ಚಿಕ್ಕಬಳ್ಳಾಪುರ : ಮೂರ್ಚೆ ರೋಗ ಇದ್ದಂತಹ ಯುವಕನೊಬ್ಬ ಅಸ್ವಸ್ಥಗೊಂಡು ಬೋಲೇರೋ ವಾಹನದಲ್ಲಿ ಮಲಗಿದ್ದಲ್ಲಿಯೇ ಸಾವನಪ್ಪಿದ್ದು, ವಾಹನದ ಮಾಲೀಕ ಬಂಧು ನೋಡಿದಾಗ ಯುವಕವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಲ್ಲಿ ನಡೆದಿದೆ.
ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಒಂದು ಘಟನೆ ನಡೆದಿದೆ. ಗೌರಿಬಿದನೂರು ನಗರದ ನಿವಾಸಿ ಸಲ್ಮಾನ್ ಮೃತ ದುರ್ದೈವಿ ಎಂದು ತಿಳಿದುಬಂದಿದ್ದು, ಮೂರ್ಛೆ ರೋಗದಿಂದ ಬಳಲುತ್ತಿದ್ದ ಸಲ್ಮಾನ್ ಅಸ್ವಸ್ಥಗೊಂಡು ವಾಹನದಲ್ಲಿ ಕುಳಿತಿದ್ದ. ವಾಹನದ ಮಾಲೀಕ ಬಂದು ನೋಡಿದಾಗ ಸಲ್ಮಾನ್ ಮೃತಪಟ್ಟಿದ್ದ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .