Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: 13 ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್; ಯಾರಿಗೆ ಯಾವ ಖಾತೆ? ಇಲ್ಲಿದೆ ಲೀಸ್ಟ್

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ.ಶಿವಕುಮಾರ್

​ಕೆಂಪು ಕೋಟೆ ಸ್ಫೋಟ ಪ್ರಕರಣ: 9 ಆರೋಪಿಗಳ ನ್ಯಾಯಾಂಗ ಬಂಧನ ಜುಲೈ 6ರವರೆಗೆ ವಿಸ್ತರಣೆ | Red fort blast case

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸೊರಬದ ಉಳವಿಯ ಮಳೆಹಾನಿ ಪ್ರದೇಶಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಹಾರದ ಭರವಸೆ
KARNATAKA

ಶಿವಮೊಗ್ಗ: ಸೊರಬದ ಉಳವಿಯ ಮಳೆಹಾನಿ ಪ್ರದೇಶಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಹಾರದ ಭರವಸೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಕಳೆದ ಶನಿವಾರದಂದು ಸುರಿದಂತ ಬಿರುಗಾಳಿ ಸಹಿತ ಮಳೆಯಿಂದಾಗಿ ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಈ ವಿಷಯ ತಿಳಿದಂತ ಸಚಿವ ಮಧು ಬಂಗಾರಪ್ಪ ಅವರು, ಇಂದು ಹಾನಿಗೊಂಡ ಸ್ಥಳಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಏಪ್ರಿಲ್.25ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರು ಗ್ರಾಮ ಪಂಚಾಯ್ತಿಯ ಉಳವಿಯ ಜನತಾ ಕಾಲೋನಿಯಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಮರಗಳ ಮನೆಯ ಮೇಲೆ ಉರುಳಿ ಬಿದ್ದು ಹಾನಿಗೊಂಡಿತ್ತು. ಹಂಚುಗಳು ಹಾರಿ ಹೋಗಿದ್ದರೇ, ಸಿಮೆಂಟ್ ಸೀಟು, ಕೊಟ್ಟಿಗೆ ಮನೆಗಳು ಬಿರುಗಾಳಿ ಮಳೆಯಿಂದಾಗಿ ಹಾನಿಯಾಗಿದ್ದವು.

ಈ ಹಿನ್ನಲೆಯಲ್ಲಿ ಇಂದು ಸಚಿವ ಮಧು ಬಂಗಾರಪ್ಪ ಅವರು ಉಳವಿಯ ಕೈಸೋಡಿ ರಸ್ತೆಯಲ್ಲಿರುವಂತ ಹನೀಫ್ ಸಾಬ್ ಅವರ ಹಾನಿಗೊಂಡ ಗೋಡೌನ್ ವೀಕ್ಷಿಸಿದರು. ಆ ಬಳಿಕ ಜಿಯಾವುಲ್ಲಾ ಎಂಬುವರಿಗೆ ಸೇರಿದಂತ ಶುಂಠಿ ಒಣಗಿಸಲು ನಿರ್ಮಿಸಿದ್ದಂತ ಫಾಲಿ ಹೌಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸರ್ಕಾರದಿಂದ, ಎನ್ ಡಿ ಆರ್ ಎಫ್ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು.

ದೂಗೂರು ರಸ್ತೆಯ ಗುರು ಹೋಟೆಲ್ ಎದುರಿನ ತಾರಾ ಕೃಷ್ಣಮೂರ್ತಿ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಗೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕುಟುಂಬಸ್ಥರನ್ನು ಮಾತನಾಡಿಸಿದಂತ ಸಚಿವ ಮಧು ಬಂಗಾರಪ್ಪ ಅವರು, ಸಾಂತ್ವಾನ ಹೇಳಿದರು. ಅಲ್ಲಿಂದ ಎಣ್ಣೆ ಗಾಣದವರ ಮನೆಯಾದಂತ ಟಿ ಆರ್ ಸೀತಾರಾಮ್ ಅವರ ಮನೆಗೆ ಭೇಟಿ ನೀಡಿದರು.

