ಮೈಸೂರು : ಸಿಎಂ ಸಿದ್ದರಾಮಯ್ಯಗೆ ಎಚ್ ಡಿ ದೇವೇಗೌಡ ಕುಮಾರ ಸ್ವಾಮಿಯೇ ಟಾರ್ಗೆಟ್ ಆಗಿದ್ದಾರೆ. ದೇವೇಗೌಡರು ಹಾಗೂ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಯಾವ ರೀತಿ ದುರುಪಯೋಗ ಮಾಡಿಕೊಂಡರು ಎಂದು ಗೊತ್ತಿದೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದರು.
ಸಿನಿಮಾ ರಂಗದಲ್ಲಿ ದುಡಿದ ದುಡ್ಡಿನಲ್ಲಿ 43 ಎಕರೆ ತೆಗೆದುಕೊಂಡಿದ್ದೆ ನನಗೆ ಸೇರಿದ ನಾಲ್ಕು ಎಕರೆ ವಶಪಡಿಸಿಕೊಳ್ಳಲು SIT ರಚನೆ ಮಾಡುತ್ತೀರಾ? ಇಷ್ಟೊಂದು ಕಿರುಕುಳ ಕೊಡುತ್ತೀರಾ? ನ್ಯಾಯಾಲಯದಲ್ಲಿ ಇನ್ನೂ ಎರಡು ಕೇಸುಗಳು ಎದುರಿಸುತ್ತಿದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಹೆಚ್‍ಡಿ ದೇವೇಗೌಡರ ಜೊತೆಗೆ ಬೆಳೆದು ಈ ರೀತಿ ಮಾಡುತ್ತಿದ್ದಾರೆ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಮುಂದಿನ ಚುನಾವಣೆಯಲ್ಲಿ ಮೈಸೂರಿನ 11 ಕ್ಷೇತ್ರ ಗೆದ್ದರೂ ಆಶ್ಚರ್ಯವಿಲ್ಲ ಜೆಡಿಎಸ್ ಬಿಜೆಪಿ ಮೈತ್ರಿ 11ಕ್ಕೆ 11 ಸೀಟ್ ಗೆದ್ದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.








