Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೈಸೂರು ರೈಲ್ವೆ ವಿಭಾಗದಲ್ಲಿ 70ನೇ ರೈಲ್ವೆ ಸಪ್ತಾಹ ಸಂಭ್ರಮ: 77 ನೌಕರರಿಗೆ ಪ್ರಶಸ್ತಿ ಗೌರವ!

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ‘ಪ್ರಾಂತ ಅಡಿಕೆ ಬೆಳೆಗಾರರ ಸಂಘ’ದಿಂದ ‘ಐವತ್ತರ ಈಹೊತ್ತು’ ಸ್ಮರಣ ಸಂಚಿಕೆ ಬಿಡುಗಡೆ
KARNATAKA

ಸಾಗರದಲ್ಲಿ ‘ಪ್ರಾಂತ ಅಡಿಕೆ ಬೆಳೆಗಾರರ ಸಂಘ’ದಿಂದ ‘ಐವತ್ತರ ಈಹೊತ್ತು’ ಸ್ಮರಣ ಸಂಚಿಕೆ ಬಿಡುಗಡೆ

By kannadanewsnow09

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿಂದು ಪ್ರಾಂತ ಅಡಿಕೆ ಬೆಳೆಗಾರರ ಸಂಘದಿಂದ ನಡೆಸಲಾಗಿದ್ದಂತ ಅಡಿಕೆ ಬೆಳೆಗಾರರ ಸಮಾವೇಶದ ಹಾಗೂ ಅಡಿಕೆ ಬೆಳೆಗಾರರಿಗೆ ಮಾಹಿತಿ ನೀಡುವಂತ ಐವತ್ತರ ಈ ಹೊತ್ತು ಸ್ಮರಣ ಸಂಚಿಕೆಯನ್ನು ಮಾಜಿ ಗೃಹ ಸಚಿವ, ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಬಿಡುಗಡೆ ಮಾಡಿದರು.

ಈ ಬಳಿಕ ಮಾತನಾಡಿದಂತ ಅವರು, ಮಲೆನಾಡಿನ ಜೀವನಾಡಿ ಅಡಿಕೆಯಾಗಿರುವಂತ ಪಾರಂಪರಿಕ ಅಡಿಕೆ ಬೆಳೆಗಾರರು ನಿರಂತರವಾಗಿ ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೇ ಸಂಘಟಿತರಾಗಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ. ಇಲ್ಲವಾದರೇ ಇಲ್ಲ ಎಂಬುದಾಗಿ ಹೇಳಿದರು.

ನಮ್ಮ ಮುಂದೆ ಅಡಿಕೆ ಹಾನಿಕಾರವಲ್ಲ ಎಂಬುದನ್ನು ಸಾಭೀತು ಪಡಿಸಬೇಕಾದಂತ ಸವಾಲುಗಳಿವೆ. ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ತೂಗುಗತ್ತಿ ಇದೆ. ನಿರಂತರವಾಗಿ ಸಮಸ್ಯೆಗಳ ವಿರುದ್ಧ ಅಡಿಕೆ ಬೆಳೆಗಾರರು ಹೋರಾಟ ಮಾಡಲು ಮಹಾ ಮಂಡಲವನ್ನು ರಚಿಸಲಾಗಿದೆ. ಎಲ್ಲಾ ಸಂಘಟನೆಗಳು ಇದಕ್ಕೆ ಸದಸ್ಯರಾಗಬೇಕು. ನಾವು ಈಗಾಗಲೇ ಈ ಮಹಾ ಮಂಡಲಕ್ಕೆ 1 ಕೋಟಿ ನಿಧಿ ಸಂಗ್ರಹಿಸಿದ್ದೇವೆ ಎಂದರು.

