Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

ಲೈಂಗಿಕ ದೌರ್ಜನ್ಯ ದೂರು ನೀಡಲು ಸಾಂಪ್ರದಾಯಿಕ ಕುಟುಂಬಗಳು ಹಿಂಜರಿಯುತ್ತಿವೆ: ಹೈಕೋರ್ಟ್ ಕಳವಳ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ
KARNATAKA

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

By ಸುರೇಶ್‌

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ರೈತರ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್ ಯೋಜನೆ ಮೂಲತಃ ನನ್ನ ಕನಸಿನ ಕೂಸೇ ಹೊರತು ಬೇರೆಯವರದಲ್ಲ ಎಂದು ಸ್ಪಷ್ಟಪಡಿಸಿದರು. “ರೈತರನ್ನು ಒಕ್ಕಲೆಬ್ಬಿಸಿ ಎಂದು ನಿಮ್ಮ ಅಜ್ಜಯ್ಯ ಹೇಳಿದ್ದಾರಾ? ನಿಮಗೆ ಯಾವ ರೀತಿ ಬದುಕಬೇಕು ಎಂಬ ಕರುಣೆಯನ್ನು ಅವರು ತೋರಿಸಿಲ್ಲವೇ?” ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ತೀವ್ರ ಆಕ್ರೋಶ ಹೊರಹಾಕಿದರು.

“ನನ್ನ ಉದ್ದೇಶವೇ ಬೇರೆ ಇತ್ತು, ಇವರದ್ದು ಲ್ಯಾಂಡ್ ದಂಧೆ”

ಯೋಜನೆಯ ಹಿನ್ನೆಲೆಯನ್ನು ನೆನಪಿಸಿಕೊಂಡ ಕುಮಾರಸ್ವಾಮಿ, ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಹೊಂದಿದ್ದ ಉದ್ದೇಶಕ್ಕೂ, ಈಗಿನ ಸರ್ಕಾರದ ಉದ್ದೇಶಕ್ಕೂ ಭಾರಿ ವ್ಯತ್ಯಾಸವಿದೆ ಎಂದು ಆರೋಪಿಸಿದರು. ಅಂದು ತಾವು ಜನಪರ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದಾಗಿ ಹೇಳಿದ ಅವರು, “ಇವತ್ತು ಇವರು ಟೌನ್‌ಶಿಪ್ ಮಾಡುತ್ತಿರುವುದು ಕೇವಲ ಲ್ಯಾಂಡ್ ದಂಧೆ ನಡೆಸಲು ಮಾತ್ರ” ಎಂದು ನೇರ ವಾಗ್ದಾಳಿ ನಡೆಸಿದರು.

ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದನ್ನು ಪ್ರಶ್ನಿಸಿದ ಅವರು, “ಇಂತಹ ಅತ್ಯಂತ ಫಲವತ್ತಾದ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ನೀವು ಸಾಧನೆ ಮಾಡಲು ಹೊರಟಿರುವುದಾದರೂ ಏನು? ಇವತ್ತು ಅಲ್ಲಿ ಈ ಯೋಜನೆಯ ಅವಶ್ಯಕತೆಯಾದರೂ ಏನಿದೆ?” ಎಂದು ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲೇ ಸೌಕರ್ಯಗಳಿಲ್ಲ, ಅಲ್ಲಿಗೆ ಏನು ನೀಡುತ್ತೀರಿ?

ಪ್ರಸ್ತುತ ಬೆಂಗಳೂರು ನಗರ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆಯನ್ನು ಪ್ರಸ್ತಾಪಿಸಿದ ಹೆಚ್‌ಡಿಕೆ, ರಾಜಧಾನಿಯನ್ನೇ ಸರಿಯಾಗಿ ನಿರ್ವಹಿಸಲಾಗದ ಸರ್ಕಾರ ಬಿಡದಿಯಲ್ಲಿ ಏನು ಮಾಡಲು ಹೊರಟಿದೆ ಎಂದು ಟೀಕಿಸಿದರು. “ಬೆಂಗಳೂರು ನಗರದಲ್ಲೇ ಇವತ್ತು ಸರಿಯಾದ ಮೂಲಭೂತ ಸೌಕರ್ಯಗಳನ್ನು ಕೊಡಲು ಇವರಿಂದ ಸಾಧ್ಯವಾಗುತ್ತಿಲ್ಲ. ಇನ್ನು ಅಲ್ಲಿ ಯಾವ ಮೂಲಭೂತ ಸೌಕರ್ಯ ಕೊಡುತ್ತೇವೆ ಎಂದು ಭೂಸ್ವಾಧೀನ ಮಾಡಲು ಹೊರಟಿದ್ದಾರೆ?” ಎಂದು ಪ್ರಶ್ನಿಸಿದರು.

