ಕೋಲಾರ : ಒಂದುವರೆ ಎಕರೆ ಜಮೀನನ್ನು ಅಡವಿಟ್ಟು ಲಕ್ಷಾಂತರ ರೂ.ಸಾಲ ಪಡೆದಿದ್ದ ರೈತನೊಬ್ಬ ಸಾಲ ತೀರಿಸಿದ ಬಳಿಕವೂ ಕೂಡ ಜಮೀನು ಹಿಂತಿರುಗಿಸಿಲ್ಲವೆಂದು, ತನ್ನ ಜಮೀನನ್ನು ಅಡವಿಟ್ಟುಕೊಂಡಿದ್ದವರೆ ಎದುರುಗಡೆನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಸೋಮಯಾಜಲ ಎಂಬ ಹಳ್ಳಿಯಲ್ಲಿ ನಡೆದಿದೆ.
ಅಜರ್ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನಾರಪ್ಪ ಹಾಗೂ ವೆಂಕಟೇಶ ರೆಡ್ಡಿ ಎಂಬುವರ ಬಳಿ 55 ಲಕ್ಷ ಸಾಲ ಪಡೆಯಲು ಒಂದುವರೆ ಎಕರೆ ಜಾಗವನ್ನು ಅಜರ್ ಅಡವಿಟ್ಟಿದ್ದರು. ಈಗ ಜಮೀನು ವಾಪಾಸ್ ಕೊಡುವಂತೆ ಹೇಳಿದಾಗ ನಾರಪ್ಪ ಹಾಗೂ ವೆಂಕಟೇಶ್ ಸತಾಯಿಸುತ್ತಿದ್ದರು.
ಈ ಕಡೆ ಸಾಲ ಮಾಡಿ ಹಣ ತೀರಿಸಿದ್ದರಿಂದ ಹಣವು ಹೋಯಿತು ಆಕಡೆ ಜಮೀನು ಹೋಯಿತು ಎಂದು ಮನನೊಂದ ರೈತ ಅಜರ್ ಸಾಲ ಕೊಟ್ಟವರೆ ಎದುರೇ ವಿಷ ಸೇವಿಸಿದ್ದಾರೆ.ವಿಷ ಸೇವಿಸಿ ಕುಸಿದು ಬಿದ್ದ ಅಜಾರ್ ರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.