Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ ಮಹಿಳೆಯರಿಗೆ ಎಂದೇ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಇದೀಗ ಈ ಯೋಜನೆಯಲ್ಲಿ ಅಧಿಕಾರಿಗಳ ಮಹಾ ನಿರ್ಲಕ್ಷದಿಂದ ಭಾರಿ ಯಡವಟ್ಟು ಬಯಲಾಗಿದ್ದು, ಕಳೆದ ಮೂರು ವರ್ಷದಲ್ಲಿ ಮೃತರ ಖಾತೆಗೆ ಇದುವರೆಗೂ 12 ಕೋಟಿ ಜಮೆ ಆಗಿದೆ ಎನ್ನುವುದು ಬಯಲಾಗಿದೆ. ಹೌದು ಹಣ ಬಿಡುಗಡೆ ವಿಳಂಬ ಸೇರಿ ತಾಂತ್ರಿಕ ಸಮಸ್ಯೆಗಳಿಂದ ಸದಾ ಚರ್ಚೆಗೆ ಬರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂಡು ಯಡವಟ್ಟು ಬಟಾಬಯಲಾಗಿದೆ. ಬೀದರ್ ಜಿಲ್ಲೆಯಲ್ಲಿ ಅಧಿಕಾರಿಗಳ ನಿಷ್ಕಾಳಜಿಯಿಂದ ಮೃತ 5327 ಯೋಜನಾ ಫಲಾನುಭವಿಗಳಿಗೆ ಸುಮಾರು 12 ಕೋಟಿ ರೂ. ಹಣ ಜಮೆಯಾಗಿ ಗೋಲ್ಮಾಲ್ ಮಾಡಿದ್ದಾರೆ. ಸತ್ತಿರುವ 5 ಸಾವಿರಕ್ಕೂ ಅಧಿಕ ಮಹಿಳೆಯರ ಅಕೌಂಟ್‌ಗೆ ಕೋಟಿ ಕೋಟಿ ಹಣ ಹಾಕಿ, ಗೋಲ್ಮಾಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಬೀದರ್ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಬರುವ…
ಬೆಂಗಳೂರು : ಅಮೆರಿಕ ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸಂಪೂರ್ಣ ವ್ಯತ್ಯಯ ಆಗಿದ್ದು ಅಲ್ಲದೆ ಸಿಲಿಂಡರ್ಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಈ ಹಿನ್ನಲೆ LPG ಸಿಲಿಂಡರ್ ಸರಬರಾಜು ಸಂಸ್ಥೆಗಳಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಅನಗತ್ಯವಾಗಿ ಹೆಚ್ಚುವರಿ ಸಿಲಿಂಡರ್ ಬುಕ್ ಮಾಡಬೇಡಿ, 1 ಸಿಲಿಂಡರ್ ಇರುವವರು 21 ದಿನಗಳ ನಂತರ ಬುಕ್ ಮಾಡಬೇಕು. 2 ಸಿಲಿಂಡರ್ ಇರುವವರು 30 ದಿನಗಳ ನಂತರ ಬುಕ್ ಮಾಡಬೇಕು. ಅದೇ ರೀತಿಯಾಗಿ ಉಜ್ವಲ ಯೋಜನೆ ಗ್ರಾಹಕರು 30 ದಿನದ ನಂತರ ಬುಕ್ ಮಾಡಬೇಕು. ಹೊಸ ಸಂಪರ್ಕದಾರರಿಗೆ ಒಂದು ಸಿಲಿಂಡರ್ ಕನೆಕ್ಷನ್ ನೀಡಲಾಗುತ್ತದೆ ಎಂದು ಸಿಲಿಂಡರ್ ಸರಬರಾಜು ಕಂಪನಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿವೆ.
