ಬೆಂಗಳೂರು : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಜೊತೆಗಿನ ಅಕ್ರಮ ಸಂಬಂಧದ ಕುರಿತು ಮಗಳು ಬಯಲು ಮಾಡಿದ್ದರಿಂದ, ಪತಿಯ ಸಹೋದರನನ್ನೇ ಕೊಲೆ ಮಾಡಿ ಸದ್ಯ ಜೈಲಿನಲ್ಲಿ ಇರುವ ಸುಚಿತ್ರಾಳ ಕಾಮಪುರಾಣ ಇದೀಗ ಮತ್ತಷ್ಟು ಬಯಲಾಗಿದೆ.
ಹೌದು ಕಲಬುರಗಿಯ ಜಮೀನ್ದಾರನ ಜೊತೆ ಮೂರು ವರ್ಷ ಲವ್ವಿಡವ್ವಿಯಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಜೊತೆ ಮೂರು ವರ್ಷದಿಂದ ಲಿವ್-ಇನ್‌ನಲ್ಲಿದ್ದ ಸುಚಿತ್ರಾ, ಅಪ್ಪು ಮೆಲೋಡಿಸ್ ಗುಲ್ಬರ್ಗ ಎಂದು ಆತನ ಹಣದಿಂದ ಆರ್ಕೆಸ್ಟ್ರಾ ಮಾಡಿಕೊಂಡಿದ್ದಳು ಕೇವಲ ಶರಣಬಸಪ್ಪ ಅಷ್ಟೇ ಅಲ್ಲದೆ ಇನ್ನು ಎಷ್ಟೋ ಅನೇಕ ಯುವಕರ ತಲೆಕೆಡಿಸಿ ತನ್ನ ಗಾಳಕ್ಕೆ ಬೀಳಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ.
ಕಲಬುರಗಿಗೆ ಹೋಗಿ ಆತನೊಂದಿಗೆ ಸುಚಿತ್ರಾ ಸುತ್ತಾಡುತ್ತಿದ್ದಳು. ಗಂಡನಿಲ್ಲದ ಸಂದರ್ಭದಲ್ಲಿ ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಆತ ನೀಡಿದ ಹಣದಲ್ಲಿ ಸಿದ್ದಾಪುರದಲ್ಲಿ ಬಡ್ಡಿಗೆ ಹಣ ನೀಡುತ್ತಿದ್ದಳು. ಈ ವಿಷಯ ಜ್ಯೋತಿಷಿ ಕಮಲಾಕರ್ ಭಟ್‌ಗೆ ತಿಳಿದು ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ಕೊನೆಗೆ ಜಮೀನ್ದಾರನ ಬಿಟ್ಟು ಜ್ಯೋತಿಷಿ ಕಮಲಾಕರ್ ಭಟ್ ಕೈ ಹಿಡಿದಿದ್ದಳು. ಸುಚಿತ್ರಾ ಹಣದ ದಾಹಕ್ಕೆ ಕಾರ್, ಬೈಕ್‌ಗಳನ್ನ ಉಡುಗೊರೆಯಾಗಿ ಕಮಲಾಕರ್ ಭಟ್ ನೀಡಿದ್ದ.
ಇನ್ನು ಈ ಒಂದು ಪ್ರಕರಣದಲ್ಲಿ ಸಾವನಪ್ಪಿದ ವಸಂತ ನಾಯಕ ಅವರ ಪತ್ನಿ ಕಮಲಾಕರ್ ಭಟ್ ಮತ್ತು ಸುಚಿತ್ರ ವಿರುದ್ಧ ಅನೇಕ ಗಂಭೀರ ಆರೋಪ ಮಾಡಿದ್ದಾರೆ. ಸುಚಿತ್ರ ಜೈಲಿನಿಂದ ಹೊರಗಡೆ ಬಂದಾಳೆ ನನ್ನ ಮಕ್ಕಳನ್ನು ಸಾಯಿಸುತ್ತಾಳೆ. ಈ ಹಿಂದೆ ಸುಚಿತ್ರ ಮತ್ತು ಗ್ಯಾಂಗ್ ನನ್ನ ಮಗಳ ಕೊಲೆ ಮಾಡಲು ಬಂದಿದ್ದರು. ತಕ್ಷಣ ನಾನು ನನ್ನ ಮಗಳನ್ನು ಕರೆದುಕೊಂಡು ಒಳಗಡೆ ಹೋದೆ. ನನ್ನ ಪತಿಯ ಸಾವಿಗೆ ಪೊಲೀಸರೇ ನೇರ ಹೊಣೆಗಾರರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.








