Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಯೋತ್ಪಾದನೆ, ಸೈಬರ್ ಕ್ರೈಂ ಮತ್ತು ಡ್ರಗ್ಸ್ ದಂಧೆಗೆ ಟೆಲಿಗ್ರಾಂ ಆಪ್ ದುರುಪಯೋಗ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

​ಬಿಸಿಲಿನ ಬೇಗೆಯಿಂದ ಬಚಾವಾಗಲು ಐಪಿಎಲ್ ಮುಂಚಿತವಾಗಿಯೇ ಆರಂಭ? 2027ರ ಟೂರ್ನಿಯಲ್ಲಿ ಹೊಸ ತಂಡಗಳ ಸೇರ್ಪಡೆ ಸದ್ಯಕ್ಕಿಲ್ಲ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೃಷಿ ವಿಶ್ವವಿದ್ಯಾಲಯ ವತಿಯಿಂದ ನ.14 ರಿಂದ `ಕೃಷಿ ಮೇಳ’ : ನೂತನ ತಳಿಗಳ ಬಿಡುಗಡೆ
KARNATAKA

ಕೃಷಿ ವಿಶ್ವವಿದ್ಯಾಲಯ ವತಿಯಿಂದ ನ.14 ರಿಂದ `ಕೃಷಿ ಮೇಳ’ : ನೂತನ ತಳಿಗಳ ಬಿಡುಗಡೆ

By kannadanewsnow57

ಬೆಂಗಳೂರು:  ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ನ.14 ರಿಂದ 17 ರವರೆಗೆ ಹವಾಮಾನ ಚತುರ ಡಿಜಿಟಲ್ ಕೃಷಿ ಎಂಬ ಘೋಷವಾಕ್ಯದೊಂದಿಗೆ ನಾಲ್ಕು ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ಕೃಷಿಮೇಳವನ್ನು  ಹಮ್ಮಿಕೊಳ್ಳಲಾಗಿದೆ ಎಂದು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್ ವಿ ಸುರೇಶ ಅವರು ತಿಳಿಸಿದರು.

ಇಂದು ಜಿಕೆವಿಕೆ ಅವಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ,  ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ , ಮೀನುಗಾರಿಕೆ,  ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಸಮಾಜ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿ ವರ್ಷ ನೂತನ ತಳಿಗಳ ಅಭಿವೃದ್ಧಿ, ತಂತ್ರಜ್ಞಾನ ಹಾಗೂ ಆವಿಷ್ಕಾರಗಳೊಂದಿಗೆ ಕೃಷಿ ಮೇಳವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಅದೇ ರೀತಿ ಈ ಬಾರಿಯೂ ಸಹ ನಾಲ್ಕು ನೂತನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಸುಕಿನ ಜೋಳ ಸಂಕರಣ ಎಂ.ಎ.ಎಚ್ 15-84, ಹಲಸಂದೆ ಕೆಬಿಸಿ-12, ಸೂರ್ಯ ಕಾಂತಿ ಕೆ.ಬಿ.ಎಸ್.ಎಚ್-90 ಹಾಗೂ ಬಾಜ್ರ ನೇಪಿಯರ್ ಪಿ.ಬಿ.ಎನ್-242 ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಕೃಷಿಮೇಳದಲ್ಲಿ ಬಿಡುಗಡೆಮಾಡಲಾಗುವುದು ಎಂದರು.

ಡಿಜಿಟಲ್ ಕೃಷಿ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಸರಳಗೊಳಿಸಲು ಒತ್ತು ನೀಡಲಾಗಿದೆ. ಮಣ್ಣು ಮತ್ತು ಬೆಳೆಗಳ ಆರೋಗ್ಯ ಪರಿವೀಕ್ಷಣೆಗೆ ಮಲ್ಟಿಸ್ಪೆಕ್ಟ್ರಲ್ ಡ್ರೋನ್, ಕೃಷಿ ಡ್ರೋನ್, ರೋಬೋಟಿಕ್ ಕೃಷಿ ಯಂತ್ರ, ಹಣ್ಣಿನ ವರ್ಗೀಕರಣ ಯಂತ್ರ, ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ, ಆಳ ನಿಯಂತ್ರಕ ರೋಟವೇಟರ್, ಸ್ವಯಂಚಾಲಿತ ಬೂಮ್ ಸ್ಟೇಯರ್, ಸೌರಶಕ್ತಿ ಚಾಲಿತ ಬರ್ಡ್ ಸ್ಟೇರರ್ಗಳು ಕೃಷಿ ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕೃಷಿಮೇಳದಲ್ಲಿ ಸಮಗ್ರ ಬೇಸಾಯ ಪದ್ಧತಿ, ಖುಷಿ ಬೇಸಾಯ, ನೂತನ ತಳಿಗಳ ಪ್ರಾತಕ್ಷಿಕೆ, ರೇಷ್ಮೆ ಕೃಷಿ, ತೋಟಗಾರಿಕೆ, ಸಿರಿಧಾನ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ. ಮಣ್ಣು ರಹಿತ ಕೃಷಿ ಪದ್ಧತಿ ಹೀಗೆ ಹಲವು ಪ್ರಾತಕ್ಷ್ಮತೆಗಳ ಮೂಲಕ ರೈತರಿಗೆ ಕೃಷಿಯ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.

