ದಾವಣಗೆರೆ : ರಾಜ್ಯದಲ್ಲಿ ಮಳೆರಾಯ ತನ್ನ ಆರ್ಭಟವನ್ನು ಇನ್ನೂ ನಿಲ್ಲಿಸಿಲ್ಲ. ಅದರಂತೆ ಡೆಂಗ್ಯೂ ಪ್ರಕರಣಗಳ ಸಂಖ್ಯೆಯು ಕೂಡ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇವೆ. ಡೆಂಗ್ಯೂ ಜ್ವರದಿಂದ ಈಗಾಗಲೇ ಪುಟ್ಟ ಮಕ್ಕಳಿಂದ ಹಿಡಿದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಸಂಗೀತ ಡೆಂಗ್ಯೂ ಜ್ವರಕ್ಕೆ ಮಹಿಳೆ ಸಾವನಪ್ಪಿದ್ದಾರೆ.
ಹೌದು ದಾವಣಗೆರೆ ಜಿಲ್ಲೆಯಲ್ಲಿ ಸೊಂಕಿತ ಡೆಂಗ್ಯೂ ಜ್ವರಕ್ಕೆ ಮಹಿಳೆ ಸಾವನ್ನಪ್ಪಿದ್ದರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಲಿಂಗಪುರದ ವಿಮಲಾ (27) ಸಾವನಪ್ಪಿರುವ ಮಹಿಳೆ ಎಂದು ತಿಳಿದುಬಂದಿದೆ. ಕುಟುಂಬದ ಮೂವರಲ್ಲಿ ಡೆಂಗ್ಯೂ ಲಕ್ಷಣ ಕಂಡುಬಂದಿತ್ತು. ಚಿಕಿತ್ಸೆ ಬಳಿಕ ಮೂವರು ಗುಣಮುಖರಾಗಿದ್ದು ವಿಮಲಾ ಸಾವನಪ್ಪಿದ್ದಾರೆ.