Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

ಜಾಮೀನು ಅರ್ಜಿಯ ತೀರ್ಪನ್ನು 24 ಗಂಟೆಯೊಳಗೆ ಪ್ರಕಟಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ!

ALERT : ತಂಬಾಕು ಪ್ರಿಯರೇ ಎಚ್ಚರ : ಯುವ ಜನರಲ್ಲಿ ಹೆಚ್ಚುತ್ತಿದೆ `ಕ್ಯಾನ್ಸರ್’ ಕಂಟಕ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೇ.13ಕ್ಕೆ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನೋತ್ಸವ ಆಚರಣೆ; ಟ್ರಸ್ಟಿ ವಿಜಯಕುಮಾರ್ ಹೆರಬೆಟ್ಟು
KARNATAKA

ಮೇ.13ಕ್ಕೆ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನೋತ್ಸವ ಆಚರಣೆ; ಟ್ರಸ್ಟಿ ವಿಜಯಕುಮಾರ್ ಹೆರಬೆಟ್ಟು

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ವಿಶ್ವವಿಖ್ಯಾತ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಎಸ್. ರಾಮಪ್ಪ ಅವರ 74ನೇ ಜನ್ಮದಿನವನ್ನು ಮೇ 13ರಂದು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಾಗರದ ಸಿಗಂದೂರು ಚೌಡಮ್ಮ ಎಜ್ಯುಕೇಷನಲ್ ಚಾರಿಟೆಬಲ್ ಟ್ರಸ್ಟ್‌ನ ವಿಜಯಕುಮಾರ್ ಹೆರಬೆಟ್ಟು ತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜನ್ಮದಿನವನ್ನು ಆಡಂಬರವಿಲ್ಲದೆ, ಬಡವರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಸೇವಾ ಕಾರ್ಯಗಳ ಮೂಲಕ ಆಚರಿಸಲಾಗುವುದು ಎಂದರು.

ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು:

  • ಆರೋಗ್ಯ ಶಿಬಿರ: ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಹೃದಯ ರೋಗ ತಪಾಸಣೆ ಮತ್ತು ಶ್ರವಣ ತಪಾಸಣೆ ಶಿಬಿರ.

  • ರಕ್ತದಾನ ಶಿಬಿರ: ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಸ್ವಯಂಪ್ರೇರಿತ ರಕ್ತದಾನ.

  • ಶಾಲಾ ದತ್ತು ಮತ್ತು ಅಭಿವೃದ್ಧಿ: ‘ಶ್ರೀಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಯತ್ತ’ ಯೋಜನೆಯಡಿ ಬೇರಾಳ ಸರ್ಕಾರಿ ಶಾಲೆಗೆ ‘ಬಣ್ಣ ದರ್ಪಣ’ ಕಾರ್ಯಕ್ರಮ.

  • ದಾನಧರ್ಮ: ಅನಾಥಾಶ್ರಮಗಳಿಗೆ ಸಾಮಗ್ರಿ ವಿತರಣೆ ಹಾಗೂ ಸಾಗರದ ಉಪವಿಭಾಗೀಯ ಮತ್ತು ಮಹಿಳಾ ಮಕ್ಕಳ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ.

  • ಉದ್ಯೋಗ ತರಬೇತಿ: ಅಗ್ನಿವೀರ್ ಮತ್ತು ಪ್ಯಾರಾ ಮಿಲಿಟರಿ ಸೇರಬಯಸುವ ಯುವಕರಿಗಾಗಿ ಉಚಿತ ಪೂರ್ವ ತಯಾರಿ ತರಬೇತಿ ಶಿಬಿರ.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮವು ಮೇ 13ರಂದು ಬೆಳಿಗ್ಗೆ 9 ಗಂಟೆಗೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಗ್ಯ ಶಿಬಿರ ಉದ್ಘಾಟಿಸಲಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ರಾಮಪ್ಪ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ಎಲ್ಲರಿಗೂ ಮಾದರಿ

