ಮೈಸೂರು : ಇಂದಿನ ಇಲಾಖೆಯಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಚಿವ ಕೆಜೆ ಜಾರ್ಜ್ ಇತ್ತೀಚಿಗೆ ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯಗೆ ಬರೆದಿದ್ದರು ಎನ್ನುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಚಿವ ಜಾರ್ಜ್ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಅವರು ಕೂಡ ಇದೇ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಹೌದು ಯತೀಂದ್ರ ವಿರುದ್ಧ ಮತ್ತೊಂದು ಹಸ್ತಕ್ಷೇಪದ ಆರೋಪ ಕೇಳಿ ಬಂದಿದ್ದು ಗೃಹ ಸಚಿವ ಜಿ ಪರಮೇಶ್ವರ್ ಅವರ ಮುಂದೆ ತನ್ವೀರ್ ಸೇಠ್ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರಹಾಕಿದ ಪ್ರಕರಣ ನಡೆದಿದೆ. ಪರಮೇಶ್ವರ್ ಮನವೊಲಿಸಲು ಯತ್ನಿಸಿದರು ಕೂಡ ತನ್ವೀರ್ ಸೇಠ್ ಯಾವುದಕ್ಕೂ ಜಗ್ಗಿಲ್ಲ. ಬಳಿಕವಲ್ಲದ ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು.








