Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಭೀಕರ ಅಪಘಾತ : ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ದುರ್ಮರಣ!

SHOCKING : ಬರ್ತ್‌ ಡೇ ಕೇಕ್‌ ನಲ್ಲಿದ್ದ `ಮೆಟಲ್ ಪಿನ್’ ನುಂಗಿದ 3 ವರ್ಷದ ಮಗು : `ಎಕ್ಸ್‌ ರೇ’ ನೋಡಿ ಬೆಚ್ಚಿಬಿದ್ದ ಪೋಷಕರು | WATCH VIDEO

ಕಲಬುರ್ಗಿಯ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ಮದ್ಯ ಸೇವಿಸಿದ್ದ ಕೇಸ್ : ಕರ್ತವ್ಯದಿಂದ ವಾರ್ಡನ್ ಬಿಡುಗಡೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬರ್ತ್‌ ಡೇ ಕೇಕ್‌ ನಲ್ಲಿದ್ದ `ಮೆಟಲ್ ಪಿನ್’ ನುಂಗಿದ 3 ವರ್ಷದ ಮಗು : `ಎಕ್ಸ್‌ ರೇ’ ನೋಡಿ ಬೆಚ್ಚಿಬಿದ್ದ ಪೋಷಕರು | WATCH VIDEO
INDIA

SHOCKING : ಬರ್ತ್‌ ಡೇ ಕೇಕ್‌ ನಲ್ಲಿದ್ದ `ಮೆಟಲ್ ಪಿನ್’ ನುಂಗಿದ 3 ವರ್ಷದ ಮಗು : `ಎಕ್ಸ್‌ ರೇ’ ನೋಡಿ ಬೆಚ್ಚಿಬಿದ್ದ ಪೋಷಕರು | WATCH VIDEO

By kannadanewsnow57

ಥಾಣೆ: ಮಗನ ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದಕ್ಕೆ ಕೇಕ್ ಅನಿರೀಕ್ಷಿತ ಆಘಾತ ನೀಡಿದೆ. ಕೇಕ್ ಮೇಲಿದ್ದ ಅಲಂಕಾರಿಕ ಚಾಕೊಲೇಟ್ ಬೌಲಿಂಗ್ ಪಿನ್‌ಗಳ ಒಳಗಿದ್ದ ಎರಡು ಕಬ್ಬಿಣದ ಪಿನ್‌ಗಳನ್ನು (ವೈರ್) ಮೂರು ವರ್ಷದ ಮಗುವೊಂದು ತಿಳಿಯದೇ ನುಂಗಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಥಾಣೆಯ ಹಿರಾನಂದಾನಿ ಎಸ್ಟೇಟ್ ನಿವಾಸಿಯಾಗಿರುವ ಜೀವಶಾಸ್ತ್ರ ಶಿಕ್ಷಕಿ ಸ್ನೇಹಾ ಶೆಲಾರ್ ಎಂಬುವವರ ಮಗ ರೇಯಾಂಶ್ ಈ ಕರಾಳ ಅನುಭವದಿಂದ ಪಾರಾದ ಬಾಲಕ. ಮೇ 31 ರಂದು ರೇಯಾಂಶ್ ಹುಟ್ಟುಹಬ್ಬದ ಅಂಗವಾಗಿ ಕುಟುಂಬಸ್ಥರು ‘ಸ್ಪೈಡರ್‌ಮ್ಯಾನ್’ ಥೀಮ್‌ನ ಬೌಲಿಂಗ್ ಅಲೆ ವಿನ್ಯಾಸದ ಕೇಕ್ ತರಿಸಿದ್ದರು. ಆದರೆ ಮರುದಿನವೇ ಈ ಸಂಭ್ರಮ ದೊಡ್ಡ ದುರಂತಕ್ಕೆ ತಿರುಗುವ ಮುನ್ಸೂಚನೆ ನೀಡಿತ್ತು.

