ಸಾಮಾನ್ಯವಾಗಿ ದೊಡ್ಡವರೇ ಎಷ್ಟೋ ಬಾರಿ ಲಿಪ್ಟ್ ನಲ್ಲಿ ಸಿಲುಕಿ ಪರದಾಟ ನಟಿಸಿರುವ ಘಟನೆಗಳು ವರದಿಯಾಗಿವೆ. ಇದೀಗ ಸಮಾಜಿಕ ಜಾಲತಾಣದಲ್ಲಿ ಲಿಫ್ಟ್ ನಲ್ಲಿ ಸಿಲುಕಿದ ಇಬ್ಬರು ಪುಟ್ಟ ಮಕ್ಕಳನ್ನು ಓರ್ವ ಬಾಲಕಿ ದೃತಿಗೆಡದೆ ಧೈರ್ಯವಾಗಿ ರಕ್ಷಣೆ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಹೌದು ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಲಿಫ್ಟ್ ನಲ್ಲಿ ಮಕ್ಕಳಿದ್ದಾಗಲೇ ಏಕಾಏಕಿ ಡೋರ್ ಲಾಕ್ ಆಗಿದೆ. ಮಕ್ಕಳ ರಕ್ಷಣೆಗೆ ಪ್ರಯತ್ನ ಮಾಡಲಾಗಿದೆ. ಓರ್ವ ಬಾಲಕಿ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾಳೆ. ಬಾಲಕಿಯ ಪ್ರಯತ್ನಕ್ಕೆ ಸ್ಥಳೀಯ ನಿವಾಸಿಗಳು ನೆರವಾಗಿದ್ದಾರೆ. ಬಾಲಕಿ ಬಾಗಿಲಲ್ಲಿ ಸಿಲುಕಿದರೂ ಕೂಡ ಭಯಪಡದೆ ಮಕ್ಕಳನ್ನು ರಕ್ಷಣೆ ಮಾಡಿದ್ದಾಳೆ. ಬಾಲಕಿಯ ಸಮಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.