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ, ಕೊಳೆ ರೋಗ ಸೇರಿದಂತೆ ಹಲವು ರೋಗಗಳು ತಗಲುತ್ತಿವೆ. ಈ ರೋಗಗಳ ಬಗ್ಗೆ ಇಂದಿಗೂ ವ್ಯವಸ್ಥಿತ ಸಂಶೋಧನೆಗಳು ನಡೆದಿಲ್ಲ. ಇದು ಮುಂದಿನ ದಿನಗಳಲ್ಲಿ ಆಗಬೇಕಿದೆ. ಅದಕ್ಕಾಗಿ ಸರ್ಕಾರದ ಗಮನಕ್ಕೂ ತರುವಂತ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕು ಎಂದು ಹೇಳಿದರು.

ಮಾಜಿ ತಾಲ್ಲೂಕು ಪಂತಾಯ್ತಿ ಅಧ್ಯಕ್ಷ, ಸಾಗರ ಪ್ರಾಂತ ಅಡಿಕೆ ಬೆಳೆಗಾರರ ಸಮಾವೇಶದ ಸಹ ಸಂಚಾಲಕರಾಗಿದ್ದಂತ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ನಮಗೆ ಹೆಚ್.ಎಸ್ ಮಂಜಪ್ಪ ಅವರ ಶಕ್ತಿ, ಸಾಮರ್ಥ್ಯ ನೋಡಿದರೋ ಎಂದೋ ಕೇಂದ್ರದ ಮಂತ್ರಿಯಾಗಬೇಕಿತ್ತು. ಅದು ಆಗಲಿಲ್ಲ. ಅವರು ಅಡಿಕೆ ಬೆಳಗಾರರು ಸಂಕಷ್ಟ ಎದುರಿಸಿದಾಗಲೆಲ್ಲ ನೆರವಿಗೆ ಧಾವಿಸಿ ನಿಂತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸೋ ಕೆಲಸ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ ಎಂದರು.

ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎನ್ನುವುದನ್ನು ಸಾಭೀತುಪಡಿಸುವಂತ ಸವಾಲು ನಮ್ಮ ಮುಂದಿದೆ. ಈ ಕುರಿತಂತೆ 16 ಸಂಸ್ಥೆಗಳಿಂದ ಸಂಶೋಧನೆ ನಡೆಯುತ್ತಿದೆ. ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎನ್ನುವ ಬಗ್ಗೆ ಶೀಘ್ರವೇ ಉತ್ತರ ಸಿಗಲಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಭೂಮಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪ್ಲಾಂಟೇಶನ್ ಬೆಳೆ ಬೆಳೆಯಲು ನೀಡಲಾಗುತ್ತಿದೆ. ಈ ಕೆಲಸ ಶಿವಮೊಗ್ಗ ಜಿಲ್ಲೆಯಲ್ಲೂ ಆಗಬೇಕು. ಅಡಿಕೆ ಬೆಳಎಗಾರರಿಗೆ ಗುತ್ತಿಗೆ ಆಧಾರದ ಮೇಲೆ ಕಾಳು ಮೆಣಸು ಬೆಳೆಯೋದಕ್ಕೆ ಅವಕಾಶ ಸಿಗಬೇಕು. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವಂತೆ ಶಾಸಕ ಅರಗ ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿದರು.

ಇನ್ನೂ ಸಾಗರ ಪ್ರಾಂತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವಾಶಂ ರಾಮಚಂದ್ರ ಭಟ್ ಮಾತನಾಡಿ, ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ ಯಶಸ್ಸಿಗೆ ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ವಿವಿಧ ಅಡಿಕೆ ಬೆಳೆಗಾರರ ಸಂಘಟನೆಗಳು ಕಾರಣ. ಇವುಗಳು ಸಮ್ಮೇಳನಕ್ಕೆ ಬೆನ್ನೆಲುಬಾಗಿ ನಿಂತಿದ್ದರಿಂದಲೇ ಸಮಾವೇಶ ಯಶಸ್ಸಿಗೆ ಕಾರಣವಾಯಿತು ಎಂದರು.