ಪ್ರತಿಬಾರಿಯು ಕೃಷಿ ಮೇಳದಲ್ಲಿ ಉತ್ತಮ ಕೃಷಿ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಕೃಷಿಮೇಳದಲ್ಲಿ ಸುಮಾರು 700 ಮಳಿಗೆಗಳನ್ನು ತೆರೆಯಲಿದ್ದು, ಇಲ್ಲಿ ನೂತನ ತಂತ್ರ ಜ್ಞಾನ, ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ಪರಿಹಾರ, ಪ್ರಾತಕ್ಷ್ಮತೆ ಇರಲಿದ್ದು. ಕೃಷಿ ಮೇಳಕ್ಕೆ ಆಗಮಿಸುವ ರೈತರು ಹಾಗೂ ಸಾರ್ವಜನಿಕರಾಗಿ ಜಿಕೆವಿಕೆಯ ಮಹಾದ್ವಾರದಿಂದ ಕೃಷಿಮೇಳದ ಸಭಾಂಗಣ ತಲುಪಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ,  ಪ್ರತ್ಯೇಕ ವಾಹನ ನಿಲುಗಡೆ, ಉಚಿತ ಪ್ರವೇಶ, ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆಯನ್ನು ಕಲ್ಲಿಸಲಾಗಿದ್ದು, ರೈತರುಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ.ವೈ.ಎನ್.ಶಿವಲಿಂಗಯ್ಯ, ಸಂಶೋಧನಾ ನಿರ್ದೇಶಕರಾದ ಎಚ್.ಎಸ್.ಶಿವರಾಮು ಉಪಸ್ಥಿತರಿದ್ದರು.

Agriculture University to launch 'Krishi Mela' from Nov 14 ಕೃಷಿ ವಿಶ್ವವಿದ್ಯಾಲಯ ವತಿಯಿಂದ ನ.14 ರಿಂದ `ಕೃಷಿ ಮೇಳ' : ನೂತನ ತಳಿಗಳ ಬಿಡುಗಡೆ
Share. Facebook Twitter LinkedIn WhatsApp Email

Related Posts

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

2 Mins Read

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು

1 Min Read

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 222 ಮತಗಳ ಪೈಕಿ ಒಂದು ಮತ ಅಸಿಂಧು

1 Min Read
Recent News

​ಭಯೋತ್ಪಾದನೆ, ಸೈಬರ್ ಕ್ರೈಂ ಮತ್ತು ಡ್ರಗ್ಸ್ ದಂಧೆಗೆ ಟೆಲಿಗ್ರಾಂ ಆಪ್ ದುರುಪಯೋಗ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

​ಬಿಸಿಲಿನ ಬೇಗೆಯಿಂದ ಬಚಾವಾಗಲು ಐಪಿಎಲ್ ಮುಂಚಿತವಾಗಿಯೇ ಆರಂಭ? 2027ರ ಟೂರ್ನಿಯಲ್ಲಿ ಹೊಸ ತಂಡಗಳ ಸೇರ್ಪಡೆ ಸದ್ಯಕ್ಕಿಲ್ಲ!

​ಗ್ರಾಹಕರಿಗೆ ಸಿಗಲ್ಲ ಕೇವಲ ಕಾಲಿಂಗ್ ಪ್ಲಾನ್! ಕಡಿಮೆ ಬೆಲೆಯ ‘ವಾಯ್ಸ್-ಓನ್ಲಿ’ ಯೋಜನೆಗಳಿಗೆ ಜಿಯೋ, ಏರ್‌ಟೆಲ್, ವಿರೋಧ

State News
KARNATAKA

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಗುರುವಾರ (ಜೂನ್ 18) ಭಾರಿ ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ…

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 222 ಮತಗಳ ಪೈಕಿ ಒಂದು ಮತ ಅಸಿಂಧು

BREAKING: ಮಂಡ್ಯದಲ್ಲಿ ಸ್ಥಳ ಮಹಜರ್ ವೇಳೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು, ಅರೆಸ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.