ಬೆಂಗಳೂರು : ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ಗೆ ಮುಂಬಡ್ತಿ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ಸ್ನೇಹಮಯಿ ದೂರಿಗೆ ಪತ್ರದ ಮೂಲಕ ಶಾಲಿನಿ ರಜನಿಶ್ ಸ್ಪಷ್ಟೀಕರಣ ನೀಡಿದ್ದಾರೆ. ತಾವು ಸಲ್ಲಿಸಿರುವ ದೂರಿನಲ್ಲಿ ಮಾಡಿರುವ ಆರೋಪಗಳು ನಿರಾಧಾರ ಆಗಿವೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಸ್ಪಷ್ಟನೆ ನೀಡಿದ್ದಾರೆ.
ಮುಡಾ ಮಾಜಿ ಅಧ್ಯಕ್ಷ ನಟೇಶ್ ಅವರಿಗೆ ಭರ್ತಿ ನೀಡುವ ವಿಚಾರವಾಗಿ ಕೋಟ್ಯಾಂತರ ಹಣ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣಗೆ ತಿರುಗೇಟು ನೀಡಿದ್ದಾರೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿಲ್ಲ. ಸರ್ಕಾರಕ್ಕೆ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ ಆರೋಪ ಸಂಬಂಧ ಸೂಕ್ತ ದಾಖಲೆಗಳನ್ನು ಒದಗಿಸಿದರೆ ನಿಯಮಾನುಸಾರ ಸಾಕ್ಷಿ ಆಧಾರಗಳನ್ನು ಖಂಡಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪತ್ರದ ಮೂಲಕ ಸಿ ಎಸ್ ಶಾಲಿನಿ ರಜನೀಶ್ ಸ್ಪಷ್ಟನೆ ನೀಡಿದ್ದಾರೆ.








