ರಾಮನಗರ : ಕನಕಪುರದಲ್ಲಿರುವ ನಾವೆಲ್ಲರೂ ಬೆಂಗಳೂರು ಜಿಲ್ಲೆಗೆ ಸೇರಿದವರು ಹಾಗಾಗಿ ಶೀಘ್ರದಲ್ಲಿ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದರು.
ಕನಕಪುರ ತಾಲೂಕಿನ ನಾವೆಲ್ಲರೂ ಬೆಂಗಳೂರು ಜಿಲ್ಲೆಗೆ ಸೇರಿದವರು ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಸಚಿವ ಸಂಪುಟ ಅಸ್ತು ಅಂದಿದೆ. ಈಗಾಗಲೇ ದೆಹಲಿಗೂ ಕೂಡ ಕಳುಹಿಸಿದ್ದೇವೆ. ಆದಷ್ಟು ಬೇಗ ಕನಕಪುರ ತಾಲೂಕು, ಬೆಂಗಳೂರು ಜಿಲ್ಲೆಗೆ ಸೇರ್ಪಡೆಯಾಗುತ್ತದೆ ಎಂದು ತಿಳಿಸಿದರು.
ಎಚ್ಡಿಕೆ ನಾವು ರಿಯಲ್ ಎಸ್ಟೇಟ್ ಮಾಡೋದಕ್ಕೆ ಬಂದಿದ್ದೇವೆ ಅಂತ ಹೇಳುತ್ತಾರೆ. ಇಲ್ಲಿ ನನ್ನ ಜಮೀನು ಏನಾದರೂ ಇದೆಯಾ ಎಂದು ಪ್ರಶ್ನಿಸಿದರು. ನೀನು ಹಾಸನದಿಂದ ಬಂದು ಬಿಡದಿಯಲ್ಲಿ 200 ಎಕರೆ ಭೂಮಿ ಖರೀದಿಸಿದೆ. ಕುಂಬಳಗೋಡು ಸಮೀಪ ಕುಮಾರಸ್ವಾಮಿ ಭೂಮಿ ಖರೀದಿಸಿದ್ದಾರೆ. ದೊಡ್ಡ ಆಲಹಳ್ಳಿ ನನ್ನೂರು. ಸಿಪಿ ಯೋಗೇಶ್ವರ್ ಅವರದ್ದು ಚೆಕ್ಕರೆ ಗ್ರಾಮ. ನಿಮ್ಮ ಪಲ್ಲಕ್ಕಿ ಹೊರುವವನು ನಾನೇ. ನಾನು ಸತ್ತ ಬಳಿಕ ನನ್ನ ಹೆಣ ಹೋಗೋದು ದೊಡ್ಡ ಆಲಹಳ್ಳಿಗೆ. ಯೋಗೇಶ್ವರ್ ಹಣ ಚೆಕ್ಕರೆ ಗ್ರಾಮಕ್ಕೆ ಹೋಗುತ್ತದೆ ಎಂದು ತಿಳಿಸಿದರು.