Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಯುವತಿಯರೇ ಎಚ್ಚರ : ಹೊಟ್ಟೆ ನೋವು, ಉಬ್ಬರ ಎಂದು ನಿರ್ಲಕ್ಷಿಸಬೇಡಿ,ಇದು ಅಪರೂಪದ ಕ್ಯಾನ್ಸರ್ ಇರಬಹುದು!

ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ
KARNATAKA

ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿರುವ ಸೋಲದೇವನಹಳ್ಳಿ ರೈಲು ನಿರ್ವಹಣಾ ಘಟಕದ (Train Maintenance Depot) ನಿರ್ಮಾಣಕ್ಕಾಗಿ ಬೆಂಗಳೂರು ಇಂಟಿಗ್ರೇಟೆಡ್ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (Bi-RIDE) ಟೆಂಡರ್ ಆಹ್ವಾನಿಸಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯ (BSTP) ಮಹತ್ವದ ಮೈಲಿಗಲ್ಲಾಗಿರುವ ಈ ನಿರ್ವಹಣಾ ಘಟಕದ ಟೆಂಡರ್‌ಗೆ ಜಿಎಸ್‌ಟಿ (GST) ಹೊರತುಪಡಿಸಿ ₹200.03 ಕೋಟಿ ನಿಗದಿಪಡಿಸಲಾಗಿದೆ. ಹಾಗೆಯೇ, ಈ ಟೆಂಡರ್‌ ಕಾಮಗಾರಿಗೆ ಬಿಡ್ ಸಲ್ಲಿಸಲು ಆಗಸ್ಟ್ 12, 2026 ಕಡೆಯ ದಿನಾಂಕವಾಗಿದೆ.

ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ICF) 153 ಬೋಗಿಗಳ (Coaches) ಪೂರೈಕೆಗಾಗಿ 2026ರ ಮೇ 06 ರಂದು ಕಾರ್ಯಾದೇಶ (Work order) ನೀಡಿದ ಬೆನ್ನಲ್ಲೇ, ಈ ನೂತನ ರೈಲುಗಳ ಸಮರ್ಪಕ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಈ ಡೆಪೊವನ್ನು ನಿರ್ಮಿಸಲಾಗುತ್ತಿದೆ. ಚಿಕ್ಕಬಾಣಾವರ ಉಪನಗರ ರೈಲು ನಿಲ್ದಾಣದ ಸಮೀಪ ನಿರ್ಮಾಣವಾಗಲಿರುವ ಈ ಘಟಕವು ಕಾರಿಡಾರ್ 2 ಮತ್ತು ಕಾರಿಡಾರ್ 4 ರ ರೈಲುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಹೊಣೆ ಹೊರಲಿದೆ. ಈ ಬೃಹತ್ ಯೋಜನೆಗಾಗಿ ಈಗಾಗಲೇ 26 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

“ಯಾವುದೇ ಉತ್ತಮ ಉಪನಗರ ರೈಲು ಜಾಲಕ್ಕೆ ಅತ್ಯಾಧುನಿಕ ರೈಲು ನಿರ್ವಹಣಾ ಘಟಕವು ಹೃದಯವಿದ್ದಂತೆ. ಇತ್ತೀಚೆಗಷ್ಟೇ 153 ಅತ್ಯಾಧುನಿಕ ಬೋಗಿಗಳಿಗೆ ಆರ್ಡರ್ ನೀಡಲಾಗಿದ್ದು, ಅವುಗಳ ನಿಯಮಿತ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆಗೆ ಅಗತ್ಯವಿರುವ ವಿಶ್ವದರ್ಜೆಯ ಕಾರ್ಯಾಗಾರವನ್ನು (Workshop) ಸೋಲದೇವನಹಳ್ಳಿ ಡೆಪೊ ಒದಗಿಸಲಿದೆ. ಬೆಂಗಳೂರಿನ ಜನತೆಗೆ ಉತ್ತಮ ಹಾಗೂ ಹೈ ಪ್ರೀಕ್ವೆನ್ಸಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಉಪನಗರ ಸಾರಿಗೆಯನ್ನು ಒದಗಿಸುವ ಕಾರ್ಯತಂತ್ರದ ಭಾಗವಾಗಿದೆ,” ಎಂದು Bi-RIDE ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಲಕ್ಷ್ಮಣ್ ಸಿಂಗ್ (IRS) ತಿಳಿಸಿದ್ದಾರೆ.

