Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಲಾಕಪ್ ಡೆತ್, ಪೊಲೀಸ್ ದೌರ್ಜನ್ಯ ತಡೆಗೆ, ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ!

BIG NEWS : ನಾಳೆ ತುಮಕೂರಿನಲ್ಲಿ `ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ’: 1.52 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ

BIG NEWS : ಪ್ರಧಾನಿ ಮೋದಿ ಕರೆಗೆ ಬೆಂಗಳೂರಲ್ಲಿ ಅಭೂತಪೂರ್ವ ಬೆಂಬಲ : ಚಿನ್ನ-ಬೆಳ್ಳಿ, ಇಂಧನ ಮಾರಾಟ ಭಾರಿ ಕುಸಿತ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳೆ ತುಮಕೂರಿನಲ್ಲಿ `ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ’: 1.52 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ
KARNATAKA

BIG NEWS : ನಾಳೆ ತುಮಕೂರಿನಲ್ಲಿ `ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ’: 1.52 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ

By kannadanewsnow57

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಮೇ 19ರಂದು (ನಾಳೆ) ತುಮಕೂರಿನಲ್ಲಿ ಬೃಹತ್ ‘ಸಾಧನಾ ಸಮಾವೇಶ’ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸರ್ಕಾರದಿಂದ ಬರೋಬ್ಬರಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಗೃಹಸಚಿವ ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಚುನಾವಣಾ ಸಮಯದಲ್ಲಿ ನಾವು ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದೆವು. ಈ ಮೂರು ವರ್ಷಗಳ ಅವಧಿಯಲ್ಲಿ ನಾವು ಆ ಭರವಸೆಗಳನ್ನು ಹೇಗೆ ಈಡೇರಿಸಿದ್ದೇವೆ ಎಂಬುದನ್ನು ಈ ಸಮಾವೇಶದ ಮೂಲಕ ಜನರಿಗೆ ತಿಳಿಸಲಿದ್ದೇವೆ” ಎಂದರು.

ಈ ಸಮಾವೇಶವು ಗೃಹಸಚಿವ ಜಿ. ಪರಮೇಶ್ವರ್ ಅವರ ‘ಶಕ್ತಿ ಪ್ರದರ್ಶನ’ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಬೆನ್ನಲ್ಲೇ, ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಇಲ್ಲಿ ಯಾರ ವೈಯಕ್ತಿಕ ಶಕ್ತಿ ಪ್ರದರ್ಶನವೂ ಇಲ್ಲ. ಇದು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿರುವ ಬಗ್ಗೆ ಮಾಡುತ್ತಿರುವ ಸಮಾವೇಶವಷ್ಟೇ. ವೈಯಕ್ತಿಕವಾಗಿ ನಾನಾಗಲಿ ಅಥವಾ ಬೇರೆಯವರಾಗಲಿ ಇದನ್ನು ಆ ರೀತಿ ನೋಡುವುದಿಲ್ಲ. ನಾವು ‘ನುಡಿದಂತೆ ನಡೆದಿದ್ದೇವೆ’ ಎಂಬುದನ್ನು ಜನರಿಗೆ ತಿಳಿಸುವುದಷ್ಟೇ ನಮ್ಮ ಉದ್ದೇಶ. ಇದೊಂದು ಸರ್ಕಾರದ ಕಾರ್ಯಕ್ರಮವಾಗಿದ್ದು, ಪಕ್ಷದ ಕಾರ್ಯಕ್ರಮ ಅಲ್ಲದ ಕಾರಣ ಹೈಕಮಾಂಡ್ ನಾಯಕರನ್ನು ಆಹ್ವಾನಿಸಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಸಮಾವೇಶದ ಬಳಿಕ ರಾಜ್ಯ ಸರ್ಕಾರದಲ್ಲಿ ಏನಾದರೂ ಪ್ರಮುಖ ಬದಲಾವಣೆಗಳು ಆಗಲಿವೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಬದಲಾವಣೆ ಎಂಬುದು ಬೇರೆ ವಿಚಾರ. ನಾವಿಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಮಾವೇಶ ಮಾಡುತ್ತಿದ್ದೇವೆ. ನಾಯಕತ್ವ ಬದಲಾವಣೆ ಅಥವಾ ಸರ್ಕಾರದ ಆಂತರಿಕ ಬದಲಾವಣೆಗಳೆಲ್ಲವೂ ಪಕ್ಷದ ಹಂತದಲ್ಲಿ ನಿರ್ಧಾರವಾಗುವ ವಿಚಾರಗಳು. ಅದನ್ನು ಈ ಸಾಧನಾ ಸಮಾವೇಶದ ಜೊತೆ ಬೆರೆಸಲು ಹೋಗುವುದಿಲ್ಲ” ಎಂದು ಉತ್ತರಿಸಿದರು.

BIG NEWS: `State Congress government's Sadhana Samavesh' in Tumkur tomorrow: Rights papers distributed to 1.52 lakh people
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಲಾಕಪ್ ಡೆತ್, ಪೊಲೀಸ್ ದೌರ್ಜನ್ಯ ತಡೆಗೆ, ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ!

3 Mins Read

BIG NEWS : ಪ್ರಧಾನಿ ಮೋದಿ ಕರೆಗೆ ಬೆಂಗಳೂರಲ್ಲಿ ಅಭೂತಪೂರ್ವ ಬೆಂಬಲ : ಚಿನ್ನ-ಬೆಳ್ಳಿ, ಇಂಧನ ಮಾರಾಟ ಭಾರಿ ಕುಸಿತ!

1 Min Read

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

5 Mins Read
Recent News

BREAKING : ರಾಜ್ಯದಲ್ಲಿ ಲಾಕಪ್ ಡೆತ್, ಪೊಲೀಸ್ ದೌರ್ಜನ್ಯ ತಡೆಗೆ, ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ!

BIG NEWS : ನಾಳೆ ತುಮಕೂರಿನಲ್ಲಿ `ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ’: 1.52 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ

BIG NEWS : ಪ್ರಧಾನಿ ಮೋದಿ ಕರೆಗೆ ಬೆಂಗಳೂರಲ್ಲಿ ಅಭೂತಪೂರ್ವ ಬೆಂಬಲ : ಚಿನ್ನ-ಬೆಳ್ಳಿ, ಇಂಧನ ಮಾರಾಟ ಭಾರಿ ಕುಸಿತ!

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

State News
KARNATAKA

BREAKING : ರಾಜ್ಯದಲ್ಲಿ ಲಾಕಪ್ ಡೆತ್, ಪೊಲೀಸ್ ದೌರ್ಜನ್ಯ ತಡೆಗೆ, ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ!

By ಸುರೇಶ್‌ KARNATAKA 3 Mins Read

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಲಾಕಪ್ ಡೆತ್ (ಪೊಲೀಸ್ ಕಸ್ಟಡಿ ಸಾವು) ಹಾಗೂ ಪೊಲೀಸ್ ದೌರ್ಜನ್ಯ ಪ್ರಕರಣಗಳಿಗೆ ಬ್ರೇಕ್…

BIG NEWS : ನಾಳೆ ತುಮಕೂರಿನಲ್ಲಿ `ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ’: 1.52 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ

BIG NEWS : ಪ್ರಧಾನಿ ಮೋದಿ ಕರೆಗೆ ಬೆಂಗಳೂರಲ್ಲಿ ಅಭೂತಪೂರ್ವ ಬೆಂಬಲ : ಚಿನ್ನ-ಬೆಳ್ಳಿ, ಇಂಧನ ಮಾರಾಟ ಭಾರಿ ಕುಸಿತ!

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.