ಬೇಕರಿಯವರು ಕೇಕ್ ಮೇಲಿದ್ದ ಚಾಕೊಲೇಟ್ ಬೌಲಿಂಗ್ ಪಿನ್‌ ಗಳಿಗೆ ಆಧಾರ ನೀಡಲು ಒಳಭಾಗದಲ್ಲಿ ಕಬ್ಬಿಣದ ತಂತಿಗಳನ್ನು ಬಳಸಿದ್ದರು. ಆದರೆ ಈ ಬಗ್ಗೆ ಗ್ರಾಹಕರಿಗೆ ಯಾವುದೇ ಮುನ್ನೆಚ್ಚರಿಕೆ ನೀಡಿರಲಿಲ್ಲ. ಪಾರ್ಟಿಯಲ್ಲಿದ್ದ ಹಿರಿಯ ಮಕ್ಕಳು ಚಾಕೊಲೇಟ್ ಒಳಗಿದ್ದ ವೈರ್‌ಗಳನ್ನು ಗಮನಿಸಿ ಪೋಷಕರಿಗೆ ತಿಳಿಸಿದಾಗ ಸ್ನೇಹಾ ಅವರ ಕುಟುಂಬ ಆತಂಕಕ್ಕೊಳಗಾಗಿದೆ. ತಕ್ಷಣವೇ ಮಗ ರೇಯಾಂಶ್‌ನನ್ನು ಜುಪಿಟರ್ ಆಸ್ಪತ್ರೆಗೆ ಕರೆದೊಯ್ದು ಎಕ್ಸ್‌ರೇ ಮಾಡಿಸಿದಾಗ, ಮಗುವಿನ ಸಣ್ಣ ಕರುಳಿನಲ್ಲಿ ಎರಡು ದೊಡ್ಡ ಕಬ್ಬಿಣದ ಪಿನ್‌ಗಳು ಇರುವುದು ಪತ್ತೆಯಾಗಿದೆ.

“ನನ್ನ ಮಗನ ಬರ್ತ್‌ಡೇ ಕೇಕ್ ನನ್ನ ಜೀವನದ ಅತ್ಯಂತ ಭಯಾನಕ ರಾತ್ರಿಯಾಗಿ ಪರಿಣಮಿಸಿತು. ಎಕ್ಸ್‌ರೇಯಲ್ಲಿ ಆ ಎರಡು ದೊಡ್ಡ ಲೋಹದ ತುಂಡುಗಳನ್ನು ನೋಡಿ ನಡುಗಿಹೋಗಿದ್ದೆ” ಎಂದು ತಾಯಿ ಸ್ನೇಹಾ ಶೆಲಾರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸರ್ಜರಿ ಇಲ್ಲದೆ ಪಾರಾದ ಮಗು

ಮಗುವಿನ ಕರುಳಿಗೆ ಪಿನ್‌ಗಳು ತಲುಪಿದ್ದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ್ದರು. ಮಗುವಿನ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಅದೃಷ್ಟವಶಾತ್ 48 ಗಂಟೆಗಳ ನಂತರ ಆ ಎರಡು ಕಬ್ಬಿಣದ ಪಿನ್‌ಗಳು ಮಲ ವಿಸರ್ಜನೆಯ ಮೂಲಕ ನೈಸರ್ಗಿಕವಾಗಿ ಹೊರಬಂದಿವೆ.

ಪೋಷಕರಿಗೆ ಎಚ್ಚರಿಕೆ ಮತ್ತು ಕಾನೂನು ಹೋರಾಟ

ಕೇಕ್ ತಯಾರಕರು ಸಣ್ಣ ಮಕ್ಕಳಿಗಾಗಿ ಮಾಡುವ ಕೇಕ್‌ಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ನೇಹಾ ಅವರು, “ಬೇಕರಿಗಳಲ್ಲಿ ಕೇಕ್ ಆರ್ಡರ್ ಮಾಡುವಾಗ ಅದರಲ್ಲಿ ಬಳಸಲಾದ ಅಲಂಕಾರಿಕ ವಸ್ತುಗಳು ಸಂಪೂರ್ಣ ತಿನ್ನಲು ಯೋಗ್ಯವೇ ಅಥವಾ ಒಳಗಡೆ ಏನಾದರೂ ಇಂತಹ ಅಪಾಯಕಾರಿ ವಸ್ತುಗಳನ್ನು ಬಳಸಲಾಗಿದೆಯೇ ಎಂಬುದನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಕಾಸರವಾಡವಲಿ ಪೊಲೀಸರನ್ನು ಸಂಪರ್ಕಿಸಿದಾಗ, ಇದು ಆಹಾರ ಮತ್ತು ಔಷಧ ಆಡಳಿತ (FDA) ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಆದರೆ ಎಫ್‌ಡಿಎ ಅಧಿಕಾರಿಗಳು ತನಿಖೆ ನಡೆಸಲು ಕೇಕ್ ಅಥವಾ ಆ ಚಾಕೊಲೇಟ್ ಪಿನ್‌ನ ಮಾದರಿ (Sample) ಇಲ್ಲದಿರುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಮಹಾರಾಷ್ಟ್ರ ಗ್ರಾಹಕ ಪರಿಷತ್ತಿನ ಶಿರೀಶ್ ದೇಶಪಾಂಡೆ ಅವರು, ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಕೇವಲ ದೈಹಿಕ ಹಾನಿ ಮಾತ್ರವಲ್ಲದೆ, ಮಾನಸಿಕ ತಲ್ಲಣಕ್ಕೂ ಬೇಕರಿ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಪರಿಹಾರ ಕೋರಬಹುದು ಎಂದು ತಿಳಿಸಿದ್ದಾರೆ.

