ಬೆಂಗಳೂರು : ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಆದರೆ ಇದೀಗ ರಾಜ್ಯ ಸರ್ಕಾರ ಮಹಾ ಎಡವಟ್ಟು ಮಾಡಿದ್ದು ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದುವಿನಲ್ಲು ಆಹ್ವಾನ ಪತ್ರಿಕೆಯನ್ನು ಸರ್ಕಾರ ಪ್ರಕಟಿಸಿದೆ.
ಹೌದು ಆಡಳಿತ ಭಾಷೆ ಕನ್ನಡವನ್ನೇ ರಾಜ್ಯ ಸರ್ಕಾರ ಮರೆತುಬಿಟ್ಟಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆ ಉರ್ದುವಿನಲ್ಲೂ ಪ್ರಕಟ ಮಾಡಿದ್ದಾರೆ. ರೋಗ ನಿರೋಧಕ ಕಿಚ್ಚ ಮತ್ತು ಆಂಬುಲೆನ್ಸ್ ಸೇವೆಗೆ ಚಲನೆ ನೀಡುವಂತಹ ಒಂದು ಮಹತ್ವದ ಕಾರ್ಯಕ್ರಮ ನೆಹರುತಾರಾಲಯದಲ್ಲಿ ಆಯೋಜನೆ ಮಾಡಲಾಗಿತ್ತು.
ಉರ್ದು ಭಾಷೆಯಲ್ಲಿ ಸರ್ಕಾರದಿಂದ ಆಹ್ವಾನ ಪತ್ರಿಕೆ ಪ್ರಕಟ ಆಗಿದೆ. ಕರ್ನಾಟಕದಲ್ಲಿ ಇದ್ದೀರೋ ಅಥವಾ ಪಾಕಿಸ್ತಾನದಲ್ಲಿ ಇದ್ದೀರೋ ಎಂದು ಸಚಿವ ದಿನೇಶ್ ಗುಂಡೂರಾವ್ಗೆ ಸಾ.ರಾ ಗೋವಿಂದ್ ಪ್ರಶ್ನೆ ಮಾಡಿದ್ದಾರೆ. ಅಂದು ನಿಮ್ಮ ಅಪ್ಪ ಇಂದು ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಸಾ.ರಾಗೋವಿಂದು ಆಕ್ರೋಶ ಹೊರಹಾಕಿದ್ದಾರೆ.ಈ ಕೂಡಲೇ ಸಚಿವ ದಿನೇಶ್ ಗುಂಡೂರಾವ್ ಬೇಷರತ್ತು ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೇರೆ ರೂಪದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.








