ಹಾಸನ : ಹಾಸನ ಜಿಲ್ಲೆಯಲ್ಲಿ ಮತ್ತೆ ಲಾಂಗು ಮತ್ತು ಜಳಪಿಸಿದ್ದು ದುಷ್ಕರ್ಮಿಗಳಿಂದ ಉದ್ಯಮಿ ಮಂಜೇಗೌಡ ಎನ್ನುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಮಾರಣಾಂತಿಕವಾಗಿ ಹಳೆ ನಡೆಸಿ ದುರುಳರು ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.
ಜೋಡಿ ಗುಬ್ಬಿ ಗ್ರಾಮದ ಉದ್ಯಮಿ ಮಂಜೇಗೌಡ ಗೆ ಗಂಭೀರವಾದ ಗಾಯಗಳಾಗಿದ್ದು, ಪೆಟ್ರೋಲ್ ಬಂಕ್ ಮತ್ತು ಟ್ರ್ಯಾಕ್ಟರ್ ಶೋರೂಮ್ ಮಾಲೀಕರಾಗಿದ್ದಾರೆ. ಟ್ರಾಕ್ಟರ್ ಶೋರೂಮ್ ಬಳಿ ನಿಂತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳಿಂದ ಲಾಂಗು ಮಚ್ಚುಗಳಿಂದ ದಾಳಿ ನಡೆದಿದೆ. ಮರಣಾಂತಿಕವಾಗಿ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ.
ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ಹೆಲ್ಮೆಟ್ ಧರಿಸಿ ಬಂದಿದ್ದರು ಎನ್ನಲಾಗಿದೆ. ಸದ್ಯ ಮಂಜೇಗೌಡ ಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಮೈಸೂರಿಗೆ ಕಳುಹಿಸಿದ್ದಾರೆ. ಹಳೆಯ ವೈಶಮ್ಯ ಹಿಡಯಲಿ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತಂತೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








