ನವದೆಹಲಿ: ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ, ಅದು ಆಯಾ ಸಂಸ್ಕೃತಿಯ ಜೀವನಾಡಿ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದರೂ, ಕೇಳಲು ಅತ್ಯಂತ ಮಧುರವಾದ ಮತ್ತು ಕಿವಿಗೆ ಇಂಪು ನೀಡುವ ‘ಸಿಹಿ ಭಾಷೆ’ ಯಾವುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಯುನೆಸ್ಕೋ (UNESCO) ನಡೆಸಿದ ಸಮೀಕ್ಷೆ ಮತ್ತು ಭಾಷಾ ತಜ್ಞರ ಅಭಿಪ್ರಾಯದಂತೆ ಬಂಗಾಳಿ ಭಾಷೆಯು ವಿಶ್ವದ ಅತ್ಯಂತ ಸಿಹಿ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವದ ವಿವಿಧ ಭಾಷೆಗಳ ಉಚ್ಚಾರಣೆ, ಶಬ್ದಗಳ ಲಯ ಮತ್ತು ಕೇಳುಗರ ಮೇಲೆ ಅವು ಬೀರುವ ಪ್ರಭಾವವನ್ನು ಆಧರಿಸಿ ಈ ಆಯ್ಕೆ ಮಾಡಲಾಗಿದೆ. ಬಂಗಾಳಿ ಭಾಷೆಯಲ್ಲಿರುವ ಮೃದುವಾದ ಪದಗಳು ಮತ್ತು ಅವುಗಳನ್ನು ಉಚ್ಚರಿಸುವ ಶೈಲಿಯು ಅತ್ಯಂತ ಗೌರವಯುತ ಹಾಗೂ ಪ್ರೀತಿಯಿಂದ ಕೂಡಿದೆ ಎಂಬುದು ತಜ್ಞರ ಅಭಿಮತ.
ಕೇವಲ ಬಂಗಾಳಿ ಮಾತ್ರವಲ್ಲದೆ, ಕೇಳಲು ಸುಶ್ರಾವ್ಯವಾಗಿರುವ ಇತರ ಭಾಷೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ:
ಸ್ಪ್ಯಾನಿಷ್: ಯುರೋಪಿಯನ್ ಭಾಷೆಗಳಲ್ಲಿ ಸ್ಪ್ಯಾನಿಷ್ ತನ್ನ ರೋಮ್ಯಾಂಟಿಕ್ ಶೈಲಿ ಮತ್ತು ಸ್ಪಷ್ಟ ಉಚ್ಚಾರಣೆಗೆ ಪ್ರಸಿದ್ಧವಾಗಿದೆ.
ಇಟಾಲಿಯನ್: ಸಂಗೀತದ ಭಾಷೆ ಎಂದೇ ಕರೆಯಲ್ಪಡುವ ಇಟಾಲಿಯನ್, ವಿಶ್ವದ ಮತ್ತೊಂದು ಮಧುರ ಭಾಷೆ.
ಕನ್ನಡ ಮತ್ತು ತೆಲುಗು: ಭಾರತೀಯ ಭಾಷೆಗಳ ಪೈಕಿ ಕನ್ನಡವನ್ನು ‘ವಿಶ್ವದ ಸುಂದರ ಲಿಪಿಗಳ ರಾಣಿ’ ಎಂದು ಕರೆಯಲಾಗುತ್ತದೆ. ತೆಲುಗು ಭಾಷೆಯನ್ನು ಅದರ ಸ್ವರಗಳ ಅಂತ್ಯದ ಕಾರಣಕ್ಕಾಗಿ ‘ಇಟಾಲಿಯನ್ ಆಫ್ ದಿ ಈಸ್ಟ್’ ಎಂದು ಬಣ್ಣಿಸಲಾಗಿದೆ.








