Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಂಗಳೂರಲ್ಲಿ ಅಮಾನವೀಯ ಕೃತ್ಯ : ಮಚ್ಚಿನಿಂದ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ವ್ಯಾಪಾರಿ!

26/04/2026 1:13 PM

​ಪುಸ್ತಕಗಳು ಕೇವಲ ದಾಖಲೆಗಳಲ್ಲ, ಅವು ಸಂಸ್ಕೃತಿಯ ಜೀವಂತಿಕೆ: ಶಾಸಕ ಗೋಪಾಲಕೃಷ್ಣ ಬೇಳೂರು

26/04/2026 1:12 PM

ಟ್ರಂಪ್ ಮೇಲೆ ದಾಳಿ ಮಾಡಿದ ಥಾಮಸ್ ಅಲೆನ್, ಅದೇ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ : ತನಿಖೆಯಲ್ಲಿ ಬಹಿರಂಗ

26/04/2026 1:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » CRIME NEWS: ಬೆಂಗಳೂರಲ್ಲಿ ಜ್ಯೂಸ್ ಶಾಪ್ ಕೆಲಸಗಾರನನ್ನು ಕಿಡ್ನಾಪ್ ಮಾಡಿದ್ದ ಮೂವರು ಅರೆಸ್ಟ್
KARNATAKA

CRIME NEWS: ಬೆಂಗಳೂರಲ್ಲಿ ಜ್ಯೂಸ್ ಶಾಪ್ ಕೆಲಸಗಾರನನ್ನು ಕಿಡ್ನಾಪ್ ಮಾಡಿದ್ದ ಮೂವರು ಅರೆಸ್ಟ್

By kannadanewsnow0916/03/2026 2:21 PM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಯುವತಿಯೊಂದಿಗಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿದ ಘಟನೆ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ? ಮೂಲತಃ ಅಸ್ಸಾಂನವರಾದ ಶಬ್ಬೀರ್ ಅಲಿಯಾಸ್ ಸಾದಿರ್ ಖಾ ಬೆಂಗಳೂರಿನ ಜ್ಯೂಸ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ಸಜೀದ್ ಎಂಬಾತ ಯುವತಿಯೊಬ್ಬಳ ಜೊತೆಗಿದ್ದಾಗ ಸಾದಿರ್ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಷಯ ತಿಳಿದು ಆಕ್ರೋಶಗೊಂಡ ಸಜೀದ್, ಸಾದಿರ್‌ನನ್ನು ಸದೆಬಡಿಯಲು ಸಂಚು ರೂಪಿಸಿದ್ದ.

ಆಟೋದಲ್ಲಿ ಸಿನಿಮೀಯ ಅಪಹರಣ: ಸಾದಿರ್ ತನ್ನ ಸ್ನೇಹಿತನ ಮನೆ ಬಳಿ ಇದ್ದಾಗ ಆಟೋದಲ್ಲಿ ಬಂದ ಸಜೀದ್ ಮತ್ತು ಆತನ ನಾಲ್ವರು ಸಹಚರರು ಆತನನ್ನು ಬಲವಂತವಾಗಿ ಅಪಹರಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ಈ ಕೃತ್ಯ ನಡೆದಿದ್ದು, ಸಾದಿರ್‌ನನ್ನು ರಾಮಮೂರ್ತಿನಗರದ ಕಡೆಗೆ ಕರೆದೊಯ್ದಿದ್ದಾರೆ. ದಾರಿಯುದ್ದಕ್ಕೂ ಬೆದರಿಕೆ ಹಾಕಿದ ಆರೋಪಿಗಳು ಆತನ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಬಲವಂತವಾಗಿ ಡಿಲೀಟ್ ಮಾಡಿಸಿದ್ದಾರೆ. ನಂತರ ಆತನನ್ನು ಅರ್ಧ ಹಾದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ: ಕಿಡ್ನಾಪ್‌ನಿಂದ ತಪ್ಪಿಸಿಕೊಂಡ ಸಾದಿರ್ ಕೂಡಲೇ ಮಹಾದೇವಪುರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪ್ರಮುಖ ಆರೋಪಿ ಸಜೀದ್, ಸುಬ್ರಮಣಿ ಮತ್ತು ಒಬ್ಬ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳಾದ ವಿನ್ಸೆಟ್ ಮತ್ತು ಚಿಂಟು ಎಂಬುವವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್ ಅಭಾವದ ಬಿಸಿ: ಶಾಲೆಯಲ್ಲಿ ಸೌದೆ ಒಲೆ ಅಡುಗೆ!

Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಲ್ಲಿ ಅಮಾನವೀಯ ಕೃತ್ಯ : ಮಚ್ಚಿನಿಂದ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ವ್ಯಾಪಾರಿ!

26/04/2026 1:13 PM1 Min Read

​ಪುಸ್ತಕಗಳು ಕೇವಲ ದಾಖಲೆಗಳಲ್ಲ, ಅವು ಸಂಸ್ಕೃತಿಯ ಜೀವಂತಿಕೆ: ಶಾಸಕ ಗೋಪಾಲಕೃಷ್ಣ ಬೇಳೂರು

26/04/2026 1:12 PM2 Mins Read

ಟ್ರಂಪ್ ಮೇಲೆ ದಾಳಿ ಮಾಡಿದ ಥಾಮಸ್ ಅಲೆನ್, ಅದೇ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ : ತನಿಖೆಯಲ್ಲಿ ಬಹಿರಂಗ

26/04/2026 1:07 PM1 Min Read
Recent News

SHOCKING : ಬೆಂಗಳೂರಲ್ಲಿ ಅಮಾನವೀಯ ಕೃತ್ಯ : ಮಚ್ಚಿನಿಂದ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ವ್ಯಾಪಾರಿ!

26/04/2026 1:13 PM

​ಪುಸ್ತಕಗಳು ಕೇವಲ ದಾಖಲೆಗಳಲ್ಲ, ಅವು ಸಂಸ್ಕೃತಿಯ ಜೀವಂತಿಕೆ: ಶಾಸಕ ಗೋಪಾಲಕೃಷ್ಣ ಬೇಳೂರು

26/04/2026 1:12 PM

ಟ್ರಂಪ್ ಮೇಲೆ ದಾಳಿ ಮಾಡಿದ ಥಾಮಸ್ ಅಲೆನ್, ಅದೇ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ : ತನಿಖೆಯಲ್ಲಿ ಬಹಿರಂಗ

26/04/2026 1:07 PM

ಬೆಂಗಳೂರು : ರಾತ್ರಿ ಅಂಗಡಿ ಮುಚ್ಚುವುದಕ್ಕೆ ತಡವಾಗಿದ್ದಕ್ಕೆ ಟೀ ಅಂಗಡಿ ಹುಡುಗನ ಮೇಲೆ, ಇನ್ಸಪೆಕ್ಟ‌ರ್ ಮಾರಣಾಂತಿಕ ಹಲ್ಲೆ!

26/04/2026 1:02 PM
State News
KARNATAKA

SHOCKING : ಬೆಂಗಳೂರಲ್ಲಿ ಅಮಾನವೀಯ ಕೃತ್ಯ : ಮಚ್ಚಿನಿಂದ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ವ್ಯಾಪಾರಿ!

By kannadanewsnow0526/04/2026 1:13 PM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು, ವಯಸ್ಕರು ಗಾಯಗೊಂಡಿರುವ ಘಟನೆಗಳು ನಡೆದಿದ್ದವು. ಆದರೆ ಇದೀಗ ಬೆಂಗಳೂರಲ್ಲಿ…

​ಪುಸ್ತಕಗಳು ಕೇವಲ ದಾಖಲೆಗಳಲ್ಲ, ಅವು ಸಂಸ್ಕೃತಿಯ ಜೀವಂತಿಕೆ: ಶಾಸಕ ಗೋಪಾಲಕೃಷ್ಣ ಬೇಳೂರು

26/04/2026 1:12 PM

ಟ್ರಂಪ್ ಮೇಲೆ ದಾಳಿ ಮಾಡಿದ ಥಾಮಸ್ ಅಲೆನ್, ಅದೇ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದ : ತನಿಖೆಯಲ್ಲಿ ಬಹಿರಂಗ

26/04/2026 1:07 PM

ಬೆಂಗಳೂರು : ರಾತ್ರಿ ಅಂಗಡಿ ಮುಚ್ಚುವುದಕ್ಕೆ ತಡವಾಗಿದ್ದಕ್ಕೆ ಟೀ ಅಂಗಡಿ ಹುಡುಗನ ಮೇಲೆ, ಇನ್ಸಪೆಕ್ಟ‌ರ್ ಮಾರಣಾಂತಿಕ ಹಲ್ಲೆ!

26/04/2026 1:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.