ಬೆಂಗಳೂರು : ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಭಾರತ ಸೇರಿದಂತೆ ಕರ್ನಾಟಕದಲ್ಲೂ ಬಹಳಷ್ಟು ಪರಿಣಾಮ ಬೀರಿದ್ದು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಸೇರಿದಂತೆ, ಸಿಲಿಂಡರ್ ಬೆಲೆ ಕೂಡ ಗಗನಕ್ಕೆ ಏರಿದೆ. ಇದರ ಮಧ್ಯ ನಾಳೆ ರಾಜ್ಯಾದ್ಯಂತ ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದಾರೆ ಹಾಗಾಗಿ ರಾಜ್ಯದ ಜನತೆಗೆ ಡಬಲ್ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಸರ್ಕಾರಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ (ಮಾರ್ಚ್ 11) ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ (OPD) ವ್ಯತ್ಯಯವಾಗುವ ಭೀತಿ ಎದುರಾಗಿದೆ. ವೈದ್ಯರು ತಮ್ಮ ಪ್ರತಿಭಟನೆಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ನಾಳೆಯಿಂದ ಮುಂದಿನ 5 ದಿನಗಳ ಕಾಲ ವೈದ್ಯರು ಹೊರರೋಗಿಗಳ ಸೇವೆಯನ್ನು (OPD) ಸಂಪೂರ್ಣವಾಗಿ ಬಹಿಷ್ಕರಿಸಲಿದ್ದಾರೆ. ಎರಡನೇ ಹಂತದಲ್ಲಿ ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ, ಮಾರ್ಚ್ 16 ರಿಂದ ವೈದ್ಯರು ಕೆಲಸಕ್ಕೆ ಗೈರಾಗುವ ಮೂಲಕ…
ಚಾಮರಾಜನಗರ : ಶಾರ್ಟ್ ಸರ್ಕ್ಯೂಟ್ ನಿಂದ ಕೊಳ್ಳೇಗಾಲ ಸಿಪಿಐ ಕಚೇರಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ಇಂದ ಹೊತ್ತಿದ ಬೆಂಕಿಯಿಂದ ಕಂಪ್ಯೂಟರ್ಗಳು ಮತ್ತು ದಾಖಲೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಚೇರಿ ಸಿಬ್ಬಂದಿಗಳು ನೀರು ಹಾಕಿ ನಂದಿಸಿದ್ದಾರೆ. ಸಿಪಿಐ ಕಚೇರಿಯಲ್ಲಿ ಬೆಂಕಿ ಆಕಸ್ಮಿಕವೊ? ಅಥವಾ ಪೂರ್ವನಿಯೋಜಿತವೊ? ಎನ್ನುವುದು ಇದೀಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಟನಸ್ಳಕ್ಕೆ ಡಿ ವೈ ಎಸ್ ಪಿ ಧರ್ಮೇಂದ್ರ ಬೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಸಿಪಿಐ ಕಚೇರಿಯಲ್ಲಿ ಅಗ್ನಿಶಾಮಕ ದಳ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಗೆ ನಿಖರವಾದ ಕಾರಣ ಹುಡುಕುತ್ತಿದ್ದಾರೆ.
ಮಂಡ್ಯ : ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕರಡಹಳ್ಳಿ ಗ್ರಾಮದ R. ಧನಂಜಯ್ ಗೆ UPSC ಪರೀಕ್ಷೆಯಲ್ಲಿ 554 ನೇ ರ್ಯಾಂಕ್ ಪಡೆದು ಈ ಮೂಲಕ IPS ಹುದ್ದೆಗೆ ಹಳ್ಳಿ ಹೈದ ಧನಂಜಯ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ. ಮಗನ ಸಾಧನೆ ಬಗ್ಗೆ ಈಗ ತನ್ನ ಮಗ ದೇಶದ ಮನಗೆಂದು ಪೋಷಕರ ಹೆಮ್ಮೆ ಪಟ್ಟಿದ್ದು, ಊರು ಹುಡುಗನ ಸಾಧನೆ ಬಗ್ಗೆ ಗ್ರಾಮಸ್ಥರ ಹೆಮ್ಮೆ ಪಡುತ್ತಿದ್ದಾರೆ. ಸಾಧನೆಗೈದ ಊರ ಮಗನಿಗೆ ಅದ್ದೂರಿ ಸ್ವಾಗತ ಕೋರಿ ಸನ್ಮಾನ ಮಾಡಿದ್ದಾರೆ. ಹೈನುಗಾರಿಕೆಯ ಕೃಷಿ ಬದುಕಿನ ಜೀವದೊಂದಿಗೆ ಮಗನಿಗೆ ಉಜ್ವಲ ಭವಿಷ್ಯ ರೂಪಿಸಿಕೊಟ್ಟ ಧನಂಜಯ ಪೋಷಕರು, ಧನಂಜಯ್ ಗೆ ಸಚಿವ ಎನ್. ಚಲುವರಾಯಸ್ವಾಮಿ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು : ಸಾಮಾನ್ಯವಾಗಿ ತಮಗ ಆಗದಿರುವವರ ವಿರುದ್ಧ ಜನರು ವಾಮಾಚಾರ ಮಾಟ ಮಂತ್ರ ಮಾಡಿಸುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೌದು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ತ್ರೀ, ಪುರುಷನ ನಗ್ನ ಫೋಟೋ, ಹೂವಿನ ಹಾರ ಸೇರಿ ಇನ್ನಿತರ ವಸ್ತುಗಳಿದ್ದ ಪಾರ್ಸೆಲ್‌ವೊಂದು ಬಂದಿದ್ದು, ವಾಮಾಚಾರ ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೋಸ್ಟ್ ಆಫೀಸ್‌ಗೆ ಪಾರ್ಸೆಲ್‌ವೊಂದು ಬಂದಿದ್ದು, ತೆಗೆದು ನೋಡುತ್ತಿದ್ದಂತೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಪಾರ್ಸೆಲ್‌ನಲ್ಲಿ ಮಹಿಳೆ ಹಾಗೂ ಪುರುಷನ ಬೆತ್ತಲೆ ಫೋಟೋ, ಅದರ ಸುತ್ತಲು ಕೊಳೆತ ಟೊಮೆಟೋ, ಹೂವಿನ ಹಾರ, ಅದರ ಮೇಲೆ ಕಬ್ಬಿಣದ ಪೀಸ್ ಹಾಗೂ ಟೂತ್ ಪೇಸ್ಟ್ ಇಟ್ಟಿದ್ದಾರೆ. ಆ ಎಲ್ಲ ವಸ್ತುಗಳಿಗೆ ಮಾಡಿ ಕಿರಾತಕರು ಪಾರ್ಸೆಲ್ ಕಳುಹಿಸಿದ್ದಾರೆ. ಇದರಿಂದ ಅಲ್ಲಿನ ಸಿಬ್ಬಂದಿ ಮಾನಸಿಕ ಸ್ಥಿತಿ ಪರಿಣಾಮ ಬೀರಿದ್ದು, ಕರ್ತವ್ಯದ ಆಸಕ್ತಿ ತೋರದಂತೆ ಕಾಣುತ್ತಿದೆ.…
ಬೆಂಗಳೂರು : ರಾಜ್ಯದಲ್ಲಿ ಬಹುದೊಡ್ಡ ಪೊಲೀಸ್ ಸಬ್ಇನ್ಸ್ಪೆಕ್ಟರ್(ಪಿಎಸ್‌ಐ) ನೇಮಕಾತಿ ಹಗರಣ ಸೇರಿದಂತೆ ಹಲವು ನೇಮಕಾತಿ ಅಕ್ರಮಗಳ ಆರೋಪಿ ಆರ್. ಡಿ. ಪಾಟೀಲ್ ಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ನೇಮಕಾತಿ ಪರೀಕ್ಷೆಗಳನ್ನು ತಿರುಚುವ, ಅಕ್ರಮವೆಸಗುವ ಕ್ರಿಮಿನಲ್ ಪಿತೂರಿಗಳಲ್ಲಿ ಪಾಟೀಲ್ ಪಾತ್ರವನ್ನು ತೋರಿಸುವ ಪ್ರಾಥಮಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ. ತನಿಖಾಧಿಕಾರಿಗಳು ಪಾಟೀಲ್ ಖರೀದಿಸಿದ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಂಚನೆಗೆ ಅವರನ್ನು ಲಿಂಕ್ ಮಾಡುವ ಕರೆ ವಿವರ ದಾಖಲೆಗಳನ್ನು ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ತನಿಖೆ ಪೂರ್ಣಗೊಂಡಿದೆ, ಎಲ್ಲ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಪಾಟೀಲ್ ಈಗಾಗಲೇ ಎರಡು ವರ್ಷಕ್ಕೂ ಅಧಿಕ ಕಾಲದಿಂದ ಸೆರೆವಾಸದಲ್ಲಿದ್ದಾರೆ. ಅವರನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವ ಅವಶ್ಯಕತೆ ಇಲ್ಲ. ಹಾಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು. ಸದ್ಯ ಕೋಕಾ ಕಾಯಿದೆಯಡಿ 2023ರಲ್ಲಿ ಬಂಧನಕ್ಕೊಳಗಾಗಿ ಸದ್ಯ ಮೈಸೂರು ಕಾರಾಗೃಹದಲ್ಲಿರುವ…
