ಹಾಸನ : ಹಾಸನದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಮಿನಿ ಲಾರಿ ಒಂದು ಮನೆಗೆ ನುಗ್ಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡಿನ ಸಲಗೇರಿ ರಸ್ತೆಯಲ್ಲಿ ಘಟನೆ ನಡೆದಿದೆ. ರಂಗನಾಥ್ ಎಂಬುವವರಿಗೆ ಮಿನಿ ಲಾರಿ ನುಗ್ಗಿದೆ. ಲಾರಿಯಲ್ಲಿ ಸಿಲುಕಿದ್ದ ಚಾಲಕನನ್ನು ಹೊರತರಲು ಹರಸಾಹಸ ಪಡಲಾಯಿತು. ಲಾರಿ ಗುದ್ದಿದ ರಭಸಕ್ಕೆ ಮನೆಯ ಕಂಪೌಂಡ್, ಗೋಡೆ ಜಖಂಗೊಂಡಿದೆ. ಜೆಸಿಬಿ ಟ್ರಾಕ್ಟರ್ ಬಳಸಿ ಲಾರಿ ಚಾಲಕನನ್ನ ಹೊರಗಡೆ ತೆಗೆದಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








