ಬೆಂಗಳೂರು: ಬಿಜೆಪಿಯ ನೀತಿಯಂತೆ ಸ್ವ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಗಾರಿಕೆ ನೀಡುವಂತಿಲ್ಲ ಎನ್ನುವ ಹೈಕಮಾಂಡ್ ಸೂಚನೆಯಂತೆ, ವಿಜಯನಗರ ಜಿಲ್ಲಾ ಉಸ್ತುವಾರಿಕೆ ಆನಂದ್ ಸಿಂಗ್ ಗೆ ಕೈ ತಪ್ಪಿ ಹೋಗಿತ್ತು. ಆದ್ರೇ ಇದೀಗ ಆಗಸ್ಟ್ 15ರಂದು ಧ್ವಜಾರೋಹಣ ಮಾಡುವಂತ ಅವಕಾಶ ಸಿಕ್ಕಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮೂರು ಜಿಲ್ಲೆಗಳಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುವಂತ ಸಚಿವರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ವಿಜಯನಗರ ಜಿಲ್ಲೆಯಲ್ಲಿ ಸಚಿವ ಆನಂದ್ ಸಿಂಗ್, ಕೊಪ್ಪಳದಲ್ಲಿ ಶಶಿಕಲಾ ಜೊಲ್ಲೆ ಹಾಗೂ ಮಂಡ್ಯದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಧ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
ಅಂದಹಾಗೇ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಈ ಮೊದಲು ಆನಂದ್ ಸಿಂಗ್ ಗೆ ನೀಡಲಾಗಿತ್ತು. ಆ ಉಸ್ತುವಾರಿಕೆ ವಹಿಸಿಕೊಂಡಿದ್ದಂತ ಸಚಿವೆ ಶಶಿಕಲಾ ಜೊಲ್ಲೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿಕೆ ನೀಡಲಾಗಿತ್ತು.
ಆದ್ರೇ.. ಬಿಜೆಪಿ ಹೈಕಮಾಂಡ್ ಸ್ವ ಜಿಲ್ಲಾ ಉಸ್ತುವಾರಿಕೆ ನೀಡುವಂತಿಲ್ಲ ಎಂಬುದಾಗಿ ಖಡಕ್ ಸೂಚನೆಯನ್ನು ಸಿಎಂ ಬೊಮ್ಮಾಯಿಗೆ ನೀಡಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿ ಒಂದೇ ದಿನದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಿದ್ದಂತ ಆನಂದ್ ಸಿಂಗ್ ಅವರನ್ನು ಪುನರ್ ಆದೇಶದಲ್ಲಿ ಕೊಪ್ಪಳಕ್ಕೆ, ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರಕ್ಕೆ ವಹಿಸಿ ಆದೇಶಿಸಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೈತಪ್ಪಿದರೂ, ಸ್ವ ಜಿಲ್ಲೆಯಲ್ಲಿಯೇ ಧ್ವಜಾರೋಹಣ ಮಾಡುವಂತ ಅವಕಾಶವನ್ನು ಸಚಿವ ಆನಂದ್ ಸಿಂಗ್ ಗೆ ನೀಡಿ ಸರ್ಕಾರ ಆದೇಶಿಸಿದೆ.