ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದಂತ ರಾಜೀವ್ ಗೌಡನನ್ನು ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದರು. ಈ ಬಂಧನದ ಬಳಿಕ ಪೌರಾಯುಕ್ತೆ ಅಮೃತಾ ಗೌಡ ಮೊದಲ ಪ್ರತಿಕ್ರಿಯೆ ಏನಾಗಿತ್ತು ಅಂತ ಮುಂದಿದೆ ಓದಿ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಘಟನೆಯಿಂದಾಗಿ ನಮ್ಮ ಮನೆಯವರು ಬಹಳ ಹೆದರಿದ್ದರು. ಬೆದರಿಕೆ ಪತ್ರ ಬಂದಾಗ ನಾನು ನೀಡಿದ್ದೇನೆ. ಪೊಲೀಸರ ತನಿಖೆಗೆ ನಾನು ಸಹಕಾರ ನೀಡಿದ್ದೇನೆ ಎಂಬುದಾಗಿ ಮೊದಲ ಪ್ರತಿಕ್ರಿಯೆ ನೀಡಿದರು.
ಅಂದಹಾಗೇ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡ ಬಂಧಿಸಲಾಗಿದೆ. 3 ಜಿಲ್ಲೆಯ ಪೊಲೀಸರ ತಂಡದಿಂದ ರಾಜೀವ್ ಗೌಡ ಬಂಧಿಸಲಾಗಿದೆ. ಕಳೆದ ಎರಡು ದಿನಗಳಿಂದ ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಯ ಪೊಲೀಸರಿಂದ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು.
ಮಂಗಳೂರಿನಿಂದ ಎಸ್ಕೇಪ್ ರಾಜೀವ್ ಗೌಡ ಆಗಿದ್ದರು. ರಾಜೀವ್ ಗೌಡ ಬಂಧನಕ್ಕೆ ಕೇಂದ್ರ ವಲಯದ ಐಜಿಪಿ ಲಾಬೂರಾಮ್ ವಿಶೇಷ ತಂಡ ರಚಿಸಿದ್ದರು. ಜನವರಿ.12ರಂದು ಪೌರಾಯುಕ್ತೆ ಅಮೃತಾ ಗೌಡಗೆ ಕರೆ ಮಾಡಿ ಧಮ್ಕಿ ಹಾಕಿದ್ದರು.
CRIME NEWS: ಆಘಾತಕಾರಿ ಘಟನೆ: ಕೇವಲ 22 ರೂಪಾಯಿ ಸಾಲ ವಾಸ್ ಕೊಡದಿದ್ದಕ್ಕೆ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?