⚠️ PARENTS, PLEASE WATCH THIS BEFORE BUYING A CUSTOM CAKE ⚠️

​If your kid loves custom, shaped cakes, you cannot skip this video.

​On May 31st, parents ordered a beautiful, custom designed cake for their child. It looked perfect, but hidden inside the design were small pins and… pic.twitter.com/oEKD0HgRoX

— Fight Intellect (@desikalesh1) June 8, 2026

SHOCKING: 3-year-old boy swallows metal pin from birthday cake: Parents shocked after seeing X-ray | WATCH VIDEO
Share. Facebook Twitter LinkedIn WhatsApp Email

Related Posts

BIG NEWS : ಗೃಹಿಣಿಯರು ‘ರಾಷ್ಟ್ರ ನಿರ್ಮಾತೃಗಳು’, ಅವರ ಕೆಲಸಕ್ಕೆ ತಿಂಗಳಿಗೆ ಕನಿಷ್ಠ ₹30,000 ಮೌಲ್ಯವಿದೆ: ಸುಪ್ರೀಂ ಕೋರ್ಟ್

2 Mins Read

ALERT : ಮನುಷ್ಯನ ನಡವಳಿಕೆಯನ್ನೇ ಬದಲಿಸಿದ `ಸ್ಮಾರ್ಟ್ ಫೋನ್’ :ಪ್ರತಿಯೊಬ್ಬರೂ ತಿಳಿಯಲೇಬೇಕಾದ ಸತ್ಯ!

3 Mins Read

BIG NEWS: ಗೃಹಿಣಿಯರ ಶ್ರಮಕ್ಕೆ ತಿಂಗಳಿಗೆ ₹30,000 ಮೌಲ್ಯ ನಿಗದಿ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು!

2 Mins Read
Recent News

ಬೆಂಗಳೂರಲ್ಲಿ ಭೀಕರ ಅಪಘಾತ : ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ದುರ್ಮರಣ!

SHOCKING : ಬರ್ತ್‌ ಡೇ ಕೇಕ್‌ ನಲ್ಲಿದ್ದ `ಮೆಟಲ್ ಪಿನ್’ ನುಂಗಿದ 3 ವರ್ಷದ ಮಗು : `ಎಕ್ಸ್‌ ರೇ’ ನೋಡಿ ಬೆಚ್ಚಿಬಿದ್ದ ಪೋಷಕರು | WATCH VIDEO

ಕಲಬುರ್ಗಿಯ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ಮದ್ಯ ಸೇವಿಸಿದ್ದ ಕೇಸ್ : ಕರ್ತವ್ಯದಿಂದ ವಾರ್ಡನ್ ಬಿಡುಗಡೆ

BIG NEWS : ಗೃಹಿಣಿಯರು ‘ರಾಷ್ಟ್ರ ನಿರ್ಮಾತೃಗಳು’, ಅವರ ಕೆಲಸಕ್ಕೆ ತಿಂಗಳಿಗೆ ಕನಿಷ್ಠ ₹30,000 ಮೌಲ್ಯವಿದೆ: ಸುಪ್ರೀಂ ಕೋರ್ಟ್

State News
KARNATAKA

ಬೆಂಗಳೂರಲ್ಲಿ ಭೀಕರ ಅಪಘಾತ : ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ದುರ್ಮರಣ!

By ಸುರೇಶ್‌ KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿರುವ…

ಕಲಬುರ್ಗಿಯ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ಮದ್ಯ ಸೇವಿಸಿದ್ದ ಕೇಸ್ : ಕರ್ತವ್ಯದಿಂದ ವಾರ್ಡನ್ ಬಿಡುಗಡೆ

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

BREAKING : ಹಾಸನದಲ್ಲಿ ಹಲ್ಲಿ ಬಿದ್ದ ಊಟ ಮಾಡಿ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.