Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Budget (2)

BUDGET BREAKING : ರಾಜ್ಯದ ಆರೋಗ್ಯ ಇಲಾಖೆಯಲ್ಲಿ 2500 ಹುದ್ದೆಗಳು ಭರ್ತಿಗೆ ಸರ್ಕಾರ ಕ್ರಮ : ಸಿಎಂ ಸಿದ್ದರಾಮಯ್ಯ

06/03/2026 12:25 PM
Karnataka Budget 2026-27 Presentation by CM Siddaramaiah

ಕರ್ನಾಟಕ ಬಜೆಟ್​ 2026-27 ಸಂಪೂರ್ಣ ವಿವರ (PDF ಪ್ರತಿ ಡೌನ್​ಲೋಡ್) ಮಾಡಿ

06/03/2026 12:24 PM
Budget (2)

BUDGET BREAKING : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಮರುನಾಮಕರಣ : ಸಿಎಂ ಸಿದ್ದರಾಮಯ್ಯ

06/03/2026 12:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BUDGET BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕಪಡೆ’ ಯೋಜನೆ ಜಾರಿಗೆ ನಿರ್ಧಾರ : ಸಿಎಂ ಸಿದ್ದರಾಮಯ್ಯ
KARNATAKA

BUDGET BREAKING : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕಪಡೆ’ ಯೋಜನೆ ಜಾರಿಗೆ ನಿರ್ಧಾರ : ಸಿಎಂ ಸಿದ್ದರಾಮಯ್ಯ

By kannadanewsnow0506/03/2026 12:18 PM
Budget (2)
Budget (2)

ಬೆಂಗಳೂರು : ಸಿಎಂ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್ 2026ಕ್ಕೆ ಮಂಡನೆಗೆ ಪೂರ್ವದಲ್ಲಿ ವಿಧಾನಸೌಧದಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದರು. ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಬಜೆಟ್ ಅನುಮೋದನೆ ಪಡೆದರು. ಬಳಿಕ ಬಜೆಟ್ ಮಂಡನೆ ಭಾಷಣ ಆರಂಭ ಮಾಡಿದರು. ಈ ವೇಳೆ ಮೀನುಗಾರರಿಗೆ 20,000 ಪ್ರೋತ್ಸಾಹ ಧನ ಏರಿಕೆ ಮಾಡಿದ್ದು ಮೀನುಗಾರಿಕಾ ವಿವಿಯಲ್ಲಿ ವಿಶೇಷ ವಿಭಾಗ ಸ್ಥಾಪನೆ ಮಾಡಲಾಗುತ್ತೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೀನುಗಾರಿಕಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತೆ ಅಲ್ಲದೆ ಮೀನು ಮಾರಾಟ ಮಾಡಲು ಮಾರುಕಟ್ಟೆ ಸ್ಥಾಪನೆಗೆ ನಿರ್ಧರಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕಪಡೆ’ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮಾವಸ್ತ್ರ ನೀಡಲಾಗುತ್ತದೆ ಅಂಗನವಾಡಿ ಕಟ್ಟಡಿ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಆರೋಗ್ಯ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗಾಗಿ 900 ಕೋಟಿ ಹಾಗೂ ಆರೋಗ್ಯ ಇಲಾಖೆಯಲ್ಲಿ 2500 ಹುದ್ದೆಗಳು ಬರ್ತಿದೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ದೀಪಿಕಾ ವಿದ್ಯಾರ್ಥಿ ಯೋಜನೆ ಮುಂದುವರಿಯಲಿದ್ದು ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ ಘೋಷಣೆ ಮಾಡಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಜಾತಿ ದೌರ್ಜನ್ಯತೆಡೆಗೆ ರೋಹಿತ್ ಅಭಿಮುಖ ಇದೆ ಜಾರಿಗೊಳಿಸಲಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ನಿರ್ಧರಿಸಿದ್ದು ಧಾರವಾಡ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ
ಮಾಡಿದರು.

