Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ಬಡ ರೈತರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ; ಸಂಯುಕ್ತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಂಜಪ್ಪ ಹಿರೇನೆಲ್ಲೂರು ಆಕ್ರೋಶ!

ʻನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್‌ ಕಪಲ್‌ʼ : ಜಿ7 ಶೃಂಗದಲ್ಲಿ ಪ್ರಧಾನಿ ಮೋದಿಗೆ ಮೆಲೋನಿ ಹಾಸ್ಯ

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಉದ್ಯಮಿ ಕಾರು ಅಡ್ಡಗಟ್ಟಿ 1.09 ಕೋಟಿ ದೋಚಿ ದುಷ್ಕರ್ಮಿಗಳು ಪರಾರಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ʻನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್‌ ಕಪಲ್‌ʼ : ಜಿ7 ಶೃಂಗದಲ್ಲಿ ಪ್ರಧಾನಿ ಮೋದಿಗೆ ಮೆಲೋನಿ ಹಾಸ್ಯ
INDIA

ʻನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್‌ ಕಪಲ್‌ʼ : ಜಿ7 ಶೃಂಗದಲ್ಲಿ ಪ್ರಧಾನಿ ಮೋದಿಗೆ ಮೆಲೋನಿ ಹಾಸ್ಯ

By ಸುರೇಶ್‌

ನವದೆಹಲಿ :  ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸೆನ್ಸೇಷನ್ ಸೃಷ್ಟಿಸುವ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸ್ನೇಹದ ವಿಡಿಯೋಗಳು ಮತ್ತೊಮ್ಮೆ ಮುನ್ನಲೆಗೆ ಬಂದಿವೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಮೆಲೋನಿ ಅವರಿಗೆ ‘ಮೆಲೋಡಿʼ ಚಾಕೊಲೇಟ್ ಗಿಫ್ಟ್‌ ಕೊಟ್ಟ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ, ಜಾಗತಿಕ ನಾಯಕರ ಸಮ್ಮುಖದಲ್ಲಿ ಇವರಿಬ್ಬರ ಮತ್ತೊಂದು ಸ್ವಾರಸ್ಯಕರ ಮಾತುಕತೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಪ್ರಸ್ತುತ ಫ್ರಾನ್ಸ್‌ನ ಏವಿಯನ್-ಲೆ-ಬೈನ್ಸ್‌ನಲ್ಲಿ ಜಿ7 (G7) ಶೃಂಗಸಭೆ ನಡೆಯುತ್ತಿದ್ದು, ವಿಶ್ವದ ಪ್ರಭಾವಿ ನಾಯಕರು ಒಂದೇ ವೇದಿಕೆಯಲ್ಲಿ ಸೇರಿದ್ದಾರೆ. ಅಮೆರಿಕ ಮತ್ತು ಇರಾನ್‌ ನಡುವಿನ ಮಹತ್ವದ ಒಪ್ಪಂದವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಈ 7 ಪ್ರಮುಖ ರಾಷ್ಟ್ರಗಳ ಒಕ್ಕೂಟದ ನಾಯಕರು ಇಲ್ಲಿ ಒಟ್ಟುಗೂಡಿದ್ದಾರೆ. ಈ ಮಹತ್ವದ ಜಾಗತಿಕ ವೇದಿಕೆಯು ಭಾರತ ಮತ್ತು ಇಟಲಿ ಪ್ರಧಾನಿಗಳ ನಡುವಿನ ಮತ್ತೊಂದು ಆತ್ಮೀಯ ಹಾಗೂ ಹಾಸ್ಯಭರಿತ ಕ್ಷಣಕ್ಕೆ ಸಾಕ್ಷಿಯಾಗಿದೆ.

ಶೃಂಗಸಭೆಯ ಸಂದರ್ಭದಲ್ಲಿ ಜಿ7 ಒಕ್ಕೂಟದ ನಾಯಕರೆಲ್ಲರೂ ಒಟ್ಟಾಗಿ ಅಧಿಕೃತ ಫೋಟೋ ಸೆಷನ್‌ಗಾಗಿ ವೇದಿಕೆಯ ಮೇಲೆ ನಿಲ್ಲಲು ಆಗಮಿಸುತ್ತಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಮುಖಾಮುಖಿಯಾಗಿದ್ದಾರೆ. ಪರಸ್ಪರ ಅತ್ಯಂತ ಆತ್ಮೀಯತೆಯಿಂದ ಕೈಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡ ಇಬ್ಬರು ನಾಯಕರು, ಪ್ರಸ್ತುತ ಜಾಗತಿಕ ವಿದ್ಯಮಾನಗಳ ಜೊತೆಗೆ ಡಿಜಿಟಲ್ ಲೋಕದ ಟ್ರೆಂಡ್ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ.