ಒಂದು ಅತ್ಯುತ್ತಮ ವರ್ಕ್‌ಶಾಪ್‌ ಆಗಿ ರೂಪುಗೊಳ್ಳಲಿರುವ ಈ ಡೆಪೊದಲ್ಲಿ, ಸ್ಟೇಬ್ಲಿಂಗ್ ಲೈನ್‌ಗಳು (Stabling lines), ವರ್ಕ್‌ಶಾಪ್ ಲೈನ್‌ಗಳು, ಇನ್ಸ್‌ಪೆಕ್ಷನ್ ಬೇ (Inspection bay), ರಿಪೇರಿ ಬೇ ಮತ್ತು ಸಂಪೂರ್ಣ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ಸೌಲಭ್ಯಗಳು ಇರಲಿವೆ. ಈ ಅಗತ್ಯ ಸೌಲಭ್ಯಗಳಿಲ್ಲದೆ ಉಪನಗರ ರೈಲು ವ್ಯವಸ್ಥೆಯು ನಿರೀಕ್ಷಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಪರಿಸರ ಕಾಳಜಿಯೊಂದಿಗೆ Bi-RIDE ನ ‘ನೆಟ್-ಝೀರೋ ಕಾರ್ಬನ್’ ನೀತಿಗೆ ಅನುಗುಣವಾಗಿ, ಈ ಘಟಕದಲ್ಲಿ ಸೌರ ವಿದ್ಯುತ್ ಉತ್ಪಾದನೆ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ.

ಜರ್ಮನಿಯ KfW ಡೆವಲಪ್‌ಮೆಂಟ್ ಬ್ಯಾಂಕ್ (KfW Development Bank) ಮಂಜೂರು ಮಾಡಿರುವ ಸಾಲದ ನೆರವಿನಿಂದ ಈ ಅತ್ಯಾಧುನಿಕ ಘಟಕವನ್ನು ನಿರ್ಮಿಸಲಾಗುತ್ತಿದ್ದು, ಇದು ಬೆಂಗಳೂರಿಗರಿಗೆ ಸುರಕ್ಷಿತ, ಆಧುನಿಕ ಹಾಗೂ ಸುಸ್ಥಿರ ಪ್ರಯಾಣದ ಅನುಭವವನ್ನು ನೀಡುವ ದೀರ್ಘಕಾಲೀನ ದೃಷ್ಟಿಕೋನವನ್ನು ಹೊಂದಿದೆ.

Share. Facebook Twitter LinkedIn WhatsApp Email

Related Posts

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

1 Min Read

BIG NEWS : ರಾಜ್ಯದಲ್ಲಿ ಉಚಿತ ಬಸ್ ಪಾಸ್ ಪಡೆದ ಮೊದಲ ವಿದ್ಯಾರ್ಥಿ ಇವನೇ ನೋಡಿ

2 Mins Read

BIG NEWS : ಬೆಂಗಳೂರಲ್ಲಿ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಪ್ರಕರಣ ಸಿಬಿಐ ತನಿಖೆಗೆ ವಹಿಸಿ ಎಂದ ಆರ್.ಅಶೋಕ್

1 Min Read
Recent News

ALERT : ಯುವತಿಯರೇ ಎಚ್ಚರ : ಹೊಟ್ಟೆ ನೋವು, ಉಬ್ಬರ ಎಂದು ನಿರ್ಲಕ್ಷಿಸಬೇಡಿ,ಇದು ಅಪರೂಪದ ಕ್ಯಾನ್ಸರ್ ಇರಬಹುದು!

ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

ಹೈದ್ರಾಬಾದ್ ನಲ್ಲಿ ಮನೆಗೆ ನುಗ್ಗಿ, ಚಾಕುವಿನಿಂದ ಇರಿದು ಖ್ಯಾತ ಯೂಟ್ಯೂಬರ್ ನ ಬರ್ಬರ ಹತ್ಯೆ!

State News
KARNATAKA

ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿರುವ ಸೋಲದೇವನಹಳ್ಳಿ ರೈಲು ನಿರ್ವಹಣಾ ಘಟಕದ (Train Maintenance Depot)…

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

BIG NEWS : ರಾಜ್ಯದಲ್ಲಿ ಉಚಿತ ಬಸ್ ಪಾಸ್ ಪಡೆದ ಮೊದಲ ವಿದ್ಯಾರ್ಥಿ ಇವನೇ ನೋಡಿ

BIG NEWS : ಬೆಂಗಳೂರಲ್ಲಿ ಕಸದ ಟೆಂಡರ್ ನಲ್ಲಿ ಸಾವಿರಾರು ಕೋಟಿ ಅಕ್ರಮ : ಪ್ರಕರಣ ಸಿಬಿಐ ತನಿಖೆಗೆ ವಹಿಸಿ ಎಂದ ಆರ್.ಅಶೋಕ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.