ನವದೆಹಲಿ: ವಿಶ್ವದ ವಿಭಿನ್ನ ರುಚಿಗಳನ್ನು ಪರಿಚಯಿಸುವ ಖ್ಯಾತ ಫುಡ್ ಗೈಡ್ ‘ಟೇಸ್ಟ್ ಅಟ್ಲಾಸ್’ (TasteAtlas) ಏಪ್ರಿಲ್ ತಿಂಗಳ ‘ವಿಶ್ವದ ಟಾಪ್ 100 ಪ್ಯಾನ್‌ಕೇಕ್‌ಗಳ’ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಜಾಗತಿಕ ಪಟ್ಟಿಯಲ್ಲಿ ಭಾರತದ 11 ಜನಪ್ರಿಯ ಖಾದ್ಯಗಳು ಸ್ಥಾನ ಪಡೆದು ದೇಶದ ಕೀರ್ತಿ ಹೆಚ್ಚಿಸಿವೆ.
ಪಾಶ್ಚಿಮಾತ್ಯ ದೇಶಗಳಲ್ಲಿ ‘ಪ್ಯಾನ್‌ಕೇಕ್’ ಎಂದರೆ ಸಿಹಿಯಾದ ತಿಂಡಿ ಎಂಬ ಭಾವನೆ ಇದೆ. ಆದರೆ ಟೇಸ್ಟ್ ಅಟ್ಲಾಸ್ ತನ್ನ ಪಟ್ಟಿಯಲ್ಲಿ ಭಾರತದ ದೋಸೆಗಳನ್ನು ಈ ವರ್ಗಕ್ಕೆ ಸೇರಿಸಿದೆ. ಹದವಾಗಿ ಹುದುಗು (Fermentation) ಬಂದ ಹಿಟ್ಟು ಮತ್ತು ತಯಾರಿಕೆಯ ವಿಶಿಷ್ಟ ಶೈಲಿಯಿಂದಾಗಿ ಭಾರತೀಯ ಖಾದ್ಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಖಾದ್ಯಗಳು:
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತೀಯ ‘ಪ್ಯಾನ್‌ಕೇಕ್’ಗಳು ಇಲ್ಲಿವೆ:
-
ಮಸಾಲ ದೋಸೆ: ಜಾಗತಿಕ ಮಟ್ಟದಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ಭಾರತದ ಹೆಮ್ಮೆಯಾಗಿ ಹೊರಹೊಮ್ಮಿದೆ.
-
ದೋಸೆ (ತಮಿಳುನಾಡು): 15ನೇ ಸ್ಥಾನ.
-
ಪೇಪರ್ ದೋಸೆ: 35ನೇ ಸ್ಥಾನ.
-
ಅಪ್ಪಂ (ಕೇರಳ): 60ನೇ ಸ್ಥಾನ.
-
ಪೆಸರಟ್ಟು (ಆಂಧ್ರಪ್ರದೇಶ): 63ನೇ ಸ್ಥಾನ.
-
ಉತ್ತಪ್ಪಂ: 74ನೇ ಸ್ಥಾನ.
-
ನೀರ್ ದೋಸೆ (ಕರ್ನಾಟಕ): 84ನೇ ಸ್ಥಾನ. ನಮ್ಮ ಮಲೆನಾಡು ಮತ್ತು ಕರಾವಳಿಯ ಈ ನೆಚ್ಚಿನ ಖಾದ್ಯ ವಿಶ್ವಮಟ್ಟದಲ್ಲಿ 84ನೇ ಸ್ಥಾನ ಅಲಂಕರಿಸಿದೆ.
-
ಮಾಲ್ಪುವಾ: 85ನೇ ಸ್ಥಾನ.
-
ಕಲ್ಲಪ್ಪಂ (ಕೇರಳ): 95ನೇ ಸ್ಥಾನ.
-
ರವಾ ದೋಸೆ: 96ನೇ ಸ್ಥಾನ.
-
ಪಿಠಾ (ಒಡಿಶಾ): 98ನೇ ಸ್ಥಾನ.
ವಿಶೇಷತೆ ಏನು? ವಿಶ್ವದ ಇತರ ಭಾಗಗಳಲ್ಲಿ ಪ್ಯಾನ್‌ಕೇಕ್‌ಗಳನ್ನು ಮೇಪಲ್ ಸಿರಪ್ ಅಥವಾ ಹಣ್ಣುಗಳೊಂದಿಗೆ ಸವಿಯುತ್ತಾರೆ. ಆದರೆ ಭಾರತದ ಈ ದೋಸೆಗಳು ಸಾಂಬಾರ್, ಚಟ್ನಿಗಳಂತಹ ಮಸಾಲೆಯುಕ್ತ ಸೈಡ್ ಡಿಶ್‌ಗಳೊಂದಿಗೆ ವಿಶ್ವದ ಆಹಾರ ಪ್ರಿಯರ ಮನಗೆದ್ದಿವೆ. ತಯಾರಿಕೆಯಲ್ಲಿನ ಸಂಯಮ, ಹಿಟ್ಟನ್ನು ಹುದುಗಿಸುವ ಕಲೆ ಮತ್ತು ಭಾರತೀಯ ಸಾಂಬಾರ ಪದಾರ್ಥಗಳ ಬಳಕೆ ಇವುಗಳಿಗೆ ವಿಶೇಷ ರುಚಿಯನ್ನು ನೀಡಿದೆ.
ಈ ಪಟ್ಟಿಯಲ್ಲಿ ಲಕ್ವಿಯಾದ ‘ಕಾರ್ಟುಪಿಯು ಪಂಕುಕಾಸ್’ (ಪೊಟಾಟೋ ಪ್ಯಾನ್‌ಕೇಕ್) ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್‌ನ ‘ಕ್ರೇಪ್ಸ್’ ನಂತರದ ಸ್ಥಾನಗಳನ್ನು ಪಡೆದಿವೆ. ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿಯು ಜಾಗತಿಕ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ.
ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್
ಹೃದಯಾಘಾತದ ಮೊದಲ ಲಕ್ಷಣಗಳನ್ನು ಗುರುತಿಸುವುದು ಹೇಗೆ? ಕಾರ್ಡಿಯಾಲಜಿಸ್ಟ್‌ಗಳ ಮಾಹಿತಿ ಇಲ್ಲಿದೆ