ಮಾತುಕತೆಯ ಮಧ್ಯೆ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಬ್ಬರ ವಿಡಿಯೋ ಹಾಗೂ ಫೋಟೋಗಳು ಎಷ್ಟು ಜನಪ್ರಿಯವಾಗಿವೆ ಮತ್ತು ನೆಟ್ಟಿಗರು ಇಬ್ಬರ ಸ್ನೇಹವನ್ನು ಹೇಗೆ ಕೊಂಡಾಡುತ್ತಿದ್ದಾರೆ ಎಂಬ ವಿಷಯವನ್ನು ಮೆಲೋನಿ ಅವರಿಗೆ ತಿಳಿಸುತ್ತಿದ್ದರು. ಮೋದಿ ಅವರ ಮಾತಿಗೆ ತಕ್ಷಣವೇ ಅತ್ಯಂತ ಪ್ರೀತಿ ಮತ್ತು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ಜಾರ್ಜಿಯಾ ಮೆಲೋನಿ, “ಹೌದು, ನಾವಿಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಫೇಮಸ್‌ ಕಪಲ್ (ಪ್ರಸಿದ್ಧ ಜೋಡಿ)” ಎಂದು ನಗುತ್ತಾ ಹೇಳಿದರು.

ಮೆಲೋನಿ ಅವರ ಈ ಚುರುಕಾದ ಹಾಗೂ ಹಾಸ್ಯದ ಮಾತನ್ನು ಕೇಳಿ ಪ್ರಧಾನಿ ಮೋದಿ ಅವರು ಕೂಡ ಜೋರಾಗಿ ನಗುತ್ತಾ ಸಮ್ಮತಿ ಸೂಚಿಸಿದರು. ಇಬ್ಬರು ಜಾಗತಿಕ ನಾಯಕರ ನಡುವಿನ ಈ ಹಗುರವಾದ ಮತ್ತು ಮನರಂಜನಾತ್ಮಕ ಕ್ಷಣದ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ನೆಟ್ಟಿಗರು ಈ ವಿಡಿಯೋವನ್ನು ರೀಲ್ಸ್ ಹಾಗೂ ಶಾರ್ಟ್ಸ್ ರೂಪದಲ್ಲಿ ಹಂಚಿಕೊಳ್ಳುತ್ತಿದ್ದು, ಡಿಜಿಟಲ್ ಜಗತ್ತಿನಲ್ಲಿ ಮತ್ತೊಮ್ಮೆ ‘ಮೆಲೋಡಿ ಬಝ್ʼ (Melodi Buzz) ಜೋರಾಗಿದೆ.

Share. Facebook Twitter LinkedIn WhatsApp Email

Related Posts

BREAKING : ‘NEET’ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ : ಆರೋಪಿಗೆ ಮರು ಪರೀಕ್ಷೆ ಬರೆಯಲು ದೆಹಲಿ ಹೈಕೋರ್ಟ್ ಅನುಮತಿ

2 Mins Read

BREAKING : `UGC NET’ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ : ಹೀಗೆ ಡೌನ್ ಲೋಡ್ ಮಾಡಿಕೊಳ್ಳಿ |UGC NET Admit Card 2026

2 Mins Read

ALERT : ಪಾನಿಪೂರಿ ಪ್ರಿಯರೇ ಎಚ್ಚರ : `ಪಾನಿಪೂರಿ’ ತಿಂದು 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು!

1 Min Read
Recent News

ಸಾಗರದಲ್ಲಿ ಬಡ ರೈತರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ; ಸಂಯುಕ್ತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಂಜಪ್ಪ ಹಿರೇನೆಲ್ಲೂರು ಆಕ್ರೋಶ!

ʻನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್‌ ಕಪಲ್‌ʼ : ಜಿ7 ಶೃಂಗದಲ್ಲಿ ಪ್ರಧಾನಿ ಮೋದಿಗೆ ಮೆಲೋನಿ ಹಾಸ್ಯ

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಉದ್ಯಮಿ ಕಾರು ಅಡ್ಡಗಟ್ಟಿ 1.09 ಕೋಟಿ ದೋಚಿ ದುಷ್ಕರ್ಮಿಗಳು ಪರಾರಿ!

ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ : ಆಸ್ಪತ್ರೆಗೆ ದಾಖಲು!

State News
KARNATAKA

ಸಾಗರದಲ್ಲಿ ಬಡ ರೈತರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ; ಸಂಯುಕ್ತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಂಜಪ್ಪ ಹಿರೇನೆಲ್ಲೂರು ಆಕ್ರೋಶ!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಪಕ್ಷಿಧಾಮ ನಿರ್ಮಿಸಲು ಕಾಯ್ದಿರಿಸಿದ್ದ ಅರಣ್ಯ ಪ್ರದೇಶವನ್ನು ಧ್ವಂಸಗೊಳಿಸಿರುವ ಪ್ರಭಾವಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಬದುಕು ಕಟ್ಟಿಕೊಂಡಿರುವ…

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಉದ್ಯಮಿ ಕಾರು ಅಡ್ಡಗಟ್ಟಿ 1.09 ಕೋಟಿ ದೋಚಿ ದುಷ್ಕರ್ಮಿಗಳು ಪರಾರಿ!

ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ : ಆಸ್ಪತ್ರೆಗೆ ದಾಖಲು!

BREAKING : ಕಲ್ಬುರ್ಗಿಯಲ್ಲಿ ನೇಣು ಬಿಗಿದುಕೊಂಡು ‘ಪಿಎಸ್ಐ’ ಆತ್ಮಹತ್ಯೆ ಶರಣು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.