ಇನ್ನು ವಿಶ್ವವಿದ್ಯಾಲಯಗಳಲ್ಲಿ ಜಾತಿ ದೌರ್ಜನ್ಯ ತಡೆಗೆ ‘ರೋಹಿತ್ ವೇಮುಲ’ ಕಾಯ್ದೆ ಜಾರಿ ಮಾಡಲಾಗುವುದು ಅಲ್ಲದೇ ಸಮಾಜಕಲ್ಯಾಣ, ಹಿಂದುಳಿದ ಹಾಗು ಅಲ್ಪಸಂಖ್ಯಾತ ಕಲ್ಯಾಣ ವರ್ಗಗಳ ಖಾಲಿ ಇರುವ 2500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತೆ ಎಂದರು. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಅನುದಾನ ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ ಘೋಷಣೆ ಮಾಡಿದ್ದು ಆದರೆ ಯುವನಿಧಿ ಯೋಜನೆಗೆ ರಾಜ್ಯ ಸರ್ಕಾರ ಅನುದಾನ ಘೋಷಣೆ ಮಾಡಲಿಲ್ಲ.

ಮದ್ಯದ ಅಂಶ ಆದರಿಸಿ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ಇದೀಗ ನಿರ್ಧರಿಸಿದೆ ಏಕರೂಪ ಅಬಕಾರಿ ಸುಂಕ ಹೆಚ್ಚಳಕ್ಕೆ ತೀರ್ಮಾನಿಸಿದ್ದು ಹಂತ ಹಂತವಾಗಿ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ. ಮದ್ಯದ ಬೆಲೆ ನಿಗದಿ ಮಾಡುವ ಜವಾಬ್ದಾರಿ ಉತ್ಪಾದಕರ ಹೆಗಲಿಗೆ ಇದ್ದು, ಮದ್ಯದ ದರ ಏರಿಕೆ ಸುಳಿವು ಇದೀಗ ರಾಜ್ಯ ಸರ್ಕಾರ ಕೊಟ್ಟಿದೆ. ಹಾಗಾಗಿ ಮದ್ಯ ಪ್ರಿಯರಿಗೆ ಇದು ಶಾಕಿಂಗ್ ಸುದ್ದಿ ಅಂತಲೇ ಹೇಳಬಹುದಾಗಿದೆ.

ಶಾಲಾ -ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತೆ 15,000 ಬೋದಕ ಅವಧಿಗಳ ನೇಮಕಾತಿ ಮಾಡಲಾಗುತ್ತೆ 800 ಶಾಲೆಗಳು ಪಬ್ಲಿಕ್ ಶಾಲೆಗಳನ್ನಾಗಿ ಉನ್ನತಿಕರಣಗೊಳಿಸಲಾಗುತ್ತದೆ. ವಿದ್ಯಾ ವಿಕಾಸ ಯೋಜನೆಯ ಅಡಿ ಪೂರ್ವ ಪ್ರಾಥಮಿಕ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ 565 ಕೋಟಿ ವೆಚ್ಚದಲ್ಲಿ ಶಾಲೆಗಳ ದುರಸ್ತಿಗೆ ಕ್ರಮ ಶಾಲೆ ಶೌಚಾಲಯಕ್ಕೆ 75 ಕೋಟಿ ರೂಪಾಯಿ ಮೀಸಲು ಇಡಲಾಗಿದೆ ಶಾಲಾ ಕಾಲೇಜು ನಿರ್ವಹಣೆಗಾಗಿ 125 ಕೋಟಿ ಅನುದಾನ. ಶಿಕ್ಷಕರ ಇಂಗ್ಲಿಷ್ ಭಾಷಾ ತರಬೇತಿಗೆ 24 ಕೋಟಿ ರೂಪಾಯಿ ಎಂಟರಿಂದ ಹನ್ನೆರಡನೇ ತರಗತಿ ಎಐ ಆಧಾರಿತ ಕಲಿಕಾ ಸೌಲಭ್ಯ. ವಿದ್ಯಾರ್ಥಿಗಳ ಒತ್ತಡ ನಿರ್ವಹಣೆಗೆ ನಿವಾರಣೆಗೆ ಆರೋಗ್ಯ ಸಲಹೆಗಾರರನ್ನು ನೇಮಕ ಮಾಡಲಾಗುತ್ತೆ. ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಶಾಲೆಯಲ್ಲಿ ಕಠಿಣ ನಿಯಮ. ಶಿಕ್ಷಕರ ಇಂಗ್ಲಿಷ್ ಭಾಷಾ ತರಬೇತಿಗೆ 24 ಕೋಟಿ ರೂಪಾಯಿ ಮೀಸಲು ಇಡಲಾಗಿದೆ ಎಂದರು.

