
ಬೆಂಗಳೂರು : ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಾನು ದೆಹಲಿಗೆ ಬಂದಿಲ್ಲ ಪುತ್ರನ ಮದುವೆಗೆ ಆಹ್ವಾನ ನೀಡುವುದಕ್ಕೆ ದೆಹಲಿಗೆ ಬಂದಿದ್ದೇನೆ ಎಂದು ನವದೆಹಲಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರ ಕಾಲಿಗೆ ಬಿದ್ದು ಪಕ್ಷಕ್ಕೆ ಸೇರಿಸಿಕೊಳ್ಳಿ ಅಂತ ಹೇಳಲು ಬಂದಿಲ್ಲ. ಕಡುಬೃಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ನಾನು ಪಕ್ಷ ಸೇರಲ್ಲ. ಬಿಎಸ್ ಯಡಿಯೂರಪ್ಪ, ಬಿ ವೈ ವಿಜಯೇಂದ್ರ, ಬಿ ವೈ ರಾಘವೇಂದ್ರ ಈ ಮೂವರು ಪಕ್ಷದಲ್ಲಿ ಇರುವವರೆಗೂ ಬಿಜೆಪಿ ಸೇರಲ್ಲ ಎಂದು ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ. ನಾನೇ ಸಿಎಂ ಆಗುತ್ತೇನೆ. 2028ಕ್ಕೆ ನಾನೇ ಸಿಎಂ ಆಗ್ತೀನಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು : ಇರಾನ್- ಇಸ್ರೇಲ್ ಯುದ್ಧದಿಂದಾಗಿ ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್ ಅಭಾವ ಸೃಷ್ಟಿಯಾಗಿದ್ದು, ಬೆಲೆ ಗಗನಮುಖಿಯಾಗಿದೆ. ಈ ಒಂದು ಯುದ್ಧದ ಪರಿಣಾಮ ಭಾರತದ ಮೇಲು ಬಿರಿದ್ದು ಇದೀಗ ಕರ್ನಾಟಕದಲ್ಲಿ ಡ್ರೈ ಫ್ರೂಟ್ಸ್ ದರದಲ್ಲಿ ಭಾರಿ ಏರಿಕೆಯಾಗಿದೆ. ಪ್ರಸ್ತುತ ಇಸ್ಲಾಂ ಧರ್ಮದವರು ರಂಜಾನ್ ಪವಿತ್ರ ಆಚರಣೆಯಲ್ಲಿದ್ದಾರೆ. ಈ ತಿಂಗಳು ಹೆಚ್ಚು ಒಣಹಣ್ಣುಗಳ ಸೇವನೆ ಮೇಲೆ ಅವಲಂಬಿಸಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಯಾಗಿದ್ದು, ಒಣಹಣ್ಣುಗಳ ಬೆಲೆ ಗಗನಮುಖಿಯಾಗಿದೆ. ಹಾವೇರಿಯ ಪ್ರಮುಖ ಹಣ್ಣು ವ್ಯಾಪಾರಸ್ಥರಿಗೆ ಇದರ ಬಿಸಿ ತಟ್ಟಿದೆ. ಪರಿಣಾಮ ಒಂದೂವರೆ ಪಟ್ಟು ಅಧಿಕ ದರಕ್ಕೆ ಒಣಹಣ್ಣುಗಳ ಮಾರಾಟ ಮಾಡುತ್ತಿರುವುದಾಗಿ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ. ದರ ಏರಿಕೆಯಿಂದ ಗ್ರಾಹಕರ ಸಂಖ್ಯೆ ಸಹ ಕಡಿಮೆಯಾಗಿದೆ. ಈ ಹಿಂದೆ ಕೆಜಿ ಖರೀದಿಸುತ್ತಿದ್ದ ಗ್ರಾಹಕರು ಈಗ ಅರ್ಧಕೆಜಿ ಖರೀದಿಸುತ್ತಿದ್ದಾರೆ. ಅಲ್ಲದೆ ನಮ್ಮ ಜೊತೆ ವಾದಕ್ಕೆ ಇಳಿಯುತ್ತಾರೆ. ರಂಜಾನ್ ಹಬ್ಬ ಬೇರೆ ಹತ್ತಿರ ಬರುತ್ತಿದೆ. ಇತ್ತ ದಿನದಿಂದ ದಿನಕ್ಕೆ ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಾಗುತ್ತಿದೆ. ಪರಿಸ್ಥಿತಿ ನಿಭಾಯಿಸಲಾಗುತ್ತಿಲ್ಲ. ಆದಷ್ಟು ಬೇಗ ಈ…
ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಆಗಿದ್ದಕ್ಕೆ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಬಳಿ ನಡೆದಿದೆ. ಹೆಬ್ಬಾಳ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾಲಗಾರರ ಕಾಟಕ್ಕೆ ಬೇಸತ್ತು ವೆಂಕಟೇಶ (50) ಎನ್ನುವವರು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಇವರು ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿದ್ದರು. ಜೊತೆಗೆ ವೆಂಕಟೇಶ್ ಅನಾರೋಗ್ಯದಿಂದ ಕೂಡ ಬಳಲುತ್ತಿದ್ದರು. ನಿನ್ನೆ ಹೆಬ್ಬಾಳ ಸಮೀಪ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬೈಯಪ್ಪನಹಳ್ಳಿ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
BREAKING : ಇಸ್ರೇಲ್-ಇರಾನ್ ಯುದ್ಧ ಮುಂದುವರಿದ ಹಿನ್ನೆಲೆ : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 21 ವಿಮಾನಗಳ ಹಾರಾಟ ರದ್ದು!
ಬೆಂಗಳೂರು : ಇಸ್ರೇಲ್ ಇರಾನ್ ಯುದ್ಧ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ಏರ್ಪೋರ್ಟ್ ನಿಂದ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಅರಬ್ ರಾಷ್ಟ್ರಗಳಿಗೆ ತೇರಳಬೇಕಿದ್ದ 11 ವಿಮಾನಗಳ ರದ್ದು ಮಾಡಲಾಗಿದೆ. ಅಲ್ಲದೇ ಆಗಮಿಸಬೇಕಿದ್ದ 10 ವಿಮಾನಗಳ ಹಾರಾಟ ರದ್ದು ಪಡಿಸಲಾಗಿದೆ. ಈ ಕುರಿತು ವಿಮಾನಗಳ ಸಂಚಾರದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಹೋಗುವ ಮತ್ತು ಬರುವ ವಿಮಾನಗಳನ್ನು ರದ್ದುಪಡಿಸಲಾಗಿದೆ.