ಟಿ ಆರ್ ಸೀತಾರಾಮ್ ಅವರ ಮನೆಯು ಪಕ್ಕದಲ್ಲಿದ್ದಂತ ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಹಾನಿಗೊಂಡಿದ್ದನ್ನು ವೀಕ್ಷಿಸಿ, ಪರಿಹಾರದ ಭರವಸೆ ನೀಡಿದರು. ಆ ಬಳಿಕ ಅದೇ ರಸ್ತೆಯಲ್ಲಿದ್ದಂತ ಮಮತಾ ಶಿವಕುಮಾರ್(ಬಾಬಣ್ಣ) ಅವರ ಕೊಟ್ಟಿಗೆ ಮನೆಯ ಸಿಮೆಂಟ್ ಸೀಟುಗಳು ಹಾರಿ, ರಸ್ತೆಗೆ ಬಂದು ಬಿದ್ದಿರೋದನ್ನು ಸಚಿವ ಮಧು ಬಂಗಾರಪ್ಪ ವೀಕ್ಷಣೆ ಮಾಡಿದರು.

ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿರುಗಾಳಿ ಸಹಿತ ಮಳೆಯಿಂದಾಗಿ ಉಳವಿಯ ಹನೀಫ್ ಸಾಬ್ ಅವರ ಗೋಡೌನ್ ತಗಡಿನ ಶೀಟ್ ಹಾರಿಹೋಗಿವೆ. ಜಿಯಾವುಲ್ಲಾ ಅವರ ಫಾಲಿ ಹೌಸ್ ಸಂಪೂರ್ಣ ಹಾನಿಯಾಗಿದೆ. ಮಳೆಹಾನಿ ಎಲ್ಲಾ ಸ್ಥಳಗಳಿಗೂ ಈಗಾಗಲೇ ತಹಶೀಲ್ದಾರ್, ಇಒ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಹಾನಿಯ ಮಾಹಿತಿ ಕಲೆ ಹಾಕಿದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯ ಬಳಿಕ ಶೀಘ್ರವೇ ಪರಿಹಾರ ಕೊಡಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ತುರ್ತು ಕಾರ್ಯವನ್ನು ನಿರ್ವಹಿಸಿ ವಿದ್ಯುತ್ ಕಂಬಗಳನ್ನು ಸರಿ ಪಡಿಸಿದಂತ ಮೆಸ್ಕಾಂ ಇಲಾಖೆಯ ಸೊರಬ ಎಇಇ ಸತ್ಯಪ್ರಕಾಶ್ ಅವರ ಕೆಲಸವನ್ನು ಸಚಿವ ಮಧು ಬಂಗಾರಪ್ಪ ಶ್ಲಾಘಿಸಿದರು. ಜೊತೆಗೆ ಪ್ರಕೃತಿ ವಿಕೋಪದಂತ ಹಾನಿ ಉಂಟಾದರೂ ಸ್ಥಳಕ್ಕೆ ಬಾರದಂತ ಉಳವಿಯ ಎಸ್ಓ ಮೇಲೆ ಗರಂ ಆದರು. ಸ್ಥಳದಲ್ಲೇ ಶಿವಮೊಗ್ಗ ಎಸ್ಇಗೆ ಕರೆ ಮಾಡಿದಂತ ಸಚಿವರು ಉಳವಿ ಎಸ್ಓ ವಿರುದ್ಧ ತುಂಬಾ ದೂರುಗಳಿವೆ. ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಸೂಚಿಸಿದರು.

ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಏಪ್ರಿಲ್.30 ಕೊನೆಯ ದಿನವಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಯಾವುದೇ ಶುಲ್ಕವಿರುವುದಿಲ್ಲ. ವಿದ್ಯಾರ್ಥಿಗಳು ಕೂಡಲೇ ನೋಂದಾಯಿಸಿಕೊಂಡು ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು. ಅಲ್ಲದೇ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ-3 ಇರುವುದಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ-2 ಮಾತ್ರವೇ ಇರುವುದಾಗಿಯೂ ತಿಳಿಸಿದರು.

