ರಷ್ಯಾದ ಮಿರಾ ಆಂಡ್ರೀವಾ ಅವರು ಪೋಲೆಂಡ್‌ನ ಮಾಯಾ ಚ್ವಾಲಿನ್ಸ್ಕ ಅವರನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪಂದ್ಯದ ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಸಾಧಿಸಿದ ಆಂಡ್ರೀವಾ, ಎದುರಾಳಿಗೆ ಯಾವುದೇ ಅವಕಾಶ ನೀಡದೆ 6-3, 6-2 ಅಂತರದೊಂದಿಗೆ ಭರ್ಜರಿ ಜಯ ಸಾಧಿಸಿದರು.
19 ವರ್ಷದ ಆಂಡ್ರೀವಾ ಅವರ ಈ ಗೆಲುವು ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲಾಗಿದೆ. ವಿಶ್ವದ ನಂಬರ್ 8 ಶ್ರೇಯಾಂಕದ ಆಟಗಾರ್ತಿಯಾಗಿರುವ ಇವರು, 1992ರಲ್ಲಿ 18ನೇ ವಯಸ್ಸಿನಲ್ಲಿ ತಮ್ಮ ಮೂರನೇ ಸತತ ಫ್ರೆಂಚ್ ಓಪನ್ ಕಿರೀಟವನ್ನು ಗೆದ್ದಿದ್ದ ಮೋನಿಕಾ ಸೆಲೆಸ್ ನಂತರ, ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟೂರ್ನಿಯುದ್ದಕ್ಕೂ ಆಂಡ್ರೀವಾ ಪ್ರದರ್ಶಿಸಿದ ಪ್ರಾಬಲ್ಯವು, ಮಹಿಳಾ ಟೆನ್ನಿಸ್‌ನ ಅತ್ಯಂತ ಉದಯೋನ್ಮುಖ ತಾರೆಗಳಲ್ಲಿ ಒಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ವಿಶ್ವದ 114ನೇ ಶ್ರೇಯಾಂಕದ ಆಟಗಾರ್ತಿಯಾದ ಚ್ವಾಲಿನ್ಸ್ಕ, ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಕ್ವಾಲಿಫೈಯರ್ (Qualifer) ಆಗುವ ಗುರಿ ಹೊಂದಿದ್ದರು. ಆದರೆ, ಆಂಡ್ರೀವಾ ಅವರ ತೀವ್ರತೆ ಮತ್ತು ನಿಖರತೆಯನ್ನು ಎದುರಿಸಲು ಅವರು ಪರದಾಡಿದರು, ವಿಶೇಷವಾಗಿ ಎರಡನೇ ಸೆಟ್‌ನಲ್ಲಿ ಅವರ ಆಟ ಮಂಕಾಗಿತ್ತು. 0-5 ಅಂತರದಿಂದ ಹಿನ್ನಡೆಯಲ್ಲಿದ್ದ ಪೋಲೆಂಡ್‌ನ ಈ ಆಟಗಾರ್ತಿ, ಕೇವಲ ಎರಡು ಅಂಕಗಳನ್ನು ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಆಂಡ್ರೀವಾ ಪಂದ್ಯವನ್ನು ಅದ್ಭುತವಾಗಿ ಮುಕ್ತಾಯಗೊಳಿಸಿ, ಆಕರ್ಷಕ ನೇರ ಸೆಟ್‌ಗಳ ಗೆಲುವನ್ನು ತನ್ನದಾಗಿಸಿಕೊಂಡರು.