ಕೊನೆಯದಾಗಿ, ಈ ಇಡೀ ಯೋಜನೆಯ ಹಿಂದೆ ದೊಡ್ಡ ಮಟ್ಟದ ಲೂಟಿ ಅಡಗಿದೆ ಎಂದು ಆರೋಪಿಸಿದ ಕೇಂದ್ರ ಸಚಿವರು, ಕೇವಲ ರಿಯಲ್ ಎಸ್ಟೇಟ್ ದಂಧೆ ಮತ್ತು ಲೂಟಿ ಮಾಡುವ ಏಕೈಕ ಉದ್ದೇಶದಿಂದ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದರು. ಈ ಮೂಲಕ ಬಿಡದಿ ಟೌನ್‌ಶಿಪ್ ವಿಚಾರವಾಗಿ ಉಭಯ ನಾಯಕರ ನಡುವಿನ ರಾಜಕೀಯ ಜಿದ್ದಾಜಿದ್ದಿ ಮತ್ತಷ್ಟು ಬಿರುಸುಗೊಂಡಿದೆ.

Share. Facebook Twitter LinkedIn WhatsApp Email

Related Posts

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

2 Mins Read

SHOCKING : ಪೋಷಕರೆ ಹುಷಾರ್ : ಮಂಡ್ಯದಲ್ಲಿ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು!

1 Min Read

ಬಾಗಲಕೋಟೆಯಲ್ಲಿ ಮನಕಲಕುವ ಘಟನೆ : ಮರಿ ಸತ್ತಿದ್ದಕ್ಕೆ ಸಮಾಧಿ ಮೇಲೆ ಗಂಟೆಗಟ್ಟಲೆ ಕುಳಿತ ತಾಯಿ ನಾಯಿ!

2 Mins Read
Recent News

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

ಲೈಂಗಿಕ ದೌರ್ಜನ್ಯ ದೂರು ನೀಡಲು ಸಾಂಪ್ರದಾಯಿಕ ಕುಟುಂಬಗಳು ಹಿಂಜರಿಯುತ್ತಿವೆ: ಹೈಕೋರ್ಟ್ ಕಳವಳ

BREAKING : ಸೇನಾ ಮುಖ್ಯಸ್ಥರಾಗಿ ಲೆ.ಜನರಲ್ ಧೀರಜ್ ಸೇಠ್ ನೇಮಕ ಮಾಡಿದ ಕೇಂದ್ರ ಸರ್ಕಾರ | Lt. General Dheeraj Seth

State News
KARNATAKA

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

By ಸುರೇಶ್‌ KARNATAKA 2 Mins Read

ಮೈಸೂರು : ಜಿಲ್ಲೆಯ ಸಾಲಿಗ್ರಾಮದಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಹಸುಗೂಸುಗಳನ್ನು ಉಸಿರುಗಟ್ಟಿಸಿ ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಅತ್ಯಂತ ಹೃದಯವಿದ್ರಾವಕ ಮತ್ತು…

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

SHOCKING : ಪೋಷಕರೆ ಹುಷಾರ್ : ಮಂಡ್ಯದಲ್ಲಿ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು!

ಬಾಗಲಕೋಟೆಯಲ್ಲಿ ಮನಕಲಕುವ ಘಟನೆ : ಮರಿ ಸತ್ತಿದ್ದಕ್ಕೆ ಸಮಾಧಿ ಮೇಲೆ ಗಂಟೆಗಟ್ಟಲೆ ಕುಳಿತ ತಾಯಿ ನಾಯಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.