ರಾಯಚೂರು : ಕರೆಂಟ್ ಶಾಕ್ ನಿಂದ ಸ್ನೇಹಿತನೊಬ್ಬ ಸಾವನ್ನಪ್ಪಿದ್ದಾನೆ. ಇದರಿಂದ ಭಯದಿಂದ ಚೀಲದಲ್ಲಿ ಆತನ ಶವ ಇಟ್ಟು ಅಪ್ರಾಪ್ತರು ಕೆರೆಗೆ ಎಸೆಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಕರಡಕಲ್ ಕೆರೆಯಲ್ಲಿ ಈ ಒಂದು ಕೃತ್ಯ ನಡೆದಿದೆ. ಚೀಲದಲ್ಲಿ 15 ವರ್ಷದ ಬಾಲಕ ಕಾರ್ತಿಕ್ ಶವ ಪತ್ತೆಯಾಗಿತ್ತು. ಮಾರ್ಚ್ 9ಕ್ಕೆ ಲಿಂಗಸುಗೂರಿಗೆ ಗುಂಡಸಾಗರಿನ ಕಾರ್ತಿಕ್ ಬಂದಿದ್ದಾನೆ. ಶಾಲಾ ವಾರ್ಷಿಕೋತ್ಸವಕ್ಕೆ ಬಟ್ಟೆ ತೆಗೆದುಕೊಳ್ಳುವುದಕ್ಕೆ ಬಂದಿದ್ದಾನೆ. ವಾಪಸ್ ಹೋಗುತ್ತಿದ್ದಾಗ ಹೊಲದಲ್ಲಿ ಇರುವಂತಹ ಬೋರ್ವೆಲ್ ಬಳಿ ನೀರು ಕುಡಿಯಲು ಎಂದು ಹೋದಾಗ ಕರೆಂಟ್ ಶಾಕ್ ನಿಂದ ಕಾರ್ತಿಕ್ ಸಾವನಪ್ಪಿದ್ದಾನೆ. ಕೂಡಲೇ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಗೆಳೆಯರು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಸ್ನೇಹಿತ ಕಾರ್ತಿಕ್ ಕೊನೆಯುಸಿರುಳಿದಿದ್ದಾನೆ. ಬೈಕಿನಲ್ಲಿ ಬರುವ ವೇಳೆ ಕಾರ್ತಿಕ್ ಕಾಲಿಗೆ ಗಾಯವಾಗಿತ್ತು. ಕಾಲಿನಿಂದ ರಕ್ತ ಸೋರುತ್ತಿದ್ದ ಕಂಡು ಸ್ನೇಹಿತರು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ಭಯದಲ್ಲಿ ಸ್ನೇಹಿತರು ಕಾರ್ತಿಕ ಶವವನ್ನು ಕೆರೆಯಲ್ಲಿ ಎಸೆದಿದ್ದರೆ. ಇನ್ನು ಇತ್ತ ಕಾರ್ತಿಕ್ ಪೋಷಕರು ಇನ್ನು ಯಾಕೆ ಮಗ ಬರಲಿಲ್ಲ ಎಂದು ಪೊಲೀಸರ…
ಬೆಂಗಳೂರು : ಅಮೇರಿಕಾ ಇಸ್ರೇಲ್ ನಡುವೆ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು 17 ವಿಮಾನಗಳ ಹಾರಾಟ ರದ್ದಾಗಿವೆ. ಬೆಂಗಳೂರಿಗೆ ಆಗಮಿಸಬೇಕಿದ್ದ 8 ಹಾಗೂ ನಿರ್ಗಮಿಸಬೇಕೆಂದು 9 ವಿಮಾನಗಳ ಹಾರಾಟ ರದ್ದಾಗಿದೆ. ಅಬುದಾಭಿ, ರಿಯಾದ್, ಜೆಡ್ಡಾ, ದುಬೈ, ದೋಹಾಗೆ ತೆರಳಬೇಕಿದ್ದ ಒಟ್ಟು 17 ವಿಮಾನಗಳು ರದ್ದಾಗಿವೆ.
ಬೆಂಗಳೂರು : ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಜಕ್ಕೂರು ವಿಲಾದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಕಾಲೇಜು ಯುವತಿರನ್ನೆ ಆರೋಪಿಗಳು ಟಾರ್ಗೆಟ್ ಮಾಡಿ ತಮ್ಮ ಬಲೆಗೆ ಬೀಳಿಸುತ್ತಿದ್ದರು ಆರೋಪಿಗಳಿಗೆ ಕಾಲೇಜು ಯುವತಿಯರೇ ಟಾರ್ಗೆಟ್ ಆಗಿದ್ದರು. ಯುವತಿರಿಗಾಗಿ ಡಿಕ್ಸನ್ ಮತ್ತು ನಿಖಿಲ್ ಸೇರಿ ಪ್ಲಾನ್ ಮಾಡುತ್ತಿದ್ದರು. ಕಾಲೇಜು ಯುವಕರನ್ನು ಬಳಿಗೆ ಬೀಳಿಸಲು ಪ್ಲಾನ್ ಮಾಡುತ್ತಿದ್ದರು. ಬಳಿಕ ಅವರಾಗಿ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಿ ಅತ್ಯಾಚಾರ ಎಸಗುತಿದ್ದರು. ಯುವತಿಯರನ್ನು ವಿಲ್ಲಾದಲ್ಲಿ ಕರೆತಂದು ಪಾರ್ಟಿ ಆಯೋಜನೆ ಮಾಡುತ್ತಿದ್ದರು. ಬಳಿಕ ಯುವತಿಯರ ಮೇಲೆ ಡಿಕ್ಸನ್ ಮತ್ತು ನಿಖಿಲ್ ಗ್ಯಾಂಗ್ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು. ಗೋವಾದಿಂದ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಿ ಬೆಂಗಳೂರು ಕಾಲೇಜು ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ಡಿಕ್ಸನ್ ಮತ್ತು ನಿಖಿಲ್ ತಮ್ಮ ಗ್ಯಾಂಗ್ ನೊಂದಿಗೆ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು…














