ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೀಕರವಾದ ಕೊಲೆ ನಡೆದಿದ್ದು ಮಗನ ಕುಡಿತದ ಚಟದಿಂದ ಬೇಸತ್ತ ತಾಯಿಯೊಬ್ಬಳು ಹೆತ್ತ ಮಗನ್ನೇ ಕೊಲೆ ಮಾಡಿರುವ ಘಟನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.ಎನ್ ಆರ್ ಮೊಹಲ್ಲಾ ನಿವಾಸಿ ರಮೇಶ್ (43) ಕೊಲೆಯಾದ ವ್ಯಕ್ತಿ.
ಮಗ ರಮೇಶ್ ನನ್ನು ತಾಯಿ ಮಂಜುಳಾ ಭೀಕರವಾಗಿ ಕೊಲೆ ಮಾಡಿದ್ದು, ಪೊಲೀಸರು ಮಂಜುಳಾಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಮಂಜುಳಾ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮಗ ರಮೇಶ್ ದಿನಾಲು ತಾನು ಕುಡಿಯುವುದಕ್ಕೆ ಹಣ ಕೊಡು ಎಂದು ಪೀಡಿಸುತ್ತಿದ್ದ. ಹೀಗಾಗಿ ಆತನ ಹಿಂಸೆ ತಾಳಲಾರದೆ ಚಾಮುಂಡಿ ಬೆಟ್ಟಕ್ಕೆ ಕರೆದೋಯ್ದು ಕೊಲೆ ಮಾಡಿದ್ದಾರೆ. ಕಲ್ಲಿನಿಂದ ಹೊಡೆದು ಮಗನನ್ನು ತಾಯಿ ಕೊಲೆ ಮಾಡಿದ್ದಾರೆ ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