ಈ ಸಂದರ್ಭದಲ್ಲಿ ಸೊರಬ ತಾಲ್ಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ಗಣಪತಿ ಹೆಚ್ ಹುಲ್ತಿಕೊಪ್ಪ, ದೂಗೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದಂತ ಫಯಾಸ್ ಅಹ್ಮದ್, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಪ್ರಶಾಂತ್ ಕೈಸೋಡಿ, ತನ್ವೀರ್ ಅಹ್ಮದ್, ಉಳವಿ ಬ್ಲಾಕ್ ಘಟಕದ ಅಧ್ಯಕ್ಷ ಶಿವಮೂರ್ತಿ, ಇಓ ಶಶಿಧರ್, ಎಆರ್ ಓ ಶ್ರೀಶೈಲ ಬಗಲಿ, ಸೊರಬ ಆರ್ ಎಫ್ ಓ ಶ್ರೀಪಾದ್, ಉಳವಿ ಡಿ ಆರ್ ಎಫ್ ಓ ಯೋಗರಾಜ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಶೇಖರ್ ಎಂ.ಡಿ, ಪ್ರಭಾಕರ್ ಶಿಗ್ಗಾ, ಸುರೇಶ್ ಬಿಳವಾಣಿ, ಜಗದೀಶ್ ಕುಪ್ಪೆ, ಚೌಡಪ್ಪ ಕೈಸೋಡಿ, ಗಣಪತಿ ಮೈಸಾವಿ, ಶಂಕರಪ್ಪ, ಪ್ರೇಮಾ ಅಣ್ಣಪ್ಪ, ಹೊಳೆಯಪ್ಪ ದೂಗೂರು, ಷಣ್ಮುಖ ಭದ್ರಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

BIG BREAKING: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

ಪರಿಹಾರ ನೀಡದ ‘ಧಾರವಾಡ ಎಸಿ’ಗೆ ಶಾಕ್: ರೈತನಿಂದ ಕಚೇರಿ ಕಂಪ್ಯೂಟರ್, ಪೀಠೋಪಕರಣ ಜಪ್ತಿ!

GOOD NEWS: ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ‘ಋತುಚಕ್ರ ರಜೆ’ ಮಂಜೂರು, ಸರ್ಕಾರ ಅಧಿಕೃತ ಆದೇಶ

Share. Facebook Twitter LinkedIn WhatsApp Email

Related Posts

BIG BREAKING: 13 ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್; ಯಾರಿಗೆ ಯಾವ ಖಾತೆ? ಇಲ್ಲಿದೆ ಲೀಸ್ಟ್

2 Mins Read

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ.ಶಿವಕುಮಾರ್

3 Mins Read

ಜಮೀರ್‌ಗೆ ಡಿಸಿಎಂ ಸ್ಥಾನಕ್ಕಾಗಿ ಪಟ್ಟು: ಮಂಡ್ಯದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ

2 Mins Read
Recent News

BIG BREAKING: 13 ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್; ಯಾರಿಗೆ ಯಾವ ಖಾತೆ? ಇಲ್ಲಿದೆ ಲೀಸ್ಟ್

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ.ಶಿವಕುಮಾರ್

​ಕೆಂಪು ಕೋಟೆ ಸ್ಫೋಟ ಪ್ರಕರಣ: 9 ಆರೋಪಿಗಳ ನ್ಯಾಯಾಂಗ ಬಂಧನ ಜುಲೈ 6ರವರೆಗೆ ವಿಸ್ತರಣೆ | Red fort blast case

BREAKING: ​​​ಜೆವಾರ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಸ್ಥಳದಲ್ಲಿ ಭೀಕರ ಅಪಘಾತ: ಓವರ್‌ಹೆಡ್ ಕ್ರೇನ್ ಕುಸಿತ, ಅವಶೇಷಗಳಡಿ ಸಿಲುಕಿದ ಕಾರ್ಮಿಕರು!

State News
KARNATAKA

BIG BREAKING: 13 ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್; ಯಾರಿಗೆ ಯಾವ ಖಾತೆ? ಇಲ್ಲಿದೆ ಲೀಸ್ಟ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಡಿ.ಕೆ.…

ಹೊಸದಾಗಿ ಸಾರ್ವಜನಿಕರ ಕುಂದುಕೊರತೆ ಹಾಗೂ ಅನಿವಾಸಿ ಭಾರತೀಯರ ಸಚಿವಾಲಯ ಸ್ಥಾಪನೆ: ಸಿಎಂ ಡಿ.ಕೆ.ಶಿವಕುಮಾರ್

ಜಮೀರ್‌ಗೆ ಡಿಸಿಎಂ ಸ್ಥಾನಕ್ಕಾಗಿ ಪಟ್ಟು: ಮಂಡ್ಯದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ

ಚಾಮರಾಜನಗರದಲ್ಲಿ ಉಡ ಮಾರಾಟ, ಸಾಗಾಣಿಕೆಗೆ ಯತ್ನಿಸಿದ ಇಬ್ಬರ ಬಂಧನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.