ಅಭಿಮಾನಿ ಬಳಗದ ದೇವರಾಜ ಕಪ್ಪದೂರು ಮಾತನಾಡಿ, ಡಾ. ರಾಮಪ್ಪ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಅವರ ಸಾಮಾಜಿಕ ಸೇವೆಯನ್ನು ಗೌರವಿಸುವ ಸಲುವಾಗಿ ಈ ಸದುದ್ದೇಶದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರವಿ ಅಳೂರು, ಗಣೇಶ್ ಜಾಕಿ, ರವಿ ಹುರುಳಿ, ಉಮೇಶ್ ಹೆಸಿಗೆ ಹಾಗೂ ಗಿರೀಶ್ ಕೋವಿ ಉಪಸ್ಥಿತರಿದ್ದರು.

ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು

Rain In Karnataka: ಮುಂದಿನ ಎರಡು ದಿನ ರಾಜ್ಯಾಧ್ಯಂತ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Share. Facebook Twitter LinkedIn WhatsApp Email

Related Posts

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

2 Mins Read

ALERT : ತಂಬಾಕು ಪ್ರಿಯರೇ ಎಚ್ಚರ : ಯುವ ಜನರಲ್ಲಿ ಹೆಚ್ಚುತ್ತಿದೆ `ಕ್ಯಾನ್ಸರ್’ ಕಂಟಕ.!

1 Min Read

BIG NEWS : ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಮಾಹಿತಿ

2 Mins Read
Recent News

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

ಜಾಮೀನು ಅರ್ಜಿಯ ತೀರ್ಪನ್ನು 24 ಗಂಟೆಯೊಳಗೆ ಪ್ರಕಟಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ!

ALERT : ತಂಬಾಕು ಪ್ರಿಯರೇ ಎಚ್ಚರ : ಯುವ ಜನರಲ್ಲಿ ಹೆಚ್ಚುತ್ತಿದೆ `ಕ್ಯಾನ್ಸರ್’ ಕಂಟಕ.!

​ಭಾರತದ ಆರೋಗ್ಯ ಮತ್ತು ಪೋಷಣಾ ಕ್ಷೇತ್ರದಲ್ಲಿ ಭಾರಿ ಪ್ರಗತಿ: NFHS-6 ವರದಿ

State News
KARNATAKA

ಹುಡುಗರು ಕಿವಿ ಚುಚ್ಚಿಸಿಕೊಳ್ಳಬಹುದೇ? ಹಿಂದೂ ಸಂಪ್ರದಾಯದ ಹಿಂದಿರುವ ಅಸಲಿ ಕಾರಣಗಳಿವು!

By kannadanewsnow57 KARNATAKA 2 Mins Read

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಸಂಪ್ರದಾಯದ ಹಿಂದೆ ಒಂದು ಬಲವಾದ ಕಾರಣ ಹಾಗೂ ವೈಜ್ಞಾನಿಕ ಹಿನ್ನೆಲೆ ಇರುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಹೆಣ್ಣುಮಕ್ಕಳು…

ALERT : ತಂಬಾಕು ಪ್ರಿಯರೇ ಎಚ್ಚರ : ಯುವ ಜನರಲ್ಲಿ ಹೆಚ್ಚುತ್ತಿದೆ `ಕ್ಯಾನ್ಸರ್’ ಕಂಟಕ.!

BIG NEWS : ರಾಜ್ಯದ ಉಪನೋಂದಣಾಧಿಕಾರಿಗಳ ಅಧಿಕಾರ & ಕರ್ತವ್ಯಗಳೇನು? ಇಲ್ಲಿದೆ ಮಾಹಿತಿ

ALERT : ರಾಜ್ಯದ ಜನರೇ ಎಚ್ಚರ : ಕರ್ನಾಟಕದಲ್ಲಿ ಬರೋಬ್ಬರಿ 17,606 `ಸೈಬರ್ ಕೇಸ್’ ದಾಖಲು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.