50 ವರ್ಷದ ಈ ಸಂದರ್ಭದಲ್ಲಿ ಸಮಾವೇಶದ ಮೂಲಕ 50 ಲಕ್ಷ ಹಣ ಸಂಗ್ರಹವಾಗಿತ್ತು. ಇದರಲ್ಲಿ ಎಲ್ಲಾ ಖರ್ಚು ಕಳೆದು 12 ಲಕ್ಷ ಹಣವನ್ನು ಸಂಸ್ಥೆ ಉಳಿಸಿದೆ. ನಮ್ಮ ಈ ಸಮಾವೇಶ ಆರಂಭ ಮಾಡುವ ಸಂದರ್ಭದಲ್ಲಿ ನಮ್ಮ ಖಾತೆಯಲ್ಲಿ ಕೇವಲ ರೂ.2,600 ಇತ್ತು. ನಮ್ಮ ಸಂಕಲ್ಪ ಸ್ಪಷ್ಟವಾಗಿದ್ದರೇ ಕೆಲಸಗಳು ಸಿದ್ಧಿಸುತ್ತವೆ ಎನ್ನುವುದಕ್ಕೆ ಸಮಾವೇಶವೇ ಒಂದು ಉದಾಹರಣೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ತೋಟಗಾರ್ ಸೊಸೈಟಿಯ ಅಧ್ಯಕ್ಷ ಕೆ ಸಿ ದೇವಪ್ಪ, ಹಿರಿಯ ಸಹಕಾರಿ ಧುರೀಣ ಯು ಹೆಚ್ ರಾಮಪ್ಪ, ಅನಿಲ್ ಒಡೆಯರ್, ಕೆ.ಎಂ ಸೂರ್ಯನಾರಾಯಣ ಖಂಡಿಕಾ, ಆರ್ ಎಸ್ ಗಿರಿ, ಮಾವೆಂ ಸಾ ಪ್ರಸಾದ್, ರಾಜೇಂದ್ರ ಖಂಡಿಕಾ ಇತರರು ಹಾಜರಿದ್ದರು.

Share. Facebook Twitter LinkedIn WhatsApp Email

Related Posts

ಮೈಸೂರು ರೈಲ್ವೆ ವಿಭಾಗದಲ್ಲಿ 70ನೇ ರೈಲ್ವೆ ಸಪ್ತಾಹ ಸಂಭ್ರಮ: 77 ನೌಕರರಿಗೆ ಪ್ರಶಸ್ತಿ ಗೌರವ!

2 Mins Read

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

1 Min Read

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

1 Min Read
Recent News

ಮೈಸೂರು ರೈಲ್ವೆ ವಿಭಾಗದಲ್ಲಿ 70ನೇ ರೈಲ್ವೆ ಸಪ್ತಾಹ ಸಂಭ್ರಮ: 77 ನೌಕರರಿಗೆ ಪ್ರಶಸ್ತಿ ಗೌರವ!

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

TVK Vijay Sworn: ನಾಳೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ; ಮೇ.13ಕ್ಕೆ ವಿಶ್ವಾಸಮತಯಾಚನೆ

State News
KARNATAKA

ಮೈಸೂರು ರೈಲ್ವೆ ವಿಭಾಗದಲ್ಲಿ 70ನೇ ರೈಲ್ವೆ ಸಪ್ತಾಹ ಸಂಭ್ರಮ: 77 ನೌಕರರಿಗೆ ಪ್ರಶಸ್ತಿ ಗೌರವ!

By kannadanewsnow09 KARNATAKA 2 Mins Read

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ತನ್ನ 2025–26ನೇ ಸಾಲಿನ ’70ನೇ ರೈಲ್ವೆ ಸಪ್ತಾಹ’ವನ್ನು ಶನಿವಾರ (ಮೇ 9, 2026)…

ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ: ಉಪನ್ಯಾಸಕರ ಹುದ್ದೆಗೆ ಬಡ್ತಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ!

ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಸರ್ಕಾರ ರಚನೆ: ರಾಜ್ಯಪಾಲರ ಕ್ರಮಕ್ಕೆ ಕೆಪಿಸಿಸಿ ಸ್ವಾಗತ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.