ಬಜೆಟ್ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ, ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಬಂಪರ್ ಘೋಷಣೆ ಮಾಡಿದ್ದಾರೆ ಧನಶ್ರೀ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು 30,000 ರಿಂದ 45,000 ಗಳಿಗೆ ಹೆಚ್ಚಳ ಮಾಡಿದ್ದಾರೆ 20 ಹೊಸ ಶಿಶು ಪಾಲನ ಕೇಂದ್ರ ಸ್ಥಾಪನೆಗೆ ಒಂದು ಕೋಟಿ ರೂಪಾಯಿ ಮೀಸಲು ಇಟ್ಟಿದ್ದಾರೆ ಜಿಲ್ಲಾಮಟ್ಟದಲ್ಲಿ ಸ್ಥಾಪನೆ ಮಾಡಲಾಗುತ್ತದೆ.ಬೆಂಗಳೂರಿಗೆ ಬಂಪರ್ ಐದು ನಗರ ಪಾಲಿಕೆಗಳಿಗೆ 1,233 ಕೋಟಿ ಮೊತ್ತದ ರಸ್ತೆ 1800 ಕೋಟಿ ವೆಚ್ಚದಲ್ಲಿ 158 ಕಿಲೋಮೀಟರ್ ರಸ್ತೆ ವೈಟ್ ಟ್ಯಾಪಿಂಗ್ 1836 ಕೋಟಿ ವೆಚ್ಚದಲ್ಲಿ ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ 450 ಕೋಟಿ ರೂಪಾಯಿ ರಾಜ ಕಾಲುವೆಗಳ ಮೇಲ್ದರ್ಜೆಗೆ ಏರಿಸಲು 273 ಕೋಟಿ ಮೀಸಲು ಇಡಲಾಗಿದೆ ಎಂದರು.

ಬೆಂಗಳೂರಿನಲ್ಲಿ ಸುರಂಗಮಾರ್ಗ ನಿರ್ಮಾಣಕ್ಕೆ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದರು ಕೆ ಆರ್ ಪುರಂ ನಿಂದ ಮೈಸೂರು ರಸ್ತೆ ಅವರಿಗೆ 40 ಕಿಲೋಮೀಟರ್ ಸುರಂಗ ಮಾರ್ಗಕ್ಕೆ 40,000 ಕೋಟಿ ವೆಚ್ಚದಲ್ಲಿ ಈ ಒಂದು ಸ್ವರ್ಗ ಮಾರ್ಗ ನಿರ್ಮಾಣವಾಗುತ್ತದೆ ಮೊದಲ ಹಂತದಲ್ಲಿ 17 km ಉದ್ದದ ಉತ್ತರ ಮತ್ತು ದಕ್ಷಿಣ ಕನ್ನಡ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೂ ಉತ್ತರ ಮತ್ತು ದಕ್ಷಿಣ ನಿರ್ಮಾಣವಾಗುತ್ತದೆ ಈ ಯೋಜನೆಗೆ 17780 ಕೋಟಿ ರೂಪಾಯಿ ಮತಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.

