ಇಂದಿನ ಡಿಜಿಟಲ್ ಯುಗದಲ್ಲಿ ಫೋಟೋಗಳು, ವಿಡಿಯೋಗಳು ಮತ್ತು ಆಪ್‌ಗಳಿಂದಾಗಿ ಸ್ಮಾರ್ಟ್‌ಫೋನ್ ಸ್ಟೋರೇಜ್ ಬೇಗನೆ ಭರ್ತಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಫೋನ್ ಹ್ಯಾಂಗ್ ಆಗುವುದನ್ನು ತಡೆಯಲು ಮತ್ತು ಹೊಸ ಫೈಲ್‌ಗಳನ್ನು ಸೇರಿಸಲು ಸ್ಟೋರೇಜ್ ಖಾಲಿ ಮಾಡುವುದು ಹೇಗೆ? ಇಲ್ಲಿದೆ 5 ಸುಲಭ ಟಿಪ್ಸ್:
1. ಅನಿಗತ್ಯ ಆಪ್‌ಗಳನ್ನು ಡಿಲೀಟ್ ಮಾಡಿ (Uninstall Unused Apps):
ನಮ್ಮ ಫೋನ್‌ನಲ್ಲಿ ನಾವು ತಿಂಗಳುಗಟ್ಟಲೆ ಬಳಸದ ಅನೇಕ ಆಪ್‌ಗಳಿರುತ್ತವೆ. ಇವು ಫೋನ್‌ನ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಮೊದಲು ಅಂತಹ ಅನಗತ್ಯ ಆಪ್‌ಗಳನ್ನು ಗುರುತಿಸಿ ಡಿಲೀಟ್ ಮಾಡಿ.
2. ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿ (Clear Cache Data):
ಪ್ರತಿ ಆಪ್ ತನ್ನದೇ ಆದ ‘ಕ್ಯಾಶ್’ ಡೇಟಾವನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಫೋನ್ ಸೆಟ್ಟಿಂಗ್ಸ್‌ನಲ್ಲಿರುವ ‘ಸ್ಟೋರೇಜ್’ ವಿಭಾಗಕ್ಕೆ ಹೋಗಿ ಈ ಕ್ಯಾಶ್ ಮೆಮೊರಿಯನ್ನು ಕ್ಲಿಯರ್ ಮಾಡುವುದರಿಂದ ಗಣನೀಯ ಪ್ರಮಾಣದ ಜಾಗ ಉಳಿಯುತ್ತದೆ.
3. ವಾಟ್ಸಾಪ್ ಮೀಡಿಯಾ ನಿರ್ವಹಣೆ (Manage WhatsApp Media):
ನಮಗೆ ಬರುವ ಹೆಚ್ಚಿನ ವಿಡಿಯೋ ಮತ್ತು ಫೋಟೋಗಳು ವಾಟ್ಸಾಪ್ ಮೂಲಕವೇ ಬರುತ್ತವೆ. ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ ‘Manage Storage’ ಆಯ್ಕೆಗೆ ಹೋಗಿ, ದೊಡ್ಡ ಗಾತ್ರದ ಫೈಲ್‌ಗಳನ್ನು ಮತ್ತು ಅನಗತ್ಯ ವಿಡಿಯೋಗಳನ್ನು ತಕ್ಷಣ ಡಿಲೀಟ್ ಮಾಡಿ.
4. ಗೂಗಲ್ ಫೋಟೋಸ್ ಬಳಸಿ (Move to Cloud Storage):
ಫೋನ್‌ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಗೂಗಲ್ ಫೋಟೋಸ್ (Google Photos) ಅಥವಾ ಕ್ಲೌಡ್ ಸ್ಟೋರೇಜ್‌ಗೆ ಅಪ್‌ಲೋಡ್ ಮಾಡಿ. ಒಮ್ಮೆ ಬ್ಯಾಕಪ್ ಆದ ನಂತರ ಫೋನ್ ಗ್ಯಾಲರಿಯಿಂದ ಅವುಗಳನ್ನು ಡಿಲೀಟ್ ಮಾಡಬಹುದು. ಇದರಿಂದ ಫೋನ್ ಮೆಮೊರಿ ಫ್ರೀ ಆಗುತ್ತದೆ.
5. ಡೌನ್‌ಲೋಡ್ ಫೋಲ್ಡರ್ ಪರಿಶೀಲಿಸಿ (Check Download Folder):
ನಾವು ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಪಿಡಿಎಫ್ ಫೈಲ್‌ಗಳು, ಸಾಂಗ್‌ಗಳು ಮತ್ತು ಡಾಕ್ಯುಮೆಂಟ್‌ಗಳು ಡೌನ್‌ಲೋಡ್ ಫೋಲ್ಡರ್‌ನಲ್ಲಿ ಉಳಿದಿರುತ್ತವೆ. ಕೆಲಸ ಮುಗಿದ ನಂತರ ಇವುಗಳನ್ನು ಡಿಲೀಟ್ ಮಾಡುವುದನ್ನು ಮರೆಯಬೇಡಿ.
Subscribe to Updates
Get the latest creative news from FooBar about art, design and business.








