ಮೈಸೂರು: ಪುಣೆ-ಮಿರಜ್ ಭಾಗದ ಜೋಡಿ ಮಾರ್ಗ ಕಾಮಗಾರಿಗೆ ಸಂಬಂಧಿಸಿದಂತೆ, ನೀರಾ ಯಾರ್ಡ್ ನಲ್ಲಿ ಇಂಜಿನಿಯರಿಂಗ್ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸಂಚಾರದಲ್ಲಿ ನಿಯಂತ್ರಣ, ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ಮಧ್ಯ ರೈಲ್ವೆಯು ತಿಳಿಸಿದೆ. ವಿವರಗಳು ಈ ಕೆಳಗಿನಂತಿವೆ:
1. ದಿನಾಂಕ 06.06.2026 ಮತ್ತು 13.06.2026 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20686 ಕೆಎಸ್ಆರ್ ಬೆಂಗಳೂರು – ಗಾಂಧಿಧಾಮ್ ವೀಕ್ಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲನ್ನು ಲೋನಂದ್ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
2. ದಿನಾಂಕ 06.06.2026, 09.06.2026 ಮತ್ತು 13.06.2026 ರಂದು ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16553 ಎಸ್ಎಂವಿಟಿ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಬೈ-ವೀಕ್ಲಿ ಎಕ್ಸ್’ಪ್ರೆಸ್ ರೈಲನ್ನು ಮಿರಜ್-ಲೋನಂದ್ ಭಾಗದಲ್ಲಿ 2 ಗಂಟೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
3. ದಿನಾಂಕ 09.06.2026 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16210 ಮೈಸೂರು – ಅಜ್ಮೀರ್ ಬೈ-ವೀಕ್ಲಿ ಎಕ್ಸ್’ಪ್ರೆಸ್ ರೈಲನ್ನು ಸಲ್ಪಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
4. ದಿನಾಂಕ 10.06.2026 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20694 ಕೆಎಸ್ಆರ್ ಬೆಂಗಳೂರು – ಜೋಧ್ಪುರ ಬೈ-ವೀಕ್ಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲನ್ನು ಸಲ್ಪಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
5. ದಿನಾಂಕ 14.06.2026 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು – ಜೋಧ್ಪುರ ವೀಕ್ಲಿ ಎಕ್ಸ್’ಪ್ರೆಸ್ ರೈಲನ್ನು ಸಲ್ಪಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
6. ದಿನಾಂಕ 19.06.2026 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 20669 ಎಸ್ಎಸ್ಎಸ್ ಹುಬ್ಬಳ್ಳಿ – ಪುಣೆ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಸತಾರಾ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ. ಅಂದರೆ ಈ ರೈಲು ಸತಾರಾದಿಂದ ಪುಣೆ ನಡುವೆ ಸಂಚರಿಸುವುದಿಲ್ಲ.
7. ದಿನಾಂಕ 24.06.2026 ರಂದು ಹಜರತ್ ನಿಜಾಮುದ್ದೀನ್ನಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋ-ಡ-ಗಾಮಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ನಿಯಮಿತ ಮಾರ್ಗದ ಬದಲಾಗಿ ಮಿರಜ್ – ದೌಂಡ್ – ಕುರ್ದುವಾಡಿ – ಮಿರಜ್ ಮಾರ್ಗದ ಮೂಲಕ ಸಂಚರಿಸಲಿದೆ.