16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವಂತಿಲ್ಲ ಸಾಮಾಜಿಕ ಮಾಧ್ಯಮ ಬಳಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಮಹತ್ವದ ಘೋಷಣೆ ಮಾಡಿದರು. ಇನ್ನು ರಾಜ್ಯದ 11 ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ ಮಾಡಲಾಗುತ್ತೆ, ದಕ್ಷಿಣ ಕರ್ನಾಟಕದಲ್ಲಿ ಎರಡು ಕಡೆ ಪೊಲೀಸ್ ಠಾಣೆ, ದಾವಣಗೆರೆ ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಹೊಸ ಠಾಣೆಗಳನ್ನು ಆರಂಭ ಮಾಡಲಾಗುತ್ತೆ. ರಾಜ್ಯದ ಐದು ಕೊಡೆ ರೇಷ್ಮೆ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ.

2025 ಮತ್ತು 26 ನೇ ಸಾಲಿನಲ್ಲಿ 216 ಸೇತುವೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 60 ಕೋಟಿ ವೆಚ್ಚದಲ್ಲಿ 10 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತೆ.ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದೇವೆ ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದು ಘೋಷಿಸಿದರು.

7 ಲಕ್ಷ ರೈತರಿಗೆ ಹನಿ ನೀರಾವರಿ ಸ್ಥಾಪನೆ 3 ಲಕ್ಷ ರೈತರಿಗೆ ಕೃಷಿ ಯಂತ್ರೋಪಗಳ ವಿತರಣೆ 363 ಕೋಟಿ ವೆಚ್ಚದಲ್ಲಿ ಕೃಷಿ ಹೊಂಡ ಸ್ಥಾಪನೆ 468 ಕೋಟಿ ವೆಚ್ಚದಲ್ಲಿ ಬಿತ್ತನೆ ಬೀಜ ವಿತರಣೆ. ಬೆಳಗಾವಿ ಕಲ್ಬುರ್ಗಿಯಲ್ಲಿ ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಗುತ್ತದೆ.ಅಲ್ಲದೇ ಹಸು ಎಮ್ಮೆ ಖರೀದಿಸಲು ಪ್ರೋತ್ಸಾಹ ಧನಕ್ಕೆ 40 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರುಬೆಂಗಳೂರಿನಲ್ಲಿ ಚಿರತೆ ಹಾವಳಿ ತಡೆಗಟ್ಟಲು, ಬನ್ನೇರುಘಟ್ಟದಲ್ಲಿ 5 ಕೋಟಿ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲಾಗುವುದು.ಪ್ರತಿ ತಾಲೂಕಿನಲ್ಲಿ ‘MSIL’ ವತಿಯಿಂದ ರೈತರ ಮಾಲ್ ಗಳ ಸ್ಥಾಪನೆ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಮೀಸಲು ಇಡಲಾಗಿದೆ ಮಿಲೆಟ್ ಹಬ್ ಗೆ ಏಕವಾಕ್ಯ ವ್ಯವಸ್ಥೆ ಜಾರಿಗೆ.

ಕುಕ್ಕೆ ಸುಬ್ರಮಣ್ಯ ದೇವಾಲಯ ಪ್ರಾಧಿಕಾರ ರಚನೆ ಕೊಲ್ಲೂರು ಮೂಕಾಂಬಿಕೆ ದೇವಾಲಯ ಪ್ರಾಧಿಕಾರ ರಚನೆ, ಕರ್ನಾಟಕ ಪ್ರವಾಸೋದ್ಯಮಕ್ಕೆ ಬಜೆಟ್ ನಲ್ಲಿ ಮತ್ತು ನೀಡಲಾಗಿದೆ ವಾರಣಾಸಿಯಲ್ಲಿ ಹೊಸ ಛತ್ರ ನಿರ್ಮಾಣ ಮಾಡಲಾಗುತ್ತೆ, ಶ್ರೀಶೈಲಂನಲ್ಲಿ ಹೊಸ ಯಾತ್ರೆ ನಿವಾಸಿ ನಿರ್ಮಾಣ ಮಾಡಲಾಗುತ್ತೆ . ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿಗೆ ಮಾಡಲಾಗುತ್ತೆ.

Share. Facebook Twitter LinkedIn WhatsApp Email

Related Posts

Budget (2)

BUDGET BREAKING : ರಾಜ್ಯದ ಆರೋಗ್ಯ ಇಲಾಖೆಯಲ್ಲಿ 2500 ಹುದ್ದೆಗಳು ಭರ್ತಿಗೆ ಸರ್ಕಾರ ಕ್ರಮ : ಸಿಎಂ ಸಿದ್ದರಾಮಯ್ಯ

06/03/2026 12:25 PM4 Mins Read
Karnataka Budget 2026-27 Presentation by CM Siddaramaiah

ಕರ್ನಾಟಕ ಬಜೆಟ್​ 2026-27 ಸಂಪೂರ್ಣ ವಿವರ (PDF ಪ್ರತಿ ಡೌನ್​ಲೋಡ್) ಮಾಡಿ

06/03/2026 12:24 PM1 Min Read
Budget (2)

BUDGET BREAKING : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಮರುನಾಮಕರಣ : ಸಿಎಂ ಸಿದ್ದರಾಮಯ್ಯ

06/03/2026 12:21 PM4 Mins Read
Recent News
Budget (2)

BUDGET BREAKING : ರಾಜ್ಯದ ಆರೋಗ್ಯ ಇಲಾಖೆಯಲ್ಲಿ 2500 ಹುದ್ದೆಗಳು ಭರ್ತಿಗೆ ಸರ್ಕಾರ ಕ್ರಮ : ಸಿಎಂ ಸಿದ್ದರಾಮಯ್ಯ

06/03/2026 12:25 PM
Karnataka Budget 2026-27 Presentation by CM Siddaramaiah

ಕರ್ನಾಟಕ ಬಜೆಟ್​ 2026-27 ಸಂಪೂರ್ಣ ವಿವರ (PDF ಪ್ರತಿ ಡೌನ್​ಲೋಡ್) ಮಾಡಿ

06/03/2026 12:24 PM
Budget (2)

BUDGET BREAKING : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಮರುನಾಮಕರಣ : ಸಿಎಂ ಸಿದ್ದರಾಮಯ್ಯ

06/03/2026 12:21 PM
Budget (2)

BUDGET BREAKING : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಗಂಗಾ ಕಲ್ಯಾಣ ಯೋಜನೆ’ಯಡಿ ಸಹಾಯಧನ 1,50,000 ರೂ.ಗೆ ಕ್ಕೆ ಏರಿಕೆ !

06/03/2026 12:18 PM
State News
Budget (2) KARNATAKA

BUDGET BREAKING : ರಾಜ್ಯದ ಆರೋಗ್ಯ ಇಲಾಖೆಯಲ್ಲಿ 2500 ಹುದ್ದೆಗಳು ಭರ್ತಿಗೆ ಸರ್ಕಾರ ಕ್ರಮ : ಸಿಎಂ ಸಿದ್ದರಾಮಯ್ಯ

By kannadanewsnow0506/03/2026 12:25 PM KARNATAKA 4 Mins Read

ಬೆಂಗಳೂರು : ಸಿಎಂ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್ 2026ಕ್ಕೆ ಮಂಡನೆಗೆ ಪೂರ್ವದಲ್ಲಿ ವಿಧಾನಸೌಧದಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ…

Karnataka Budget 2026-27 Presentation by CM Siddaramaiah

ಕರ್ನಾಟಕ ಬಜೆಟ್​ 2026-27 ಸಂಪೂರ್ಣ ವಿವರ (PDF ಪ್ರತಿ ಡೌನ್​ಲೋಡ್) ಮಾಡಿ

06/03/2026 12:24 PM
Budget (2)

BUDGET BREAKING : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಮರುನಾಮಕರಣ : ಸಿಎಂ ಸಿದ್ದರಾಮಯ್ಯ

06/03/2026 12:21 PM
Budget (2)

BUDGET BREAKING : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಗಂಗಾ ಕಲ್ಯಾಣ ಯೋಜನೆ’ಯಡಿ ಸಹಾಯಧನ 1,50,000 ರೂ.ಗೆ ಕ್ಕೆ ಏರಿಕೆ !

06/03/2026 12:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.